ಪಾದಗಳನ್ನು ನೋಡಿದಾಕ್ಷಣ ಮುತ್ತಿಡುವಂತೆ ಇರಬೇಕು!!

By: Hemanth
Subscribe to Boldsky

ಹಿರಿಯರ ಆಶೀರ್ವಾದ ಪಡೆಯಬೇಕಿದ್ದರೆ ನಾವು ಪಾದಗಳಿಗೆ ವಂದಿಸುತ್ತೇವೆ. ಪಾದಗಳಿಗೆ ಅಷ್ಟೊಂದು ಮಹತ್ವವನ್ನು ನೀಡಲಾಗಿದೆ. ಪಾದಗಳು ದೇಹದ ಸಂಪೂರ್ಣ ಭಾರವನ್ನು ಹೊತ್ತುಕೊಂಡು ಇರುತ್ತದೆ. ಆದರೆ ಪಾದಗಳು ಮಾತ್ರ ಯಾವಾಗಲೂ ಕಡೆಗಣಿಸಲ್ಪಡುತ್ತವೆ. ನಾವು ಪಾದಗಳ ಬಗ್ಗೆ ಅಷ್ಟೊಂದು ಕಾಳಜಿ ವಹಿಸುವುದೇ ಇಲ್ಲ. ಪಾದಗಳಿಗೆ ಏನಾದರೂ ಸಮಸ್ಯೆಯಾದಾಗ ಮಾತ್ರ ಅತ್ತ ಗಮನಹರಿಸುತ್ತೇವೆ.   ಅಂದದ ಪಾದಕ್ಕೆ, ಬೇಕಿದೆ ಚೆಂದದ ಆರೈಕೆ...

ಪಾದಗಳು ಕೂಡ ದೇಹದ ಪ್ರಮುಖ ಭಾಗವಾಗಿದೆ. ಇವುಗಳನ್ನು ನಾವು ತುಂಬಾ ಎಚ್ಚರಿಕೆಯಿಂದ ಆರೈಕೆ ಮಾಡಬೇಕಾಗುತ್ತದೆ. ಕೆಲವೊಮ್ಮೆ ಚಳಿಗಾಲದಲ್ಲಿ ಪಾದಗಳು ಒಡೆದು ವಿಪರೀತ ನೋವು ಕಾಣಿಸಿಕೊಳ್ಳುತ್ತದೆ.  ಪಾದಗಳು ಒರಟಾಗಲು ಕಾರಣ ಮತ್ತು ಪರಿಹಾರ

ನಾವು ಧರಿಸುವಂತಹ ಪಾದರಕ್ಷೆಗಳು ಕೂಡ ಪಾದಗಳ ಮೇಲೆ ಕಲೆಯನ್ನು ಉಂಟು ಮಾಡುತ್ತದೆ. ಇದು ಚರ್ಮದ ಸಮಸ್ಯೆಗೆ ಕಾರಣವಾಗಬಹುದು. ಈ ಸಮಯದಲ್ಲಿ ಪಾದಗಳ ಆರೈಕೆ ತುಂಬಾ ಮುಖ್ಯ. ಪಾದಗಳ ಆರೈಕೆಯ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ...  

ಪಾದಗಳ ಸ್ಕ್ರಬ್

ಪಾದಗಳ ಸ್ಕ್ರಬ್

ಪಾದಗಳು ಸತ್ತ ಚರ್ಮವನ್ನು ಶೇಖರಿಸಿಕೊಳ್ಳುವುದು ಹೆಚ್ಚು. ಇದರಿಂದಾಗಿ ಇದಕ್ಕೆ ಪಾದಗಳ ಸ್ಕ್ರಬ್ ಮಾಡಿಕೊಳ್ಳುವುದು ಒಳ್ಳೆಯದು. ಮಾರುಕಟ್ಟೆಯಲ್ಲಿ ಸಿಗುವಂತಹ ಸ್ಕ್ರಬ್ ಬಳಸಬಹುದು ಅಥವಾ ಮನೆಯಲ್ಲಿ ಕಂದು ಸಕ್ಕರೆ ಮತ್ತು ಆಲಿವ್ ಎಣ್ಣೆ ಬಳಸಿಕೊಂಡು ನೀವೇ ಸ್ಕ್ರಬ್ ತಯಾರಿಸಬಹುದು.

ಸನ್ ಸ್ಕ್ರೀನ್

ಸನ್ ಸ್ಕ್ರೀನ್

ಬಿಸಿಲಿಗೆ ಹೊರಗಡೆ ಹೋಗುವಾಗ ಸನ್ ಸ್ಕ್ರೀನ್ ಬಳಸಿಕೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ ಹೆಚ್ಚಿನವರು ಪಾದಗಳಿಗೆ ಸನ್ ಸ್ಕ್ರೀನ್ ಬಳಸುವುದಿಲ್ಲ. ಉದಾಸೀನ ಮತ್ತು ಸನ್ ಸ್ಕ್ರೀನ್ ನ್ನು ಯಾಕೆ ಹಾಳು ಮಾಡಬೇಕೆಂಬ ಭಾವನೆ ಇದಕ್ಕೆ ಕಾರಣವಾಗಿದೆ. ಇನ್ನು ಮುಂದೆ ಬಿಸಿಲಿಗೆ ಹೊರಗಡೆ ಹೋಗುವಾಗ ಪಾದಗಳಿಗೆ ಸನ್ ಸ್ಕ್ರೀನ್ ಬಳಸಿ.

ಒಡೆದ ಪಾದಗಳಿಗೆ

ಒಡೆದ ಪಾದಗಳಿಗೆ

ಚಳಿಗಾಲದಲ್ಲಿ ಹೆಚ್ಚಾಗಿ ಪಾದಗಳು ಒಡೆದುಹೋಗುತ್ತದೆ. ಇದಕ್ಕಾಗಿ ಪೆಟ್ರೋಲಿಯಂ ಜೆಲ್ ನ್ನು ಪಾದಗಳಿಗೆ ಹಚ್ಚಿಕೊಂಡು ಸಾಕ್ಸ್ ಹಾಕಿಕೊಂಡು ಮಲಗಬೇಕು. ಪಾದಗಳು ಹೆಚ್ಚು ಒಡೆದುಹೋಗಿದ್ದರೆ ಪೆಟ್ರೋಲಿಯಂ ಜೆಲ್ ಇದನ್ನು ಸರಿಪಡಿಸುತ್ತದೆ.ಒಡೆದ ಹಿಮ್ಮಡಿ ಸಮಸ್ಯೆಗೆ, ಫಟಾಫಟ್ ಟಿಪ್ಸ್-ಒಮ್ಮೆ ಪ್ರಯತ್ನಿಸಿ

ಹೊರಪೊರೆಯ ಆರೈಕೆ

ಹೊರಪೊರೆಯ ಆರೈಕೆ

ಪಾದಗಳ ಉಗುರುಗಳಲ್ಲಿ ಕಾಣಿಸಿಕೊಳ್ಳವಂತಹ ಹೊರಪೊರೆಯನ್ನು ನಾವು ಕಡೆಗಣಿಸಬಾರದು. ಇದಕ್ಕೆ ಕ್ರೀಮ್ ಅಥವಾ ಮುಲಾಂ ಹಚ್ಚಿಕೊಂಡು ರಾತ್ರಿ ಹಾಗೆ ಬಿಡಬೇಕು. ಬೆಳಿಗ್ಗೆ ಹೊರಪೊರೆಯು ನುಣುಪಾಗಿರುತ್ತದೆ.

ಉಗುರುಗಳನ್ನು ತೆಗೆಯುತ್ತೀರಿ

ಉಗುರುಗಳನ್ನು ತೆಗೆಯುತ್ತೀರಿ

ಕೈ ಅಥವಾ ಕಾಲುಗಳು ಆಗಲಿ. ಉಗುರುಗಳನ್ನು ನಿಯಮಿತವಾಗಿ ತೆಗೆಯುತ್ತಾ ಇರಬೇಕು. ಉಗುರುಗಳನ್ನು ತೆಗೆಯದಿದ್ದರೆ ಪಾದಗಳಲ್ಲಿ ಸ್ವಚ್ಛತೆ ಇರುವುದಿಲ್ಲ. ಶೂ ಧರಿಸುವಾಗ ಇದು ಸಮಸ್ಯೆಯನ್ನು ಉಂಟು ಮಾಡುತ್ತದೆ.

 
English summary

Ways To Make Your Feet Look Pretty

Your feet end up being the most neglected parts of your body. But they are definitely one of the most hardworking, aren't they? Especially if your job demands you to move about a lot. So, here are some ways to give your feet the pampering they need.
Story first published: Sunday, February 19, 2017, 23:26 [IST]
Subscribe Newsletter