For Quick Alerts
ALLOW NOTIFICATIONS  
For Daily Alerts

ಬಾಲ್ಡ್‌ ಹೆಡ್‌ನಲ್ಲಿ ಮತ್ತಷ್ಟು ಸ್ಟೈಲಿಷ್‌ ಆಗಿ ಕಾಣುವುದು ಹೇಗೆ?

|

ಕೂದಲು ಅನ್ನೋದು ಎಲ್ಲರಿಗೂ ಇಷ್ಟವಿರುವ ವಿಷ್ಯ. ಆದರೆ ಮನುಷ್ಯನ ಜೀವನ ಶೈಲಿ, ಅನುವಂಶಿಕ ವಿಚಾರಗಳಿಂದ ತಲೆ ಕೂದಲು ಉದುರುವುದು ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗುತ್ತಿದೆ. ಗಂಡಸರಿಗೆ ಬಕ್ಕತಲೆಯ ಸಮಸ್ಯೆ ಕಾಡುತ್ತಿದೆ. ಅದರಲ್ಲೂ ಯುವಕರ ತಲೆ ಸಣ್ಣ ಪ್ರಾಯದಲ್ಲೇ ಬೋಳಾಗುತ್ತಿದೆ. ಇದರಿಂದ ಅನೇಕ ಯುವಕರು ಒತ್ತಡಕ್ಕೆ ಸಿಲುಕುತ್ತಿದ್ದಾರೆ.

ತಮ್ಮ ಅಂದಕ್ಕೆ ಬಕ್ಕತಲೆ ತೊಡಕಾಗಿದೆ ಎಂದು ಟೆನ್ಷನ್ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ಬಕ್ಕತಲೆ ನೋಡಿ ಅನೇಕ ವಿವಾಹ ಪ್ರಸ್ತಾವನೆಗಳು ಮುರಿದುಬೀಳುತ್ತಿವೆ. ಹಾಗಾದರೆ ಇಂತಹ ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವುದು ಹೇಗೆ? ಬಕ್ಕತಲೆಯನ್ನು ಅಂದವಾಗಿ ಮಾಡಿಕೊಳ್ಳುವುದು ಹೇಗೆ? ಬಕ್ಕತಲೆಯವರ ಸಮಸ್ಯೆ ನಿವಾರಣೆ ಮಾಡುವುದು ಹೇಗೆ? ಇಲ್ಲಿದೆ ಅವರಿಗೆ ಬೆಸ್ಟ್ ಟಿಪ್ಸ್.

ಬೋಳು ಎಂದರೇನು?

ಬೋಳು ಎಂದರೇನು?

ತಲೆಯ ಮೇಲೆ ಕೂದಲು ಇಲ್ಲದಿರುವುದನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ ಬೋಳು ಎಂದು ಕರೆಯಲಾಗುತ್ತದೆ. ತಲೆ ಬೋಳು ಆಗುವುದಕ್ಕೆ ಮನುಷ್ಯನ ಜೀವನ ಶೈಲಿ ಹಾಗೂ ಅನುವಂಶಿಕ ವಿಚಾರಗಳು ಕಾರಣವಾಗಿರುತ್ತದೆ.

ಸಂಪೂರ್ಣವಾಗಿ ತಲೆ ಬೋಳಿಸಿಕೊಳ್ಳುವುದು!

ಸಂಪೂರ್ಣವಾಗಿ ತಲೆ ಬೋಳಿಸಿಕೊಳ್ಳುವುದು!

ಸಾಮಾನ್ಯವಾಗಿ ಬೊಕ್ಕು ತಲೆ ಎಂದರೆ ಅಲ್ಲಲ್ಲಿ ಕೂದಲು ಬೆಳೆದುಕೊಳ್ಳುವುದು ಆಗಿದೆ. ಈ ರೀತಿ ಆದರೆ ಮುಖದ ಲುಕ್ ಕೂಡ ಹೋಗುತ್ತೆ. ಪುರುಷ ಅಥವಾ ಮಹಿಳೆಯಾಗಲಿ ಕೇಶವಿದ್ದರೆ ಮಾತ್ರ ಅಂದ. ಹೀಗಾಗಿ ಅರ್ಧ ಅರ್ಧ ಕೂದಲಿಗಿಂತ ಅದನ್ನು ಪೂರ್ತಿಯಾಗಿ ಶೇವ್ ಮಾಡುವುದು ಒಳ್ಳೆಯದು. ಉತ್ತಮವಾದ ಶೇವಿಂಗ್ ಕಿಟ್ ನಿಂದ ನೀಟಾಗಿ ತಲೆ ಕೂದಲನ್ನು ಶೇವ್ ಮಾಡಬೇಕು. ಒಂದು ಕೂದಲು ಉಳಿಯದಂತೆ ನೋಡಿಕೊಳ್ಳಬೇಕು. ಮುಖ ಯಾವ ರೀತಿ ಹೊಳೆಯುತ್ತದೋ ಅದೇ ರೀತಿ ಕೂದಲಿಲ್ಲದ ತಲೆ ಕೂಡ ಹೊಳೆಯುವ ರೀತಿಯಲ್ಲಿ ಶೇವಿಂಗ್ ಮಾಡಬೇಕು. ಇದು ಅನೇಕರಿಗೆ ಸೂಟ್ ಆಗುತ್ತದೆ. ಇತ್ತೀಚಿನ ದಿನಗಳಲ್ಲಿ ಇದು ಭಾರೀ ಟ್ರೆಂಡ್ ನಲ್ಲಿದೆ. ಕೂದಲು ಇದ್ದವರು ಕೂಡ ಸಂಪೂರ್ಣವಾಗಿ ಕೂದಲು ತೆಗೆಯುತ್ತಿದ್ದಾರೆ. ದಿ ರಾಕ್ ಖ್ಯಾತಿಯ ಡ್ವಾಯ್ನ್ ಜಾನ್ ಸನ್ , ವಿನ್ ಡಿಸೇಲ್, ಸ್ಯಾಮ್ವೆಲ್ ಜಾನ್ಸನ್ ಸೇರಿ ಅನೇಕ ಸ್ಟಾರ್ ನಟರು ತಮ್ಮ ತಲೆಯ ಕೂದಲನ್ನು ಸಂಪೂರ್ಣವಾಗಿ ಶೇವ್ ಮಾಡಿಕೊಂಡಿದ್ದಾರೆ. ಈ ಎಲ್ಲ ನಟರಿಗೂ ಸಂಪೂರ್ಣ ಶೇವ್ ಸಖತ್ ಆಗಿ ಕಾಣಿಸುತ್ತಿದೆ. ಸಖತ್ ಹಾಟ್ ಆಗಿ ಕಾಣಿಸುತ್ತಿದ್ದಾರೆ. ಬೊಕ್ಕು ತಲೆ ಎಂದು ವರಿ ಮಾಡ್ಕೊಳ್ಳುವುದಕ್ಕಿಂತ ತಾನು ಯಾರಿಗೂ ಕಮ್ಮಿ ಎಲ್ಲ ಎಂದು ತೋರಿಸಿಕೊಡುತ್ತ ಸ್ಟೈಲಿಶ್ ಆಗಿ ಜೀವನ ಸಾಗಿಸದರೆ ಸಾಕು.

ಉತ್ತಮ ಶೇವಿಂಗ್ ಕಿಟ್ ಬಳಸಿ!

ಉತ್ತಮ ಶೇವಿಂಗ್ ಕಿಟ್ ಬಳಸಿ!

ಬಕ್ಕತಲೆಯನ್ನು ಕೇರ್ ಮಾಡುವುದು ಅಂದರೆ ಯಾವ್ಯಾವಗಲೋ ಹೇರ್ ಶೇವ್ ಮಾಡುವುದಲ್ಲ ಪ್ರತಿನಿತ್ಯ ಶೇವ್ ಮಾಡುತ್ತಿರಿ. ತಲೆ ನೀಟ್ ಆಗಿದ್ದರೆ ನಿಮ್ಮ ಮುಖದ ಲುಕ್ ಸಖತ್ ಆಗಿರುತ್ತದೆ. ತಲೆ ಅಂದವಾಗಿ ಕಾಣಬೇಕೆಂದರೆ ನಿತ್ಯ ಅಥವಾ ಎರಡು ದಿನಕ್ಕೆ ಒಂದು ಬಾರಿ ಚೆನ್ನಾಗಿ ಹೇರ್ ಶೇವ್ ಮಾಡಿ. ಇದಕ್ಕೆ ಉತ್ತಮವಾದ ಶೇವಿಂಗ್ ಕಿಟ್ ಬಳಸಿ ಅದಕ್ಕೆ ಉತ್ತಮವಾದ ಫೋಮ್ ಬಳಸಿ. ಗಾಯವಾದಂತೆ ಚೆನ್ನಾಗಿ ಶೇವ್ ಮಾಡಲು ಮರೆಯದಿರಿ. ಮೊದ ಮೊದಲಿಗೆ ಒಂದೆರಡು ಬಾರಿ ಸಮಸ್ಯೆಯಾದರೂ ಮತ್ತೆ ಇದು ರೂಡಿಯಾಗಲಿದೆ.

ತೇವವಾಗಿ ಇಡುವುದು ಉತ್ತಮ!

ತೇವವಾಗಿ ಇಡುವುದು ಉತ್ತಮ!

ಹೆಡ್ ಶೇವಿಂಗ್ ನಿಂದಾಗಿ ತಲೆ ಡ್ರೈ ಆಗುವುದು ಸಾಮಾನ್ಯ ಹೀಗಾಗಿ ಇದರ ಅಂದವನ್ನು ಹೆಚ್ಚಿಸಿಕೊಳ್ಳಲು ತಲೆ ಬುರುಡೆಯನ್ನು ತೇವವಾಗಿ ಇಡುವುದು ಒಳ್ಳೆಯದು. ದಿನ ನಿತ್ಯ ಹೆಡ್ ಲೋಶನ್ ಬಳಸುವ ಮೂಲಕ ತಲೆ ಬುರುಡೆಯ ಅಂದವನ್ನು ಹೆಚ್ಚಿಸಬಹುದು. ಲೋಶನ್ ಬಳಸುತ್ತಿದ್ದರೆ ತಲೆ ಬುರುಡೆ ನೈಸ್ ಆಗುವುದಲ್ಲದೆ ಹೊಳೆಯಲು ಆರಂಭವಾಗುತ್ತದೆ. ಇದರಿಂದ ತಲೆ ಬುರುಡೆ ಬಿಳಿಯಾಗಿ ಮುಖದ ಕಾಂತಿ ಕೂಡ ಹೆಚ್ಚುತ್ತದೆ.

ಮುಖದಂತೆ ತಲೆ ಬುರುಡೆಗೆ ಮೇಕಪ್!

ಮುಖದಂತೆ ತಲೆ ಬುರುಡೆಗೆ ಮೇಕಪ್!

ನಾವು ಅಂದವಾಗಿ ಕಾಣಲು ಏನು ಮಾಡುತ್ತೇವೆ? ಸಾಮಾನ್ಯವಾಗಿ ಮೆನ್ಸ್ ಬ್ಯೂಟಿ ಪಾರ್ಲರ್ ಗೆ ಹೋಗಿ ಸ್ಕ್ರಬ್ ಹಾಗೂ ಫೇಶಿಯಲ್ ಗಳನ್ನು ಮಾಡುತ್ತೇವೆ. ಇದೆ ರೀತಿ ನಮ್ಮ ತಲೆ ಬುರುಡೆಯ ಕೇರಿಂಗ್ ಮಾಡುವ ಅಗತ್ಯವಿದೆ. ತಲೆಯ ಚರ್ಮವೂ ಸಾಮಾನ್ಯವಾಗಿ ಡೆಡ್ ಸ್ಕಿನ್ ಆಗಿ ಬದಲಾಗುತ್ತಿದೆ. ಹೀಗಾಗಿ ಈ ಡೆಡ್ ಸ್ಕಿನ್ ರಿಮೂವ್ ಮಾಡಲು ಸ್ಕ್ರಬ್ ಮಾಡುವುದು ಉತ್ತಮ. ಅಲ್ಲದೇ ನೈಸರ್ಗಿಕ ಎಣ್ಣೆಗಳಿಂದ ಬುರುಡೆ ಮಸಾಜ್ ಮಾಡಿದರೆ ಇನ್ನು ಉತ್ತಮ.

ಕೊಂಚ ಕೂದಲು ಬಿಟ್ಟರೂ ಫ್ಯಾಶನ್!

ಇನ್ನು ಇತ್ತೀಚಿನ ದಿನಗಳಲ್ಲಿ ಮುಖದ ಅಂದವನ್ನು ಹೆಚ್ಚಿಸಲು ಕೆಲವರು ಸಂಪೂರ್ಣ ಬಾಲ್ಡ್ ಮಾಡದೆ ಸಣ್ಣ ಸಣ್ಣ ಕೂದಲುಗಳನ್ನು ಬುರುಡೆ ಮೇಲೆ ಬಿಟ್ಟು ಬಿಡುತ್ತಾರೆ. ಅಂದರೆ ಟ್ರಿಮರ್ ಮಷಿನ್ ನಲ್ಲಿ ಬರುವ ಒನ್ ನಂಬರನ್ನು ಆಯ್ಕೆ ಮಾಡಿಕೊಂಡು ಹೇರ್ ಕಟ್ಟಿಂಗ್ ಮಾಡುತ್ತಾರೆ. ಇದು ಕೂಡ ಕೆಲವರಿಗೆ ಸಖತ್ ಆಗಿ ಕಾಣುತ್ತದೆ. ಕೆಲವರ ಮುಖದ ಅಂದವನ್ನು ಇದು ಹೆಚ್ಚಿಸುತ್ತದೆ. ಬಳಿಕ ಸಾಮಾನ್ಯವಾಗಿ ಎಲ್ಲಾ ರೀತಿಯಲ್ಲೂ ಕೇರ್ ಮಾಡುತ್ತಿದ್ದಾರೆ. ಸಿನಿಮಾ ತಾರೆಯರು ಕೂಡ ಡಾಟ್ ರೀತಿಯ ಕೂದಲನ್ನು ಬಿಟ್ಟು ಬೊಕ್ಕು ತಲೆಯ ಸಮಸ್ಯೆಯಿಂದ ಎಸ್ಕೇಪ್ ಆಗುತ್ತಿದ್ದಾರೆ.

ಹಾಗಾದರೆ ನಿಮಗೆ ಬೋಳು ತಲೆ ಇದ್ದರೆ ವರಿ ಮಾಡುವ ಅಗತ್ಯವಿಲ್ಲ. ಈ ಟಿಪ್ಸ್ ಗಳನ್ನು ಬಳಸಿ ನೀವು ಅಂದವಾಗಿ ಕಾಣಿಸಿಕೊಳ್ಳುವಂತೆ ಮಾಡಿಕೊಳ್ಳಬಹುದು. ಅಲ್ಲದೇ, ಈ ಸ್ಟೈಲ್ ಬಳಸಿ ಯಾವುದೇ ಸಮಾರಂಭಗಳಿಗೂ ತೆರಳಬಹುದು.

English summary

Best Grooming Tips for Bald Men in Kannada

Best Grooming Tips for Bald Men in Kannada, Read on.....
X
Desktop Bottom Promotion