Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಫೇಸ್ ಬುಕ್ ನಲ್ಲಿ ಸ್ವಾಮೀಜಿ : ವಿಶ್ವೇಶವಾಣಿಯೇ ಸರ್ವೋತ್ತಮ

ಆದರೆ, ಫೇಸ್ ಬುಕ್ ತಾಣದಲ್ಲಿ ಪಾದಾರ್ಪಣ ಮಾಡಿರುವ ಸ್ವಾಮೀಜಿಗಳಲ್ಲೆಲ್ಲ ಪೇಜಾವರ ಶ್ರೀಗಳಾದ ವಿಶ್ವೇಶತೀರ್ಥ ಸ್ವಾಮಿಜಿ ಅವರ ಕುರಿತು ಆರಂಭಿಸಲಾಗಿರುವ 'ವಿಶ್ವೇಶವಾಣಿ' ಫೇಸ್ ಬುಕ್ ವೇದಿಕೆ ಸರ್ವೋತ್ತಮ ಎಂಬುದನ್ನು ಯಾರೂ ಅಲ್ಲಗಳೆಯಲಾರರು. ವಿಶ್ವೇಶವಾಣಿ ಎಂಬ ಅಂತರ್ಜಾಲ ತಾಣ ರಚಿಸಿರುವ ಗುಬ್ಬಿ ದೇಹದ ಸ್ವಾಮೀಜಿಗಳು ಅಪಾರ ಪ್ರಮಾಣದ ಫೇಸ್ ಬುಕ್ ನಲ್ಲಿಯೂ ಭಕ್ತಾದಿಗಳನ್ನು ಗಳಿಸಿದ್ದಾರೆ ಎಂಬುದಕ್ಕೆ ಈ ತಾಣವೇ ಸಾಕ್ಷಿ.
ಕೆಲ ಸ್ವಾಮೀಜಿಗಳು ನಾವೂ ನೆಟ್ಟಲ್ಲಿ ಇದ್ದೇವೆ ಎಂಬುದನ್ನು ತೋರಿಸಿಕೊಳ್ಳಲಿಕ್ಕೆ ಕಾವಿ ಧರಿಸಿದ ಫೋಟೋವೊಂದನ್ನು ಹಾಕಿಕೊಂಡು ಸರ್ವರ್ ನೀಡಿರುವ ಫ್ರೀ ಸ್ಪೇಸನ್ನು ತುಂಬಿಕೊಂಡಿದ್ದಾರೆ. ಆದರೆ ಅದೇ ಜಾಗದ ಮುಖಾಂತರ ಯಾವ ರೀತಿಯಲ್ಲಿ ಜನಸಾಮಾನ್ಯರನ್ನು ತಲುಪುತ್ತಾರೆ ಮತ್ತು ಸಮಾಜದ ಮೇಲೆ ಎಂತಹ ಪ್ರಭಾವವನ್ನು ಬೀರುತ್ತಾರೆ ಎಂಬುದು ಮುಖ್ಯ. ತಮ್ಮ ಸುತ್ತ ಏನೇ ವಿವಾದಗಳು ಸುತ್ತಿಕೊಂಡಿದ್ದರೂ ಜನರನ್ನು ತಲುಪುವ ವಿಭಿನ್ನ ಸ್ವಾಮೀಜಿಗಳಲ್ಲಿ ಪೇಜಾವರ ಶ್ರೀಗಳು ಭಿನ್ನರಾಗಿ ನಿಲ್ಲುತ್ತಾರೆ.
ಶ್ರೀ ವಿಶ್ವೇಶ ತೀರ್ಥರ ಹೆಸರಲ್ಲಿ ಇರುವ 'ವಿಶ್ವೇಶವಾಣಿ' ಫೇಸ್ ಬುಕ್ ವೇದಿಕೆ ಸುಮಾರು ಒಂದೂವರೆ ಸಾವಿರ ಜನರನ್ನು ನೇರವಾಗಿ ತಲುಪುತ್ತಿದೆ. ಅಲ್ಲಿ ನಾಡಿನಾದ್ಯಂತ ನಡೆಯುವ ಕಾರ್ಯಕ್ರಮಗಳು, ವಿಭಿನ್ನ ಮತ್ತು ಅಪರೂಪದ ಭಾವಚಿತ್ರಗಳು, ಸ್ವಾಮೀಜಿಗಳ ಸಂದೇಶಗಳು, ಆಡಿಯೋ, ವಿಡಿಯೋಗಳು ನೇರವಾಗಿ ಈ ಜಾಲತಾಣದ ಸದಸ್ಯರಾಗಿರುವ ಜನರ ಈಮೇಲ್ ಬಾಕ್ಸಿಗೆ ತಲುಪುತ್ತವೆ.
ಇಲ್ಲಿ ಎಂತಹ ಸಂದೇಶಗಳು ರವಾನೆಯಾಗುತ್ತವೆ ಎಂಬುದಕ್ಕಿಂತ ಎಂತೆಂತಹ ಮಾಹಿತಿಗಳು ಜನರನ್ನು ತಲುಪುತ್ತವೆ ಎಂಬುದು ಮುಖ್ಯ. ಧಾರ್ಮಿಕ ಸಂದೇಶಗಳು ಮಾತ್ರವಲ್ಲ ಕಂಪ್ಯೂಟರನ್ನು ಗೋಳಾಡಿಸುವ ವೈರಸ್ ಗಳ ಬಗ್ಗೆ ಕೂಡ ಮಾಹಿತಿ ಜನರನ್ನು ಸೇರುತ್ತವೆ. ಈ ದೃಷ್ಟಿಯಿಂದ ಈ ಜಾಲತಾಣ ಇಷ್ಟವಿದ್ದವರಿಗೆ ಹಿಂಬಾಲಿಸಲು ಯೋಗ್ಯ. ಮಾಧ್ವರೇ ಪಾಲಿಸುವ ನಂಬಿಕೆಗಳು, ಅಪನಂಬಿಕೆಗಳು, ಮೂಢನಂಬಿಕೆಗಳ ಬಗ್ಗೆ ಇಲ್ಲಿ ಮುಕ್ತವಾಗಿ ಚರ್ಚಿಸಬಹುದು.



Click it and Unblock the Notifications
