For Quick Alerts
ALLOW NOTIFICATIONS  
For Daily Alerts

ಪತ್ರಕರ್ತರ ಸಂಘದ ನಾಗರಾಜಸ್ವಾಮಿಗೆ ಆತ್ಮೀಯ ಸನ್ಮಾನ

By Srinath
|

ಬೆಂಗಳೂರು - ಪ್ರಾಮಾಣಿಕತೆ, ಕರ್ತವ್ಯನಿಷ್ಠೆ, ದಕ್ಷತೆಯ ಮೂಲಕ ಪತ್ರಕರ್ತರ ವಲಯದಲ್ಲಿ ಎಲ್ಲರಿಗೂ ಆತ್ಮೀಯರಾಗಿರುವ ಎ.ಎಸ್. ನಾಗರಾಜಸ್ವಾಮಿ ಅವರಿಗೆ 50ರ ಸಂಭ್ರಮ. ಕರ್ನಾಟಕ ಪತ್ರಕರ್ತರ ಸಹಕಾರ ಸಂಘದಲ್ಲಿ 26 ವರ್ಷಗಳಿಂದ ನಿರಂತವಾಗಿ ಸೇವೆ ಸಲ್ಲಿಸುತ್ತಿರುವ ನಾಗರಾಜಸ್ವಾಮಿ ಅವರನ್ನು ಇದೇ ಅಕ್ಟೋಬರ್ 29ರಂದು ಶನಿವಾರ, ಸಂಜೆ 5.30ಕ್ಕೆ ಆತ್ಮೀಯವಾಗಿ ಸನ್ಮಾನಿಸಲು ಅ.ನ.ಕೃ. ಕನ್ನಡ ಸಂಘ ಸಮಾರಂಭ ಆಯೋಜಿಸಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರೊ. ಚಂದ್ರಶೇಖರ ಪಾಟೀಲರು ಈ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಪತ್ರಕರ್ತ ಎಸ್.ವಿ. ಜಯಶೀಲರಾವ್ ಅವರು ನಾಗರಾಜಸ್ವಾಮಿ ಅವರನ್ನು ಅಭಿನಂದಿಸಲಿದ್ದಾರೆ.

ಕನ್ನಡ ಸಂಘರ್ಷ ಸಮಿತಿ ಅಧ್ಯಕ್ಷರಾದ ರಾಮಣ್ಣ ಎಚ್. ಕೋಡಿಹೊಸಹಳ್ಳಿ ಮತ್ತು ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಕೆ. ರಾಮೇಗೌಡ ಸಮಾರಂಭದ ಮುಖ್ಯ ಅತಿಥಿಗಳು. ಅ.ನ.ಕೃ. ಕನ್ನಡ ಸಂಘದ ಅಧ್ಯಕ್ಷ ರು.ಬಸಪ್ಪ ಅವರಿಂದ ಪ್ರಾಸ್ತಾವಿಕ ನುಡಿ.

ಸ್ಥಳ: ಶ್ರೀಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು-18

ದಿನಾಂಕ: 29.1.2011 ಶನಿವಾರ ಸಂಜೆ 5.30ಕ್ಕೆ

ಕರ್ನಾಟಕ ಪತ್ರಕರ್ತರ ಸಹಕಾರ ಸಂಘದಲ್ಲಿ ಅರ್ಪಣಾ ಭಾವದಿಂದ ಸೇವೆ ಸಲ್ಲಿಸುತ್ತಿರುವ ನಾಗರಾಜಸ್ವಾಮಿ, ಕೆಲಸದ ಒತ್ತಡ ಎಷ್ಟೇ ಇರಲಿ ಬಂದ ಸದಸ್ಯರ ಬೇಕು ಬೇಡಗಳನ್ನು ಆತ್ಮೀಯವಾಗಿ ವಿಚಾರಿಸಿ, ನಗುನಗುತ್ತಲೇ ಸ್ಪಂದಿಸುವ ಇವರ ಸ್ವಭಾವದಿಂದಾಗಿ ಪತ್ರಿಕಾ ರಂಗದಲ್ಲಿ ಅಪಾರವಾದ ಗೌರವ ಹಾಗೂ ಪ್ರೀತಿಗೆ ಪಾತ್ರರಾಗಿದ್ದಾರೆ.

English summary

Karnataka Journalist Co-Operative Society A.S. Nagaraja Swamy Felicitation, A.S. Nagaraja Swamy Felicitation Oct 29, A.S. Nagaraja Swamy Felicitation Bangalore, ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಎಎಸ್ ನಾಗರಾಜಸ್ವಾಮಿಗೆ ಆತ್ಮೀಯ ಸನ್ಮಾನ, 26 ವರ್ಷಗಳ ದಕ್ಷ ಸೇವೆ: 'ಸೊಸೈಟಿ' ನಾಗರಾಜಸ್ವಾಮಿ ಹೆಗ್ಗಳಿಕೆ

Karnataka Journalist Co-Operative Society Secretary A.S. Nagaraja Swamy who turned 50 years will be felicitated on Oct 29 at Kannada Sahitya Parshat (KSP), Chamraj pet, Bangalore.
Story first published: Tuesday, October 18, 2011, 9:19 [IST]
X