For Quick Alerts
ALLOW NOTIFICATIONS  
For Daily Alerts

ಮನೆಯಲ್ಲೇ ಫೂಟ್ ಸ್ಪಾ ಮಾಡಿಕೊಳ್ಳುವ ಸಿಂಪಲ್ ವಿಧಾನ ಇಲ್ಲಿದೆ

By Su.Ra
|

ಎಲ್ಲಾ ಪಾರ್ಲರ್‌ಗಳಲ್ಲೂ ಫೂಟ್‌ ಸ್ಪಾ ಇದ್ದೇ ಇರುತ್ತೆ. ಆದ್ರೆ ಅವುಗಳು ಸ್ವಲ್ಪ ಕಾಸ್ಲ್ಟೀಯಾಗಿದ್ದು ನಿಮ್ಮ ಜೇಬಿಗೆ ಕತ್ತರಿ ಹಾಕುತ್ತವೆ,.ಇನ್ನು ಕೆಲವೊಮ್ಮೆ ಪಾರ್ಲರ್‌ ತನಕ ಹೋಗೋ ಅಷ್ಟು ಸಮಯ ನಿಮ್ಮಲ್ಲಿ ಇಲ್ಲದೇ ಇರಬಹುದು. ಹಾಗಾಗಿ ನಿಮ್ಮ ಕಾಲುಗಳ ಸುರಕ್ಷತೆಗೆ ನೀವೇ ಮಹತ್ವ ನೀಡಿ ಮನೆಯಲ್ಲೇ ನಿಮ್ಮ ಕೈಗೆಟುಕುವ ವಸ್ತುಗಳಿಂದಲೇ ಕಾಲುಗಳಿಗೆ ಸ್ಪಾ ಮಾಡಿಕೊಂಡ್ರೆ ಉತ್ತಮ ಅಲ್ವಾ?

ಎಸೆನ್ಶಿಯಲ್‌ ಆಯಿಲ್‌ಗಳು ಕಾಲುಗಳ ಸ್ಪಾ ಮಾಡಿಕೊಳ್ಳೋದಕ್ಕೆ ಅತ್ಯುತ್ತಮ ವಸ್ತುಗಳು. ಲ್ಯಾವೆಂಡರ್, ಜಾಸ್ಮಿನ್, ಪುದೀನಾ ಎಣ್ಣೆ ಹೀಗೆ ಯಾವುದೇ ಎಣ್ಣೆಯಿಂದಲೂ ಕೂಡ ಸ್ಪಾ ಮಾಡಿಕೊಳ್ಳಬಹುದು. ಈ ಆಯಿಲ್‌ಗಳನ್ನು ಬಳಸೋದ್ರಿಂದ ರಕ್ತಸಂಚಾರ ಅಧಿಕವಾಗಿ ಕಾಲುಗಳ ಸೌಂದರ್ಯ ಹೆಚ್ಚಾಗುತ್ತೆ. ಒಂದು ವೇಳೆ ಎಣ್ಣೆ ಲಭ್ಯವಿಲ್ಲದೇ ಇದ್ರೆ ನೀವು ಉಪ್ಪನ್ನು ಬಳಸಿ ಕೂಡ ಸ್ಪಾ ಮಾಡಿಕೊಳ್ಳಬಹುದು. ಹಾಲಿನಪುಡಿಗೆ ಮೂರುನಾಲ್ಕು ಸ್ಪೂನ್ ಬಾದಾಮಿ ಎಣ್ಣೆಯನ್ನು ಸೇರಿಸಿ,ಕಾಲಿಗೆ ಹಚ್ಚಿದ್ರೂ ಕೂಡ ಕಾಲು ಸ್ಮೂತ್‌ ಆಗುತ್ತೆ. ಮನೆಯಲ್ಲೇ ಫೂಟ್‌ ಸ್ಪಾ ಮಾಡುವ ವಿಧಾನ ಹೇಗೆ ಗೊತ್ತಾ?

Easy Tips To Do A Foot Spa At Home

ಮೊದಲ ಹಂತ - ಟ್ರಿಮ್ಮಿಂಗ್
ನಿಮ್ಮ ಕಾಲುಗಳಲ್ಲಿರುವ ನೈಲ್ ಪಾಲಿಶ್‌ನ್ನು ರಿಮೂವರ್‌ ಬಳಸಿ ಮೊದಲು ರಿಮೂವ್ ಮಾಡಿ,. ಉಗುರುಗಳನ್ನು ನಿಮ್ಗೆ ಬೇಕಾದ ಶೇಪ್‌ಗೆ ಮತ್ತು ಲೆಂತ್‌ಗೆ ಸರಿಯಾಗಿ ಕಟ್ ಮಾಡಿಕೊಳ್ಳಿ,. ಆದ್ರೆ ನೆನಪಿರಲಿ ಅತ್ಯಂತ ಕಡಿಮೆ ಲೆಂತ್‌ಗೆ ಕಟ್ ಮಾಡ್ಬೇಡಿ. ಇದು ನಿಮ್ಮ ಕಾಲುಗಳಿಗೆ ನೋವನ್ನು ಉಂಟುಮಾಡ್ಬಹುದು. ನಂತ್ರ ಕ್ಯೂಟಿಕಲ್ ಕ್ರೀಮ್‌ ಅಪ್ಲೈ ಮಾಡಿ. ಇವು ನಿಮ್ಮ ಕಾಲಿನ ಕ್ಯೂಟಿಕಲ್ಸ್‌ಗಳನ್ನು ಮೃದು ಮಾಡುತ್ತೆ. ಕಾಲಿನ ಉಗುರುಗಳ ಸಂದಿನಲ್ಲಿ ಸಿಲುಕಿಕೊಂಡಿರುವ ಕೊಳೆಯನ್ನು ರಿಮೂವ್‌ ಮಾಡಿಕೊಳ್ಳಿ. ಫೈನಲಿ ಎಲ್ಲಾ ಕಾಲಿನ ಬೆರಳಿನ ಉಗುರಿನ ಶೇಪ್‌ ಸರಿಯಾಗಿ ಇದ್ಯಾ ಗಮನಿಸಿಕೊಳ್ಳಿ. ಸುಂದರವಾದ ಪಾದಗಳಿಗಾಗಿ ಮಾಡಬೇಕು ಸ್ಪಾ!

ಎರಡನೇ ಹಂತ - ಕಾಲನ್ನು ನೆನಸಬೇಕು
ಒಂದು ಟಬ್ ಫುಲ್‌ ಬಿಸಿ ನೀರಿಗೆ ನಿಮಗೆ ಹಿತವೆನಿಸುವ ಮೂರ್ನಾಲ್ಕು ಹನಿ ಎಣ್ಣೆಯನ್ನು ಹಾಕಿ. ಅಷ್ಟೇ ಅಲ್ಲ ಆ ನೀರಿಗೆ ನಾಲ್ಕೈದು ಸ್ಪೂನ್‌ ಉಪ್ಪನ್ನು ಕೂಡ ಸೇರಿಸ್ಬಹುದು,. ಜೊತೆಗೆ ಮೂರ್ನಾಲ್ಕು ಟೀಸ್ಪೂನ್‌ ಬಾದಾಮಿ ಎಣ್ಣೆಯನ್ನು ಹಾಕಿಕೊಳ್ಳಿ. ಆ ನೀರನ್ನು ಚೆನ್ನಾಗಿ ಮಿಕ್ಸ್ ಮಾಡಿ. ನಂತ್ರ ಅದಕ್ಕೆ ಫೂಟ್ ವಾಷ್ ಮಿಕ್ಸ್ ಮಾಡಿ. ಫೂಟ್‌ ವಾಷ್ ಇಲ್ಲ ಅಂದ್ರೆ ಒಂದೆರಡು ಹನಿ ಶಾಂಪೂ ಕೂಡ ಮಿಕ್ಸ್ ಮಾಡ್ಬಹುದು.


ನಂತ್ರ ಆ ನೀರಿನಲ್ಲಿ ನಿಮ್ಮ ಕಾಲುಗಳನ್ನು ಇಟ್ಕೊಳ್ಳಿ,. ಸುಮಾರು 10 ನಿಮಿಷ ನಿಮ್ಮ ಕಾಲುಗಳನ್ನು ನೆನಸಿ. ಇದು ನಿಮ್ಮ ಕಾಲುನಲ್ಲಿನ ಕೊಳೆಯನ್ನು ತೆಗೆಯುತ್ತೆ. ಮತ್ತು ಕಾಲು ಸ್ಮೂತ್ ಆಗುವಂತೆ ಮಾಡುತ್ತೆ,.ಡೆಡ್‌ ಸೆಲ್ ತೆಗೆದುಹಾಕಿ, ಕಾಲಿನ ರಫ್‌ನೆಸ್‌ನ್ನು ಕಡಿಮೆ ಮಾಡುತ್ತೆ. 10 ನಿಮಿಷದ ನಂತ್ರ ನೀರಿನಿಂದ ಕಾಲನ್ನು ತೆಗೆದು ಫ್ರೆಷ್ ನೀರಿನಲ್ಲಿ ವಾಷ್ ಮಾಡಿ, ಟವೆಲ್‌ನಿಂದ ಒರೆಸಿಕೊಳ್ಳಬೇಕು.

ಮೂರನೇ ಹಂತ- ಕಾಲು ತಿಕ್ಕುವಿಕೆ
ಟಬ್‌ ನಲ್ಲಿರುವ ಮಿಶ್ರಣದ ನೀರನ್ನು ಖಾಲಿ ಮಾಡಿ ಮತ್ತೆ ಸ್ವಲ್ಪ ಬೆಚ್ಚಗಿನ ಫ್ರೆಷ್ ನೀರನ್ನು ತೆಗೆದುಕೊಳ್ಳಿ. ಆಲ್‌ರೆಡಿ 10 ನಿಮಿಷ ಕಾಲನ್ನು ನೆನಸಿರುವುದರಿಂದಾಗಿ ಕಾಲಿನ ಪಾದ ಸಾಫ್ಟ್‌ ಆಗಿರುತ್ತೆ. ಈಗ ಕಾಲನ್ನು ಉಜ್ಜುವಿಕೆಯ ಪ್ರಕ್ರಿಯೆ ಮಾಡ್ಬೇಕು. ಕಾಲಿನ ಹಿಮ್ಮಡಿ, ಪಾದ ಮತ್ತು ಜಾಯಿಂಟ್‌ ಭಾಗವನ್ನು ಚಿಕ್ಕ ಕಲ್ಲು, ಇಲ್ಲವೇ ಫೂಟ್‌ಬ್ರಷ್ ಬಳಸಿ ಸ್ಕ್ರಬ್‌ ಮಾಡಿ. ಫೂಟ್‌ ಸ್ಕ್ರಬ್ ಇಲ್ಲದೇ ಇದ್ರೆ ಬಾಡಿ ಸ್ಕ್ರಬ್‌ , ಫೇಶಿಯಲ್‌ ಸ್ಕ್ರಬ್ಬರ್ ಕೂಡ ಬಳಕೆ ಮಾಡ್ಬಹುದು. ಐದರಿಂದ ಹತ್ತು ನಿಮಿಷ ಹೀಗೆ ಮಾಡಿ ಕಾಲನ್ನು ತೊಳೆದುಕೊಂಡು ಟವೆಲ್‌ನಿಂದ ಒರೆಸಿಕೊಳ್ಳಿ

ನಾಲ್ಕನೇ ಹಂತ - ಮಾಯ್ಚರೈಸರ್‌ ಹಚ್ಚುವಿಕೆ
ಕಾಲು ಚೆನ್ನಾಗಿ ಡ್ರೈ ಆದ ನಂತ್ರ, ಫೂಟ್ ಕ್ರೀಮ್ ಅಪ್ಲೈ ಮಾಡಿ ಚೆನ್ನಾಗಿ ಕಾಲನ್ನು ಮಸಾಜ್‌ ಮಾಡಿ, ಐದರಿಂದ ಆರು ನಿಮಿಷ ಹೀಗೆ ಮಸಾಜ್ ಮಾಡಿ. ಹೀಗೆ ಮಸಾಜ್ ಮಾಡಿದಾಗ ಆ ಕ್ರೀಮನ್ನು ಕಾಲು ಹೀರಿಕೊಳ್ಳುತ್ತೆ. ಫೂಟ್‌ ಕ್ರೀಮ್ ಇಲ್ಲದೇ ಇದ್ರೆ, ಮಾಯ್ಚರೈಸರ್‌ ನ್ನು ಬಳಕೆ ಮಾಡ್ಬಹುದು. ಎಲ್ಲಾ ಕ್ರೀಮನ್ನು ಕಾಲು ಹೀರಿಕೊಂಡ ನಂತ್ರ, ಉಗುರಿಗೆ ನೈಲ್‌ ಪಾಲಿಶ್ ಹಚ್ಚಿ. ಸ್ವಲ್ಪ ಸಮಯದ ನಂತ್ರ, ಹತ್ತರಿಂದ 12 ಹನಿ ಅಲ್ಮಂಡ್‌ ಆಯಿಲ್ ಮತ್ತು ಎಸೆನ್ಶಿಯಲ್‌ ಆಯಿಲ್‌ ಮಿಕ್ಸ್ ಮಾಡಿ ಅಪ್ಲೈ ಮಾಡ್ಕೊಳ್ಳಿ. ಸಾಕ್ಸ್‌ ಹಾಕ್ಕೊಂಡು ಸ್ವಲ್ಪ ಹೊತ್ತು ಕಾಲನ್ನು ರಿಲ್ಯಾಕ್ಸ್ ಮಾಡ್ಕೊಳ್ಳಿ.. ಇದಿಷ್ಟು ಮಾಡಿಕೊಳ್ಳೋದಕ್ಕೆ ಯಾವ ಪಾರ್ಲರ್‌ ಕೂಡ ಬೇಕಾಗಿಲ್ಲ. ಹೆಚ್ಚು ಹಣವನ್ನು ಖರ್ಚು ಮಾಡ್ಬೇಕಾಗಿಲ್ಲ. ಮನೆಯಲ್ಲೇ ಉತ್ತಮ ರೀತಿಯಲ್ಲಿ ನಿಮ್ಮ ಕಾಲುಗಳನ್ನು ಮೈಂಟೇನ್ ಮಾಡ್ಬಹುದು. ಸುಂದರವಾಗಿ, ಸ್ವಚ್ಛವಾಗಿ ಕಾಣುವಂತೆ ಮಾಡಬಹುದು. ತಿಂಗಳಿಗೆ ಅಟ್‌ಲೀಸ್ಟ್‌ ಎರಡು ಬಾರಿಯಾದ್ರೂ ಮಾಡ್ಕೊಳ್ಳಿ.. ಆಗ ನಿಮ್ಮ ಕಾಲುಗಳು ಒಡೆಯದೆ ಚೆನ್ನಾಗಿ ಕಂಗೊಳಿಸಲು ಸಾಧ್ಯವಾಗುತ್ತೆ.

English summary

Easy Tips To Do A Foot Spa At Home

All of us are conscious about our skin, hair and body, but the feet are often neglected. A relaxing foot spa is a need to cater all the demands of the feet. here are the few steps to easily you can do in your home only
X
Desktop Bottom Promotion