Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಂದದ ಪಾದಕ್ಕೆ, ಬೇಕಿದೆ ಚೆಂದದ ಆರೈಕೆ...
ದೇಹದ ಸೌಂದರ್ಯ ವಿಷಯದಲ್ಲಿ ಪ್ರತಿಯೊಂದು ಅಂಗವೂ ಅತ್ಯಂತ ಪ್ರಮುಖವಾದುದು. ಉಗುರುನಿಂದ ಹಿಡಿದು ಪಾದದ ಹಿಮ್ಮಡಿಯವರೆಗೂ ನೀವು ಹೆಚ್ಚು ಅಸ್ಥೆಯನ್ನು ತೋರಿಸಬೇಕಾಗುತ್ತದೆ. ಬರಿಯ ಮುಖದ ಸೌಂದರ್ಯ ಮತ್ತು ಕೇಶ ಸೌಂದರ್ಯಕ್ಕೆ ಮಾತ್ರವೇ ಪ್ರಾಮುಖ್ಯತೆಯನ್ನು ನೀಡದೇ ದೇಹದ ಇತರ ಅಂಗಾಂಗಳಿಗೂ ಸೂಕ್ತ ಆರೈಕೆಯನ್ನು ಮಾಡಬೇಕು. ಅದಕ್ಕಾಗಿ ಬ್ಯೂಟಿ ಪಾರ್ಲರ್ಗಳಿಗೆಯೇ ನೀವು ನಿತ್ಯ ಹೋಗಬೇಕೆಂದಿಲ್ಲ ಕೆಲವೊಂದು ಮನೆಯಲ್ಲೇ ಸಿದ್ಧಪಡಿಸಬಹುದಾದ ಸೌಂದರ್ಯ ಉತ್ಪನ್ನಗಳಿಂದ ಕೂಡ ನಿಮ್ಮನ್ನು ನೀವು ಸುಂದರಿಯನ್ನಾಗಿಸಬಹುದು.
ನಿಮ್ಮ ದೇಹದ ಯಾವ ಭಾಗಕ್ಕೆ ನೀವು ಆರೈಕೆಯನ್ನು ನೀಡಬೇಕು ಎಂಬ ವಿಷಯ ಬಂದಾಗ ಪಾದಗಳ ಕಡೆಗೇ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದೇ ನಾವು ತಿಳಿಸುತ್ತೇವೆ. ನಿಮಗಾಗಿ ದುಡಿಯುವ ಉಪಕಾರಿ ಪಾದಗಳ ನಿರ್ಲಕ್ಷ್ಯವನ್ನು ನೀವು ಮಾಡಿದರೆ ಅದೂ ಕೂಡ ನಿಮ್ಮನ್ನು ಅಲಕ್ಷಿಸಿಬಿಡುತ್ತದೆ. ಕೈ ಮತ್ತು ಕೈ ಉಗುರುಗಳ ಅಂದ ಚೆಂದದಂತೆಯೇ ಕಾಲುಗಳು ಮತ್ತು ಕಾಲ್ಬೆರಳುಗಳ ಉಗುರುಗಳ ಸೌಂದರ್ಯ ಹಾಗೂ ಸ್ವಚ್ಛತೆಗೂ ಗಮನ ನೀಡಬೇಕು. ಬೇಸಿಗೆಯಲ್ಲಿ ಪಾದಗಳ ಆರೈಕೆ ಹೀಗಿರಲಿ
ಕಾಲುಗಳ ಪಾದ ಹೆಚ್ಚಿನ ಸಮಸ್ಯೆಗಳಿಗೆ ಒಳಗಾಗಿರುತ್ತವೆ. ದುರ್ಗಂಧ ಹೊರಸೂಸುವುದು, ಪಾದಗಳ ಬಿರುಕು, ಕಾಲ್ಬೆರಳುಗಳ ಉಗುರಿನೊಂದಿಗೆ ಬೆಳೆದ ಮಾಂಸ, ಹಾನಿಗೊಂಡ ಮೂಳೆಗಳು ಹೀಗೆ ಪಾದಗಳ ಸಮಸ್ಯೆಗಳು ಸೂಕ್ತ ಆರೈಕೆ ಕಾಣದೇ ಹೋದಲ್ಲಿ ನಿಮ್ಮನ್ನೇ ತಿಂಡುಬಿಡಬಹುದು. ಹಾಗೆಂದು ಪಾದಗಳ ಸೂಕ್ತ ಕಾಳಜಿಗಾಗಿ ನೀವು ಹೆಚ್ಚು ದುಡ್ಡು ವ್ಯಯಿಸಬೇಕಾಗಿಲ್ಲ ಪಾರ್ಲರ್ಗಳಲ್ಲಿ ಮಾಡುವ ಅದುವೇ ಸೌಂದರ್ಯ ವಿಧಾನಗಳನ್ನು ನಿಮ್ಮ ಮನೆಗಳಲ್ಲೇ ನಿಮಗೆ ಅನುಸರಿಸಬಹುದಾಗಿದೆ. ಹಾಗಿದ್ದರೆ ಆ ಸಲಹೆಗಳೇನು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನಿಮ್ಮದಾಗಿದೆ ಎಂದಾದಲ್ಲಿ ಸಲಹೆಗಳನ್ನು ತಿಳಿಸಿಕೊಡಲು ನಾವು ಸಿದ್ಧ.....

ಅಡುಗೆ ಸೋಡಾ
ನಾಲ್ಕು ದೊಡ್ಡಚಮಚ ಅಡುಗೆ ಸೋಡಾಪುಡಿಯನ್ನು ಒಂದು ಅಗಲವಾದ ಬಕೆಟ್ ಅಥವಾ ಪಾತ್ರೆಯಲ್ಲಿರುವ ಉಗುರುಬೆಚ್ಚನೆಯ ನೀರಿಗೆ ಹಾಕಿ ಕಲಕಿ. ಈ ನೀರಿನಲ್ಲಿ ಪಾದಗಳನ್ನು ಮುಳುಗಿಸಿ. ಈ ನೀರಿಗೆ ಕೆಲವು ಹನಿ ಶಾಂಪೂ ಸೇರಿಸಿ ಪಾದಗಳನ್ನು ಒಂದಕ್ಕೊಂದು ಉಜ್ಜಿಕೊಳ್ಳುತ್ತಾ ನೊರೆ ಬರಿಸಿ. ಸುಮಾರು ಹದಿನೈದು ನಿಮಿಷದ ಬಳಿಕ ಹೊರತೆಗೆದು ತಣ್ಣೀರಿನಿಂದ ತೊಳೆದುಕೊಳ್ಳಿ.

ಲಿಂಬೆ ಹಣ್ಣು
ಒಂದು ಅಗಲವಾದ ಬಕೆಟ್ ಅಥವಾ ಪಾತ್ರೆಯಲ್ಲಿ ಉಗುರುಬೆಚ್ಚನೆಯ ನೀರನ್ನು ತುಂಬಿಸಿ.ಲಿಂಬೆ ಹಣ್ಣೊಂದನ್ನು ಅಡ್ಡಲಾಗಿ ಕತ್ತರಿಸಿ ಅದರ ಮೇಲೆ ಕೊಂಚ ಉಪ್ಪನ್ನು ಸವರಿ. ಈ ಲಿಂಬೆಹಣ್ಣಿನಿಂದ ಪಾದಗಳ ಕೆಳಭಾಗವನ್ನು ಹಿಂಡುತ್ತಾ ಸವರಿ. ಬಲಪಾದಕ್ಕೆ ಅರ್ಧ ಲಿಂಬೆ, ಎಡಗಾಲಿಗೆ ಅರ್ಧ ಲಿಂಬೆ ಉಪಯೋಗಿಸಿ. ತದನಂತರ ಸುಮಾರು ಹತ್ತರಿಂದ ಹದಿನೈದು ನಿಮಿಷಗಳ ವರೆಗೆ ಅನುಕ್ರಮವಾಗಿ ಎಡ ಮತ್ತು ಬಲ ಪಾದಗಳನ್ನು ಲಿಂಬೆಯಿಂದ ಉಜ್ಜುತ್ತಾ ಬನ್ನಿ.ಬಳಿಕ ಕೊಂಚ ಕಾಲ ಒಣಗಲು ಬಿಟ್ಟು ಉಗುರುಬೆಚ್ಚನೆಯ ನೀರಿನಲ್ಲಿ ಕಾಲಿಡಿ. ಸುಮಾರು ಐದು ನಿಮಿಷಗಳ ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಒರಟಾಗಿದ್ದ ಮತ್ತು ಚರ್ಮದ ಸತ್ತ ಜೀವಕೋಶಗಳು ಸಡಿಲಗೊಂಡು ಕಾಲನ್ನು ಉಜ್ಜಿಕೊಂಡಾಗ ನಿವಾರಣೆಯಾಗುತ್ತದೆ. ಉಜ್ಜಿಕೊಳ್ಳಲು ಒರಟು ಕಲ್ಲು ಅಥವಾ ಇದಕ್ಕಾಗಿಯೇ ಇರುವ ಉಪಕರಣವನ್ನು ಉಪಯೋಗಿಸಬಹುದು.

ಎಕ್ಸ್ಫೋಲಿಯೇಟ್ ಮತ್ತು ಮಾಯಿಶ್ಚರೈಸರ್
ನಿಮ್ಮ ಮುಖ ಮತ್ತು ಕೈಗಳ ಆರೈಕೆ ಮಾಡಿದಂತೆಯೇ ಕಾಲುಗಳಿಗೂ ಮಾಡಿ. ತ್ವಚೆಯನ್ನು ನಿತ್ಯವೂ ಎಕ್ಸ್ಫೋಲಿಯೇಟ್ ಮಾಡಿ ಇದರಿಂದ ಕೊಳೆ ಸೇರಿಕೊಳ್ಳುವುದಿಲ್ಲ. ಅವುಗಳನ್ನು ನಿತ್ಯವೂ ಮಾಯಿಶ್ಚರೈಸ್ ಮಾಡಿ ಇದರಿಂದ ತ್ವಚೆ ಮೃದುವಾಗಿ ಕಾಂತಿಯುಕ್ತವಾಗಿರುತ್ತದೆ.

ಪಾದಗಳನ್ನು ನಿತ್ಯವೂ ತೊಳೆದುಕೊಳ್ಳುವುದು
ಪಾದಗಳ ಆರೋಗ್ಯ ಹೆಚ್ಚು ಪ್ರಮುಖವಾದುದು. ಉಗುರು ಬೆಚ್ಚಗಿನ ನೀರು ಮತ್ತು ಮೃದು ಶಾಂಪೂ ಬಳಸಿ ದಿನಕ್ಕೆರಡು ಬಾರಿ ಕಾಲುಗಳನ್ನು ತೊಳೆದುಕೊಳ್ಳಿ. ಇದು ತ್ವಚೆಯನ್ನು ಸ್ವಚ್ಛವಾಗಿರಿಸಿಕೊಳ್ಳುವುದರೊಂದಿಗೆ ಪಾದಗಳನ್ನು ಸುಂದರವಾಗಿರಿಸುತ್ತದೆ. ಪಾದಗಳ ದುರ್ಗಂಧವನ್ನು ಹೋಗಲಾಡಿಸುತ್ತದೆ.

ಹೀಲ್ಸ್ಗಳಿಂದ ಬ್ರೇಕ್ ನೀಡಿ
ಹೈ ಹೀಲ್ಸ್ ನೋಟದಲ್ಲಿ ಸುಂದರತೆಯನ್ನು ನೀಡುವಂತಿದ್ದರೂ, ಅವುಗಳನ್ನು ನಿತ್ಯವೂ ಧರಿಸುವುದು ಕಾಲುಗಳಿಗೆ ಗಂಭೀರ ಸಮಸ್ಯೆಗಳನ್ನು ತಂದೊಡ್ಡಬಹುದು. ಇದರಿಂದ ಬೆನ್ನು ನೋವು ನಿಮ್ಮನ್ನು ಕಾಡಬಹುದು.

ತೆಂಗಿನೆಣ್ಣೆಯ ಮಸಾಜ್
ನಿಮ್ಮ ಪಾದಗಳನ್ನು ಹೈಡ್ರೇಟ್ ಮಾಡಲು ತೆಂಗಿನೆಣ್ಣೆಯನ್ನು ಬಳಸಿ. ಪ್ರತೀ ದಿನ ತೆಂಗಿನೆಣ್ಣೆಯನ್ನು ಬಳಸಿ ಪಾದಗಳನ್ನು ಮಸಾಜ್ ಮಾಡಿ. ಇದು ಪಾದಗಳನ್ನು ಮೃದುವಾಗಿರಿಸುವುದಲ್ಲದೆ ಹೈಡ್ರೇಟ್ ವನ್ನಾಗಿ ಮಾಡುತ್ತದೆ. ಮಲಗುವ ಮುಂಚೆ ತೆಂಗಿನೆಣ್ಣೆಯನ್ನು ಹಚ್ಚಿ ಮಸಾಜ್ ಮಾಡಿ ನಂತರ ಬೆಳಗ್ಗೆ ಸ್ನಾನದ ಸಮಯದಲ್ಲಿ ಪಾದಗಳನ್ನು ತೊಳೆದುಕೊಳ್ಳಿ.

ಬಾಳೆಹಣ್ಣಿನ ಪ್ಯಾಕ್
ದೇಹದ ಚರ್ಮವನ್ನು ಹೈಡ್ರೇಟ್ ಮಾಡಲು ಬಾಳೆಹಣ್ಣು ಸಹಕಾರಿ. ಪಾದಗಳಿಗೆ ಅವುಗಳನ್ನು ಬಳಸುವುದು ಸೂಕ್ತವಾದುದು. ಬಾಳೆಹಣ್ಣನ್ನು ಚೆನ್ನಾಗಿ ಹಿಸುಕಿ ಪಾದಗಳಿಗೆ ಸಂಪೂರ್ಣವಾಗಿ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಹಾಗೆಯೇ ಬಿಟ್ಟು ನಂತರ ತೊಳೆದುಕೊಳ್ಳಿ. ಒಣ ಚರ್ಮಕ್ಕೆ ಇದು ಹೆಚ್ಚು ಪರಿಣಾಮಕಾರಿಯಾದುದು.



Click it and Unblock the Notifications