Just In
Don't Miss
- News
ಹಳೆಯ ಮತ್ತು ಮಾಲಿನ್ಯಕಾರ ವಾಹನಗಳ ಮೇಲೆ ಗ್ರೀನ್ ಟ್ಯಾಕ್ಸ್!
- Automobiles
ಗಣರಾಜ್ಯೋತ್ಸವದ ಸಂಭ್ರಮಕ್ಕಾಗಿ ಮ್ಯಾಗ್ನೈಟ್ ಕಾರಿನೊಂದಿಗೆ ನಿಸ್ಸಾನ್ ಹೊಸ ಅಭಿಯಾನ ಘೋಷಣೆ
- Movies
ದಿಗ್ಗಜ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂಗೆ ಪದ್ಮವಿಭೂಷಣ ಪ್ರಶಸ್ತಿ
- Sports
ಐಎಸ್ಎಲ್: ಬಾಗನ್ ಸೋಲಿಸುವ ಆತ್ಮವಿಶ್ವಾಸದಲ್ಲಿ ನಾರ್ಥ್ ಈಸ್ಟ್
- Finance
ಎಲ್&ಟಿ ತ್ರೈಮಾಸಿಕ ಆದಾಯ 5% ಏರಿಕೆ: ದಾಖಲೆಯ 2,467 ಕೋಟಿ ರೂಪಾಯಿ
- Education
Indian Air Force Recruitment 2021: ಏರ್ಮೆನ್ ಗ್ರೂಪ್ X & Y ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಈ ವಯಸ್ಸಿನಲ್ಲಿ ಅನೈತಿಕ ಸಂಬಂಧ ಬೆಳೆಯುವುದು ಜಾಸ್ತಿ: ಅಧ್ಯಯನ
ಅನೈತಿಕ ಸಂಬಂಧ ಒಂದು ಕುಟುಂಬದ ಸಂತೋಷವನ್ನೇ ಕಿತ್ತುಕೊಳ್ಳುತ್ತದೆ, ಇದರಲ್ಲಿ ಒಬ್ಬರ ಸ್ವಾರ್ಥ, ವಂಚನೆಯಿಂದಾಗಿ ಮತ್ತೊಬ್ಬರ ಜೀವನದ ಖುಷಿಯೇ ಇಲ್ಲವಾಗುತ್ತದೆ. ಮದುವೆಯಾಗಿ, ಮಕ್ಕಳಾಗಿ ಸಂಸಾರ ಸಾಗಿಸುತ್ತಿರುವಾಗ ಅನೈತಿಕ ಸಂಬಂಧ ಬೆಳೆದರೆ ಅದರಿಂದ ಆ ಮಕ್ಕಳ ಬದುಕಿನ ಮೇಲೆ ಗಂಭೀರ ಪರಿಣಾಮ ಬೀಳುವುದು.
ಅನೈತಿಕ ಸಂಬಂಧ ಬೆಳೆಯಲು ಅನೇಕ ಕಾರಣಗಳಿರಬಹುದು. ದೈಹಿಕ ಆಕರ್ಷಣೆ, ತನ್ನ ಸಂಗಾತಿಯಿಂದ ಲೈಂಗಿಕ ತೃಪ್ತಿ ಸಿಗದೇ ಹೋದಾಗ ಅಥವಾ ತಾನು ಸಂಬಂಧ ಬೆಳೆಸುವ ವ್ಯಕ್ತಿಯನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳಲು, ಹಣ ಹೀಗೆ ಅನೇಕ ಕಾರಣಗಳು ಅನೈತಿಕ ಸಂಬಂಧದ ಹಿಂದೆ ಇರುತ್ತದೆ. ಆದರೆ ಅನೈತಿಕ ಸಂಬಂಧಕ್ಕೂ ವಯಸ್ಸಿಗೂ ಸಂಬಂಧವಿದೆ ಎಂದು ನೋಡುವುದಾದರೆ ಇದೆ ಎನ್ನುತ್ತಿದೆ ಸಮೀಕ್ಷೆಗಳು.
ಅನೈತಿಕ ಸಂಬಂಧ ಎನ್ನುವುದು ಯಾವ ವಯಸ್ಸಿನಲ್ಲಿ ಬೇಕಾದರೂ ಉಂಟಾಗಬಹುದು, ಆದರೆ ಹೆಚ್ಚಿನವರು ಅನೈತಿಕ ಸಂಬಂಧ ಬೆಳೆಸುವುದು ಯಾವ ವಯಸ್ಸಿನವರು ಎಂಬುವುದನ್ನು ಅಧ್ಯಯನಗಳು ಹೇಳಿವೆ ನೋಡಿ:

ಅಧ್ಯಯನ
ಇತ್ತೀಚೆಗೆ Ashley Madison ಎಂಬ ವೆಬ್‌ಸೈಟ್ (ಇದು ಮದುವೆಯಾದವರಿಗೆ ಇರುವ ಡೇಟಿಂಗ್ ವೆಬ್‌ಸೈಟ್) ಒಂದು ಸಮೀಕ್ಷೆ ನಡೆಸಿತು. ಇದರಲ್ಲಿ ಮದುವೆಯ ಬಳಿಕ ಯಾವ ವಯಸ್ಸಿನಲ್ಲಿ ಅನೈತಿಕ ಸಂಬಂಧ ಬೆಳೆಸುತ್ತಾರೆ ಎಂಬುವುದನ್ನು ಜನರ ಬಳಿ ಕೇಳಲಾಯಿತು. ಆಗ ಪುರುಷರ ವಯಸ್ಸಿನಲ್ಲಿ ಹಾಗೂ ಮಹಿಳೆಯರ ವಯಸ್ಸಿನಲ್ಲಿ ವ್ಯತ್ಯಾಸ ಇರುವುದು ತಿಳಿದು ಬಂತು.
ಪುರುಷ VSಮಹಿಳೆ
ಈ ವೆಬ್‌ಸೈಟ್ ಪ್ರಕಾರ ಪುರುಷರ ಈ ವೆಬ್‌ಸೈಟ್ 36ರ ನಂತರ ವಿಸಿಟ್ ಕೊಡುತ್ತಾರೆ, ಮಹಿಳೆಯರಲ್ಲಿ 33 ಹರೆಯದವರು ಹೆಚ್ಚಾಗಿ ಈ ವೆಬ್‌ಸೈಟ್‌ಗೆ ವಿಸಿಟ್ ಕೊಡುತ್ತರೆ ಎಂದು ಹೇಳಿದೆ.

ಯಾಕೆ ಈ ಪ್ರಾಯದವರು ಹೆಚ್ಚಾಗಿ ಅನೈತಿಕ ಸಂಬಂಧದಲ್ಲಿ ಬೀಳುತ್ತಾರೆ
ಈ ವೆಬ್‌ಸೈಟ್‌ಗೆ ಭೇಟಿ ನೀಡುವವರು ಎಲ್ಲರೂ ತಮ್ಮ ಸಂಬಂಧದಲ್ಲಿ ಸಂತೋಷ ಇಲ್ಲದ ಕಾರಣ ಈ ವೆಬ್‌ಸೈಟ್‌ಗೆ ಭೇಟಿ ಕೊಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ, ಕೆಲವರು ತಮ್ಮ ಬೋರ್ ಕಳೆಯಲು ಕೂಡ ಇದಕ್ಕೆ ಲಾಗಿನ್ ಆಗುತ್ತಾರೆ. ಕೆಲವರಿಗೆ ಒಮ್ಮೆ ಹನಿಮೂನ್ ಪಿರೀಡ್ ಮುಗಿದ ಬಳಿಕ, ವಾಸ್ತವ ಪರಿಸ್ಥಿತಿ ಅಷ್ಟು ಇಷ್ಟವಾಗುವುದಿಲ್ಲ, ಸದಾ ಕಲ್ಪನೆ ಲೋಕದಲ್ಲಿಯೇ ಇರುತ್ತಾರೆ ಅಂಥವರು ಅನೈತಿಕ ಸಂಬಂಧ ಬೆಳೆಸಲು ಇಷ್ಟಪಡುತ್ತಾರೆ.

ಇನ್ನು ಮೋಸ ಮಾಡುವ ಮತ್ತೊಂದು ವಯಸ್ಸೆಂದರೆ
ಈ ಸಮೀಕ್ಷೆ ಪ್ರಕಾರ ಜನರು ತಮ್ಮ ಪ್ರೇಮಿ ಅಥವಾ ಸಂಗಾತಿಗೆ ಮೋಸ ಮಾಡುವ ಮತ್ತೊಂದು ವಯಸ್ಸುಎಂದರೆ 18-29. ಈ ವಯಸ್ಸಿನಲ್ಲಿ ಸಂಬಂಧದ ಬಗ್ಗೆ ಅನೇಕ ಕನಸ್ಸುಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ ಸಂಬಂಧದಲ್ಲಿ ನಿರಾಸೆ ಉಂಟಾದಾಗ ಬೇರೆ ಸಂಬಂಧ ಬೆಳೆಸುತ್ತಾರೆ.

ಸಂಗಾತಿಗೆ ಮೋಸ ಮಾಡುವ ಮತ್ತೊಂದು ವಯಸ್ಸೆಂದರೆ
ಇನ್ನು ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುವ ಮತ್ತೊಂದು ವಯಸ್ಸೆಂದರೆ 40-49. ಈ ಸಮಯದಲ್ಲಿ ಜವಾಬ್ದಾರಿ ಹೆಚ್ಚಾಗುತ್ತದೆ, ಮೊದಲಿನಂತೆ ಜೀವನ ಇರುವುದಿಲ್ಲ, ಇದನ್ನು ಕೆಲವರು ಮಿಸ್ ಮಾಡುತ್ತಾರೆ. ಆ ಸುಖ ಪಡೆಯಲು ಅನೈತಿಕ ಸಂಬಂಧ ಬೆಳೆಸುತ್ತಾರೆ.

ಕೊನೆಯದಾಗಿ
ಅನೈತಿಕ ಸಂಬಂಧದಲ್ಲಿ ಬೀಳುವಾಗ ಆ ಸಮಯ ವಾಸ್ತವ, ತನ್ನ ಕುಟುಂಬ ಎಲ್ಲವನ್ನೂ ಮರೆಯುತ್ತಾರೆ. ಈ ಸಂಬಂಧದಲ್ಲಿ ಖುಷಿಯಾಗಿರಬಹುದು ಅಥವಾ ಸಾಕಷ್ಟು ಖುಷಿ ಸಿಗಬಹುದು ಎಂಬ ಭ್ರಮೆಯಲ್ಲಿ ಹೋಗುತ್ತಾರೆ. ಆದರೆ ಅನೈತಿಕ ಸಂಬಂಧ ಯಾವತ್ತಿಗೂ, ಯಾರಿಗೂ ನೆಮ್ಮದಿ ಕೊಡುವುದಿಲ್ಲ. ತಾನು ತಪ್ಪು ಮಾಡುತ್ತಿದ್ದೇನೆ ಎಂಬ ಅರಿವು ಇರುವುದರಿಂದ ಸಂಗಾತಿಗೆ ತಿಳಿದರೆ ಎಂಬ ಭಯ ಇದ್ದೇ ಇರುತ್ತದೆ.
ತಿಳಿದ ಬಳಿಕ ಮನೆಯಲ್ಲಿ ಜಗಳ ರಂಪಾಟ, ಇನ್ನು ಸಂಗಾತಿಯನ್ನು ಬಿಟ್ಟು ಆ ವ್ಯಕ್ತಿ ಜೊತೆ ಬಾಳಲು ಹೋದರೆ ಅಲ್ಲಿಯೂ ಮುಂದೆ ಮಾನಸಿಕ ನೆಮ್ಮದಿ ಇಲ್ಲವಾಗುವುದು.
ಮದುವೆ ಬಳಿಕ ಬೇರೆ ವ್ಯಕ್ತಿಯಲ್ಲಿ ಆಕರ್ಷಣೆ ಉಂಟಾದರೆ ಅದನ್ನು ಮೊಳಕೆಯಲ್ಲಿಯೇ ಚಿವುಟಿ ಬಿಸಾಡಬೇಕು. ಆಕರ್ಷಣೆಯ ಹಿಂದೆ ಹೋದರೆ ಬೆಳಕು ಕಮಡು ಹೋಗುವ ಪತಂಗದಂತೆ ಜೀವನ ಕಳೆದುಕೊಳ್ಳಬೇಕಾಗುವುದು.