For Quick Alerts
ALLOW NOTIFICATIONS  
For Daily Alerts

ಅಂದದ ಪಾದ ಪಡೆಯಲು ಆರೇ ಸ್ಟೆಪ್

|

ಪೆಡಿಕ್ಯೂರ್ ಮಾಡಲು ಸ್ಪಾ ಅಥವಾ ಬ್ಯೂಟಿಪಾರ್ಲರ್ ಗೆ ಹೋದರೆ ಕೈಯಲ್ಲಿರುವ ಪರ್ಸ್ ಗೆ ಕತ್ತರಿ ಬೀಳುತ್ತದೆ. ದುಡ್ಡನ್ನು ಸ್ಪಾ ಅಥವಾ ಬ್ಯೂಟಿ ಪಾರ್ಲರ್ ಗಳಿಗೆ ಸುರಿಯುವ ಬದಲು ಮನೆಯಲ್ಲಿ ನೀವೇ ಪೆಡಿಕ್ಯೂರ್ ಮಾಡಬಹುದು.

ಪೆಡಿಕ್ಯೂರ್ ಮಾಡಲು ಕೆಲವೊಂದು ಸ್ಟೆಪ್ ಗಳಿವೆ. ಆ ಸ್ಟೆಪ್ ಗಳನ್ನು ತಿಳಿದುಕೊಂಡರೆ ಸಾಕು. ಇಲ್ಲಿ ನಾವು ಆಕರ್ಷಕ ಪಾದಗಳನ್ನು ಪಡೆಯಲು ಪೆಡಿಕ್ಯೂರ್ ಹೇಗೆ ಮಾಡಬೇಕೆಂಬ ಟಿಪ್ಸ್ ಈ ಕೆಳಗೆ ನೀಡಲಾಗಿದೆ.

6 Tips For Pedicure

ಸ್ಟೆಪ್ 1

ರಿಮೋವರ್ ಬಳಸಿ ಉಗುರಿನಲ್ಲಿರುವ ನೇಲ್ ಪಾಲಿಷ್ ತೆಗೆಯಿರಿ. ನೇಲ್ ಪಾಲೀಷ್ ಇಲ್ಲದಿದ್ದರೂ ಕಾಟನ್ ಗೆ ರಿಮೋವರ್ ಹಾಕಿ ಉಗುರನ್ನು ಶುಚಿ ಮಾಡಿ.

ಸ್ಟೆಪ್ 2
ಹದ ಬಿಸಿ ನೀರನ್ನು ಬೇಸನ್ ನಲ್ಲಿ ಹಾಕಿ ಅದಕ್ಕೆ ಎಪ್ಸೊಮ್ ಉಪ್ಪು ಮತ್ತು ಸುವಾಸನೆ ಇರುವ 2 ಚಮಚ ಎಣ್ಣೆಯನ್ನು ಆ ನೀರಿಗೆ ಹಾಕಿ ಅದರಲ್ಲಿ 10 ನಿಮಿಷ ನಿಮ್ಮ ಪಾದಗಳನ್ನು ಇಡಿ.

ಸ್ಟೆಪ್ 3
ಈಗ ಪಾದಗಳನ್ನು ಬೇಸನ್ ನಿಂದ ತೆಗೆದು ಟವಲ್ ನಿಂದ ಒರೆಸಿ, ನಂತರ ಪ್ಯೂಮಿಕ್ ಸ್ಟೋನ್ ನಿಂದ ತಿಕ್ಕಬೇಕು. ಈ ಕಲ್ಲಿನಿಂದ ಕಾಲಿನ ಮೇಲೆ ತಿಕ್ಕಬೇಡಿ. ಪಾದಗಳನ್ನಷ್ಟೇ ತಿಕ್ಕಿ.

ಸ್ಟೆಪ್ 4
ನಂತರ ಎಣ್ಣೆ, ಸಕ್ಕರೆ, ಉಪ್ಪನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಮಿಶ್ರಣ ಮಾಡಿ ಅದರಿಂದ ಕಾಲಿಗೆ ಮೇಲ್ಮುಖವಾಗಿ ತಿಕ್ಕಿ.

ಸ್ಟೆಪ್ 5
ಈಗ ಉಗುರನ್ನು ಕತ್ತರಿಸಿ. ಅದಕ್ಕೊಂದು ಚೆಂದದ ಶೇಪ್ ಕೊಡಿ. ಅದರಲ್ಲೂ ಚೌಕ ರೀತಿಯಲ್ಲಿ ಶೇಪ್ ಕೊಟ್ಟರೆ ತುಂಬಾ ಚೆನ್ನಾಗಿರುತ್ತದೆ. ನಂತರ ಕಾಲನ್ನು ತೊಳೆದು ಟವಲ್ ನಿಂದ ಒರೆಸಿ.

ಸ್ಟೆಪ್ 6
ಈಗ ಕಾಲಿಗೆ ಮಾಯಿಶ್ಚರೈಸರ್ ಹಚ್ಚಿ, ಇಷ್ಟು ಮಾಡಿದರೆ ಅಂದದ ಪಾದ ನಿಮ್ಮದಾಗುವುದು. ನಂತರ ಬೇಕಿದ್ದರೆ ಉಗುರಿಗೆ ನೇಲ್ ಪಾಲಿಷ್ ಹಚ್ಚಬಹುದು. ನೇಲ್ ಪಾಲಿಷ್ ಹಾಕದಿದ್ದರೂ ಪಾದಗಳು ಆಕರ್ಷಕವಾಗಿ ಕಾಣುತ್ತವೆ.

English summary

6 Tips For Pedicure | Tips For Body Care | ಪೆಡಿಕ್ಯೂರ್ ಮಾಡಲು 6 ಟೆಪ್ಸ್ | ದೇಹದ ಆರೈಕೆಗೆ ಸಲಹೆಗಳು

No need to pay spa prices for a pedicure. Use these at-home tips to get polish foot. Here we have give great tips for giving yourself a professional at-home pedicure.
X
Desktop Bottom Promotion