Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪಾದಗಳ ದುರ್ವಾಸನೆ ಬೀರುವುದನ್ನು ತಡೆಯಲು ಸರಳ ಟಿಪ್ಸ್
ದೇಹದಲ್ಲಿ ಎಲ್ಲಕ್ಕಿಂತ ತ್ರಾಸದಾಯಕವಾದ ಕೆಲಸವನ್ನು ಮಾಡುವಂತಹ ಅಂಗವೆಂದರೆ ಅದು ಪಾದಗಳು. ಯಾಕೆಂದರೆ ಪಾದಗಳು ದೇಹದ ಸಂಪೂರ್ಣ ಭಾರವನ್ನು ಹೊತ್ತುಕೊಳ್ಳಬೇಕಾಗುತ್ತದೆ. ಪ್ರತೀ ಕ್ಷಣವೂ ಪಾದಗಳ ಮೇಲೆ ಭಾರ ಬೀಳುತ್ತಲೇ ಇರುತ್ತದೆ.
ಅದರಲ್ಲೂ ನೀವು ಸ್ವಲ್ಪ ಹೆಚ್ಚಿನ ತೂಕ ಹೊಂದಿದ್ದರೆ ಆಗ ಪಾದಗಳಿಗೆ ಅಧಿಕ ಕೆಲಸವಿರುತ್ತದೆ. ನಡೆದಾಡುವಾಗ ಪಾದಗಳಿಗೆ ಹೆಚ್ಚಿನ ಧೂಳು, ಕಲ್ಮಶ ಅಂಟಿಕೊಳ್ಳುತ್ತದೆ. ಇದರೊಂದಿಗೆ ಬೆವರು ಕೂಡ ಸೇರಿಕೊಂಡು ಪಾದಗಳು ವಾಸನೆ ಬರಲು ಆರಂಭಿಸುತ್ತದೆ.

ಆದರೆ ಈ ವಾಸನೆ ನಿವಾರಿಸಲು ಈ ಲೇಖನದಲ್ಲಿ ಕೆಲವೊಂದು ಮನೆಮದ್ದುಗಳನ್ನು ಸೂಚಿಸಲಾಗಿದೆ. ಪಾದಗಳು ವಾಸನೆ ಬರುವುದು ತುಂಬಾ ಹೇಸಿಗೆ ಮೂಡಿಸುತ್ತದೆ. ಕೆಲವೊಮ್ಮೆ ನೀವು ಶೂ ತೆಗೆದಾಗ ಬದಿಯಲ್ಲಿ ಇದ್ದವರು ಮೂಗು ಮುಚ್ಚಿಕೊಳ್ಳಬೇಕಾಗುತ್ತದೆ. ಪಾದದ ದುರ್ವಾಸನೆಯಿಂದ ಬೇಸತ್ತು ಹೋಗಿದ್ದೀರಾ?
ಹೆಚ್ಚಾಗಿ ಶೂ ಧರಿಸುವವರಲ್ಲಿ ಇಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಸುವಾಸನೆಯುಕ್ತ ಪೌಡರ್ ಅನ್ನು ಸಿಂಪಡಿಸಿದರೆ ವಾಸನೆ ಸ್ವಲ್ಪ ಕಡಿಮೆಯಾಗುತ್ತದೆ. ಆದರೆ ಸಮಸ್ಯೆ ಹಾಗೆ ಇದೆ ಎಂದಾದರೆ ನೀವು ಇಲ್ಲಿ ಕೊಟ್ಟಿರುವಂತಹ ಕೆಲವೊಂದು ಮನೆಮದ್ದನ್ನು ಖಂಡಿತವಾಗಿಯೂ ಪ್ರಯತ್ನಿಸಿ ನೋಡಿ.
ನಸುಕನ್ನಿಲೆ(ಲೆವೆಂಡರ್) ತೈಲ
ಕೆಲವು ಹನಿ ನಸುಕನ್ನಿಲೆ ತೈಲವನ್ನು ಬಿಸಿ ನೀರಿಗೆ ಹಾಕಿಕೊಂಡು ಪಾದಗಳನ್ನು ಅದರಲ್ಲಿ ಮುಳುಗಿಸಿಡಿ. ತೈಲದ ಸುವಾಸನೆಯು ಯಾವುದೇ ವಾಸನೆ ಬರದಂತೆ ನೋಡಿಕೊಳ್ಳುತ್ತದೆ.
ಅಡುಗೆ ಸೋಡಾ
ಎರಡು ಚಮಚ ಅಡುಗೆ ಸೋಡಾವನ್ನು ನೀರಿಗೆ ಹಾಕಿಕೊಂಡು ಪಾದಗಳನ್ನು ಅದರಲ್ಲಿ ಮುಳುಗಿಸಿ ಇಡಿ. ಅಡುಗೆ ಸೋಡಾದಲ್ಲಿ ಬ್ಯಾಕ್ಟೀರಿಯಾ ಮತ್ತು ಫಂಗಲ್ ವಿರೋಧಿ ಗುಣಗಳು ಇವೆ. ಇದು ಬೇಗನೆ ವಾಸನೆಯನ್ನು ಹೋಗಲಾಡಿಸುತ್ತದೆ.
ಮೌಥ್ ವಾಶ್
ವಾಸನೆಯನ್ನು ಉಂಟು ಮಾಡುವಂತಹ ಬ್ಯಾಕ್ಟೀರಿಯಾವನ್ನು ಮೌಥ್ ವಾಶ್ ನಲ್ಲಿರುವ ಆಲ್ಕೋಹಾಲ್ ಮತ್ತು ಪುದೀನಾ ದೂರ ಮಾಡುತ್ತದೆ. ಬಿಸಿ ನೀರಿಗೆ ಮೌಥ್ ವಾಶ್ ಹಾಕಿಕೊಂಡು ಅದರಲ್ಲಿ ಕೆಲವು ಸಮಯ ಪಾದಗಳನ್ನು ಇಟ್ಟರೆ ದುರ್ವಾಸನೆ ದೂರವಾಗುವುದು. ದುರ್ವಾಸನೆಯನ್ನು ಹೋಗಲಾಡಿಸಲು ಇದು ಅತ್ಯಂತ ಸುಲಭವಾದ ಮನೆಮದ್ದು.
ಕಪ್ಪು ಚಹಾ ಅಥವಾ ಬ್ಲ್ಯಾಕ್ ಟೀ
ಒಂದು ಕಪ್ ಕಪ್ಪು ಚಹಾವನ್ನು ಬಿಸಿ ನೀರಿಗೆ ಹಾಕಿ. ಇದರಲ್ಲಿ ಸುಮಾರು 20 ನಿಮಿಷಗಳ ಕಾಲ ಪಾದಗಳನ್ನು ಅದ್ದಿ ಇಡಿ. ಇದರಿಂದ ದುರ್ವಾಸನೆ ಹೋಗಿ ಪಾದಗಳ ಆಯಾಸ ದೂರವಾಗುತ್ತದೆ. ಇದಕ್ಕಿಂತ ಒಳ್ಳೆಯ ನೈಸರ್ಗಿಕ ಪರಿಹಾರವನ್ನು ಕಂಡುಕೊಳ್ಳುವುದು ಕಷ್ಟವೆನ್ನಬಹುದು.
ಆಪಲ್ ಸೀಡರ್ ವಿನೇಗರ್
ಆಪಲ್ ಸೀಡರ್ ವಿನೇಗರ್ ಪಿಎಚ್ ಮಟ್ಟವನ್ನು ಸಮತೋಲನದಲ್ಲಿಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದರಲ್ಲಿರುವ ಆಮ್ಲೀಯ ಗುಣವು ಬ್ಯಾಕ್ಟೀರಿಯಾವನ್ನು ನಿವಾರಿಸುತ್ತದೆ. ಪಾದಗಳ ದುರ್ವಾಸನೆ ನಿವಾರಿಸಲು ಇದು ಅತ್ಯುತ್ತಮವಾಗಿರುವ ಮನೆಮದ್ದು.



Click it and Unblock the Notifications




