For Quick Alerts
ALLOW NOTIFICATIONS  
For Daily Alerts

ಮುತ್ತುದುರಿದಂತೆ ನಗುವುದಕ್ಕೆ ಅಂಜಿಕೆ ಏಕೆ?

|
Simple Tips to get White Teeth
ನಗುವಾಗ ಕಾಣುವ ಮುತ್ತಿನಂತಿರುವ ಬಿಳಿ ಹಲ್ಲುಗಳು ಎಂತಹವರನ್ನೂ ಆಕರ್ಷಿತಗೊಳಿಸುತ್ತೆ. ಆದರೆ ನಮ್ಮ ಆಧುನಿಕ ಜೀವನ ಕ್ರಮ ಹಲ್ಲುಗಳನ್ನು ಹಳದಿ ಬಣ್ಣಕ್ಕೆ ತಿರುಗಿಸಿ, ನಗಲೂ ಹಿಂಜರಿಕೆಯುಂಟುಮಾಡಿರುತ್ತೆ. ಆದರೆ ಕೆಲವು ನೈಸರ್ಗಿಕ ವಿಧಾನ ಅನುಸರಿಸುವುದರಿಂದ ಈ ಸಮಸ್ಯೆಯನ್ನು ಹೋಗಿಸುವುದು ಸಾಧ್ಯವಿದೆ.

ಹಳದಿ ಹಲ್ಲನ್ನು ಬಿಳಿಯಾಗಿಸುವ ಸುಲಭ ವಿಧಾನ:
* ಕ್ಯಾರೆಟ್: ಕೆಲವು ಆಹಾರವನ್ನು ಅಗಿಯುವುದರಿಂದ ಹಲ್ಲುಗಳನ್ನು ನೈಸರ್ಗಿಕವಾಗಿ ಬೆಳ್ಳಗಾಗುವಂತೆ ಮಾಡುತ್ತೆ. ಹಲ್ಲುಗಳನ್ನು ಶುದ್ಧಗೊಳಿಸಲು ಸೇಬು, ಕ್ಯಾರೆಟ್, ಸ್ಟ್ರಾಬೆರಿ, ಕಬ್ಬು ಮುಂತಾದುವನ್ನು ಅಗಿದು ತಿನ್ನಬೇಕು. ಹಲ್ಲಿನ ಮೇಲಿನ ಕೊಳೆಯನ್ನು ಕಿತ್ತೊಗೆದು ಬಾಯಿಯ ಸ್ವಾಸ್ಥ್ಯವನ್ನು ಸುಧಾರಿಸುತ್ತದೆ.

* ಸಕ್ಕರೆ ರಹಿತ ಗಮ್: ಸಕ್ಕರೆ ಅಂಶವಿಲ್ಲದ ಗಮ್ ಗಳನ್ನು ಅಗಿಯುವುದರಿಂದಲೂ ಹಲ್ಲುಗಳು ಶುದ್ಧಗೊಳ್ಳುತ್ತವೆ.

* ಓಮುಕಾಳು:
ಓಮುಕಾಳು ಅಥವಾ ಅದರ ಎಣ್ಣೆಯೂ ಬಾಯಿಯ ಸ್ವಾಸ್ಥ್ಯಕ್ಕೆ ತುಂಬಾ ಪರಿಣಾಮಕಾರಿ. ಹುಳುಕಲ್ಲನ್ನು ನೈಸರ್ಗಿಕವಾಗಿ ನಿವಾರಿಸುವ ಅಂಶ ಇದರಲ್ಲಿದೆ. ಲವಂಗ ಅಥವಾ ಲವಂಗದೆಣ್ಣೆಯೂ ಕೂಡ ಹೆಚ್ಚು ಪರಿಣಾಮಕಾರಿ.

* ಉಪ್ಪು: ಉಪ್ಪಿನಲ್ಲಿಯೂ ಹಲ್ಲಿನ ಹಳದಿ ಹೋಗಿಸುವ ಗುಣವಿದೆ. ಉಪ್ಪನ್ನು ಬಳಸುವುದರಿಂದ ಬಾಯಿಯಲ್ಲಿರುವ ಶೇಕಡಾ 90 ರಷ್ಟು ಕ್ರಿಮಿಗಳು ನಾಶವಾಗುತ್ತವೆ. ಬಾಯಿಗೂ ಸೋಂಕು ತಗುಲದಂತೆ ಆರೋಗ್ಯವಾಗಿಡುತ್ತದೆ. ಅಡುಗೆ ಸೋಡಾ ಕೂಡ ನೈಸರ್ಗಿಕ ಮೌತ್ ವಾಶ್ ನಂತೆ ಕೆಲಸ ಮಾಡುತ್ತದೆ.

* ಬೇವು: ಬೇವಿನ ಕಡ್ಡಿಯನ್ನು ಹಲ್ಲುಗಳನ್ನು ಗಟ್ಟಿಯಾಗಿಟ್ಟುಕೊಳ್ಳಲು ಹಿಂದೆ ಬಳಸುತ್ತಿದ್ದರು. ಇದೂ ಈಗಲೂ ಪ್ರಸ್ತುತ. ಬೇವಿನ ಎಣ್ಣೆ ಬೆರೆಸಿದ ಮೌತ್ ವಾಶ್ ಬಳಸುವುದರಿಂದ ಸೋಂಕು, ಹುಳುಕು ಹಲ್ಲು, ಹುಣ್ಣು ಮುಂತಾದುವನ್ನು ನಿವಾರಿಸಬಹುದು.

* ನೀರು: ಹೆಚ್ಚು ನೀರು ಕುಡಿದರೆ ದೇಹಕ್ಕೆ ಮಾತ್ರವಲ್ಲ. ಬಾಯಿಯ ಸ್ವಾಸ್ಥ್ಯವೂ ಹೆಚ್ಚು ಕಾಲವಿರುತ್ತದೆ. ಹಲ್ಲುಗಳ ಮಧ್ಯೆ ಉಳಿದುಕೊಂಡ ಆಹಾರವನ್ನು ಹೋಗಿಸಿ ವಾಸನೆ ಬರದಂತೆ ನೋಡಿಕೊಳ್ಳುತ್ತದೆ.

English summary

Simple Tips to get White Teeth | Yellow Teeth Remedies | ಬಿಳಿ ಹಲ್ಲನ್ನು ಪಡೆಯುವ ಸುಲಭ ವಿಧಾನ | ಹಳದಿ ಹಲ್ಲುಗಳಿಗೆ ಪರಿಹಾರ ಹೇಗೆ

To come out from yellow teeth problem, here are some simple solutions. You can try this easy steps to get sparkling smile. Have a look.
Story first published: Monday, November 7, 2011, 12:40 [IST]
X
Desktop Bottom Promotion