For Quick Alerts
ALLOW NOTIFICATIONS  
For Daily Alerts

ಕೋಮಲವಾದ ಪಾದಕ್ಕೆ ಇಲ್ಲಿದೆ ಚೆಂದದ ಆರೈಕೆ!

By Arshad
|

ನಿಮ್ಮ ಪಾದಗಳು ಸಹಾ ನಿಮ್ಮ ದೇಹದ ಸೌಂದರ್ಯವನ್ನು ಹೆಚ್ಚಿಸಲು ನೆರವಾಗುತ್ತವೆ. ನಯವಾದ, ಬಿರುಕಿಲ್ಲದ ಮತ್ತು ಒರಟಾಗಿಲ್ಲದ ಪಾದಗಳನ್ನು ಯಾವುದೇ ತೆರೆದ ಪಾದರಕ್ಷೆ ಧರಿಸಿ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಬಹುದು. ಏಕೆಂದರೆ ವದನದ ಆರೈಕೆ ಉತ್ತಮವಾಗಿದ್ದು ಪಾದಗಳ ಆರೈಕೆ ಸೂಕ್ತವಿಲ್ಲದಿದ್ದರೆ ಅದು ನಿಮ್ಮ ಒಟ್ಟಾರೆ ಸೌಂದರ್ಯವನ್ನು ಕುಂದಿಸಬಹುದು.

ಪಾದಗಳ ಅಡಿಯ ಚರ್ಮ ದೇಹದಲ್ಲಿಯೇ ಅತಿ ದಪ್ಪನೆಯ ಚರ್ಮವಾಗಿದೆ. ಇಡಿಯ ದೇಹದ ಭಾರವನ್ನು ಹೊರಬೇಕಾದ ಪಾದಗಳಿಗೆ ಈ ದಪ್ಪನೆಯ ಚರ್ಮ ಅನಿವಾರ್ಯವೂ ಸಹಾ. ಆದರೆ ಸತತ ನಡಿಗೆಯಿಮ್ದ ಪಾದದ ತಳಭಾಗ ಒರಟಾಗಿಲ್ಲದಿದ್ದರೂ ಪಾದಗಳ ಅಂಚುಗಳು ಒರಟಾಗಿರುತ್ತವೆ. ಪಾದಗಳು ಒರಟಾಗಲು ಕಾರಣ ಮತ್ತು ಪರಿಹಾರ

ಒರಟುತನ ಹೆಚ್ಚಿ ಆರ್ದತೆಯನ್ನು ಕಳೆದುಕೊಂಡು ತೀರಾ ಒಣಗಿ ಬಿರುಕು ಬಿಡಲು ಪ್ರಾರಂಭವಾಗುತ್ತದೆ. ವದನದ ಬಗ್ಗೆ ವಹಿಸುವ ಕಾಳಜಿಯ ಕೊಂಚವನ್ನಾದರೂ ಪಾದಗಳಿಗೆ ವಹಿಸಿದ್ದರೆ ಪಾದಗಳಲ್ಲಿ ಬಿರುಕು ಮೂಡುತ್ತಿರಲಿಲ್ಲ. ಬಿರುಕು ಬಿಟ್ಟ ಪಾದಗಳ ಆರೈಕೆಗಾಗಿ ಸರಳ ಮನೆಮದ್ದುಗಳು

ಆದರೆ ಈಗಲೂ ಕಾಲ ಮಿಂಚಿಲ್ಲ, ದುಬಾರಿ ಸೆಲೂನುಗಳಿಗೆ ಹೋಗಿ ಹಣವನ್ನು ವ್ಯರ್ಥಮಾಡುವುದಕ್ಕಿಂತ ಮನೆಯಲ್ಲಿಯೇ ಸುಲಭ ವಿಧಾನದಿಂದ ಸುಂದರ ಮತ್ತು ಕೋಮಲವಾದ ಪಾದಗಳನ್ನು ಪಡೆಯಬಹುದು. ಇದಕ್ಕಾಗಿ ಕೆಳಗಿನ ಸ್ಲೈಡ್ ಶೋ ಮೂಲಕ ಅಮೂಲ್ಯ ಮಾಹಿತಿಯನ್ನು ನೀಡಲಾಗಿದೆ...

ಲಿಂಬೆಯನ್ನು ಉಪಯೋಗಿಸಿ

ಲಿಂಬೆಯನ್ನು ಉಪಯೋಗಿಸಿ

ಸಂಜೆ ನಿಮ್ಮ ಎಲ್ಲಾ ಕೆಲಸಗಳನ್ನು ಮುಗಿಸಿದ ಬಳಿಕ ಕಾಲುಗಳನ್ನು ಚೆನ್ನಾಗಿ ತೊಳೆದುಕೊಂಡು ಟವೆಲ್ಲಿನಿಂದ ಒರೆಸಿ ಒಣಗಿಸಿ. ಒಂದು ಅಗಲವಾದ ಬಕೆಟ್ ಅಥವಾ ಪಾತ್ರೆಯಲ್ಲಿ ಉಗುರುಬೆಚ್ಚನೆಯ ನೀರನ್ನು ತುಂಬಿಸಿ.ಲಿಂಬೆ ಹಣ್ಣೊಂದನ್ನು ಅಡ್ಡಲಾಗಿ ಕತ್ತರಿಸಿ ಅದರ ಮೇಲೆ ಕೊಂಚ ಉಪ್ಪನ್ನು ಸವರಿ. ಈ ಲಿಂಬೆಹಣ್ಣಿನಿಂದ ಪಾದಗಳ ಕೆಳಭಾಗವನ್ನು ಹಿಂಡುತ್ತಾ ಸವರಿ. ಬಲಪಾದಕ್ಕೆ ಅರ್ಧ ಲಿಂಬೆ, ಎಡಗಾಲಿಗೆ ಅರ್ಧ ಲಿಂಬೆ ಉಪಯೋಗಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಲಿಂಬೆಯನ್ನು ಉಪಯೋಗಿಸಿ

ಲಿಂಬೆಯನ್ನು ಉಪಯೋಗಿಸಿ

ಸುಮಾರು ಹತ್ತರಿಂದ ಹದಿನೈದು ನಿಮಿಷಗಳ ವರೆಗೆ ಅನುಕ್ರಮವಾಗಿ ಎಡ ಮತ್ತು ಬಲ ಪಾದಗಳನ್ನು ಲಿಂಬೆಯಿಂದ ಉಜ್ಜುತ್ತಾ ಬನ್ನಿ.ಬಳಿಕ ಕೊಂಚ ಕಾಲ ಒಣಗಲು ಬಿಟ್ಟು ಉಗುರುಬೆಚ್ಚನೆಯ ನೀರಿನಲ್ಲಿ ಕಾಲಿಡಿ. ಸುಮಾರು ಐದು ನಿಮಿಷಗಳ ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಒರಟಾಗಿದ್ದ ಮತ್ತು ಚರ್ಮದ ಸತ್ತ ಜೀವಕೋಶಗಳು ಸಡಿಲಗೊಂಡು ಕಾಲನ್ನು ಉಜ್ಜಿಕೊಂಡಾಗ ನಿವಾರಣೆಯಾಗುತ್ತದೆ. ಉಜ್ಜಿಕೊಳ್ಳಲು ಒರಟು ಕಲ್ಲು ಅಥವಾ ಇದಕ್ಕಾಗಿಯೇ ಇರುವ ಉಪಕರಣವನ್ನು ಉಪಯೋಗಿಸಬಹುದು.

ಪಾದಕ್ಕೆ ಲೇಪನವೊಂದನ್ನು ತಯಾರಿಸಿ

ಪಾದಕ್ಕೆ ಲೇಪನವೊಂದನ್ನು ತಯಾರಿಸಿ

ಮೂರು ದೊಡ್ಡಚಮಚ ಓಟ್ಸ್ ಕಾಳುಗಳು, ಎರಡು ದೊಡ್ಡಚಮಚ ಸಕ್ಕರೆ ಮತ್ತು ಎರಡು ದೊಡ್ಡಚಮಚ ಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ನಿಮ್ಮ ಪಾದಗಳ ಕೆಳಭಾಗಕ್ಕೆ ನಯವಾಗಿ ಹಚ್ಚಿ ಸುಮಾರು ಹದಿನೈದು ನಿಮಿಷಗಳವರೆಗೆ ನಯವಾಗಿ ಮಸಾಜ್ ಮಾಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ವಾರಕ್ಕೆರಡು ಅಥವಾ ಮೂರು ಬಾರಿ ಈ ವಿಧಾನವನ್ನು ಅನುಸರಿಸುವುದರಿಂದ ಶೀಘ್ರವೇ ನಯವಾದ ಪಾದಗಳು ನಿಮ್ಮದಾಗುತ್ತವೆ.

ಕಿತ್ತಳ ಹಣ್ಣಿನ ಸಿಪ್ಪೆ ಉಪಯೋಗಿಸಿ

ಕಿತ್ತಳ ಹಣ್ಣಿನ ಸಿಪ್ಪೆ ಉಪಯೋಗಿಸಿ

ಕಿತ್ತಳೆ ಹಣ್ಣಿನ ಕೆಲವು ಸಿಪ್ಪೆಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಬಳಿಕ ಮಿಕ್ಸಿಯ ಚಿಕ್ಕ ಜಾರ್ ಉಪಯೋಗಿಸಿ ಪುಡಿ ಮಾಡಿಕೊಳ್ಳಿ. ಇದರಲ್ಲಿ ಒಂದು ದೊಡ್ಡ ಚಮಚದಷ್ಟು ಪುಡಿಯನ್ನು ಒಂದು ದೊಡ್ಡಚಮಚ ಗುಲಾಬಿನೀರು ಸೇರಿಸಿ ಮಿಶ್ರಣ ತಯಾರಿಸಿ. ಇದನ್ನು ಪಾದಗಳಿಗೆ ಹಚ್ಚಿ ಹದಿನೈದು ನಿಮಿಷ ಒಣಗಲು ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಅಡುಗೆ ಸೋಡಾ ಬಳಸಿ

ಅಡುಗೆ ಸೋಡಾ ಬಳಸಿ

ನಾಲ್ಕು ದೊಡ್ಡಚಮಚ ಅಡುಗೆ ಸೋಡಾಪುಡಿಯನ್ನು ಒಂದು ಅಗಲವಾದ ಬಕೆಟ್ ಅಥವಾ ಪಾತ್ರೆಯಲ್ಲಿರುವ ಉಗುರುಬೆಚ್ಚನೆಯ ನೀರಿಗೆ ಹಾಕಿ ಕಲಕಿ. ಈ ನೀರಿನಲ್ಲಿ ಪಾದಗಳನ್ನು ಮುಳುಗಿಸಿ. ಈ ನೀರಿಗೆ ಕೆಲವು ಹನಿ ಶಾಂಪೂ ಸೇರಿಸಿ ಪಾದಗಳನ್ನು ಒಂದಕ್ಕೊಂದು ಉಜ್ಜಿಕೊಳ್ಳುತ್ತಾ ನೊರೆ ಬರಿಸಿ. ಸುಮಾರು ಹದಿನೈದು ನಿಮಿಷದ ಬಳಿಕ ಹೊರತೆಗೆದು ತಣ್ಣೀರಿನಿಂದ ತೊಳೆದುಕೊಳ್ಳಿ.

ಸೇಬಿನ ಶಿರ್ಕಾ ಬಳಸಿ

ಸೇಬಿನ ಶಿರ್ಕಾ ಬಳಸಿ

ಒಂದು ದೊಡ್ಡ ಚಮಚ ಸೇಬಿನ ಶಿರ್ಕಾ (Apple Cider Vinegar), ಒಂದು ದೊಡ್ಡಚಮಚ ಜೇನು ಒಂದು ಲೋಟ ನೀರಿಗೆ ಸೇರಿಸಿ ಚಮಚದಿಂದ ಕಲಕಿ. ಈ ದ್ರಾವಣವನ್ನು ಪಾದಕ್ಕೆ ಚಿಮುಕಿಸಿಕೊಂಡು ಒಂದು ನಯವಾದ ಬ್ರಷ್ ಬಳಸಿ ಚೆನ್ನಾಗಿ ಉಜ್ಜಿಕೊಳ್ಳಿ. ನಿಯಮಿತವಾಗಿ ಬಳಸುವುದರಿಂದ ಶೀಘ್ರವೇ ನಯವಾದ ಪಾದಗಳು ನಿಮ್ಮದಾಗುತ್ತವೆ.

ಸಲಹೆ

ಸಲಹೆ

*ಮೇಲಿನ ಯಾವುದೇ ವಿಧಾನವನ್ನು ಅನುಸರಿಸಿದರೂ ಇದರಿಂದ ಚರ್ಮದ ಹೊರಪದರದ ಸತ್ತ ಜೀವಕೋಶಗಳು ಮೆದುವಾಗಿ ಸುಲಭವಾಗಿ ಕಳಚಬಲ್ಲವಾದುದರಿಂದ ಇದನ್ನು ಕೆರೆದು ತೆಗೆಯುವುದು ಅವಶ್ಯ.

*ಒರಟಾದ ಕಲ್ಲಿನ ಮೇಲೆ ಉಜ್ಜುವುದು ಹಿಂದಿನಿಂದ ಪಾಲಿಸಿಕೊಂಡು ಬಂದ ವಿಧಾನವಾದರೂ ಕೊಂಚ ಹೆಚ್ಚಿನ ಒತ್ತಡ ಘಾಸಿಗೊಳಿಸಬಹುದು.

*ಆದ್ದರಿಂದ ಈ ಕೆಲಸಕ್ಕಾಗಿಯೇ ಕೆಲವು ಉಪಕರಣಗಳು ದೊರೆಯುತ್ತವೆ, ಅವನ್ನು ಉಪಯೋಗಿಸಬಹುದು ಅಥವಾ ನೊರಜು ಕಲ್ಲನ್ನು ಕೈಯಿಂದ ಪಾದಗಳ ಬದಿಗೆ ಉಜ್ಜಿ ತೆಗೆಯಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸಲಹೆ

ಸಲಹೆ

*ಬಿರುಕುಗಳು ಸಂಪೂರ್ಣವಾಗಿ ಮಾಯವಾಗಲು ಮೂರು ಅಥವಾ ನಾಲ್ಕು ತಿಂಗಳಾದರೂ ಬೇಕು. ಕಡೆಯ ದಿನಗಳಲಿ ಕಂಡೂ ಕಾಣದಷ್ಟು ಚಿಕ್ಕದಿದ್ದರೂ ಪಾದಗಳ ಆರೈಕೆಯನ್ನು ಮುಂದುವರೆಸಬೇಕು.

*ನಿಮಗೆ ಸಂಪೂರ್ಣವಾಗಿ ತೃಪ್ತಿಯಾದ ಬಳಿಕ ತಿಂಗಳಿಗೆ ಒಮ್ಮೆ ಅಥವಾ ಆರು ವಾರಕ್ಕೊಮ್ಮೆ ನಡೆಸಬಹುದು.

*ಪಾದಗಳ ಬಿರುಕುಗಳು ಬೇಗನೇ ತುಂಬಲು ಕಾಲು ಒಣಗಿದ ಬಳಿಕ, ಮಲಗುವ ಮೊದಲು ಕೊಬ್ಬರಿ ಎಣ್ಣೆಯನ್ನು ಹಚ್ಚಿ ಮಲಗಿ ಬೆಳಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ.

ಸಲಹೆ

ಸಲಹೆ

*ಪಾದಗಳ ಬಿರುಕು ರಕ್ತ ಬರುವಷ್ಟು ಆಳವಾಗಿದ್ದರೆ ಕರ್ಪೂರ ಮತ್ತು ಬಿಸಿಕೊಬ್ಬರಿ ಎಣ್ಣೆಯನ್ನು ಸಮಪ್ರಮಾಣದಲ್ಲಿ ಬೆರೆಸಿ ರಾತ್ರಿ ಮಲಗುವ ಮುನ್ನ ಬಿರುಕುಗಳಲ್ಲಿ ತುಂಬಿ ಮೇಲಿನ ಯಾವುದೇ ವಿಧಾನವನ್ನು ಬೆಳಿಗ್ಗೆದ್ದ ಬಳಿಕ ಅನುಸರಿಸಿ.

*ಬಿರುಕಿನಲ್ಲಿ ರಕ್ತ ಬರುವುದು ಅಥವಾ ಉರಿ ಕಡಿಮೆಯಾದ ಬಳಿಕ ಮೇಲಿನ ಯಥಾವತ್ತಾದ ಕ್ರಮ ಅನುಸರಿಸಿ.

English summary

Make You Feet Soft And Fair At Home

Your feet are important essence of your beauty. Having beautiful feet compliments your overall personality and looks. It is very embarrassing if you facial beauty is commendable but your feet are not up to the mark. Have a look at some of the simple pedicure tips at home. Following are simple and best simple pedicure tips at home. 
X
Desktop Bottom Promotion