ಬ್ಯೂಟಿ ಟಿಪ್ಸ್: ಕಾಲಿನ ಅಂದ-ಚೆಂದ ಹೆಚ್ಚಿಸಲು, ಸರಳ ಟಿಪ್ಸ್

Posted By: Arshad
Subscribe to Boldsky

ಇಂದಿನ ದಿನಗಳಲ್ಲಿ ಮಹಿಳೆಯರಿಗೆ ಮೊಣಕಾಲಿನ ಕೆಳಭಾಗ ಕಾಣುವಂತಿರುವ ಉಡುಪುಗಳು ಹೆಚ್ಚು ಜನಪ್ರಿಯವಾಗುತ್ತಿದ್ದಂತೆಯೇ ಕಾಲುಗಳ ಮೇಲಿನ ರೋಮವನ್ನು ನಿವಾರಿಸುವ ಅಗತ್ಯತೆ ಹೆಚ್ಚು ಹೆಚ್ಚಾಗಿ ಕಾಣಬರುತ್ತಿದೆ. ಅದರಲ್ಲೂ ಒಳಮುಖ ಬಾಗಿರುವ ಕೂದಲುಗಳನ್ನು ನಿರ್ವಹಿಸುವುದು ಮಹಿಳೆಯರಿಗೆ ತುಂಬಾ ಕಷ್ಟದ ಕೆಲಸವಾಗಿದ್ದು ಇವುಗಳನ್ನು ಕೀಳುವುದು ತುಂಬಾ ನೋವು ತರುವ ಕೆಲಸವಾಗಿದೆ ಹಾಗೂ ಕೂದಲ ಬುಡದಲ್ಲಿ ಚಿಕ್ಕ ಗಂಟುಗಳು ಕಾಣಬರುತ್ತವೆ. ಕಾಲುಗಳು ನುಣಪಾಗಿ, ಆಕರ್ಷಕವಾಗಿ ಕಾಣಲು ಟಿಪ್ಸ್  

ಈ ತೊಂದರೆ ವ್ಯಾಕ್ಸ್ ವಿಧಾನದಿಂದ ಕೂದಲನ್ನು ನಿವಾರಿಸಿರುವ ಅಥವಾ ಕೂದಲ ಬೆಳವಣಿಗೆಯ ವಿರುದ್ಧ ದಿಕ್ಕಿನಲ್ಲಿ ಶೇವ್ ಮಾಡಿರುವ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಬರುತ್ತದೆ. ಒಳಮುಖವಾಗಿ ಬೆಳೆಯುವ ಕೂದಲು ನೋಡಲು ಅಸಹ್ಯವಾಗಿ ಇರುವುದಲ್ಲದೇ ಮುಜುಗರ ತರಿಸುವಂತಹದ್ದೂ ಆಗಿವೆ. ಕೈ ಹಾಗೂ ಕಾಲಿನ ಗಂಟುಗಳ ಕಪ್ಪು ಕಲೆಗಳ ಸಮಸ್ಯೆಗೆ ಸರಳ ಟಿಪ್ಸ್

ಆದರೆ ಈ ಒಳಮುಖ ಬಾಗಿರುವ ಕೂದಲ ಬುಡಗಳನ್ನು ಮತ್ತೆ ಸರಿದಾರಿಗೆ ತರಲು ಸಾಧ್ಯವಿದೆ. ಇದಕ್ಕಾಗಿ ನಿಮ್ಮ ಚರ್ಮದ ಆರೈಕೆಯ ವಿಧಾನದಲ್ಲಿ ಕೊಂಚ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಜೊತೆಗೆ ನಿಮ್ಮ ನಿತ್ಯದ ಪ್ರಸಾಧನಗಳೊಂದಿಗೆ ಕೆಲವು ನೈಸರ್ಗಿಕ ಪ್ರಸಾಧನಗಳನ್ನೂ ಬಳಸಬೇಕಾಗಿ ಬರುತ್ತದೆ.

ಇಂದು ಬೋಲ್ಡ್ ಸ್ಕೈ ತಂಡ ಒಳಮುಖ ಬಾಗಿರುವ ಕೂದಲ ಬುಡದ ಆರೈಕೆಗೆ ಕೆಲವು ಸುಲಭ ವಿಧಾನಗಳನ್ನು ಸಂಗ್ರಹಿಸಿದ್ದು ನಿಮ್ಮ ಮುಂದಿಡಲು ಹರ್ಷಿಸುತ್ತಿದೆ. ಇವುಗಳಲ್ಲಿ ನಿಮಗೆ ಸೂಕ್ತವಾದ ವಿಧಾನವನ್ನು ಆಯ್ದುಕೊಂಡು ಅನುಸರಿಸುವ ಮೂಲಕ ಸುಂದರವಾದ, ನುಣುಪಾದ ಹಾಗೂ ಸ್ವಚ್ಛವಾದ ಕಾಲುಗಳನ್ನು ಪಡೆದು ನಿಮ್ಮ ನೆಚ್ಚಿನ ಉಡುಪುಗಳನ್ನು ತೊಡಲು ಸಾಧ್ಯವಾಗುತ್ತದೆ. ಬನ್ನಿ, ಈ ವಿಧಾನಗಳ ಬಗ್ಗೆ ಅರಿಯೋಣ:

ಆಲ್ಕೋಹಾಲ್ ರಹಿತ ಪ್ರಸಾಧನಗಳನ್ನು ಬಳಸಿ

ಆಲ್ಕೋಹಾಲ್ ರಹಿತ ಪ್ರಸಾಧನಗಳನ್ನು ಬಳಸಿ

ಕಾಲಿನ ಆರೈಕೆಗೆ ಬಳಸುವ ಪ್ರಸಾಧನಗಳಲ್ಲಿ ಆಲ್ಕೋಹಾಲ್ ಅಂಶವಿದ್ದರೆ ಬಳಿಕ ಕೂದಲ ಬುಡಗಳಲ್ಲಿ ಒಳಮುಖ ಕೂದಲು ಬೆಳೆಯುವುದನ್ನು ಗಮನಿಸಿರುವ ಸೌಂದರ್ಯತಜ್ಞರು ಆಲ್ಕೋಹಾಲ್ ರಹಿತ ಪ್ರಸಾದನಗಳನ್ನೇ ಬಳಸಲು ಸಲಹೆ ಮಾಡುತ್ತಾರೆ. ವಿಶೇಷವಾಗಿ ಶೇವ್ ಮಾಡುವಾಗ ಹಾಗೂ ಶೇವ್ ಮಾಡಿದ ಬಳಿಕ ಉಪಯೋಗಿಸುವ ಆಫ್ಟರ್ ಶೇವ್ ದ್ರಾವಣಗಳಲ್ಲಿರುವ ಆಲ್ಕೋಹಾಲ್ ಈ ಒಳಮುಖ ಕೂದಲ ಬೆಳವಣಿಗೆಗೆ ನೇರವಾಗಿ ಕಾರಣವಾಗಿವೆ.

ವಾರಕ್ಕೆರಡು ಬಾರಿ ಸತ್ತ ಜೀವಕೋಶಗಳನ್ನು ನಿವಾರಿಸಿ

ವಾರಕ್ಕೆರಡು ಬಾರಿ ಸತ್ತ ಜೀವಕೋಶಗಳನ್ನು ನಿವಾರಿಸಿ

ಚರ್ಮದ ಹೊರಪದರದ ಸತ್ತ ಜೀವಕೋಶಗಳನ್ನು ಆಗಾಗ ನಿವಾರಿಸುತ್ತಾ ಇರಬೇಕು. ಇಲ್ಲದಿದ್ದರೆ ಇದು ಕೂದಲ ಬೆಳವಣಿಗೆಗೆ ಅಡ್ಡಿಯಾಗಿ ಕೂದಲು ಹೊರಹೊಮ್ಮುವ ದಿಕ್ಕನ್ನು ಬದಲಿಸಿ ಒಳಮುಖವಾಗಿಸಲು ಕಾರಣವಾಗಬಹುದು. ಆದ್ದರಿಂದ ವಾರಕ್ಕೆರಡು ಬಾರಿ ಈ ಸತ್ತ ಜೀವಕೋಶಗಳನ್ನು ನಿವಾರಿಸಲು (ಎಕ್ಸ್ಫೋಲಿಯೇಟ್) ಸೌಂದರ್ಯತಜ್ಞರು ಸಲಹೆ ಮಾಡುತ್ತಾರೆ. ಆದರೆ ಈ ವಿಧಾನದಲ್ಲಿ ಅತಿ ಹೆಚ್ಚು ನಾಜೂಕು ಇರಬೇಕು. ಇಲ್ಲದಿದ್ದರೆ ಈ ಕ್ರಿಯೆಯಲ್ಲಿ ಚರ್ಮದ ಹೊರಪದರ ಸೆಡತಗೊಂಡು ಕೂದಲು ಒಳಮುಖವಾಗಿ ಬೆಳೆಯಲು ಪರೋಕ್ಷವಾಗಿ ಪ್ರೇರಣೆ ನೀಡಿದಂತಾಗುತ್ತದೆ.

ಬೆಚ್ಚನೆಯ ನೀರಿನ ಬಟ್ಟೆಯನ್ನು ಬಳಸಿ

ಬೆಚ್ಚನೆಯ ನೀರಿನ ಬಟ್ಟೆಯನ್ನು ಬಳಸಿ

ಉಗುರುಬೆಚ್ಚನೆಯ ನೀರಿನಲ್ಲಿ ಅದ್ದಿ ಹಿಂಡಿದ ದಪ್ಪ ಟವೆಲ್ಲೊಂದನ್ನು ಕಾಲುಗಳ ಮೇಲೆ ಹೆಚ್ಚಿನ ಒತ್ತಡವಿಲ್ಲದೇ ಒತ್ತಿಕೊಳ್ಳುವ ವಿಧಾನ (ವಾರ್ಮ್ ಪ್ರೆಸ್) ದಿಂದಲೂ ಒಳಮುಖ ಬೆಳೆಯುವ ಕೂದಲನ್ನು ತಡೆಯಬಹುದು. ವಿಶೇಷವಾಗಿ ಅನಗತ್ಯ ಕೂದಲನ್ನು ವ್ಯಾಕ್ಸ್ ವಿಧಾನದಿಂದ ನಿವಾರಿಸಿರುವ ಮಹಿಳೆಯರು ನಿವಾರಣೆಯ ನಲವತ್ತೆಂಟು ಗಂಟೆಯ ಬಳಿಕ ಈ ವಿಧಾನವನ್ನು ಅನುಸರಿಸಿ. ಇದರಿಂದ ಚರ್ಮದ ಸೂಕ್ಷ್ಮರಂಧ್ರಗಳು ಅಗಲವಾಗಿ ತೆರೆಯಲು ಸಾಧ್ಯವಾಗಿ ಕೂದಲು ತಡೆಯಿಲ್ಲದೇ ಹೊರಬರಲು ಸಾಧ್ಯವಾಗುತ್ತದೆ. ಈ ಟವೆಲ್ಲನ್ನು ಕನಿಷ್ಟ ಹತ್ತರಿಂದ ಹದಿನೈದು ನಿಮಿಷಗಳಾದರೂ ಕಾಲುಗಳ ಮೇಲೆ ಇರಿಸುವುದು ಅಗತ್ಯವಾಗಿದೆ.

ಕಾಲುಗಳಿಗೆ ಸೂಕ್ತ ಆರ್ದ್ರತೆ ನೀಡುವುದು ಅವಶ್ಯ

ಕಾಲುಗಳಿಗೆ ಸೂಕ್ತ ಆರ್ದ್ರತೆ ನೀಡುವುದು ಅವಶ್ಯ

ಕಾಲುಗಳ ಕೂದಲುಗಳನ್ನು ನಿವಾರಿಸಿದ ಬಳಿಕ ದೇಹದ ಉಳಿದ ಭಾಗಗಗಳ ಜೊತೆಗೆ ಈ ಭಾಗದ ಚರ್ಮಕ್ಕೆ ಸಾಕಷ್ಟು ಆರ್ದ್ರತೆಯನ್ನು ಒದಗಿಸುವುದು ತುಂಬಾ ಅಗತ್ಯ. ಸಮಾನ್ಯವಾಗಿ ಒಳಮುಖ ಬೆಳೆಯುವ ಕೂದಲು ಒಣಚರ್ಮದಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಸೂಕ್ತ ಮಾಯಿಶ್ಚರೈಸರ್ ಬಳಸಿ ಸದಾ ಚರ್ಮದಲ್ಲಿ ಆರ್ದ್ರತೆಯ ಕೊರತೆಯಾಗದಂತೆ ನೋಡಿಕೊಳ್ಳುವ ಮೂಲಕ ಒಳಮುಖ ಕೂದಲು ಬೆಳೆಯದಂತೆ ನೋಡಿಕೊಳ್ಳಬಹುದು.

ಸಡಿಲ ಬಟ್ಟೆಗಳನ್ನೇ ಧರಿಸಿ

ಸಡಿಲ ಬಟ್ಟೆಗಳನ್ನೇ ಧರಿಸಿ

ಕೂದಲನ್ನು ವ್ಯಾಕ್ಸ್ ಅಥವಾ ಶೇವ್ ಮೂಲಕ ನಿವಾರಿಸಿದ ಬಳಿಕ ಚರ್ಮಕ್ಕೆ ಅಂಟುವ ಬಟ್ಟೆಗಳ ಬದಲಿಗೆ ಸಡಿಲ ಬಟ್ಟೆಗಳನ್ನು ಧರಿಸುವುದೇ ಉತ್ತಮ. ಬಿಗಿಯಾದ ಬಟ್ಟೆಗಳನ್ನು ಧರಿಸುವ ಮೂಲಕ ಚರ್ಮದ ಸೂಕ್ಷ್ಮರಂಧ್ರಗಳು ಮುಚ್ಚಿ ಕೂದಲು ಮತ್ತೊಮ್ಮೆ ಒಳಮುಖವಾಗಿ ಬಾಗುವ ಸಾಧ್ಯತೆ ಹೆಚ್ಚುತ್ತದೆ. ಅಲ್ಲದೇ ಚರ್ಮ ಒರಟೂ ಆಗುತ್ತಾ, ಒಳಮುಖ ಬೆಳೆಯುವ ಕೂದಲನ್ನು ಇನ್ನಷ್ಟು ವೇಗವಾಗಿ ಒಳಮುಖವಾಗಿ ಮುಂದುವರೆಯಲು ಪ್ರೇರಣೆ ನೀಡುತ್ತದೆ.

ಲೋಳೆಸರದ ಜೆಲ್ ಹಚ್ಚಿ

ಲೋಳೆಸರದ ಜೆಲ್ ಹಚ್ಚಿ

ಲೋಳೆಸರದಲ್ಲಿರುವ ಶಮನಕಾರಕ ಗುಣ ಕೂದಲು ನಿವಾರಿಸಿದ ಬಳಿಕ ಹೊಸಕೂದಲು ಬೆಳೆಯುವ ಸಮಯದಲ್ಲಿ ಅತ್ಯುತ್ತಮವಾದ ಆರೈಕೆ ನೀಡುತ್ತದೆ. ಈ ಜೆಲ್ ನಲ್ಲಿರುವ ಆಂಟಿ ಆಕ್ಸಿಡೆಂಟುಗಳು ನಿಮ್ಮ ಕಾಲಿನ ಚರ್ಮ ಮೃದುವಾಗಿರಲು ಹಾಗೂ ಕೂದಲು ಒಳಮುಖವಾಗಿ ಬೆಳೆಯುವುದನ್ನು ತಡೆಯಲು ನೆರವಾಗುತ್ತವೆ. ಇದಕ್ಕಾಗಿ ಕೊಂಚ ಲೋಳೆಸರದ ಜೆಲ್ ಅನ್ನು ಕಾಲಿನ ಮೇಲೆ ಹಚ್ಚಿ ಕೂದಲು ಬೆಳೆಯುವ ದಿಕ್ಕಿನಲ್ಲಿ ಹೆಚ್ಚಿನ ಒತ್ತಡವಿಲ್ಲದೇ ಪೂರ್ಣವಾಗಿ ಆವರಿಸುವಂತೆ ಮಾಡಿ ಕನಿಷ್ಠ ಮೂವತ್ತು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಅಡುಗೆ ಸೋಡಾ ಬಳಕೆಯನ್ನು ಯತ್ನಿಸಿ

ಅಡುಗೆ ಸೋಡಾ ಬಳಕೆಯನ್ನು ಯತ್ನಿಸಿ

ಅಡುಗೆ ಸೋಡಾದಲ್ಲಿರುವ ಉರಿಯೂತ ನಿವಾರಕ ಗುಣ ಹಾಗೂ ಬ್ಯಾಕ್ಟೀರಿಯಾ ನಿವಾರಕ ಗುಣ ಶೇವ್ ಮಾಡಿದ ಚರ್ಮದಲ್ಲಿ ಒಳಮುಖ ಬೆಳೆಯುವ ಕೂದಲನ್ನು ತಡೆಯಲು ಅತ್ಯುತ್ತಮವಾದ ಆಯ್ಕೆಯಾಗಿದೆ. ಇದಕ್ಕಾಗಿ ಒಂದು ಚಿಕ್ಕಚಮಚ ಅಡುಗೆಸೋಡಾವನ್ನು ಎರಡು ಚಿಕ್ಕಚಮಚ ತಣ್ಣೀರಿನಿಂದಿಗೆ ಬೆರೆಸಿ ಈ ಮಿಶ್ರಣವನ್ನು ಕಾಲಿನ ಮೇಲೆ ತೆಳುವಾಗಿ ಹಚ್ಚಿ. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೌಂದರ್ಯಕ್ಕೆ ಬರೀ ಒಂದೇ ಒಂದು ಚಮಚ 'ಅಡುಗೆ ಸೋಡಾ'!

For Quick Alerts
ALLOW NOTIFICATIONS
For Daily Alerts

    English summary

    How To Prevent Ingrown Hair On Your Legs

    Today at Boldsky, we have curated a list of ways in which you can prevent the growth of ingrown hair on your legs. These natural treatments can help your legs look smooth and clean. Take a look at these effective ways here.
    Story first published: Tuesday, May 9, 2017, 23:31 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more