For Quick Alerts
ALLOW NOTIFICATIONS  
For Daily Alerts

ಅಬ್ದುಲ್‌ ಕಲಾಂ ಮಣಿವಣ್ಣನ್ ಮತಾಂತರದ ಹಿಂದುಮುಂದು

By Srinath
|
manivannan-profile-first-marriage
ಬೆಂಗಳೂರು, ಸೆ.4: ಎರಡನೇ ಬಾರಿಗೆ ವಿವಾಹವಾಗಿರುವುದನ್ನು ಖಚಿತಪಡಿಸಿರುವ ಪಿ. ಮಣಿವಣ್ಣನ್‌ ಸಲ್ಮಾ ಅವರನ್ನು ಮದುವೆಯಾಗಲು ಹಿಂದೂ ಧರ್ಮ ತೊರೆದಿದ್ದೇನೆಂದು ಎಲ್ಲಿಯೂ ಹೇಳಿಲ್ಲ. ಆದರೆ ಮಣಿವಣ್ಣನ್‌ ಈಗಾಗಲೇ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.

ಪಿ. ಮಣಿವಣ್ಣನ್‌ ಎಂಬುದರ ಬದಲಿಗೆ ಅಬ್ದುಲ್‌ ಕಲಾಂ ಮಣಿ (ಎ.ಕೆ. ಮಣಿ) ಎಂದು ಇಸ್ಲಾಂ ಧರ್ಮಕ್ಕೆ ಅನುಗುಣವಾಗಿ ಮರು ನಾಮಕರಣ ಮಾಡಿಕೊಂಡಿದ್ದಾರೆ. ಜೊತೆಗೆ ಸಲ್ಮಾ ಅವರೊಂದಿಗಿನ ವಿವಾಹ ಇಸ್ಲಾಂ ಧರ್ಮದ ರೀತಿ-ರಿವಾಜುಗಳ ಪ್ರಕಾರವೇ ನೆರವೇರಿದೆ ಎಂಬ ದಟ್ಟ ವದಂತಿಗಳು ಸುಳಿದಾಡುತ್ತಿದೆ.

ಮಣಿವಣ್ಣನ್‌ ಅವರ ಎರಡನೇ ವಿವಾಹದ ಬಗ್ಗೆ ಯಾರದೂ ಆಕ್ಷೇಪವಿಲ್ಲ. ಆದರೆ ಈಗ ಈ ವಿಷಯ ಅಧಿಕಾರಿ ವಲಯ, ರಾಜಕಾರಣಿಗಳ ವಲಯದಲ್ಲಿ ತೀವ್ರ ಚರ್ಚೆಯಾಗಲು ಮುಖ್ಯ ಕಾರಣವಿದೆ. ಸಲ್ಮಾ ಅವರನ್ನು ವಿವಾಹವಾಗಲು ಐಎಎಸ್‌ ಅಧಿಕಾರಿಯಾದ ಮಣಿವಣ್ಣನ್‌ ಅವರು ಹಿಂದೂ ಧರ್ಮ ತೊರೆದು ಇಸ್ಲಾಂ ಧರ್ಮ ಸ್ವೀಕರಿಸಿದ್ದಾರೆ ಎಂಬ ವಿಷಯ ಚರ್ಚೆಯಾಗುತ್ತಿದೆ.

ಈ ಹಿಂದೆ ಮೈಸೂರು ಉಪಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನೀರಿಳಿಸಿದ್ದ ಮಣಿವಣ್ಣನ್ ಮೂಲತಃ ತಮಿಳುನಾಡಿನವರು. ಅವರ ತಂದೆ ಪೂಣಯ್ಯ ದಲಿತ ಕುಟುಂಬದಿಂದ ಬಂದವರು. ಮದುರೈನಲ್ಲಿ ಶ್ರೀರಂಗಂನಲ್ಲಿ ವಾಸವಾಗಿದ್ದ ಶಿಸ್ತಿನ ಸಿಪಾಯಿ ಪೂಣಯ್ಯ ರೈಲ್ವೆ ಇಲಾಖೆಯಲ್ಲಿದ್ದರು.

ಪೂಣಯ್ಯಗೆ ಐವರು ಪುತ್ರರು ಇದ್ದಾರೆ. ಮೂವರು ಇಂಜಿನಿಯರುಗಳು ಮತ್ತು ಇಬ್ಬರು ಡಾಕ್ಟರುಗಳು. ಕೆಮಿಕಲ್ ಇಂಜಿನಿಯರ್ ಮಣಿ, 1998ರ ಐಎಎಸ್ ಅಧಿಕಾರಿ. ಟಾಸ್ಕ್ ಮಾಸ್ಟರ್ ಮಣಿವಣ್ಣನ್ ಗೆ ಇನ್ನೂ ಮೂರು ದಶಕಗಳ ಐಎಎಸ್ ಸೇವೆ ಉಳಿದಿದೆ. ಪ್ರೀತಿಸಿದವರಿಗಾಗಿ ಐಎಎಸ್‌ ಅಧಿಕಾರಿಯೊಬ್ಬರು ಮತಾಂತರವಾದ ಉದಾಹರಣೆಗಳು ಕರ್ನಾಟಕದಲ್ಲಿಲ್ಲ. ಮಣಿ ಮರು ವಿವಾಹ ಜೀವನ ಸುಖಮಯವಾಗಿರಲಿ.

English summary

IAS P Manivannan biodata, Manivannan first marriage, IAS Manivannan re-marriage to IAS Salma, ಅಬ್ದುಲ್‌ ಕಲಾಂ ಮಣಿ ಮತಾಂತರದ ಹಿಂದುಮುಂದು ಮಣಿವಣ್ಣನ್‌

Taskmaster IAS P Manivannan gets divorce from his first wife and marries IAS officer Salma. A brief past-forward of Manivannan life aka biodata.
Story first published: Thursday, September 8, 2011, 13:33 [IST]
X
Desktop Bottom Promotion