For Quick Alerts
ALLOW NOTIFICATIONS  
For Daily Alerts

ಪಾದದ ದುರ್ವಾಸನೆಯಿಂದ ಬೇಸತ್ತು ಹೋಗಿದ್ದೀರಾ?

By Deepak
|

ಬೆಳಗ್ಗೆ ಎದ್ದು ಹಲ್ಲುಜ್ಜಿ, ಸ್ನಾನ ಮಾಡಿ, ನಿಮ್ಮಿಷ್ಟದ ಒಂದು ಬಟ್ಟೆಯನ್ನು ಹಾಕಿಕೊಂಡು ಸಿದ್ಧರಾಗುತ್ತೀರಿ. ಮುಖಕ್ಕೆ ಫೇಸ್‌ವಾಶ್, ಕ್ರೀಮ್, ಪೌಡರ್, ಇತ್ಯಾದಿ ಹಾಕಿಕೊಂಡು ಟಿಪ್ ಟಾಪ್ ಆಗಿ ಸಿದ್ಧಗೊಂಡು ಕಚೇರಿಗೆ ಹೋಗಿ ಕುಳಿತುಕೊಂಡಾಗ ನಮ್ಮ ಪಾದಗಳಿಂದ ಗಬ್ಬು ವಾಸನೆ ಬಂದಾಗ ಹೇಗಿರುತ್ತದೆ ಭಾವಿಸಿ. ನಿಮ್ಮ ಪಕ್ಕದಲ್ಲಿರುವವರು ಏನೋ ವಾಸನೆ ಬರುತ್ತಿದೆ, ಯಾರೋ ಸಾಕ್ಸ್ ಒಗೆದಿಲ್ಲ ಎಂದು ಶುರು ಮಾಡುವ ಪತ್ತೆದಾರಿ ತನಿಖೆಯು ನಿಮ್ಮನ್ನು ಆರೋಪಿಯನ್ನಾಗಿ ನಿಲ್ಲಿಸಿದಾಗ ನಿಮಗೆ ಹೇಗೆ ಅನಿಸಬೇಡ?

ಹೌದು, ಪಾದಗಳು ದುರ್ಗಂಧ ಬೀರುವುದು ಯಾರಿಗೆ ಆಗಲಿ ಶೋಭೆಯನ್ನು ತರುವುದಿಲ್ಲ. ಇದೊಂದು ಅಸಹ್ಯಕರ ಮತ್ತು ಅಸಹನೀಯವಾದ ಹಾಗು ಮುಜುಗರವನ್ನು ಸಹ ಉಂಟು ಮಾಡುವ ಸ್ಥಿತಿಯಾಗಿರುತ್ತದೆ. ನಿಮ್ಮ ಪಾದಗಳಿಂದ ಗಬ್ಬು ವಾಸನೆ ಬರುತ್ತಿದ್ದಲ್ಲಿ, ನಿಮ್ಮ ಪಕ್ಕ ಕೂರಲು ನಿಮ್ಮ ಸುತ್ತ-ಮುತ್ತಲಿನ ಜನ ಹಿಂದೇಟು ಹಾಕುತ್ತಾರೆ. ಹಾಗೆಂದು ನೀವು ಇದನ್ನು ಸಹಿಸಿಕೊಂಡೆ ಇರಬೇಕು ಎಂಬ ನಿಯಮವು ಯಾವುದು ಇಲ್ಲವಲ್ಲ. ಇದಕ್ಕೆ ಹಲವಾರು ಪರಿಹಾರಗಳು ಸಹ ಇವೆ. ಬನ್ನಿ ಆ ಪರಿಹಾರಗಳು ಯಾವುವು ಎಂದು ನೋಡೋಣ.

ಬೇಕಿಂಗ್ ಸೋಡಾ

ಬೇಕಿಂಗ್ ಸೋಡಾ

ನಿಮ್ಮ ಮನೆಯಲ್ಲಿ ಕೇಕ್‌ ತಯಾರಿಸಲು ಮಾತ್ರವಲ್ಲದೆ ನಿಮ್ಮ ಪಾದಗಳ ದುರ್ವಾಸನೆಯನ್ನು ಸಹ ನಿವಾರಿಸಲು ಈ ಸೋಡಾ ನಿಮ್ಮ ನೆರವಿಗೆ ಬರುತ್ತದೆ. ಇದಕ್ಕಾಗಿ ಒಂದು ಸಣ್ಣ ಟಬ್ ತೆಗೆದುಕೊಳ್ಳಿ, ಅದರಲ್ಲಿ ಬೆಚ್ಚಗಿನ ನೀರನ್ನು ತುಂಬಿಸಿ, ಅದಕ್ಕೆ ಎರಡು ಟೇಬಲ್ ಚಮಚ ಬೇಕಿಂಗ್ ಸೋಡಾವನ್ನು ಹಾಕಿ ಮತ್ತು ಒಂದೆರಡು ಹನಿ ಲಿಂಬೆರಸವನ್ನು ಸಹ ಚಿಮುಕಿಸಿ.

ಬೇಕಿಂಗ್ ಸೋಡಾ

ಬೇಕಿಂಗ್ ಸೋಡಾ

ಇನ್ನು ಈ ನೀರಿನಲ್ಲಿ ನಿಮ್ಮ ಪಾದಗಳನ್ನು 10 ನಿಮಿಷ ನೆನೆಸಿ, ನಂತರ ಒರೆಸಿಕೊಳ್ಳಿ. ನಿಮ್ಮ ಪಾದಗಳಿಗೆ ಸ್ವಲ್ಪ ಮಾಯಿಶ್ಚರೈಸರ್ ಅನ್ನು ಲೇಪಿಸಿ. ಯಾವುದೇ ಕಾರಣಕ್ಕು ಇದಾದ ಮೇಲೆ ಬರಿ ಕಾಲಿನಲ್ಲಿ ನಡೆಯಲು ಹೋಗಬೇಡಿ. ನಿಮ್ಮ ಪಾದಗಳಿಂದ ದುರ್ವಾಸನೆ ಬರುವುದನ್ನು ತಡೆಯಲು ಇದನ್ನು ಪ್ರತಿ ವಾರ ಪ್ರಯೋಗ ಮಾಡಿ.

ಕಾರ್ನ್‌ಫ್ಲೋರ್ ಮ್ಯಾಜಿಕ್

ಕಾರ್ನ್‌ಫ್ಲೋರ್ ಮ್ಯಾಜಿಕ್

ಸಾಸ್‌ಗಳನ್ನು ಗಟ್ಟಿ ಮಾಡಲು ಕಾರ್ನ್‌ಫ್ಲೋರ್ ಬಳಸಲಾಗುತ್ತದೆ ಮತ್ತು ಹಲವಾರು ಖಾದ್ಯಗಳನ್ನು ತಯಾರಿಸಲು ಇದನ್ನು ಬಳಸಲಾಗುತ್ತದೆ. ಅಷ್ಟಕ್ಕೆ ಮಾತ್ರವಲ್ಲದೆ, ಇದು ಪಾದಗಳ ದುರ್ವಾಸನೆಯನ್ನು ಸಹ ಹೋಗಲಾಡಿಸಲು ಇದು ಸಹಾಯ ಮಾಡುತ್ತದೆ. ಇದನ್ನು ನೀವು ನಿಮ್ಮ ಪಾದಗಳಿಗೆ ಲೇಪಿಸುವ ಅವಶ್ಯಕತೆ ಇಲ್ಲ. ಅದರ ಬದಲಿಗೆ ಇದನ್ನು ನಿಮ್ಮ ಶೂನಲ್ಲಿ ಒಂದಷ್ಟು ಚಿಮುಕಿಸುವ ಮೂಲಕ ಇದರ ಪ್ರಯೋಜನವನ್ನು ಪಡೆಯಬಹುದು. ಇದು ನಿಮ್ಮ ಪಾದಗಳಿಂದ ತೇವಾಂಶವನ್ನು ಹೀರಿಕೊಂಡು, ಅವು ದುರ್ವಾಸನೆ ಬೀರುವುದನ್ನು ತಡೆಯುತ್ತದೆ.

ಉಪ್ಪು ನೀರಿನಲ್ಲಿ ನೆನೆಸುವಿಕೆ

ಉಪ್ಪು ನೀರಿನಲ್ಲಿ ನೆನೆಸುವಿಕೆ

ಉಪ್ಪನ್ನು ಸಾಮಾನ್ಯವಾಗಿ ಮನೆಯ ದೈನಂದಿನ ಆಹಾರ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಉಪ್ಪು ನೀರಿನಲ್ಲಿ ಪಾದಗಳನ್ನು ನೆನೆಸುವ ಮೂಲಕ ನಿಮ್ಮ ಪಾದಗಳ ದುರ್ಗಂಧದ ಸಮಸ್ಯೆಯನ್ನು ಹೋಗಲಾಡಿಸಿಕೊಳ್ಳಬಹುದು. ಈ ವಿಧಾನವು ಅಗ್ಗದಲ್ಲಿ ದೊರೆಯುವ ಪರಿಹಾರವು ಸಹ ಆಗಿರುತ್ತದೆ. ಇದಕ್ಕಾಗಿ ಕಲ್ಲು ಉಪ್ಪನ್ನು ಬಳಸುವುದು ಒಳ್ಳೆಯದು. ಪಾದಗಳನ್ನು ಈ ಮಿಶ್ರಣದಲ್ಲಿ ನೆನೆಸಿದ ನಂತರ ಅವುಗಳಲ್ಲಿ ಹೆಚ್ಚಿನ ಪ್ರಮಾಣದ ಬೆವರು ಬರುತ್ತದೆ. ಇದಕ್ಕಾಗಿ ಪಾದಗಳನ್ನು ನೆನೆಸಿದ ನಂತರ ಐಸ್‌ಕ್ಯೂಬ್‌ಗಳ ಮೂಲಕ ನಿಮ್ಮ ಪಾದಗಳನ್ನು ಚೆನ್ನಾಗಿ ಉಜ್ಜಿ.

ಶುಂಠಿ

ಶುಂಠಿ

ಶುಂಠಿಯು ಭಾರತೀಯ ಅಡುಗೆಗಳನ್ನು ತಯಾರಿಸಲು ಬಳಸಲ್ಪಡುವ ಒಂದು ಸಾಮಾನ್ಯ ಪದಾರ್ಥವಾಗಿದೆ. ಇದು ಆಹಾರ ಪದಾರ್ಥಗಳಿಗೆ ಒಂದು ಬಗೆಯ ಸ್ವಾದವನ್ನು ನೀಡುತ್ತದೆ. ಜೊತೆಗೆ ಈ ಶುಂಠಿಯಲ್ಲಿರುವ ಆರೋಗ್ಯಕರ ಪ್ರಯೋಜನಗಳು ಇದನ್ನು ಒಂದು ಮನೆಮದ್ದನ್ನಾಗಿ ಸಹ ಮಾಡಿದೆ. ಇದನ್ನು ನೀವು ನಿಮ್ಮ ಪಾದದ ದುರ್ವಾಸನೆಯನ್ನು ನಿವಾರಿಸಲು ಸಹ ಬಳಸಬಹುದು.

ಶುಂಠಿ

ಶುಂಠಿ

ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ, ಒಂದು ತುಂಡು ಶುಂಠಿಯನ್ನು ತೆಗೆದುಕೊಂಡು, ಅದರ ರಸವನ್ನು ಪಡೆದುಕೊಳ್ಳಿ. ಒಂದು ಹತ್ತಿಯ ಉಂಡೆಯಿಂದ ಈ ರಸವನ್ನು ಅದ್ದಿಕೊಂಡು, ಅದನ್ನು ನಿಮ್ಮ ಪಾದಗಳಿಗೆ ಉಜ್ಜಿಕೊಳ್ಳಿ. ಇದನ್ನು ಇಡೀ ರಾತ್ರಿ ಬಿಟ್ಟು, ಬೆಳಗ್ಗೆ ತೊಳೆಯಿರಿ. ಈ ರಸವು ನಿಮ್ಮ ಪಾದಗಳಲ್ಲಿರುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ.

ದಿನಕ್ಕೆ ಎರಡು ಬಾರಿ ಕಾಲನ್ನು ಸ್ವಚ್ಛಗೊಳಿಸಿ

ದಿನಕ್ಕೆ ಎರಡು ಬಾರಿ ಕಾಲನ್ನು ಸ್ವಚ್ಛಗೊಳಿಸಿ

ಕಾಲಿನ ವಾಸನೆಯನ್ನು ತೊಡೆದುಹಾಕಲು, ಕನಿಷ್ಠ ದಿನಕ್ಕೆ ಎರಡು ಬಾರಿ ನಿಯಮಿತವಾಗಿ ಸಾಬೂನು ಮತ್ತು ಬೆಚ್ಚಗಿನ ನೀರಿನಿಂದ ಪಾದಗಳನ್ನು ಸ್ವಚ್ಛಗೊಳಿಸುವುದನ್ನು ರೂಢಿಸಿಕೊಳ್ಳಿ. ಇದು ಕೆಟ್ಟ ವಾಸನೆಯನ್ನು ಉಂಟುಮಾಡುವ ಬ್ಯಾಕ್ಟೀರಿಯಾಗಳನ್ನು ನಿಷ್ಕ್ರಿಯಗೊಳ್ಳುತ್ತವೆ.

ಅಕ್ಕಿ ನೀರು

ಅಕ್ಕಿ ನೀರು

ಶಾಶ್ವತವಾಗಿ ಕಾಲಿನ ವಾಸನೆಯನ್ನು ತೆಗೆಯಲು ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದು, ಅಕ್ಕಿ ನೀರಿನಲ್ಲಿ ಕಾಲನ್ನು ನೆನೆಸುವುದು./ಅದ್ದುವುದು. ನೀರಿನಲ್ಲಿ ಅಕ್ಕಿಯನ್ನು ಹಾಕಿ, ನಂತರ ಅಕ್ಕಿಯ ಸಾರ ಬಿಡುತ್ತಿದ್ದಂತೆ ಅಕ್ಕಿಯನ್ನು ತೆಗೆದು ಆ ನೀರಿನಲ್ಲಿ ಕಾಲನ್ನು ಅರ್ಧ ಗಂಟೆಗಳ ಕಾಲ ಅದ್ದಿ. ಹೀಗೆ ಮಾಡುವುದರಿಂದ ಕಾಲಿನಲ್ಲಿ ವಾಸನೆ ಎಂದಿಗೂ ಮರಳುವುದಿಲ್ಲ.

ಸ್ವಚ್ಛತೆಗೆ ಆದ್ಯತೆ ನೀಡಿ

ಸ್ವಚ್ಛತೆಗೆ ಆದ್ಯತೆ ನೀಡಿ

ಈ ಎಲ್ಲಾ ಪರಿಹಾರಗಳ ಜೊತೆಗೆ ನೀವು ನಿಮ್ಮ ಪಾದವನ್ನು ಶುದ್ಧವಾಗಿ ಇರಿಸಿಕೊಳ್ಳಿ. ಸ್ವಚ್ಛವಾಗಿರುವ ಸಾಕ್ಸ್‌ಗಳನ್ನು ಬಳಸಿ. ಒಳ್ಳೆಯ ಗುಣಮಟ್ಟದ ಶೂಗಳನ್ನು ಧರಿಸಿ. ಅಗತ್ಯವಿದ್ದಲ್ಲಿ, ನಿಮ್ಮ ಶೂಗಳಿಗೆ

ಡಿಯೋಡರೆಂಟ್‌ಗಳನ್ನು ಸಹ ಸಿಂಪಡಿಸಿ, ಇದು ತಾತ್ಕಾಲಿಕವಾಗಿ ನಿಮ್ಮ ಪಾದದ ದುರ್ವಾಸನೆಯನ್ನು ನಿವಾರಿಸುತ್ತದೆ. ಈ ಎಲ್ಲಾ ಪರಿಹಾರಗಳ ನಂತರವು ನಿಮ್ಮ ಪಾದಗಳಿಂದ ದುರ್ಗಂಧ ಬರುತ್ತಿದಲ್ಲಿ,

ಚರ್ಮರೋಗ ತಜ್ಞರನ್ನು ಸಂಪರ್ಕಿಸಿ. ಅಗತ್ಯ ವೈದ್ಯಕೀಯ ನೆರವನ್ನು ಪಡೆಯಿರಿ.

English summary

Home remedies to get rid of smelly feet

one of the most embarrassing problems which can put you and the people around you in a sticky situation. The unbearable stench from your feet can be a deal breaker not just on a date but also at work. Your colleagues may start avoiding you as it can be difficult to work when one is surrounded with foot odour. But fret not, you now have remedies right in your kitchen counter to bid adieu to the unpleasant smell. Here are a few of them.
Story first published: Saturday, January 16, 2016, 20:19 [IST]
X
Desktop Bottom Promotion