For Quick Alerts
ALLOW NOTIFICATIONS  
For Daily Alerts

ಪಾದಗಳ ಅಂದಕ್ಕೆ ಒಂದಿಷ್ಟು ನೈಸರ್ಗಿಕ ಮನೆಮದ್ದು

By Super
|

ನಾವು ಧರಿಸುವ ಪಾದರಕ್ಷೆಯ ವಿನ್ಯಾಸಕ್ಕನುಗುಣವಾಗಿ ಪಾದಗಳ ಮೇಲೆ ಕೆಲವು ಚಿತ್ತಾರಗಳು ಮೂಡಿರುತ್ತವೆ. ಏಕೆಂದರೆ ಪಾದರಕ್ಷೆಯ ಪಟ್ಟಿ ಸೂರ್ಯನ ಬೆಳಕನ್ನು ಅಡ್ಡಿಪಡಿಸಿರುವಲ್ಲಿ ಸಹಜವರ್ಣ ಮತ್ತು ಬೆಳಕು ಬೀಳುವಲ್ಲಿ ಗಾಢವಾಗಿರುತ್ತದೆ. ಇದಕ್ಕೆ ನಮ್ಮ ಚರ್ಮದಲ್ಲಿರುವ ಮೆಲನಿನ್ ಎಂಬ ವರ್ಣದ್ರವ್ಯವೇ ಕಾರಣ. ಸೌಂದರ್ಯತಜ್ಞರಲ್ಲಿ ಪೆಡಿಕ್ಯೂರ್ ಎಂಬ ವಿಧಾನವಿದ್ದು ಇದರ ಮೂಲಕ ಪಾದಗಳಲ್ಲಿ, ಅದರಲ್ಲೂ ಪಾದಗಳ ಕೆಳಭಾಗದಲ್ಲಿ ಅತಿ ಹೆಚ್ಚಾಗಿ ಸಂಗ್ರಹವಾಗುವ ಸತ್ತ ಜೀವಕೋಶಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ.

ಆದರೆ ಬಿಸಿಲು ಬಿದ್ದೆಡೆ ಗಾಢವಾದ ಬಣ್ಣ? ಇದನ್ನು ತಿಳಿಗೊಳಿಸಿ ಬಿಸಿಲು ಬೀಳದ ಭಾಗದ ಸಹಜವರ್ಣಕ್ಕೆ ಬರುವಂತೆ ಮಾಡುವ ಮೂಲಕ ಪಾದಗಳ ಸೌಂದರ್ಯವನ್ನು ಹೆಚ್ಚಿಸಬಹುದು. ಇದಕ್ಕಾಗಿ ಕೆಲವು ಮನೆಮದ್ದುಗಳು ಲಭ್ಯವಿದ್ದು ಕೆಳಗಿನ ಸ್ಲೈಡ್ ಷೋ ಮೂಲಕ ನೀಡಲಾಗಿದೆ:

Remedies to remove tan from fee

ಕಿತ್ತಳೆ ಸಿಪ್ಪೆ ಮತ್ತು ಹಾಲಿನ ಲೇಪ
ಕಿತ್ತಳೆ ಸಿಪ್ಪೆಯಲ್ಲಿರುವ ಖಾರವಾದ ರಸ ವಾಸ್ತವವಾಗಿ ಒಂದು ಉತ್ತಮವಾದ ನೈಸರ್ಗಿಕ ಬಿಳಿಚುಕಾರಕವಾಗಿದೆ. ಈ ರಸಕ್ಕೆ ಚರ್ಮದ ಗಾಢವರ್ಣವನ್ನು ಸಹಜವರ್ಣಕ್ಕೆ ಬದಲಿಸುವ ಶಕ್ತಿಯಿದೆ. ಹಾಲಿನಲ್ಲಿ ಲ್ಯಾಕ್ಟಿಕ್ ಆಮ್ಲವಿದ್ದು ಇದು ಸತ್ತ ಜೀವಕೋಶಗಳನ್ನು ಸಡಿಲಗೊಳಿಸಲು ನೆರವಾಗುತ್ತದೆ. ಅಲ್ಲದೇ ಹಾಲಿನ ತೇವಕಾರಕ ಗುಣ ಚರ್ಮದ ಒರಟುತನವನ್ನು ಮೃದುಗೊಳಿಸಲು ನೆರವಾಗುತ್ತದೆ. ಈ ಎಲ್ಲಾ ಗುಣಗಳು ಸೇರಿ ಕಿತ್ತಳೆ ಸಿಪ್ಪೆ ಮತ್ತು ಹಾಲಿನ ಲೇಪನವನ್ನು ಒಂದು ಅತ್ಯುತ್ತಮ ಆಯ್ಕೆಯನ್ನಾಗಿಸಿವೆ. ಪಾದದ ಸೌಂದರ್ಯಕ್ಕೆ ಕೇವಲ 5 ನಿಮಿಷ ನೀಡಿ ಸಾಕು

ಇದನ್ನು ಉಪಯೋಗಿಸುವ ವಿಧಾನ ಹೀಗಿದೆ
*ಕೆಲವು ಕಿತ್ತಳೆ ಹಣ್ಣುಗಳನ್ನು ಸುಲಿದು ಇದರ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ. ಮೊದಲು ಹೊರಭಾಗ ಮೇಲಿರುವಂತೆ, ಮರುದಿನ ಒಳಭಾಗ ಮೇಲಿರುವಂತೆ ಒಣಗಿಸಿ.
*ಚೆನ್ನಾಗಿ ಒಣಗಿದ ಬಳಿಕ ಕುಟ್ಟಿ ದಪ್ಪನಾದ ಪುಡಿಯಂತೆ ಮಾಡಿ. ಬಳಿಕ ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ಒಣದಾಗಿ ಕಡೆದು ನಯವಾದ ಪುಡಿಯಾಗಿಸಿ.
*ಇನ್ನು ಕಾಲುಗಳನ್ನು ಚೆನ್ನಾಗಿ ತಣ್ಣೀರಿನಿಂದ ತೊಳೆದು ಒರೆಸಿಕೊಂಡು ಒಣಗುವ ಹೊತ್ತಿನಲ್ಲಿ ಸುಮಾರು ಐದು ದೊಡ್ಡ ಚಮಚ ಹಾಲಿಗೆ ಒಂದರಿಂದ ಎರಡು ದೊಡ್ಡಚಮಚ ಕಿತ್ತಳೆಸಿಪ್ಪೆಯ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದು ಮೊಸರಿನಷ್ಟು ದಪ್ಪನಿರುವಂತೆ ನೋಡಿಕೊಳ್ಳಿ.
*ಈ ಲೇಪನವನ್ನು ಈಗ ಒಣಗಿರುವ ಪಾದಗಳು ಪೂರ್ಣವಾಗಿ ಆವರಿಸುವಂತೆ ಹಚ್ಚಿ ಸುಮಾರು ಇಪ್ಪತ್ತರಿಂದ ಇಪ್ಪತ್ತೈದು ನಿಮಿಷ ಹಾಗೇ ಬಿಡಿ.
*ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.
*ಸಾಧ್ಯವಾದರೆ ಕಲ್ಲಿಗೆ ಉಜ್ಜಿ ಅಥವಾ ಸತ್ತ ಜೀವಕೋಶಗಳನ್ನು ನಿವಾರಿಸುವ ಉಪಕರಣ ಬಳಸಿ ಈಗ ಪಾದಗಳ ಅಡಿಭಾಗದಲ್ಲಿ ಸಡಿಲವಾಗಿರುವ ದಪ್ಪ ಚರ್ಮದ ಭಾಗವನ್ನು ಕೆರೆದು ತೆಗೆಯಿರಿ.
*ಒಣ ಟವೆಲ್ ಒಂದನ್ನು ಒತ್ತಿಕೊಂಡು ಪಾದಗಳನ್ನು ಒಣಗಿಸಿ ನಂತರ ಸೌಮ್ಯವಾದ ತೇವಕಾರಕ (moisturiser) ಹಚ್ಚಿ.
*ವಾರಕ್ಕೆ ಎರಡು ಅಥವಾ ಮೂರು ಬಾರಿ ಈ ವಿಧಾನ ಅನುಸರಿಸಿ.

ಜೇನು ಮತ್ತು ಲಿಂಬೆಯ ಲೇಪನ
ಲಿಂಬೆರಸದಲ್ಲಿರುವ ಸಿಟ್ರಿಕ್ ಆಮ್ಲ ಉತ್ತಮ ಬಿಳಿಚುಕಾರಕವಾಗಿ ಕಾರ್ಯನಿರ್ವಹಿಸುತ್ತದೆ. ಜೇನುತುಪ್ಪ ಒಂದು ಉತ್ತಮ ತೇವಕಾರಕವೂ ಆಗಿದೆ. ಇದನ್ನು ಉಪಯೋಗಿಸುವ ವಿಧಾನ ಹೀಗಿದೆ:
*ಸಮಪ್ರಮಾಣದಲ್ಲಿ ಒಂದು ದೊಡ್ಡಚಮಚ ಲಿಂಬೆರಸ ಮತ್ತು ಜೇನುತುಪ್ಪ ಸೇರಿಸಿ ಮಿಶ್ರಣ ಮಾಡಿ.
*ಇದಕ್ಕೆ ಅಷ್ಟೇ ಪ್ರಮಾಣದ ಹಾಲಿನ ಪುಡಿ ಹಾಕಿ ಬೆರೆಸಿ
*ಚೆನ್ನಾಗಿ ಮಿಶ್ರಣ ಮಾಡಿ ಈ ಲೇಪನವನ್ನು ಈಗತಾನೇ ತೊಳೆದು ಒರೆಸಿಕೊಂಡ ಪಾದಗಳಿಗೆ ಹಚ್ಚಿ.
*ಸುಮಾರು ಇಪ್ಪತ್ತು ನಿಮಿಷ ಬಿಟ್ಟು ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.
*ವಾರಕ್ಕೆ ಎರಡು ಅಥವಾ ಮೂರು ಬಾರಿ ಈ ವಿಧಾನ ಅನುಸರಿಸಿ.

ಸೂಚನೆ
*ಪಾದಗಳಲ್ಲಿ ಬಿರುಕು ತೀರಾ ಆಳಕ್ಕೆ ಹೋದರೆ ಅಥವಾ ಗಾಯ, ಗೀರು, ಬೆರಳುಗಳ ಸಂದುಗಳಲ್ಲಿ ಸೋಂಕು ಮೊದಲಾದವು ಇದ್ದರೆ ಕಿತ್ತಳೆ ಸಿಪ್ಪೆ ಅಥವಾ ಲಿಂಬೆರಸ ಉರಿ ಬರಿಸಬಹುದು. ಹೀಗಿದ್ದಾಗ ಈ ವಿಧಾನಗಳನ್ನು ಅನುಸರಿಸುವಾದ ಈ ಭಾಗಗಳಿಗೆ ತಾಕದಂತೆ, ಬಿರುಕುಗಳ ಆಳಕ್ಕೆ ಇಳಿಯದಂತೆ ಎಚ್ಚರಿಕೆ ವಹಿಸಿ.
*ಇದರ ಪರಿಣಾಮ ಕಂಡುಬರಲು ನಾಲ್ಕಾರು ವಾರಗಳೇ ಬೇಕಾಗಬಹುದು. ಅದುವರೆಗೆ ಬಿಸಿಲಿಗೆ ಹೋಗುವ ಮುನ್ನ ಸನ್ ಸ್ಕ್ರೀನ್ ಲೇಪನವನ್ನು ಹಚ್ಚಿಕೊಂಡೋ ಹೋಗುವುದು ಅಗತ್ಯ.

English summary

Remedies to remove tan from fee

You may love wearing those strappy sandals but exposing your feet to the sun can increase the production of the pigment melanin, darkening the skin. A pedicure can only remove the dead skin cells and relax tired feet. But what about the darkened complexion? Here are the Beauty expert, suggests a few packs to lighten dark feet. have a look
X
Desktop Bottom Promotion