For Quick Alerts
ALLOW NOTIFICATIONS  
For Daily Alerts

ವಿಚ್ಚೇದನದವರೆಗೂ ಬಂದ ದಾಂಪತ್ಯ ಸರಿಪಡಿಸಿಕೊಳ್ಳೋದು ಹೇಗೆ?

|

ಮದುವೆ ಅನ್ನೋದು ಪ್ರೀತಿ, ವಿಶ್ವಾಸ, ಸುಂದರವಾದ ಬಾಂದವ್ಯವಿದ್ದಾಗ ಮಾತ್ರ ಮೂರು ಗಂಟಿನ ಜೊತೆಗೆ ಗಟ್ಟಿಯಾಗೋದಕ್ಕೆ ಸಾಧ್ಯ. ಆದ್ರೆ ಇತ್ತೀಚಿನ ದಿನಗಳಲ್ಲಿ ಪ್ರೀತಿಸಿ ಮದುವೆಯಾಗುವಷ್ಟೇ ವೇಗವಾಗಿ ಮದುವೆ ಮುರಿದು ಬೀಳುತ್ತದೆ.

ಹಿರಿಯರು ನೋಡಿ ಆದ ಮದುವೆಯೇನೋ ಇದಕ್ಕೆ ಹೊರತಾಗಿಲ್ಲ. ಪತಿ-ಪತ್ನಿಯೊಂದಿಗೆ ಸರಿಯಾಗಿ ಹೊಂದಾಣಿಕೆ ಇಲ್ಲದಾಗ ಇಂತಹ ವಿವಾಹಗಳು ಮುರಿದು ಬೀಳುವ ಸಾಧ್ಯತೆ ಇರುತ್ತದೆ.

Ways That Can Save Your Marriage from Ending in Divorce in Kannada

ಇನ್ನೇನು ಮದುವೆ ಮುರಿದು ಬಿತ್ತು ಅನ್ನುವ ಸಂದರ್ಭದಲ್ಲಿ ಸಂಗಾತಿಯೊಬ್ಬರಿಗೆ ಈ ಸಂಬಂಧಕ್ಕೆ ವಿಚ್ಚೇದನದ ಮೂಲಕ ಮುಕ್ತಿ ಕೊಡೋದಕ್ಕೆ ಇಷ್ಟವಿರೋದಿಲ್ಲ. ಹೀಗಾದಾಗ ವಿಚ್ಚೇದನದಿಂದ ತಪ್ಪಿಸೋದಕ್ಕೆ ಏನು ಮಾಡಬಹುದು? ಇನ್ನೇನು ಮುರಿದು ಬೀಳುವ ದಾಂಪತ್ಯವನ್ನು ಸರಿಪಡಿಸಿಕೊಳ್ಳಲು ಕೆಲವೊಂದು ಟಿಪ್ಸ್‌ ಇಲ್ಲಿದೆ.

1. ಪ್ರತಿ ದಿನ

1. ಪ್ರತಿ ದಿನ "ಈ ಲವ್‌ ಯೂ" ಎಂದು ಹೇಳಿ

ಇಷ್ಟು ದಿನ ನಿಮ್ಮ ಇಬ್ಬರ ನಡುವಲ್ಲಿ ಏನೇ ಜಗಳ ನಡೆದಿರಬಹುದು. ಆದರೆ ನಿಮಗೆ ವಿಚ್ಚೇದನ ನೀಡಲೂ ಇಷ್ಟವಿಲ್ಲದಿದ್ದರೆ ನಿಮ್ಮ ನಡುವಿನ ಪ್ರೀತಿಯ ಬಾಂಧವ್ಯವನ್ನು ಗಟ್ಟಿಗೊಳಿಸಿ. ಪ್ರತಿ ದಿನ ನಿಮ್ಮ ಸಂಗಾತಿಗೆ "ಈ ಲವ್‌ ಯೂ" ಎಂದು ಹೇಳಿ. ಈ ಮೂರು ಪದ ನಿಮ್ಮ ಪ್ರೀತಿಯನ್ನು ಮತ್ತಷ್ಟು ಗಟ್ಟಿ ಮಾಡುತ್ತದೆ.

2. ಸಂಗಾತಿಯ ಜೊತೆಗೆ ಹೆಚ್ಚಿನ ಸಮಯ ಕಳೆಯಿರಿ

2. ಸಂಗಾತಿಯ ಜೊತೆಗೆ ಹೆಚ್ಚಿನ ಸಮಯ ಕಳೆಯಿರಿ

ದಂಪತಿಗಳಿಬ್ಬರು ದೂರ ದೂರ ಇರುವುದು ಕೂಡ ಅವರಿಬ್ಬರ ನಡುವೆ ಒಡಕು ಮೂಡಲು ಕಾರಣವಾಗುತ್ತದೆ. ಹೀಗಾಗಿ ನಿಮ್ಮ ಸಂಗಾತಿಯ ಜೊತೆಗೆ ಹೆಚ್ಚಿನ ಸಮಯ ಕಳೆಯಿರಿ. ಉದಾಹರಣೆಗೆ ಅವರು ಶಟಲ್‌ ಬಾಡ್ಮಿಂಟನ್‌ ಆಡಲು ಇಷ್ಟ ಪಟ್ಟರೆ ಅವರ ಜೊತೆಯಾಗಿ ನೀವು ಆಡಿ. ಸೈಕ್ಲಿಂಗ್‌, ವ್ಯಾಯಾಮ, ರನ್ನಿಂಗ್‌ ಹೀಗೆ ಆದಷ್ಟು ಅವರ ಜೊತೆಯಲ್ಲೇ ಇರುವಂತೆ ಸನ್ನಿವೇಶಗಳನ್ನು ಸೃಷ್ಟಿಸಿಕೊಳ್ಳಿ. ಆಗ ನಿಮ್ಮ ಬಾಂಧವ್ಯ ಗಟ್ಟಿಯಾಗುತ್ತಾ ಹೋಗುತ್ತದೆ.

3. ಗಿಫ್ಟ್‌ಗಳನ್ನು ನೀಡಿ, ನೆನಪನ್ನು ಮರುಸೃಷ್ಟಿಸಿ

3. ಗಿಫ್ಟ್‌ಗಳನ್ನು ನೀಡಿ, ನೆನಪನ್ನು ಮರುಸೃಷ್ಟಿಸಿ

ಮದುವೆಯಾದ ಹೊಸತರಲ್ಲಿ ಇಬ್ಬರ ಮಧ್ಯೆ ಅನ್ಯೋನ್ಯತೆ ಖಂಡಿತ ಇರುತ್ತದೆ. ಈ ವೇಳೆ ಬರ್ತ್‌ಡೇ, ವ್ಯಾಲಂಟೈನ್ಸ್‌ ಡೇಯನ್ನು ಖಂಡಿತ ಸೆಲೆಬ್ರೇಟ್‌ ಮಾಡಿರ್ತಿರಾ. ನಂತರದ ವರ್ಷಗಳಲ್ಲಿ ಇಂತಹ ಯಾವುದೇ ದಿನವನ್ನು ಸೆಲೆಬ್ರೇಟ್‌ ಮಾಡಿರೋದಿಲ್ಲ. ಹಾಗಾದ್ರೆ ಮತ್ತೆ ಮದುವೆಯ ನೆನಪನ್ನು ಮರುಸೃಷ್ಟಿಸಲು ಪ್ರಯತ್ನಿಸಿ. ನಿಮ್ಮ ಸಂಗಾತಿಗೆ ಪ್ರೀತಿಯಿಂದ ಗಿಫ್ಟ್‌ ನೀಡಿ ಅವರನ್ನು ಎಲ್ಲಿಯಾದರೂ ಆಚೆ ಕರೆದುಕೊಂಡು ಹೋಗಿ.

4. ತಜ್ಞರೊಂದಿಗೆ ಸಮಾಲೋಚಿಸಿ

4. ತಜ್ಞರೊಂದಿಗೆ ಸಮಾಲೋಚಿಸಿ

ದಂಪತಿಗಳ ಮಧ್ಯೆ ಹೊಂದಾಣಿಕೆ ಆಗುತ್ತಿಲ್ಲ ಎನ್ನುವ ಸಂದರ್ಭದಲ್ಲಿ ವಿಚ್ಚೇದನ ಒಂದೇ ದಾರಿಯಲ್ಲ. ಅದಕ್ಕೂ ಮೊದಲು ನೀವು ತಜ್ಞರೊಂದಿಗೆ ಸಮಾಲೋಚನೆ ನಡೆಸಿ. ಅವರು ನಿಮ್ಮ ಗೊಂದಲ, ಸಮಸ್ಯೆಗಳಿಗೆ ಖಂಡಿತ ಪರಿಹಾರ ನೀಡುತ್ತಾರೆ. ಸಂಗಾತಿಯೊಂದಿಗೆ ಬದುಕಲು ಸಾಧ್ಯವೇ ಇಲ್ಲ ಅನ್ನು ಸಂದರ್ಭದಲ್ಲಿ ಇಬ್ಬರು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಸಲಹೆ ಪಡೆದುಕೊಳ್ಳುವುದು ಉತ್ತಮ.

5. ನಿಮ್ಮ ಸಂಗಾತಿಯ ಭಾವನೆಯನ್ನು ಅರ್ಥೈಸಿ

5. ನಿಮ್ಮ ಸಂಗಾತಿಯ ಭಾವನೆಯನ್ನು ಅರ್ಥೈಸಿ

ಇಬ್ಬರ ನಡುವೆ ಹೊಂದಾಣಿಕೆಯಿಲ್ಲದಾಗ ಮಾತ್ರ ಜಗಳ, ಮನಸ್ಥಾಪಗಳು ಸಂಭವಿಸೋದು. ನಾನು ನನ್ನದು ಅನ್ನೋದನ್ನ ಬಿಟ್ಟು ನಿಮ್ಮ ಸಂಗಾತಿಯ ಭಾವನೆಗಳಿಗೂ ಸ್ವಲ್ಪ ಬೆಲೆ ಕೊಡಿ. ಯಾವಾಗಲೂ ಸಾರ್ಥಿಯಾಗಿ ಚಿಂತಿಸಬೇಡಿ. ಕೆಲವೊಂದು ಸಾರಿ ನಿಮಗಿಷ್ಟವಿಲ್ಲದಿದ್ದರೂ ಸಂಗಾತಿಯ ಮಾತಿಗೆ ಸಮ್ಮತಿ ಸೂಚಿಸಿ. ಹೀಗಾದಾಗ ಮಾತ್ರ ಅರ್ಥಪೂರ್ಣ ದಾಂಪತ್ಯ ನೆಡೆಸಲು ಸಾಧ್ಯ.

6. ಲೈಂಗಿಕ ಸಂಬಂಧ ಚೆನ್ನಾಗಿರಲಿ

6. ಲೈಂಗಿಕ ಸಂಬಂಧ ಚೆನ್ನಾಗಿರಲಿ

ದಂಪತಿಗಳ ನಡುವೆ ಪ್ರೀತಿಯ ಜೊತೆಗೆ ಲೈಂಗಿಕ ಸಂಬಂಧವು ಕೂಡ ತುಂಬಾನೇ ಮುಖ್ಯವಾಗುತ್ತದೆ. ಎಷ್ಟೋ ಸಂಬಂಧಗಳು ಲೈಂಗಿಕ ಸಂತೃಪ್ತಿ ಇಲ್ಲ ಅನ್ನುವ ಕಾರಣಕ್ಕೆ ಒಡೆದು ಹೋಗಿದ್ದು ಇದೆ. ಹೀಗಾಗಿ ನಿಮ್ಮ ಸಂಗಾತಿಯ ಜೊತೆಗೆ ಆದಷ್ಟು ರೊಮ್ಯಾಂಟಿಕ್‌ ಆಗಿರಲು ಪ್ರಯತ್ನಿಸಿ.

ಸಂಬಂಧವನ್ನು ಉತ್ತಮವಾಗಿಸಿಕೊಳ್ಳಲು ಏನೆಲ್ಲಾ ಮಾಡಬಹುದು ಎಲ್ಲವನ್ನೂ ಮಾಡಿ. ಒಂದು ಸಾರಿ ಒಡೆದ ಮನಸ್ಸುಗಳನ್ನು ಮತ್ತೆ ಒಂದು ಮಾಡೋದು ತುಂಬಾನೇ ಕಷ್ಟ. ಹೀಗಾಗಿ ದಾಂಪತ್ಯದಲ್ಲಿ ಒಡಕುಗಳಿಗೆ ಅವಕಾಶ ಕೊಡಬೇಡಿ.

English summary

Ways That Can Save Your Marriage from Ending in Divorce in Kannada

Here are the tips to Save your marriage from ending in divorce.
Story first published: Sunday, March 19, 2023, 20:05 [IST]
X
Desktop Bottom Promotion