For Quick Alerts
ALLOW NOTIFICATIONS  
For Daily Alerts

ಫೇಸ್‌ಬುಕ್ಕಲ್ಲಿ ಕಾವಿ ತೊಟ್ಟ ನೆಟ್-ಸ್ಯಾವಿ ಸ್ವಾಮೀಜಿಗಳು

By Prasad
|
Swamijis from Karnataka on Facebook
ಫೇಸ್‌ಬುಕ್. ಹೈಟೆಕ್ ಜಮಾನಾದಲ್ಲಿ ಈ ಪದವನ್ನು ಕೇಳಿರದ ನೆಟ್ಟಿಗರು ತೀರ ವಿರಳ. ದಿನನಿತ್ಯ ಇಲ್ಲಿ ಗುರುತು ಪರಿಚಯವಿಲ್ಲದ ಲಕ್ಷಾಂತರ ಜನ ಸಂಧಿಸುತ್ತಾರೆ, ಯಾವುದೋ ಜನುಮದ ಸಂಬಂಧವೇನೋ ಎಂಬಂತೆ ಹರಟುತ್ತಾರೆ.

ಮರೆತೇಹೋಗಿದ್ದ ಚಡ್ಡಿ ಗೆಳೆಯರು ಅಚಾನಕ್ಕಾಗಿ ಸಿಗುತ್ತಾರೆ. ಎಂದೂ ಭೇಟಿಯಾಗಿರದ ಎರಡು ಜೀವಗಳು ಫೇಸ್‌ಬುಕ್ ಮುಖಾಂತರ ಒಂದಾಗಿರುತ್ತವೆ. ಎರಡು ದೇಹ ಒಂದು ಜೀವ ಎಂಬಂತಿದ್ದ ಜೋಡಿಗಳ ರಹಸ್ಯಗಳೆಲ್ಲ ಇಲ್ಲಿ ಬಯಲಾಗಿವೆ, ವಿಚ್ಛೇದನಗಳಾಗಿವೆ.

ಒಟ್ಟಿನಲ್ಲಿ, ಒಂದು ಪುಟ್ಟ ಜಗತ್ತೇ ಇಲ್ಲಿ ಮನೆಮಾಡಿಕೊಂಡಿದೆ. ನೆಟ್ ಜೊತೆ ಕೊಂಡಿಹಾಕಿಕೊಂಡಿರುವ ಮನುಜರ ಅರ್ಧ ಜೀವನ ಇಲ್ಲೇ ಕಳೆದುಹೋಗಿರುತ್ತದೆ. ಇಲ್ಲಿ ಉಚ್ಚ ನೀಚ, ಮೇಲು ಕೀಳು, ಬಡವ ಬಲ್ಲಿದ, ಮಾನವ ದಾನವ, ಆ ಜಾತಿ ಈ ಜಾತಿ ಎಂಬ ತಾರತಮ್ಯವಿಲ್ಲ.

ಇಲ್ಲಿನ ಜನರದ್ದು ಒಂದು ಜಾತಿ, ಒಂದೇ ಕುಲ. ಅದು ಇಂಟರ್ನೆಟ್ಟಿಗರ ಕುಲ. ಕೀಬೋರ್ಡ್ ಕುಟ್ಟಲು ಕಲಿತ ಮಕ್ಕಳು ಸೇರಿಕೊಂಡಿದ್ದಾರೆ. ಕೊನೆಯ ಸಂದೇಶ ಟೈಪಿಸಿ ಪ್ರಾಣ ಬಿಟ್ಟವರಿದ್ದಾರೆ. ತೋಚಿದ್ದನ್ನು ಬರೆಯಲು ಮತ್ತು ಬರೆದಿದ್ದನ್ನು ಇತರರಿಗೆ ತಲುಪಿಸಲು ದಕ್ಕಿರುವ ಅದ್ಭುತವಾದ ವೇದಿಕೆ.

ಇದೇ ವೇದಿಕೆಗೆ ನಮ್ಮ ಕನ್ನಡ ನಾಡಿನ ಅನೇಕ ಮಠಗಳ ಸ್ವಾಮೀಜಿಗಳು ಬಂದು ಸೇರಿಕೊಂಡಿದ್ದಾರೆ. ಇಡೀ ಜಗತ್ತಿನ ಮಾನವ ಕುಲವನ್ನು ನೆಟ್ ಚಟುವಟಿಕೆಗಳು ಮುಖಾಂತರ ತಲುಪುತ್ತಿದ್ದಾರೆ. ಫೇಸ್‌ಬುಕ್ ಖಾತೆಯನ್ನು ಅವರೇ ಸೃಷ್ಟಿಸಿದ್ದಾರೋ, ಅವರ ಭಕ್ತಾದಿಗಳು ಸೃಷ್ಟಿಸಿದ್ದಾರೋ...

ಅಂತೂ ಫೇಸ್‌ಬುಕ್‌ನಲ್ಲಿ ಸ್ವಾಮೀಜಿಗಳೇನಕರು ಮಠ, ಅನುಭವ ಮಂಟಪವನ್ನು ಕಟ್ಟಿಕೊಂಡಿದ್ದಾರೆ. ಇಂತಿರುವ ಕಾವಿ ತೊಟ್ಟ ನೆಟ್-ಸ್ಯಾವಿ ಸ್ವಾಮೀಜಿಗಳ ಫೇಸ್ ಬುಕ್ ತಾಣವನ್ನು ಪರಿಚಯಿಸುವ ಸರಣಿ ಲೇಖನ ಆರಂಭವಾಗಲಿದೆ, ನಿರೀಕ್ಷಿಸಿ.

English summary

Swamijis from Karnataka on Facebook | Net-savvy Kannada Swamijis | ಫೇಸ್ ಬುಕ್ ನಲ್ಲಿ ಸ್ವಾಮೀಜಿಗಳು

It is really good sight to see swamijis of various Mutts in Karnataka have opened their account in Facebook. Who are they? Find here series of articles introducing net-savvy swamijis on Facebook.
Story first published: Wednesday, March 28, 2012, 12:02 [IST]
X
Desktop Bottom Promotion