For Quick Alerts
ALLOW NOTIFICATIONS  
For Daily Alerts

ಹೊಸ ಚಪ್ಪಲಿ, ಶೂ ಕಡಿತದಿಂದ ಗುಳ್ಳೆಗಳಾಗಿದ್ಯಾ? ಇಲ್ಲಿದೆ ಮನೆಮದ್ದುಗಳು

|

ಸಾಮಾನ್ಯವಾಗಿ ಹೊಸ ಶೂ ಅಥವಾ ಹೊಸ ಚಪ್ಪಲಿ ಖರೀದಿಸಿ ಹಾಕಿಕೊಂಡಾಗ, ಅದರಿಂದ ಕಡಿತ ಉಟಾಗುವುದು. ಇದು ನಾವು ಖರೀದಿಸಿರುವ ಚಪ್ಪಲಿ ಅಥವಾ ಶೂಗಳ ಸೈಜ್ ಚಿಕ್ಕದಾಗಿರುವುದರಿಂದ ಕಡಿತ ಉಂಟಾಗಿ ಗುಳ್ಳೆಗಳಾಗುತ್ತವೆ. ಇದರಿಂದ ಕೆಲದಿನಗಳ ಕಾಲ ಚಪ್ಪಲಿ ಧರಿಸಲು ಆಗದಷ್ಟು ನೋವು ಉಂಟಾಗುವುದು. ಇಂತಹ ಗುಳ್ಳೆಗಳನ್ನು ಕಡಿಮೆ ಮಾಡಲು ನಂಜುನಿರೋಧಕ ಕ್ರೀಮ್‌ ಗಳನ್ನು ಬಳಸಬೇಕು ಒಂದು ವೇಳೆ ಕ್ರೀಮ್ ಗಳು ಲಭ್ಯವಿಲ್ಲದಿದ್ದರೆ, ಈ ಕೆಳಗೆ ನೀಡಿರುವ ಮನೆಮದ್ದುಗಳನ್ನು ಸಹ ಪ್ರಯತ್ನಿಸಬಹುದು.

ಚಪ್ಪಲಿ ಕಡಿತದಿಂದ ಉಂಟಾಗಿರುವ ನೋವುಗಳನ್ನು ಕಡಿಮೆ ಮಾಡಲು ಬಳಸಬಹುದಾದ ಮನೆಮದ್ದುಗಳನ್ನು ಈ ಕೆಳಗೆ ನೀಡಲಾಗಿದೆ:

1) ಅಲೋವೆರಾ ಜೆಲ್:

1) ಅಲೋವೆರಾ ಜೆಲ್:

ಈ ಲೋಳೆರಸ ಸಾಕಷ್ಟು ಸೌಂದರ್ಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ತ್ವಚೆ, ಕೂದಲಿನ ಸಮಸ್ಯೆಯಿಂದ ಹಿಡಿದು, ವಿವಿಧ ಪ್ರಯೋಜನಗಳಿಗೆ ಬಳಕೆ ಮಾಡುವ ಅಲೋವೆರಾವನ್ನು ಶೂ ಅಥವಾ ಚಪ್ಪಲಿ ಕಡಿತದಿಂದ ಉಂಟಾಗುವ ಗಾಯವನ್ನು ಕಡಿಮೆ ಮಾಡಲು ಬಳಸಬಹುದು. ಇದರಲ್ಲಿ ಗಾಯವನ್ನು ಗುಣಪಡಿಸುವ ಅನೇಕ ಗುಣಗಳಿದ್ದು, ತಾಜಾ ಅಲೋವೆರಾ ತಿರುಳನ್ನು ಹಚ್ಚುವುದರಿಂದ ತ್ವರಿತ ಪರಿಹಾರ ಸಿಗುತ್ತದೆ.

2) ತೆಂಗಿನ ಎಣ್ಣೆ :

2) ತೆಂಗಿನ ಎಣ್ಣೆ :

ತೆಂಗಿನ ಎಣ್ಣೆ ಪಾದದಲ್ಲಿ ಆದ ಹುಣ್ಣುಗಳಿಂದ ಪರಿಹಾರ ಪಡೆಯಲು ಸುಲಭವಾದ ಮತ್ತು ಅತ್ಯಂತ ಅನುಕೂಲಕರ ಮಾರ್ಗವಾಗಿದೆ. ತೆಂಗಿನ ಎಣ್ಣೆ ನಿಮ್ಮ ಪಾದಗಳಲ್ಲಿರುವ ಗುಳ್ಳೆಗಳ ನೋವಿನಿಂದ ತಕ್ಷಣ ಪರಿಹಾರ ನೀಡುತ್ತದೆ. ಇದಕ್ಕಾಗಿ ಕೇವಲ ಎಣ್ಣೆಯನ್ನು ಬಿಸಿ ಮಾಡಿ ಮತ್ತು ತಣ್ಣಗಾಗಲು ಬಿಡಿ. ನಂತರ ಹತ್ತಿಯ ಸಹಾಯದಿಂದ ಹಚ್ಚಿ. ತೆಂಗಿನ ಎಣ್ಣೆಯಲ್ಲಿ ಲಾರಿಕ್ ಆಮ್ಲ ಎಂಬ ಒಂದು ರೀತಿಯ ಕೊಬ್ಬಿನ ಆಮ್ಲವಿದ್ದು, ಇದು ಚರ್ಮವನ್ನು ಹೈಡ್ರೇಟ್ ಮಾಡಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

3) ಜೇನುತುಪ್ಪ:

3) ಜೇನುತುಪ್ಪ:

ನೈಸರ್ಗಿಕವಾದ ಸಕ್ಕರೆಯ ಅಂಶವನ್ನು ಹೊಂದಿರುವ ಜೇನುತುಪ್ಪವು ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದು, ಎಲ್ಲಾ ರೀತಿಯ ಚರ್ಮದ ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ. ಇದು ಹಿತವಾದ ಮತ್ತು ಉರಿಯೂತದ ಗುಣಗಳನ್ನು ಹೊಂದಿದ್ದು, ಜೇನುತುವನ್ನು ನೇರವಾಗಿ ಹಚ್ಚುವುದರಿಂದ ಅಥವಾ ಹತ್ತಿಯನ್ನು ಅದ್ದಿ ಹಚ್ಚುವುದರಿಂದ ಚಪ್ಪಲಿ ಕಡಿತದ ಗುಳ್ಲೆಗಳು ಕಡಿಮೆಯಾಗುವುದು. ಜೊತೆಗೆ ಒಡೆದ ತುಟಿಯನ್ನು ಸರಿಪಡಿಸಲು ಸಹ ಬಳಕೆ ಮಾಡಬಹುದು.

4) ಅರಿಶಿನ ಮತ್ತು ಬೇವು:

4) ಅರಿಶಿನ ಮತ್ತು ಬೇವು:

ಈ ಎರಡೂ ಪದಾರ್ಥಗಳು ನಂಜುನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿವೆ. ನೀವು ಮಾಡಬೇಕಾಗಿರುವುದು ಒಂದು ಹಿಡಿ ಬೇವಿನ ಎಲೆಗಳನ್ನು ಅರಿಶಿನ ಪುಡಿ ಮತ್ತು ನೀರಿನೊಂದಿಗೆ ಬೆರೆಸಿ. ಈ ಮಿಶ್ರಣದ ದಪ್ಪ ಪದರವನ್ನು ಪೀಡಿತ ಪ್ರದೇಶದ ಮೇಲೆ ಹಚ್ಚಿ, ಅರ್ಧ ಗಂಟೆ ಬಿಟ್ಟು ನಂತರ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

5). ಟೂತ್ ಪೇಸ್ಟ್:

5). ಟೂತ್ ಪೇಸ್ಟ್:

ಶೂ ಅಥವಾ ಚಪ್ಪಲಿ ಕಡಿತದಿಂದಾಗಿ ಆಗಿರುವಂತಹ ಗಾಯವನ್ನು ಗುಣಪಡಿಸಲು ಬಿಳಿ ಟೂಥ್ ಪೇಸ್ಟ್ ತುಂಬಾ ಸಹಾಯವಾಗುವುದು. ನೀವು ಹಲ್ಲುಜ್ಜುವಂತಹ ಬಿಳಿ ಟೂಥ್ ಪೇಸ್ಟ್ ನಲ್ಲಿ ಬೊಕ್ಕೆ ಹಾಗೂ ಗಾಯವನ್ನು ಗುಣಪಡಿಸುವ ಶಕ್ತಿ ಇದೆ. ಕಡಿತದಿಂದ ಉಂಟಾಗಿರುವ ಜಾಗಕ್ಕೆ ಪೇಸ್ಟ್ ಹಚ್ಚಿ, ಒಣಗಿದ ಬಳಿಕ ಅದನ್ನು ತೊಳೆಯಿರಿ. ಇದರಿಂದ ಗಾಯ, ನೋವು ಕಡಿಮೆಯಾಗುವುದು.

Read more about: beauty body ಸೌಂದರ್ಯ
English summary

Home Remedies to Get Rid of a Blister on Your Feet in Kannada

Here we talking about Home Remedies to Get Rid of a Blister on Your Feet in kannada, read on
Story first published: Tuesday, September 7, 2021, 16:45 [IST]
X
Desktop Bottom Promotion