For Quick Alerts
ALLOW NOTIFICATIONS  
For Daily Alerts

ಮಹಿಳೆಯರ ಸೌಂದರ್ಯ ಅಡಗಿರುವುದು ಮೇಕಪ್‌ನಲ್ಲಿಲ್ಲ!

|

ಪ್ರತಿಯೊಬ್ಬ ಮಹಿಳೆಯೂ ತಾನು ಸೌಂದರ್ಯಮತಿಯಾಗಿ ಕಾಣಬೇಕೆಂದು ಬಯಸುವುದು ಸಹಜ. ಹೀಗಿರುವಾಗ ತಾವು ತಮ್ಮ ಬಣ್ಣದ ಬಗ್ಗೆಯಾಗಲೀ, ಚಂದದ ಬಗ್ಗೆಯಾಗಲೀ ಯೋಚಿಸುತ್ತಾ ಕೂರದೆ, ಬೇರೆಯವರ ಚೆಲುವನ್ನು ಕಂಡು ತಮ್ಮ ಬಗ್ಗೆ ತಾವೇ ಕೀಳರಿಮೆ ತೋರದೆ ತಾವು ಹೇಗಿದ್ದೆವೆಯೋ ಅದಕ್ಕೆ ತಕ್ಕಂತೆ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಬಹುಮುಖ್ಯವಾಗಿದೆ.

ಕೇವಲ ಮೇಕಪ್ ಮಾಡಿಕೊಳ್ಳುವುದರಲ್ಲಿ ಸೌಂದರ್ಯ ಅಡಗಿಲ್ಲ. ಅದನ್ನು ಮೀರಿ ತಮ್ಮ ನಡೆ ನುಡಿ, ತಾವು ತಮ್ಮ ದೇಹದ ಬಗ್ಗೆ ತೋರುವ ಕಾಳಜಿ, ವೈಯಕ್ತಿಕ ಸ್ವಚ್ಛತೆ, ಆರೋಗ್ಯದ ಬಗೆಗಿನ ಎಚ್ಚರಿಕೆ, ತಮಗೆ ಹೊಂದುವಂತಹ ಉಡುಗೆ, ತೊಡುಗೆ ಧರಿಸುವ ಜಾಣ್ಮೆ ಕೂಡ ಒಬ್ಬ ಮಹಿಳೆಯನ್ನು ಸುಂದರ ಮತ್ತು ಆಕರ್ಷಣೀಯವಾಗಿ ಕಾಣಲು ಸಹಾಯಮಾಡುತ್ತದೆ.

ಹೇಗೇಗೋ ಡ್ರೆಸ್ ಮಾಡಿಕೊಳ್ಳಬೇಡಿ!

ಹೇಗೇಗೋ ಡ್ರೆಸ್ ಮಾಡಿಕೊಳ್ಳಬೇಡಿ!

ಕಚೇರಿ ಕೆಲಸಕ್ಕೆ ತೆರಳುವವರು ತಾವು ಮಾಡುವ ಕೆಲಸ ಯಾವುದೇ ಆಗಿರಲಿ. ಆದರೆ ಹೇಗೆಗೋ ಡ್ರೆಸ್ ಮಾಡಿಕೊಂಡು ಹೋಗುವುದು ತರವಲ್ಲ. ಬೇರೆಯವರು ತೊಡುತ್ತಾರೆ ಎನ್ನುವ ಕಾರಣಕ್ಕೆ ತಮಗೆ ಅದು ಹೊಂದಿಕೊಳ್ಳುವುದಿಲ್ಲ ಎಂಬುದು ಗೊತ್ತಿದ್ದರೂ ಅದನ್ನು ಧರಿಸಿ ಕೆಟ್ಟದಾಗಿ ಕಾಣುವಂತೆ ಮಾಡಿಕೊಳ್ಳುವುದು ತರವಲ್ಲ. ನಾವು ಧರಿಸುವ ಉಡುಪುಗಳು ಸುಂದರವಾಗಿಯೂ ಕಾಣಬೇಕು. ದೇಹಕ್ಕೂ ಹಿತನೀಡಬೇಕು. ಆಗ ಮಾತ್ರ ನಾವು ಉಲ್ಲಸಿತರಾಗಿರಲು ಸಾಧ್ಯ. ಅದರಲ್ಲೂ ಉದ್ಯೋಗಸ್ಥ ಮಹಿಳೆಯರು ತಾವು ತೊಡುವ ಉಡುಪುಗಳು ತಮ್ಮ ಕೆಲಸಕ್ಕೆ ಅಡಚಣೆ ಮಾಡದಂತೆ ನೋಡಿಕೊಳ್ಳುವ ಜಾಣ್ಮೆ ಹೊಂದಿರಬೇಕು.

ಇನ್ನು ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳಲು ತುಳಸಿ, ಬೇವಿನ ಫೇಸ್ ಪ್ಯಾಕ್ ಬಳಸುವುದು ಸೂಕ್ತ. ನಂತರ ತಣ್ಣೀರಿನಿಂದ ರೋಸ್ ವಾಟರ್‌ನಿಂದ ಮುಖ ತೊಳೆದುಕೊಂಡರೆ ಚರ್ಮದ ಕಾಂತಿಯುತವಾಗುತ್ತದೆ. ಬಿಸಿಲಿನಲ್ಲಿ ಹೆಚ್ಚಾಗಿ ಓಡಾಡುತ್ತಾ ಕೆಲಸ ಮಾಡುವ ಮಹಿಳೆಯರು ಸನ್ ಸ್ಕ್ರೀನ್ ಲೋಷನ್ ಹಚ್ಚುವುದನ್ನು ಮರೆಯಬಾರದು. ಮುಖದ ಜತೆಗೆ ಕೂದಲಿನ ಬಗ್ಗೆಯೂ ಆಸ್ಥೆ ವಹಿಸುವುದು ಅಗತ್ಯ. ಬಿಸಿಲಿನಲ್ಲಿ ಕೂದಲು ಉದುರುವಿಕೆ ಹೆಚ್ಚಿರುತ್ತದೆ. ಆದ್ದರಿಂದ ಕೂದಲನ್ನು ನೀಟಾಗಿ ಬಾಚಿ ಜಡೆ ಹೆಣೆಯುವುದು ಒಳ್ಳೆಯದು. ಕೂದಲಿಗೆ ಮಾರುಕಟ್ಟೆಯಲ್ಲಿ ಹತ್ತಾರು ಬಗೆಯ ಎಣ್ಣೆಗಳು ಸಿಗುತ್ತವೆ. ಇದರಲ್ಲಿ ಯಾವುದು ಕೂದಲಿಗೆ ಹೊಂದುತ್ತದೆಯೋ ಅದನ್ನೇ ಬಳಸಬೇಕು. ಶಾಂಪೂ ಕೂಡ. ಆಗಾಗ್ಗೆ ಎಣ್ಣೆ ಮತ್ತು ಶಾಂಪೂವನ್ನು ಬದಲಾಯಿಸುವುದು ಕೂಡ ಕೂದಲು ಉದುರುವಿಕೆಗೆ ಕಾರಣವಾಗಬಹುದು.

 ಅಂಗಾಂಗಳ ಬಗ್ಗೆ ಕಾಳಜಿ ಇರಲಿ

ಅಂಗಾಂಗಳ ಬಗ್ಗೆ ಕಾಳಜಿ ಇರಲಿ

ಮಹಿಳೆಯರು ಶರೀರದ ಪ್ರತಿಯೊಂದು ಅಂಗಗಳ ಬಗ್ಗೆಯೂ ಕಾಳಜಿವಹಿಸುವುದು ಅಗತ್ಯ. ಬಹಳಷ್ಟು ಜನ ಮಹಿಳೆಯರು ತಮ್ಮ ಉಗುರಿನತ್ತ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಮಹಿಳೆಯರು ತಮ್ಮ ಉಗುರಿನ ಸೌಂದರ್ಯವನ್ನು ಉಳಿಸಬೇಕೆಂದರೆ ಪಾತ್ರೆ ತೊಳೆಯುವ ವೇಳೆ ಹಾಗೂ ಬಟ್ಟೆ ಒಗೆಯುವ ವೇಳೆ ಕೈಗೆ ಗ್ಲೌಸ್ ಧರಿಸುವುದರಿಂದ ಉಗುರು ಹಾಳಾಗುವುದು, ಉಗುರಿನಲ್ಲಿ ಕೊಳೆ ಕೂರುವುದನ್ನು ತಪ್ಪಿಸಬಹುದು.

ಉಗುರಿನ ಸೌಂದರ್ಯವನ್ನು ಉಗುರು ಸುತ್ತಿನ ಚರ್ಮ ಮತ್ತಷ್ಟು ಹಾಳು ಮಾಡುತ್ತದೆ. ಒಂದು ವೇಳೆ ಪೆಡಿಕ್ಯೂರ್ ಅಥವಾ ಮೆನಿಕ್ಯೂರ್ ಮಾಡಿಸುವವರು ಉಗುರು ಸುತ್ತಿನ ಚರ್ಮವನ್ನು ಕೀಳಿಸುವುದನ್ನು ಬಿಟ್ಟುಬಿಡಿ. ಇಂತಹ ಚರ್ಮವನ್ನು ಕತ್ತರಿಸುವುದಕ್ಕಿಂತ ರಿಮೂವರ್ ಜೆಟ್ ಸಹಾಯದಿಂದ ತೆಗೆಯುವುದು ಒಳ್ಳೆಯದು. ಉಗುರನ್ನು ಕತ್ತರಿಸುವಾಗ ಹೇಗೇಗೋ ಕತ್ತರಿಸದೆ ಕ್ರಮಬದ್ಧತೆಯಿಂದ ಕತ್ತರಿಸಿ. ಇದರಿಂದ ಆಕರ್ಷಕ ಕಾಣುವುದಲ್ಲದೆ, ಉಗುರಿನ ಬೆಳವಣಿಗೆಗೂ ಸಹಾಯ ಮಾಡುತ್ತದೆ.

ಉಗುರಿನ ಬಗ್ಗೆ ಎಚ್ಚರಿಕೆ ಅಗತ್ಯ

ಉಗುರಿನ ಬಗ್ಗೆ ಎಚ್ಚರಿಕೆ ಅಗತ್ಯ

ಕೆಲವರು ಉಗುರು ಬೆಳೆಸುವ ಹವ್ಯಾಸ ಹೊಂದಿರುತ್ತಾರೆ. ಇದು ನಿಜಕ್ಕೂ ಆರೋಗ್ಯದ ದೃಷ್ಠಿಯಿಂದ ಒಳ್ಳೆಯದಲ್ಲ. ಉಗುರನ್ನು ಆಗಾಗ್ಗೆ ಕತ್ತರಿಸುತ್ತಾ ಸ್ವಚ್ಛವಾಗಿಟ್ಟುಕೊಳ್ಳಬೇಕು. ಕತ್ತರಿಸದೆ ಇದ್ದರೆ ಉಗುರುಗಳಲ್ಲಿ ಕೊಳೆ ತುಂಬಿಕೊಂಡು ಅಸಹ್ಯವಾಗಿ ಕಾಣುತ್ತದೆ. ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ. ಉಗುರಿಗೆ ಸರಿಹೊಂದುವ ಮತ್ತು ಆಕರ್ಷಕವಾಗಿ ಕಾಣುವ ಬಣ್ಣವನ್ನು ಲೇಪಿಸಬೇಕು. ಉಗುರು ಬಣ್ಣ ಹಚ್ಚಿದ ಮೇಲೆ ನೇಲ್ ಪಾಲೀಸ್ ಸೂಕ್ತ. ನೇಲ್ ಪಾಲೀಸ್ ಬಾಟಲಿಯನ್ನು ಅಲುಗಾಡಿಸಿ ನಂತರ ಹಚ್ಚಿದರೆ ಉಗುರಿಗೆ ಚೆನ್ನಾಗಿ ಹಿಡಿಯುತ್ತದೆ. ನೇಲ್ ಪಾಲಿಸ್ ಕೆಲವು ದಿನಗಳ ನಂತರ ಅಲ್ಲಲ್ಲಿ ಕಿತ್ತು ಬರುತ್ತದೆ. ಆಗ ಅದನ್ನು ತೆಗೆದು ಮತ್ತೊಮ್ಮೆ ಹಚ್ಚಬೇಕು. ಅದರ ಮೇಲೇಯೇ ಹಚ್ಚಬಾರದು. ಉಗುರಿಗೆ ಹಚ್ಚಿರುವ ನೇಲ್ ಪಾಲಿಸ್ ತೆಗೆಯಲು ಬ್ಲೇಡ್‌ನ್ನು ಬಳಸದೆ ನೇಲ್ ರಿಮೂವರ್ ಬಳಸುವುದು ಸೂಕ್ತ.

ಶರೀರದ ದುರ್ಗಂದ ತಡೆಯುವತ್ತ ಗಮನವಿರಲಿ

ಶರೀರದ ದುರ್ಗಂದ ತಡೆಯುವತ್ತ ಗಮನವಿರಲಿ

ಇನ್ನು ನೀಟಾಗಿ ಡ್ರೆಸ್ ಮಾಡಿಕೊಂಡು ಆಕರ್ಷಕವಾಗಿ ಕಾಣುತ್ತಿದ್ದರೂ ಕೆಲವೊಮ್ಮೆ ಶರೀರದಿಂದ ಹೊರಬರುವ ದುರ್ಗಂಧ ಬೇರೆಯವರಿಗೆ ಅಸಹ್ಯ ಹುಟ್ಟಿಸಬಹುದು. ಶರೀರವನ್ನು ಶುಚಿಯಾಗಿಟ್ಟುಕೊಳ್ಳುವ ಮೂಲಕ ಇದನ್ನು ತಡೆಯಲು ಮುಂದಾಗಬೇಕು. ಮೂಗು, ಕಿವಿ, ಬಾಯಿ, ಚರ್ಮಗಳಿಗೆ ಸಂಬಂಧಿಸಿದಂತೆ ಕಾಯಿಲೆಗಳಿದ್ದರೆ ವೈದ್ಯರಿಗೆ ತೋರಿಸಿ ಅವರು ನೀಡುವ ಸಲಹೆಗಳನ್ನು ಅನುಸರಿಸಬೇಕು. ಹೆಚ್ಚಿನ ಜನರಿಗೆ ಕಂಕುಳಿನಿಂದಲೇ ದುರ್ವಾಸನೆ ಬರುತ್ತದೆ. ಕಾರಣ ಕಂಕುಳಲ್ಲಿ ಬೆಳೆಯುವ ಅನಗತ್ಯ ಕೂದಲುಗಳನ್ನು ತೆಗೆಯದಿರುವುದು. ಇದನ್ನು ಆಗಾಗ್ಗೆ ತೆಗೆದು ಸ್ವಚ್ಛಗೊಳಿಸುತ್ತಿರಬೇಕು.

ಪ್ರತಿದಿನ ಕನಿಷ್ಟ ಎರಡು ಲೀಟರ್‌ನಷ್ಟು ನೀರನ್ನು ಕುಡಿಯಬೇಕು. ಬಿಗಿಯಾದ ಉಡುಪುಗಳನ್ನು ಧರಿಸದೆ, ಶರೀರಕ್ಕೆ ಗಾಳಿಯಾಡುವ ಹಾಗೂ ಹತ್ತಿಬಟ್ಟೆಗೆ ಆದ್ಯತೆ ನೀಡಬೇಕು. ಬೇರೆಯವರು ಬಳಸಿದ ಟವಲ್ ಬಳಸದೆ ಒಗೆದು ಒಣಗಿಸಿ ಬಳಸಬೇಕು. ಹಲ್ಲಿನ ಅಥವಾ ಒಸಡುಗಳ ತೊಂದರೆಯಿದ್ದರೆ ದಂತ ವೈದ್ಯರ ಸಲಹೆಯಂತೆ ಸೂಕ್ತ ಚಿಕಿತ್ಸೆಯನ್ನು ಮಾಡಿಸಿಕೊಳ್ಳುವುದು ಅಗತ್ಯ. ಹಲ್ಲಿನ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಕೆಲವು ಚುಯಿಂಗಮ್ ಅಗೆಯುವುದರಿಂದ ಬಾಯಿಯಲ್ಲಿ ಜೊಳ್ಳುರಸದೊಂದಿಗೆ ದುರ್ವಾಸನೆ ಸಮಸ್ಯೆ ಕಡಿಮೆಯಾಗಲು ಸಾಧ್ಯವಾಗುತ್ತದೆ. ಬಾಯಿಯಲ್ಲಿ ಲವಂಗದ ಚೂರುಗಳನ್ನು ಚಪ್ಪರಿಸುವುದರಿಂದ ದುರ್ವಾಸನೆ ತಡೆಯಬಹುದು.

English summary

How to Look Beautiful Without Makeup in Kannada

Here are tips how to look beautiful without makeup, read on,
X