For Quick Alerts
ALLOW NOTIFICATIONS  
For Daily Alerts

ಒಡೆದ ಹಿಮ್ಮಡಿ ಸಮಸ್ಯೆಗೆ, ಫಟಾಫಟ್ ಟಿಪ್ಸ್-ಒಮ್ಮೆ ಪ್ರಯತ್ನಿಸಿ

By Manu
|

ಒಡೆದ ಪಾದಗಳನ್ನು ನಾವು ಸಾಮಾನ್ಯವಾಗಿ ಬಿರುಕುಗಳೆಂದು ಕರೆಯುತ್ತವೆ. ಇದು ಕೇವಲ ಸಮಸ್ಯೆ ಉಂಟುಮಾಡುವುದು ಮಾತ್ರವಲ್ಲದೆ ತುಂಬಾ ನೋವು ಹಾಗೂ ಕೆಲವೊಂದು ಸಲ ಭಾರೀ ಮುಜುಗರನ್ನುಂಟು ಮಾಡುತ್ತದೆ. ಪಾದಗಳಲ್ಲಿ ಬಿರುಕು ಕಾಣಿಸುವುದು ಪಾದಗಳ ಆರೈಕೆ ಮತ್ತು ನಿರ್ಮಲವಿಲ್ಲದ ಕಾರಣವೆಂದು ಹೆಚ್ಚಿನವರು ಪರಿಗಣಿಸಿದ್ದಾರೆ.

Simple Tips To Prevent Cracked Heels, That You Never Knew!

ಆದರೆ ಕೆಲವರಿಗೆ ಪಾದಗಳು ಒಡೆಯುವ ಸಮಸ್ಯೆ ಯಾವಾಗಲೂ ಕಾಡುತ್ತಲೇ ಇರುತ್ತದೆ. ಇದರಿಂದ ಅವರಿಗೆ ತಮಗೆ ಬೇಕಾದಂತಹ ಚಪ್ಪಲಿಯನ್ನು ಧರಿಸಲು ಸಾಧ್ಯವಾಗುವುದಿಲ್ಲ. ಪಾದಗಳಲ್ಲಿ ಸಮಸ್ಯೆಯೇ? ಇಲ್ಲಿದೆ ಪರಿಹಾರ

ಒಡೆದ ಪಾದಗಳನ್ನು ಯಾವಾಗಲೂ ಇತರರಿಂದ ಮುಚ್ಚಿಕೊಳ್ಳಲು ಪ್ರಯತ್ನಿಸುತ್ತೇವೆ. ಒಡೆದ ಪಾದಗಳ ಚಿಕಿತ್ಸೆಗೆ ಹಲವಾರು ರೀತಿಯ ಕ್ರೀಮ್‌ಗಳು ಲಭ್ಯವಿದೆ. ಆದರೆ ನೈಸರ್ಗಿಕ ರೀತಿಯಲ್ಲಿ ಒಡೆದ ಪಾದಗಳಿಗೆ ಚಿಕಿತ್ಸೆ ನೀಡಬೇಕಾದರೆ ಏನು ಮಾಡಬೇಕೆಂದು ನೀವು ಈ ಲೇಖನದಲ್ಲಿ ತಿಳಿದುಕೊಳ್ಳಿ.

ಯಾಕೆಂದರೆ ಒಡೆದ ಪಾದಗಳು ಕಾಲಿನ ಸೌಂದರ್ಯವನ್ನು ಕೆಡಿಸುವುದು. ಒಡೆದ ಪಾದಗಳಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಿದೆ ಇದ್ದರೆ ಹಲವಾರು ರೀತಿಯ ಸೋಂಕುಗಳು ಕಾಡಬಹುದು. ಒಡೆದ ಪಾದಗಳಿಗೆ ಚಿಕಿತ್ಸೆ ನೀಡುವಂತಹ ನೈಸರ್ಗಿಕ ಹಾಗೂ ಸರಳ ವಿಧಾನ ಬೇಕೆಂದರೆ ಮುಂದೆ ಓದಿಕೊಳ್ಳಿ. ಬಿರುಕುಬಿಟ್ಟ ಪಾದಗಳು: ಪುರುಷರಿಗೆ ಮನೆಮದ್ದುಗಳು

ಮನೆಯಲ್ಲೂ ಚಪ್ಪಲಿ ಬಳಸಿ
ಮನೆಯ ಹೊರಗೆ ಅಥವಾ ಒಳಗಡೆ, ವ್ಯಾಯಾಮ ಮಾಡುವಾಗ ನೀವು ಚಪ್ಪಲಿ ಹಾಕದೆ ಇದ್ದರೆ ಇದರಿಂದ ಒಡೆದ ಪಾದ, ಫಂಗಲ್ ರೋಗಗಳು ಇತ್ಯಾದಿಗಳಿಗೆ ಕಾರಣವಾಗಬಹುದು. ಇದರಿಂದ ಎಲ್ಲಾ ಸಮಯದಲ್ಲಿ ಚಪ್ಪಲಿ ಹಾಕುವುದನ್ನು ಅಭ್ಯಾಸ ಮಾಡಿಕೊಳ್ಳಿ. ಅದರಲ್ಲೂ ಹೊರಗಡೆ ಹೋಗುವಾಗ ಸಾಕ್ಸ್ ಬಳಸಿ.

ಸರಿಯಾದ ಚಪ್ಪಲಿ
ನಿಮ್ಮ ಪಾದದ ಗಾತ್ರದ ಚಪ್ಪಲಿಯನ್ನೇ ಬಳಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಹೆಚ್ಚಿನವರು ತಮ್ಮ ಪಾದದ ಗಾತ್ರಕ್ಕಿಂತ ದೊಡ್ಡದಾದ ಅಥವಾ ಸಣ್ಣದಾಗಿರುವ ಚಪ್ಪಲಿ ಧರಿಸುತ್ತಾರೆ. ಸರಿಯಾದ ಚಪ್ಪಲಿ ಹಾಕದೆ ಇದ್ದರೆ ಅದರಿಂದ ಪಾದಗಳಿಗೆ ನೋವುಂಟಾಗಿ ಗ್ರಂಥಿಗಳಿಗೆ ಹಾನಿಯಾಗಬಹುದು. ಬಿರುಕು ಬಿಟ್ಟ ಪಾದಗಳ ಆರೈಕೆಗಾಗಿ ಸರಳ ಮನೆಮದ್ದುಗಳು

ಕಾಲಿನ ವ್ಯಾಯಮ ಮಾಡಿ
ವ್ಯಾಯಮವು ಕಾಲಿನಲ್ಲಿ ರಕ್ತಸಂಚಲನವನ್ನು ಸರಿಯಾಗಿರುವಂತೆ ಮಾಡುವುದರಿಂದ ಕೆಲವು ರೀತಿಯ ಕಾಲಿನ ವ್ಯಾಯಾಮಗಳು ಇದೆ. ವ್ಯಾಯಾಮವು ರಕ್ತಸಂಚಲನವನ್ನು ಹೆಚ್ಚಿಸಿ ಉರಿಯೂತ ಕಡಿಮೆ ಮಾಡಿ ಪಾದಗಳು ಒಡೆಯುವುದನ್ನು ಕಡಿಮೆ ಮಾಡುತ್ತದೆ. ಪಾದಗಳನ್ನು ಸುತ್ತಲು ತಿರುಗಿಸುತ್ತಾ ಇರುವುದು ತುಂಬಾ ಸಹಕಾರಿಯಾಗಲಿದೆ.

ಪಾದಗಳ ಮಸಾಜ್
ಪಾದಗಳು ಒಡೆಯುವುದಕ್ಕೆ ನೈಸರ್ಗಿಕವಾದ ಚಿಕಿತ್ಸೆ ಬೇಕಿದ್ದರೆ ಎಣ್ಣೆಯಿಂದ ಪಾದಗಳಿಗೆ ಮಸಾಜ್ ಮಾಡಿಕೊಳ್ಳಬೇಕು. ದಿನಾಲೂ ಪಾದಗಳಿಗೆ ಮಸಾಜ್ ಮಾಡುವುದರಿಂದ ಆ ಪ್ರದೇಶಕ್ಕೆ ರಕ್ತಸಂಚಲನವು ಹೆಚ್ಚಾಗುತ್ತದೆ ಮತ್ತು ಚರ್ಮವು ಮೃದುವಾಗಿ ಪಾದಗಳು ಒಡೆಯುವುದು ಕಡಿಮೆಯಾಗುವುದು.

English summary

Simple Tips To Prevent Cracked Heels, That You Never Knew!

Do you feel self-conscious to wear stylish shoes and flaunt you feet, because you have cracked heels? Are you looking for natural ways to prevent cracked heels? If yes, then you have come to the right place! Cracked heels can be a completely undesirable condition, as it can deteriorate the health of your feet and also make them look unattractive!
X
Desktop Bottom Promotion