For Quick Alerts
ALLOW NOTIFICATIONS  
For Daily Alerts

ಮಲ್ಲೇಶ್ವರಂ ದೋಬೀಘಾಟ್‌ ಹೈಟೆಕ್ ಸೇವೆಗೆ ಸಜ್ಜು

By Srinath
|
1401-dhobi-ghat-in-malleswaram-gets-new-face-lift
ಬೆಂಗಳೂರು: 1970 ರಲ್ಲಿ ಅಸ್ತಿತ್ವಕ್ಕೆ ಬಂದ ಮಲ್ಲೇಶ್ವರಂ ದೋಬೀಘಾಟ್‌ ಗೆ ಈಗ ಹೈಟೆಕ್‌ ಸ್ಪರ್ಶ ನೀಡಲಾಗಿದೆ. ದಿನಕ್ಕೆ ಸುಮಾರು 1 ಲಕ್ಷ ಸಾವಿರ ಬಟ್ಟೆ ಒಗೆಯುವ ಸಾಮರ್ಥಯದ ಮಲ್ಲೇಶ್ವರಂ ದೋಬೀಘಾಟ್‌ ಇದೀಗ ರಾಜ್ಯದ ಏಕೈಕ ಹೈಟೆಕ್‌ ದೋಬೀಘಾಟ್‌ ಆಗಿ ಪರಿವರ್ತನೆಗೊಂಡಿದೆ. ಈ ಘಟಕದಲ್ಲಿ ಕೇವಲ 40 ನಿಮಿಷದಲ್ಲಿ ಸುಮಾರು 15 ಸಾವಿರ ಬಟ್ಟೆಗಳನ್ನು ವಾಷ್‌ ಮಾಡಬಹುದಾಗಿದೆ. ಸುಮಾರು 500 ಮಡಿವಾಳರ ಕುಟುಂಬಗಳು ಈ ಸೌಲಭ್ಯವನ್ನು ಬಳಸಿಕೊಳ್ಳುತ್ತಿವೆ.

ಇಲ್ಲಿ 50 ಕೆ.ಜಿ, 100 ಕೆ.ಜಿ. ಮತ್ತು 200 ಕೆ.ಜಿ. ಸಾಮರ್ಥ್ಯದ ಮೂರು ವಾಷಿಂಗ್‌ ಮಶೀನ್‌ಗಳನ್ನು ಅಳವಡಿಸಲಾಗಿದೆ. ಒಂದು ಬಾರಿಗೆ 40-50 ಕೆ.ಜಿ. ಬಟ್ಟೆಗಳನ್ನು ತುಂಬಬಹುದಾಗಿದೆ. ಇದಕ್ಕೆ ಇಂಡಸ್ಟ್ರೀಯಲ್‌ ಇನ್‌ಸ್ಟಿಟ್ಯೂಷನಲ್‌ ಲಾಂಡ್ರಿ ಕೆಮಿಕಲ್‌ ಬಳಸಲಾಗುತ್ತಿದೆ.

ಹಳೆ ಮತ್ತು ಹೊಸ ದೋಬೀಘಾಟ್‌ ಸಂಘದ ಸದಸ್ಯರು ಮಾತ್ರ ಇದರ ಸದುಪಯೋಗವನ್ನು ಪಡೆಯಬಹುದಾಗಿದೆ. ಇದರ ಬಳಕೆಗೆ ತರಬೇತಿಯನ್ನೂ ಸಂಘವೇ ನೀಡುತ್ತಿದೆ. ಸದ್ಯ ಮಲ್ಲೇಶ್ವರಂ ಸುತ್ತಮುತ್ತಲಿನ ವೈಯಾಲಿಕಾವಲ್‌, ಗುಟ್ಟಹಳ್ಳಿ, ಶ್ರೀರಾಂಪುರ, ಶೇಷಾದ್ರಿಪುರಂನ ಮಡಿವಾಳರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.

ಆರೋಗ್ಯ ಸುಧಾರಣೆ: ಗಂಟೆಗಟ್ಟಲೆ ಕಿಮಿಕಲ್‌ ಮತ್ತು ಡಿಟರ್ಜೆಂಟ್‌ ನೀರಿನಲ್ಲಿ ನಿಂತು ದೋಬೀಘಾಟ್‌ಗಳಲ್ಲಿ ಕೆಲಸ ಮಾಡುವ ಮಡಿವಾಳರು ಅನೇಕ ಕಾಯಿಲೆಗಳಿಂದ ನರಳುವಂತಾಗಿತ್ತು. ಚರ್ಮ ರೋಗ, ಅಸ್ತಮಾ, ಉಸಿರಾಟದ ತೊಂದರೆ ಮುಂತಾದ ಸಮಸ್ಯೆಗಳು ಕಾಡುತ್ತಿತ್ತು. ಆದರೆ ವಿದ್ಯುತ್‌ಚಾಲಿತ ಯಂತ್ರಗಳನ್ನು ಬಳಸುವುದರಿಂದ ಆರೋಗ್ಯ ಸುಧಾರಿಸಿದೆ. ಕಡಿಮೆ ಶ್ರಮ, ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ಮಾಡಬಹುದಾಗಿದೆ. ಆರೋಗ್ಯ ಕಾಪಾಡುವುದರ ಜೊತೆಗೆ ಹೈಜೆನಿಕ್‌ ವಾಷ್‌ ಕೂಡಾ ಮಾಡಲಾಗುತ್ತಿದೆ ಎಂಬುದು ಮಡಿವಾಳರ ಅಭಿಪ್ರಾಯ.

ಬೆಂಗಳೂರಿನಲ್ಲಿ ಸುಮಾರು 24 ದೋಬೀಘಾಟ್‌ಗಳಿವೆ. ರಾಜ್ಯ ಮಡಿವಾಳರ ಸಂಘ ರಾಜ್ಯದ ಎಲ್ಲಾ ದೋಬೀಘಾಟ್‌ಗಳನ್ನೂ ಹೈಟೆಕ್‌ಗೊಳಿಸಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈಗಾಗಲೇ ಮಹಾಲಕ್ಷ್ಮಿ ಬಡಾವಣೆ, ಆಸ್ಟಿನ್‌ ಟೌನ್‌, ಸಿಂಗಾಪುರ ಮಾರ್ಕೆಟ್‌ ಮತ್ತು ಶ್ರೀನಗರದಲ್ಲಿ ಟೆಂಡರ್ ಸಹ ಕರೆಯಲಾಗಿದೆ.

English summary

Dhobi Ghat in Malleswaram gets new face lift, ಮಲ್ಲೇಶ್ವರಂ ದೋಬೀಘಾಟ್‌ ಹೈಟೆಕ್ ಸೇವೆಗೆ ಸಜ್ಜು

Dhobi Ghat in Malleswaram gets new face lift. Meanwhile the BBMP plans to construct mechanized dhobi ghats in Madiwala and Shivajinagar, to provide more work to the dhobi’s in the city.
Story first published: Saturday, January 14, 2012, 13:10 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X