For Quick Alerts
ALLOW NOTIFICATIONS  
For Daily Alerts

ಮದುವೆ ಮುನ್ನ ಸಂಗಾತಿಯ ಆರೋಗ್ಯ ತಪಾಸಣೆ ಮಾಡಿಸಲೇಬೇಕು, ಏಕೆ?

|

ಮನೆಯಲ್ಲಿ ಹುಡುಗ ಅಥವಾ ಹುಡುಗಿಗೆ ಸೂಕ್ತ ಜೋಡಿಯನ್ನು ಹುಡುಕುವಾಗ ಜಾತಕ, ಮನೆತನ, ಕೆಲಸ, ಆರ್ಥಿಕ ಸ್ಥಿತಿ ಹೀಗೆ ಅನೇಕ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಹುಡುಕುತ್ತಾರೆ. ಇವೆಲ್ಲಾ ಹೊಂದಿಕೆಯಾದರೆ ಮಾತ್ರ ಮದುವೆಗೆ ಹಿರಿಯರು ಒಪ್ಪಿಗೆ ಸೂಚಿಸುತ್ತಾರೆ. ಮದುವೆ ಅಂತ ಬಂದಾಗ ಮುಂದೆ ನಮ್ಮ ಮಗ ಅಥವಾ ಮಗಳು ಚೆನ್ನಾಗಿರಬೇಕೆಂದು ಪ್ರತಿಯೊಂದು ವಿಷಯವನ್ನು ವಿಚಾರಿಸಿ ಮಾಡಿ ಮಾಡುವವರು ಹುಡುಗ-ಹುಡುಗಿಯ ಆರೋಗ್ಯ ತಪಾಸಣೆ ಕೂಡ ಆಗಬೇಕು ಎಂದು ಯೋಚಿಸುವುದೇ ಇಲ್ಲ.

 Premarital Health Checkups

ಇನ್ನು ಹುಡುಗಿ ಮನೆಯವರಾದರೆ ಹುಡುಗನ ಆರೋಗ್ಯ ತಪಾಸಣೆ ಮಾಡಿದ ಸರ್ಟಿಫಿಕೇಟ್‌ ಬೇಕು ಎಂದು ಕೇಳಿದರೆ ಎಲ್ಲಿ ಮದುವೆ ಮುರಿದು ಬೀಳುತ್ತದೆ ಎಂಬ ಭಯದಲ್ಲಿ ಕೇಳುವುದಕ್ಕೇ ಹೋಗುವುದಿಲ್ಲ. ಆದರೆ ಮದುವೆಯಾದ ಮೇಲೆ ಎಷ್ಟೋ ವೈವಾಹಿಕ ಜೀವನ ಮುರಿದು ಬೀಳಲು, ಜೀವನ ಹಾಳಾಗಲು ಮದುವೆಗೆ ಮೊದಲು ಆರೋಗ್ಯ ತಪಾಸಣೆ ಮಾಡಿಸದೇ ಇರುವುದೇ ಪ್ರಮುಖ ಕಾರಣವಾಗಿರುತ್ತದೆ.

ಮದುವೆಯಂದೇ ಬಯಲಾದ ಸತ್ಯ

ಮದುವೆಯಂದೇ ಬಯಲಾದ ಸತ್ಯ

ಇತ್ತೀಚೆಗೆ ಒಬ್ಬ ಟೆಕ್ಕಿಯ ಮದುವೆ ಮುರಿದು ಬಿತ್ತು, ಅದಕ್ಕೆ ಕಾರಣ ತಾಲಿ ಕಟ್ಟಲು ಕೆಲವೇ ಕ್ಷಣಗಳು ಬಾಕಿ ಇರುವಾಗ ಹುಡುಗಿ ಮನೆಯವರಿಗೆ ಹುಡುಗನ ಕೈಗಳಿಗೆ ಸ್ವಾದೀನವಿಲ್ಲವೆಂಬುವುದು ಗೊತ್ತಾಗಿದೆ. ಹುಡುಗ ಪ್ರತಿದಿನ ಇನ್ಸುಲಿನ್ ತೆಗೆದುಕೊಂಡರೆ ಮಾತ್ರ ಅವ ಕೈಗಳು ಜೋತು ಬೀಳದೆ ಇರುತ್ತಿದ್ದೆವು. ಆದರೆ ಮದುವೆ ಗಡಿಬಿಡಿಯಲ್ಲಿದ್ದ ಹುಡುಗನಿಗೆ ಇನ್ಸುಲಿನ್ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದ ಮದುವೆ ಮಂಟಪಕ್ಕೆ ಬಂದು ಇನ್ನೇನು ಹುಡುಗಿಗೆಗೆ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಕೈಗಳು ಸ್ವಾದೀನ ಕಳೆದುಕೊಂಡು ಜೋತು ಬೀಳುತ್ತದೆ. ಹುಡುಗ ಆತನ ಆರೋಗ್ಯ ಸಮಸ್ಯೆ ನನ್ನಿಂದ ಬಚ್ಚಿಟ್ಟಿದ್ದ ಎಂಬ ಕಾರಣಕ್ಕೆ ಹುಡುಗಿ ಆತನನ್ನು ತಿರಸ್ಕರಿಸುತ್ತಾಳೆ.

ಮುರಿದ ವೈವಾಹಿಕ ಜೀವನ

ಮುರಿದ ವೈವಾಹಿಕ ಜೀವನ

ಮತ್ತೊಂದು ಪ್ರಕರಣದಲ್ಲಿ ಆತನಿಗೆ ತುಂಬಾ ಸಮಯದಿಂದ ಮನೆಯವರು ಹುಡುಗಿ ಹುಡುಕುತ್ತಿರುತ್ತಾರೆ. ಕೊನೆಗೂ ಕಂಕಣ ಬಲ ಕೂಡಿ ಬಂದು ಮದುವೆಯಾಗುತ್ತಾರೆ. ಖುಷಿ ಖುಷಿಯಲ್ಲಿ ಮದುವೆಯಾದ ಆತ ಮದುವೆಯಾದ 15ನೇ ದಿನಕ್ಕೆ ಹುಡುಗಿ ಬೇಡ ಎಂದು ಅವಳ ಮನೆಗೆ ಕಳುಹಿಸಿ ವಿಚ್ಚೇಧನ ಕೇಳುತ್ತಾನೆ. ಇಲ್ಲಿ ಆಕೆ ತನ್ನ ಆರೋಗ್ಯದ ಬಗ್ಗೆ ಹೇಳದೆ ಮೋಸ ಮಾಡಿರುತ್ತಾರೆ. ಮದುವೆಯಾದಲ್ಲಿಂದ ಅವರ ನಡುವೆ ಯಾವುದೇ ದೈಹಿಕ ಸಂಬಂಧ ಉಂಟಾಗಿರಲಿಲ್ಲ. ಪ್ರತಿದಿನ ತಲೆನೋವೆಂದು ಮಾತ್ರೆ ಸೇವಿಸುತ್ತಿದ್ದಳು, ಮಾತ್ರೆ ಸೇವಿಸಿದ ಕೆಲವೇ ನಿಮಿಷಗಳಲ್ಲಿ ನಿದ್ದೆಗೆ ಜಾರುತ್ತಿದ್ದಳು. ಪಾಪ ಅವಳಿಗೆ ಸುಸ್ತು, ಮತ್ತೆ ಸರಿ ಹೋಗಬಹುದು ಎಂದು ಸುಮ್ಮನೆಯಾಗುತ್ತಾನೆ. ಆದರೆ ಆಕೆ ಬಚ್ಚಿಟ್ಟು ಕುಡಿಯುತ್ತಿದ್ದ ಮಾತ್ರೆ ಯಾವುದೆಂಬ ಕುತೂಹಲ ಆತನಿಗೆ ಮಾತ್ರವಲ್ಲ, ಆತನ ಮನೆಯವರಿಗೂ ಮೂಡುತ್ತದೆ. ಅವಳ ಬಚ್ಚಿಟ್ಟಿದ್ದ ಕಡೆಯಿಂದ ಮಾತ್ರೆ ತೆಗೆದು ವೈದ್ಯರಲ್ಲಿ ಹೋಗಿ ವಿಚಾರಿಸಿದಾಗ ಆಕೆಗೆ ಮೂರ್ಛೆ ರೋಗದ ಸಮಸ್ಯೆಯಿದೆ. ಅದಕ್ಕೆ ತೆಗೆದುಕೊಳ್ಳುತ್ತಿರುವ ಔಷಧಿ ಎಂಬುವುದು ತಿಳಿಯುತ್ತದೆ. ಅಷ್ಟು ಮಾತ್ರವಲ್ಲ ಆಕೆಗೆ ಒಂದು ದಿನವೂ ಈ ಮಾತ್ರೆಯನ್ನು ತೆಗೆದುಕೊಳ್ಳದೆ ಇರಲು ಸಾಧ್ಯವಾಗುವುದಿಲ್ಲ, ಇದರ ಡೋಸೇಜ್‌ ಅಧಿಕವಾಗಿರುವುದರಿಂದ ಮುಂದೆ ಗರ್ಭಿಣಿಯಾಗಬಾರದು, ಆದರೆ ಮಗುವಿಗೆ ತೊಂದರೆ ಉಂಟಾಗುತ್ತದೆ ಎಂದು ತಿಳಿಸುತ್ತಾರೆ. ಇಲ್ಲಿಯೂ ಅಷ್ಟೇ ಆರೋಗ್ಯ ತಪಾಸಣೆ ಮದುವೆಗೆ ಮೊದಲೇ ಮಾಡಿದ್ದರೆ ಜೀವನ ಹಾಳಾಗುತ್ತಿರಲಿಲ್ಲ.

ಸಂಗಾತಿಯಿಂದ ಹರಡಬಹುದಾದ ಕಾಯಿಲೆಗಳು

ಸಂಗಾತಿಯಿಂದ ಹರಡಬಹುದಾದ ಕಾಯಿಲೆಗಳು

ಇನ್ನು ಹೆಚ್‌ಐವಿ, ಹೆಪಟೈಟಿಸ್ ಬಿ, ಸಿಫಿಲಿಸ್, ಗೊನೊರಿಯಾ ಮತ್ತು ಹರ್ಪಿಸ್ ರೋಗಗಳು ಲೈಂಗಿಕ ಸಂಪರ್ಕದಿಂದ ಸಂಗಾತಿಗೆ ಬರುವ ಸಾಧ್ಯತೆ ಇರುವುದರಿಂದ ಮದುವೆಗೆ ಆರು ತಿಂಗಳು ಇರುವಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ.

ಇನ್ನು ಕೆಲವರಿಗೆ ವಂಶ ಪಾರಂಪರ್ಯವಾಗಿ ಕೆಲವೊಂದು ಸಮಸ್ಯೆಗಳಿರುತ್ತವೆ, ಇವುಗಳನ್ನು ಮುಚ್ಚಿಟ್ಟು ಮದುವೆ ಮಾಡಿದರೆ ಮುಂದೆ ಸಂಸಾರದಲ್ಲಿ ಅನೇಕ ತೊಂದರೆಗಳು ಎದುರಾಗಿ ಗಂಡ-ಹೆಂಡತಿ ಬೇರೆ-ಬೇರೆಯಾಗುವ ಸಂದರ್ಭ ಬರಬಹುದು. ಇನ್ನು ಎಷ್ಟೋ ಪ್ರಕರಣಗಳಲ್ಲಿ ಮದುವೆಯಾದ ಮೇಲೆ ಗಂಡ ನಪುಂಸಕ ಎಂದು ತಿಳಿದು ಬರುತ್ತದೆ. ಆಗ ತನ್ನ ಸಮಸ್ಯೆಯನ್ನು ಬೇರೆಯವರ ಬಳಿ ಹೇಳಿಕೊಳ್ಳಲು ಸಾಧ್ಯವಾಗದೆ ಕೆಲ ಹೆಣ್ಣು ಮಕ್ಕಳು ಕೊರಗಿದರೆ, ಇನ್ನು ಕೆಲವರು ಅಂಥ ಗಂಡನ ಜತೆ ಬಾಳಲು ಸಾಧ್ಯವಾಗದೆ ಆತನಿಂದ ದೂರವಾಗುತ್ತಾರೆ.

ಮದುವೆ ಬಂಧ ಚೆನ್ನಾಗಿರಲು ಆರೋಗ್ಯ ತಪಾಸಣೆ ಮಾಡಿಸಿ

ಮದುವೆ ಬಂಧ ಚೆನ್ನಾಗಿರಲು ಆರೋಗ್ಯ ತಪಾಸಣೆ ಮಾಡಿಸಿ

ಮದುವೆ ಎನ್ನುವುದು ದೈಹಿಕ ಆಸೆಯನ್ನು ತೀರಿಸಲು ಇರುವ ಸಾಮಾಜಿಕ ಬಂಧವಾಗಿದೆ. ಸಂತಾನವನ್ನು ಪಡೆಯಲು ಇರುವ ಪವಿತ್ರವಾದ ಮಾರ್ಗವಾಗಿದೆ. ವೈವಾಹಿಕ ಜೀವನದಲ್ಲಿ ಲೈಂಗಿಕ ತೃಪ್ತಿ ಬಹುಮುಖ್ಯವಾಗಿದ್ದು, ಲೈಂಗಿಕ ಸಮಸ್ಯೆ ಇದ್ದರೆ ಇದರಿಂದ ಸಂಸಾರ ಹಾಳಾಗುವುದು. ಅದೇ ಮದುವೆಗೆ ಮೊದಲೇ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸುವುದರಿಂದ ಅವರ ಸಂತಾನೋತ್ಪತ್ತಿ ಸಾಮಾರ್ಥ್ಯ ಬಗ್ಗೆ ತಿಳಿಯಬಹುದು.

ಆದ್ದರಿಂದ ಮದುವೆಗೆ ಜಾತಕ, ಮನೆತನ, ಆರ್ಥಿಕ ಸ್ಥಿತಿ ಎಷ್ಟು ಮುಖ್ಯ ಎಂದು ಯೋಚಿಸುತ್ತೀರೋ ಅಷ್ಟೇ ಮುಖ್ಯ ಆರೋಗ್ಯ ತಪಾಸಣೆ ಮಾಡಿಸುವುದು ಎಂಬುವುದನ್ನು ನೀವು ಒಪ್ಪುತ್ತೀರಿ ತಾನೆ?

English summary

Why It Is Important Premarital Health Checkups?

While the preparation for one's wedding day is primarily focused on the aspects of horoscope, financial status, marriage venue so many thing, but people never do pre marital health check up, because of that ruin marriage life.
X
Desktop Bottom Promotion