For Quick Alerts
ALLOW NOTIFICATIONS  
For Daily Alerts

ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?

|

ಅನೈತಿಕ ಸಂಬಂಧದಿಂದ ಯಾರು ಖುಷಿಯಾಗಿದ್ದಾರೆ ಎಂದು ನೋಡಿದರೆ ಅದರಲ್ಲಿ ಬಿದ್ದು ವಿಲವಿಲ ಒದ್ದಾಡುತ್ತಿರುವವರೇ ಎಲ್ಲರೂ... ಯಾವುದೋ ಒಂದು ಘಳಿಗೆಯಲ್ಲಿ ಕಾಲು ಜಾರಿ ಬಿದ್ದು, ನಂತರ ಅದರ ಹೊರ ಬರಲು ಪ್ರಯತ್ನಿಸಿದರೂ ಸಾಧ್ಯವಾಗದೇ ಇರುವ ನೆಮ್ಮದಿಕೊಳ್ಳುತ್ತಾರೆ. ಇನ್ನು ಕೆಲವರಿಗೆ ನಾನು ಈಗ ಇರುವ ಸಂಬಂಧದಲ್ಲಿ ತುಂಬಾ ಖುಷಿಯಾಗಿದ್ದೇನೆ ಎಂದು ಅನಿಸುತ್ತಿರುತ್ತದೆ, ಆದರೆ ಕೆಲವೇ ವರ್ಷಗಳಲ್ಲಿ ತಾನು ಮಾಡಿದ ತಪ್ಪಿನ ಅರಿವು ಉಂಟಾಗಿರುತ್ತದೆ, ಅಷ್ಟೊತ್ತಿಗೆ ಕಾಲ ಮಿಂಚಿರುತ್ತದೆ.

Why People Have Affairs

ಮದುವೆಯಾಗಿ ಸುಖವಾಗಿ ದಾಂಪತ್ಯ ಜೀವನ ನಡೆಸಿದ್ದ ವ್ಯಕ್ತಿ ಮತ್ತೊಬ್ಬನ/ಮತ್ತೊಬ್ಬಳ ತೆಕ್ಕೆಗೆ ಜಾರಿದಾಗ ಆ ಸಂಗಾತಿಗೆ ಆಗುವ ನೋವು, ಅವಮಾನ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ, ಇದರಿಂದ ಎರಡು ಕುಟುಂಬದ ನೆಮ್ಮದಿ ಹಾಳಾಗಿ ಹೋಗಿರುತ್ತದೆ. ನಮ್ಮ ಸುತ್ತ-ಮುತ್ತ ಎಷ್ಟೋ ಇಂಥ ಪ್ರಕರಣಗಳನ್ನು ನೋಡುವುದುಂಟು, ಅಲ್ಲದೆ ಎಷ್ಟೂ ಕೊಲೆಗೆ ಈ ಅನೈತಿಕ ಸಂಬಂಧವೇ ಕಾರಣವಾಗಿರುತ್ತದೆ.

ಅನೈತಿಕ ಸಂಬಂಧದಿಂದ ಖುಷಿ, ತೃಪ್ತಿಗಿಂತ ಭಯ, ನೋವು, ಅವಮಾನವೇ ಅಧಿಕವಿದ್ದರೂ ಕೆಲ ವ್ಯಕ್ತಿಗಳು ಏಕೆ ಈ ರೀತಿಯ ಅನೈತಿಕ ಸಂಬಂಧ ಬೆಳೆಸುತ್ತಾರೆ? ಚೆನ್ನಾಗಿದ್ದ ಕುಟುಂಬವನ್ನು ನರಕ ಮಾಡಿ, ಮಕ್ಕಳಿದ್ದರೆ ಅವರ ಭವಿಷ್ಯ ಕೂಡ ಯೋಚಿಸದೇ ವ್ಯಕ್ತಿ ಏಕೆ ತನ್ನ ಸುಖ ಬಯಸಿ ಅನೈತಿಕ ಸಂಬಂಧ ಬೆಳೆಸುತ್ತಾರೆ?

ಅನೈತಿಕ ಸಂಬಂಭ ಬೆಳೆಸುವವರನ್ನು ನೋಡಿದಾಗ ಕೇವಲ ಕಾಮಕ್ಕಾಗಿ ಇವರು ಅಡ್ಡದಾರಿ ಹಿಡಿದಿರುತ್ತಾರೆ ಎಂದು ಭಾವಿಸುತ್ತೇವೆ, ಆದರೆ ಎಲ್ಲಾ ಅನೈತಿಕ ಪ್ರಕರಣಕ್ಕೆ ಲೈಂಗಿಕ ಆಸೆಯೇ ಕಾರಣವಲ್ಲ ಬದಲಿಗೆ ಒಂದು ಭಾವನಾತ್ಮಕ ಬೆಸುಗೆಗಾಗಿ ಅನೈತಿಕ ಸಂಬಂಧದಲ್ಲಿ ಬೀಳುವುದುಂಟು. ಹೀಗೆ ನೋಡಿದರೆ ಒಬ್ಬ ವ್ಯಕ್ತಿ ಮತ್ತೊಂದು ಸಂಬಂಧಕ್ಕೆ ಹಾತೊರೆಯಲು ತನ್ನ ಸಂಗಾತಿಯಲ್ಲಿ ಲೈಂಗಿಕ ಅತೃಪ್ತಿ ಹಾಗೂ ಭಾವನಾತ್ಮಕ ಕೊರತೆಯೇ ಕಾರಣವಾಗಿದೆ.

ಯಾವಾಗ ಲೈಂಗಿಕ ಅತೃಪ್ತಿ ಉಂಟಾಗುವುದು

ಯಾವಾಗ ಲೈಂಗಿಕ ಅತೃಪ್ತಿ ಉಂಟಾಗುವುದು

ಹೆಣ್ಣಾಗಲಿ, ಗಂಡಾಗಲಿ ಮದುವೆಯಾದ ಮೇಲೆ ತನ್ನ ಸಂಗಾತಿಯಿಂದ ದೈಹಿಕ ಸುಖ ಬಯಸುವುದು ಸಹಜ. ಆದರೆ ಅದರಲ್ಲಿ ಕೊರತೆಯಾದರೆ ನಿರಾಸೆಯಾಗುವುದು. ಒಂದು ಸುಮದರ ದಾಂಪತ್ಯಕ್ಕೆ ಲೈಂಗಿಕ ತೃಪ್ತಿ ಮುಖ್ಯ, ಅದಕ್ಕಾಗಿ ತನ್ನ ಸಂಗಾತಿಯ ಮನಸ್ಸನ್ನು ಅರಿಯಬೇಕಾಗುತ್ತದೆ. ಮದುವೆಯಾಗಿ ಕೆಲವು ವರ್ಷಗಳವರೆಗೆ ಚೆನ್ನಾಗಿದ್ದ ದಾಂಪತ್ಯ ಜೀವನ ಕೆಲವರಿಗೆ ಇದ್ದಕ್ಕಿದ್ದಂತೆ ನೀರಸ ಅನಿಸತೊಡಗುತ್ತದೆ. ಅದಕ್ಕೆ ಕಾರಣ ತನ್ನ ಸಂಗಾತಿ ತನ್ನ ಕಡೆ ಗಮನ ನೀಡುತ್ತಿಲ್ಲ ಎಂಬುವುದಾಗಿದೆ. ಕೆಲವರು ವ್ಯವಹಾರ ಕೆಲಸ ಎಂದು ತುಂಬಾ ಬ್ಯುಸಿಯಾಗುತ್ತಾರೆ, ಹೆಂಡತಿ ಜೊತೆ ಸಾಕಷ್ಟು ಗಮನ ನೀಡಲು ಸಾಧ್ಯವಾಗುತ್ತಿಲ್ಲ ಎನ್ನುವ ಬದಲು ಅದಕ್ಕೆ ಮನಸ್ಸು ಮಾಡುತ್ತಿಲ್ಲ ಎಂದು ಹೇಳಬಹುದು. ಆಗ ಹೆಂಡತಿಗೆ ತಾನು ಒಂಟಿ ಅನಿಸಲಾರಂಭಿಸುತ್ತದೆ, ಲೈಂಗಿಕ ಅತೃಪ್ತಿ ಉಂಟಾಗುವುದು, ಅದೇ ರೀತಿ ಹೆಂಡತಿ ಮನೆ ಜವಾಬ್ದಾರಿ, ಮಕ್ಕಳು ಎಂದು ಗಂಡನ ಕಡೆ ಗಮನ ನೀಡುವುದು ಕಡಿಮೆಯಾಗುವುದು, ಆಗ ಗಂಡನಲ್ಲಿ ಲೈಂಗಿಕ ಅತೃಪ್ತಿ ಕಾಡುವುದು.

ಅಂಥ ಸಂದರ್ಭದಲ್ಲಿ ಬೇರೆ ವ್ಯಕ್ತಿ ಇವರಿಗೆ ಸಮೀಪವಾದರೆ ಅನೈತಿಕ ಸಂಬಂಧ ಬೆಳೆಸುತ್ತಾರೆ.

ದಾಂಪತ್ಯದಲ್ಲಿ ನಪುಂಸಕತೆ

ದಾಂಪತ್ಯದಲ್ಲಿ ನಪುಂಸಕತೆ

ಕೆಲವು ವರ್ಷ ಚೆನ್ನಾಗಿ ನಡೆದ ದಾಂಪತ್ಯ ಜೀವನದಲ್ಲಿ ನಪುಂಸಕತೆ ಉಂಟಾದರೆ ಆಗ ಅನೈತಿಕ ಸಂಬಂಧ ಬೆಳೆಸುವ ಸಾಧ್ಯತೆ ಹೆಚ್ಚು. ದಾಂಪತ್ಯ ನಪುಂಸಕತೆ ಅಂದರೆ ಕೆಲವು ವರ್ಷಗಳ ಬಳಿಕ ವ್ಯಕ್ತಿಗೆ ತನ್ನ ಸಂಗಾತಿಯಲ್ಲಿ ಲೈಂಗಿಕ ಭಾವನೆ ಮೂಡದೇ ಇರುವುದು. ಆ ವ್ಯಕ್ತಿಗೆ ಮೇಲೆ ಯಾವುದೇ ಲೈಂಗಿಕ ಆಸೆ ಮೂಡುವುದಿಲ್ಲ, ಹೀಗಾಗಿ ದೈಹಿಕ ಸಂಪರ್ಕದಿಂದ ದೂರ ಸರಿಯುತ್ತಾರೆ. ಆಗ ಮತ್ತೊಂದು ಸಂಬಂಧ ಸಿಕ್ಕಾಗ ಲೈಂಗಿಕ ಆಸಕ್ತಿ ಮೂಡುವುದು.

 ಭಾವನೆಗಳಿಗೆ ಪ್ರತಿಕ್ರಿಯೆ ಇಲ್ಲದಿದ್ದರೆ

ಭಾವನೆಗಳಿಗೆ ಪ್ರತಿಕ್ರಿಯೆ ಇಲ್ಲದಿದ್ದರೆ

ಇನ್ನು ಅನೈತಿಕ ಸಂಬಂಧಕ್ಕೆ ಲೈಂಗಿಕ ಅತೃಪ್ತಿಯೇ ಕಾರಣವೆಂದು ಹೇಳಲಾಗುವುದಿಲ್ಲ. ಕೆಲವೊಮ್ಮೆ ತನ್ನ ಭಾವನೆಗಳಿಗೆ ಸಂಗಾತಿಯಿಂದ ಪ್ರತಿಕ್ರಿಯೆ ದೊರೆಕದೇ ಹೋದಾಗ ತನ್ನ ಆಲೋಚನೆ ಸರಿ ಹೊಂದು, ತನ್ನ ಭಾವನೆಗಳಿಗೆ ಪ್ರತಿಕ್ರಿಯಿಸುವ ವ್ಯಕ್ತಿ ಸಿಕ್ಕಾಗ ಅವರ ಜೊತೆ ಒಡನಾಟ ಬೆಳೆಯುತ್ತದೆ, ಆ ಒಡನಾಟ ಬಿಟ್ಟಿರಲಾರದಷ್ಟು ಅವರನ್ನು ಹತ್ತಿರ ಮಾಡಬಹುದು, ನಂತರ ಅವರಿಬ್ಬರಲ್ಲಿ ಅನೈತಿಕ ಸಂಬಂಧ ಬೆಳೆಯುವುದು

 ಅನೈತಿಕ ಸಂಬಂಧದಿಂದ ಸಂಸಾರ ಹಾಳಾಗದಂತೆ ತಡೆಯುವುದು ಹೇಗೆ?

ಅನೈತಿಕ ಸಂಬಂಧದಿಂದ ಸಂಸಾರ ಹಾಳಾಗದಂತೆ ತಡೆಯುವುದು ಹೇಗೆ?

ಅನೈತಿಕ ಸಂಬಂಧದಲ್ಲಿ ಇರುವ ವ್ಯಕ್ತಿಗೆ ತಾನು ಮಾಡುತ್ತಿರುವ ತಪ್ಪುಗಳನ್ನು ಒಪ್ಪಿಕೊಳ್ಳುವುದು ಕಷ್ಟವಾಗಬಹುದು, ಇಲ್ಲಿ ಸಂಗಾತಿ ತನ್ನ ಸಂಸಾರ ಸರಿಪಡಿಸಲು ಪ್ರಯತ್ನಿಸಬಹುದು. ತನ್ನ ಗಂಡ/ಹೆಂಡತಿ ಬೇರೆಯವರ ಜೊತೆ ಸಮೀಪವಾಗುತ್ತಿದ್ದಾರೆ ಎಂದು ತಿಳಿದಾಗ ಜಗಳವಾಡಿ ಸಮಸ್ಯೆ ದೊಡ್ಡದು ಮಾಡುವ ಬದಲಿಗೆ ಏಕೆ ಹೀಗಾಯ್ತು ಎಂದು ಚಿಂತಿಸಿ, ಅವರ ಜೊತೆ ಮುಕ್ತವಾಗಿ ಮಾತನಾಡಿ, ಆಗ ಅವರು ಆ ಸಂಬಂಧದಿಂದ ಮರಳಬಹುದು.

ಇನ್ನು ದಾಂಪತ್ಯ ಜೀವನದಲ್ಲಿ ಗಂಡ-ಹೆಂಡತಿ ಮನಸ್ಸು ಬಿಚ್ಚಿ ಮಾತನಾಡಬೇಕು, ಸದಾ ಕೊರಗು, ಸಂಕಟ ಹೇಳುವ ಬದಲು ಕೆಲವು ಸಮಯ ರೊಮ್ಯಾಂಟಿಕ್ ಮಾತುಗಳನ್ನಾಡಿ, ಸಂಗಾತಿಯನ್ನು ತೃಪ್ತಿ ಪಡೆಸಲು ಪ್ರಯತ್ನಿಸಿ, ಆಗ ತನ್ನ ಸಂಗಾತಿ ದಾರಿ ತಪ್ಪುವುದನ್ನು ತಡೆಯಬಹುದು.

English summary

Why People Have Affairs and How To Deal with Them in Kannada

Why People Have Affairs and How to Deal with Them, here are relationship tips, take a look,
X
Desktop Bottom Promotion