For Quick Alerts
ALLOW NOTIFICATIONS  
For Daily Alerts

ಹನಿಮೂನ್ ಬಳಿಕ ದಂಪತಿಯ ಬದುಕಿನಲ್ಲಿ ಆಗುವ ಬದಲಾವಣೆಗಳಿವು

|

ಮದುವೆಯಾದ ಹೊಸತರಲ್ಲಿ ನವ ಜೋಡಿಗಳು ತಮ್ಮದೇ ಲೋಕದಲ್ಲಿ ಮುಳುಗಿರುತ್ತಾರೆ. ಹೊರಗಡೆ ಹೋಗುವಾಗ ಕೈ-ಕೈ ಜತೆಗೆ ಹಿಡಿದುಕೊಂಡು ಓಡಾಡುವುದು, ಸಾರ್ವಜನಿಕ ಸ್ಥಳವಾದರೂ ಕೂಡ ಒಬ್ಬರಿಗೊಬ್ಬರು ಪಿಸು ಮಾತುಗಳನ್ನಾಡಿ ಮುಸಿ-ಮುಸಿ ನಗುವುದು, ಇನ್ನು ಸ್ವಲ್ಪ ಹೆಚ್ಚೇ ಆಸಕ್ತಿ ತೋರಿ ಡ್ರೆಸ್ಸಿಂಗ್ ಮಾಡಿಕೊಂಡಿರುವುದು ನೋಡಿದಾಗಲೇ ಈ ಜೋಡಿ ಈಗಷ್ಟೇ ಮದುವೆಯಾಗಿದೆ ಎಂದು ತಿಳಿಯುತ್ತದೆ.

ಆ ಜೋಡಿಯ ಕಂಗಳಲ್ಲಿ ಭವಿಷ್ಯದ ಬಗ್ಗೆ ಹಲವಾರು ಕನಸುಗಳಿರುತ್ತದೆ, ಒಬ್ಬರನ್ನೊಬ್ಬರು ಬಿಟ್ಟಿರಲಾರೆವು ಎಂದು ಮನಸ್ಸು ಹಾಗು ದೇಹ ಬಯಸುತ್ತಿರುತ್ತದೆ, ಪ್ರತಿಯೊಂದು ಕ್ಷಣವನ್ನು ರೊಮ್ಯಾಂಟಿಕ್ ಆಗಿ ಕಳೆಯಬೇಕೆಂಬ ಬಯಕೆ ಇರುತ್ತದೆ. ಹನಿಮೂನ್‌ಗೆ ಹೋದಾಗ ಹೊರ ಜಗತ್ತಿನ ಪರಿವೇ ಇಲ್ಲದೆ ತಮ್ಮ ಲೋಕದಲ್ಲಿ ತಾವು ಮುಳುಗಿ ಹೋಗಿರುತ್ತಾರೆ, ಹನಿಮೂನ್ ದಿನಗಳ ಒಂದೊಂದು ಕ್ಷಣವನ್ನು ಮಧುರವಾಗಿಸಲು ಪ್ರಯತ್ನಿಸುತ್ತಾರೆ, ಒಬ್ಬರನ್ನೊಬ್ಬರು ಅಲಂಗಿಸಿಕೊಂಡು ನಕ್ಷತ್ರಗಳನ್ನು ಎಣಿಸುತ್ತಾ ತಮ್ಮ ಸಂಜೆಯನ್ನು ಮತ್ತಷ್ಟು ರೊಮ್ಯಾಂಟಿಕ್ ಆಗಿ ಕಳೆಯಲು ಪ್ರಯತ್ನ ಮಾಡುತ್ತಾರೆ.

honeymoon

ಹನಿಮೂನ್ ಕಳೆದು ಸ್ವಲ್ಪ ದಿನಗಳಾಗುತ್ತಿದ್ದಂತೆ ಇಬ್ಬರ ನಡುವಳಿಕೆಯಲ್ಲೂ ಸಾಕಷ್ಟು ಬದಲಾವಣೆಗಳಾಗಿರುತ್ತವೆ. ಈ ಬದಲಾವಣೆಗಳೇನು ಬಯಸಿ ಆಗುವುದಿಲ್ಲ. ಮನೆ ಜವಾಬ್ದಾರಿ, ಆಫೀಸ್ ಕೆಲಸದ ಒತ್ತಡ ಅವರಿಬ್ಬರನ್ನು ಬದಲಾಯಿಸಿರುತ್ತದೆ. ಇಲ್ಲಿ ಹನಿಮೂನ್ ಬಳಿಕ ಜೋಡಿಗಳ ಬದುಕಿನಲ್ಲಿ ಆಗುವಂಥ ಸಹಜ ಬದಲಾವಣೆಗಳ ಬಗ್ಗೆ ಹೇಳಿದ್ದೇವೆ, ನೀವು ಮದುವೆಯಾಗಿದ್ದರೆ ಈ ಬದಲಾವಣೆ ನಿಮ್ಮ ಅನುಭವಕ್ಕೂ ಬಂದಿರಬಹುದಲ್ವಾ?

ರೊಮ್ಯಾನ್ಸ್ ಕಡಿಮೆಯಾಗುವುದು

ರೊಮ್ಯಾನ್ಸ್ ಕಡಿಮೆಯಾಗುವುದು

ಮದುವೆಯಾದ ಹೊಸತರಲ್ಲಿದ್ದ ರೊಮ್ಯಾನ್ಸ್, ಪಿಸುಮಾತು ಕ್ರಮೇಣ ಕಡಿಮೆಯಾಗುವುದು. ಮೊದಲೆಲ್ಲಾ ಏಕಾಂತದ ಕ್ಷಣಗಳಲ್ಲಿ ಅಪ್ಪುಗೆಯ ಬಿಸಿಯುಸಿರಿನಲ್ಲಿ ಕರಗುತ್ತಿದ್ದವರು, ಆದರೆ ದಿನಗಳು ಕಳೆದಂತೆ ವರ್ಷಗಳು ಉರುಳಿದಂತೆ ಏಕಾಂತದ ಸಮಯದ್ಲೂ ಜವಾಬ್ದಾರಿಯದ್ದೇ ಚಿಂತೆ ಕಾಡುತ್ತಿರುತ್ತದೆ. ಮೊದಲೆಲ್ಲಾ ಚಿನ್ನ, ರನ್ನ ಅಂತ ಕರೆಯುತ್ತಿದ್ದ ಕರೆಗಳು ಮಾಯವಾಗಿರುತ್ತದೆ. ಕೆಲವೊಂದು ದಂಪತಿಗಳಲ್ಲಿ ಕೆಲಸದ ಒತ್ತಡದ ನಡುವೆ ದೈಹಿಕ ಸಂಪರ್ಕ ಕಡಿಮೆಯಾಗುವುದು.

ಬದಲಾದ ಪರಿಸ್ಥಿತಿಗೆ ಇಬ್ಬರು ಹೊಂದಿಕೊಂಡು ಹೋದರೆ ಸಂಸಾರದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ, ಒಬ್ಬರಲ್ಲಿ ಒಬ್ಬರಿಗೆ ಅಸಮಧಾನ ಇದ್ದರೆ, ಲೈಂಗಿಕ ಅತೃಪ್ತಿ ಇದ್ದರೆ ಸಂಸಾರದಲ್ಲಿ ಜಗಳ ಉಂಟಾಗುವುದು.

ಹನಿಮೂನ್‌ ನಂತರ ತುಂಬಾ ಪ್ರಾಮಾಣಿಕರಾಗುತ್ತಾರೆ

ಹನಿಮೂನ್‌ ನಂತರ ತುಂಬಾ ಪ್ರಾಮಾಣಿಕರಾಗುತ್ತಾರೆ

ಮೊದಲೆಲ್ಲಾ ಒಬ್ಬರಿಗೊಬ್ಬರು ಮೆಚ್ಚಿಸಲು ಪ್ರಯತ್ನಿಸುವಾಗ ತಾವು ಇಲ್ಲದ್ದನ್ನು ಬಿಂಬಿಸುವ ಪ್ರಯತ್ನ ಮಾಡುತ್ತಾರೆ. ಉದಾಹರಣೆಗೆ ಒಬ್ಬರಿಗೆ ಸಿನಿಮಾ ನೋಡಲು ಇಷ್ಟವಿದ್ದು, ಮತ್ತೊಬ್ಬರಿಗೆ ಸಿನಿಮಾ ನೊಡುವ ಅಸಕ್ತಿಯಿದ್ದರೆ ಅಯ್ಯೋ ಆಕೆ/ಆತನ ಮನಸ್ಸಿಗೆ ನೋವಾಗುತ್ತದೆ ಎಂದು ಇಷ್ಟವಿಲ್ಲದಿದ್ದರೂ ಸಿನಿಮಾ ನೋಡುತ್ತಾರೆ. ಅದರೆ ನಂತರ ನನಗೆ ಸಿನಿಮಾ ನೊಡಲು ಇಷ್ಟವಿಲ್ಲ ಎಂದು ಪ್ರಾಮಾಣಿಕವಾಗಿ ಹೇಳುತ್ತಾರೆ. ಮದುವೆಯಾದ ಸ್ವಲ್ಪ ದಿನಗಳಲ್ಲಿ ತಮ್ಮ ಸಂಗಾತಿಯ ಗುಣ ಅರ್ಥವಾಗಿರುತ್ತದೆ, ಅದ್ದರಿಂದ ಅವರ ಮನಸ್ಸು ಗೆಲ್ಲಲು ತುಂಬಾ ಚಿಂತೆ ಮಾಡುವ ಅಗ್ಯತ ಬೀಳುವುದಿಲ್ಲ. ಒಬ್ಬರ ಗುಣಕ್ಕೆ ಮತ್ತೊಬ್ಬರು ಹೊಂದಿಕೊಂಡು ಹೋಗುವ ಪ್ರಯತ್ನ ಮಾಡುತ್ತಾರೆ. ಹೀಗೆ ಮಾಡಿದರನೇ ಏಳು ಬೀಳಿನ ಸಂಸಾರದಲ್ಲಿ ಶಾಂತಿ ನೆಲೆಸಲು ಸಾಧ್ಯ.

 ಮೆಸೇಜ್, ಫೋನ್‌ ಕಾಲ್‌ಗಳು ಕಡಿಮೆಯಾಗುವುದು

ಮೆಸೇಜ್, ಫೋನ್‌ ಕಾಲ್‌ಗಳು ಕಡಿಮೆಯಾಗುವುದು

ಮದುವೆಯಾಗಿ ಸ್ವಲ್ಪ ತಿಂಗಳು ಕಳೆದ ಮೇಲೆ ಹನಿಮೂನ್ ಬದುಕಿನಲ್ಲಿ ಕಳೆದ ಕ್ಷಣಗಳು ಮತ್ತೆ ಬೇಕೆಂದು ಬಯಸುವುದೇ ದೊಡ್ಡ ತಪ್ಪು. ಏಕೆಂದರೆ ನಿಮ್ಮ ಸಂಗಾತಿಗೆ ಸಾಕಷ್ಟು ಜವಾಬ್ದಾರಿಗಳಿರುತ್ತದೆ, ಅವುಗಳ ಮಧ್ಯ 5 ನಿಮಿಷಕ್ಕೆ ಲವ್‌ ಯೂ, ಮಿಸ್‌ ಯೂ ಎಂದು ಮೆಸೇಜ್ ಮಾಡಲು ಸಾಧ್ಯವಾಗುವುದಿಲ್ಲ. ಮೊದಲೆಲ್ಲಾ ಗಂಟೆಗೆ 2-3 ಬಾರಿ ಬರುತ್ತಿದ್ದ ಕರೆಗಳು ನಂತರ ದಿನದಲ್ಲಿ 2-3 ಬಾರಿಗೆ ಸೀಮೀತವಾಗಿರುತ್ತದೆ. ಹೀಗೆ ಕರೆ ಬಂದಾಗಲೂ ಹೆಚ್ಚೇನು ಮಾತುಗಳು ಇರುವುದಿಲ್ಲ.

ಆದರೆ ಈ ಹಂತದಲ್ಲಿ ಇಬ್ಬರಲ್ಲಿ ಒಬ್ಬರಿಗೆ ನನ್ನ ಸಂಗಾತಿ ನನ್ನನ್ನು ಮೊದಲಿನಷ್ಟು ಪ್ರೀತಿಸುತ್ತಿಲ್ಲ ಅಂತ ಅನಿಸಿದರೆ ಕಷ್ಟ. ಇಬ್ಬರು ಬ್ಯುಸಿಯಾದರೆ ಆ ಸಮಸ್ಯೆ ಇರುವುದಿಲ್ಲ. ಒಂದು ವೇಳೆ ನಿಮ್ಮ ಸಂಗಾತಿಯಲ್ಲಿ ನೀವು ಅವರನ್ನು ಈಗ ತುಂಬಾ ಪ್ರೀತಿಸುತ್ತಿಲ್ಲ ಎಮದು ಅನಿಸಿದರೆ ನೈಜ ಸ್ಥಿತಿ ತಿಳಿಸಿ, ಅವರನ್ನು ನೀವು ಮೊದಲಿನಷ್ಟೇ ಪ್ರೀತಿಸುತ್ತಿರುವುದಾಗಿ ಮನವರಿಕೆ ಮಾಡಿ.

 ಅವರ ದುಡ್ಡಿನಲ್ಲಿ ಖರ್ಚು ಮಾಡಲು ಯೋಚಿಸುವುದಿಲ್ಲ

ಅವರ ದುಡ್ಡಿನಲ್ಲಿ ಖರ್ಚು ಮಾಡಲು ಯೋಚಿಸುವುದಿಲ್ಲ

ಮದುವೆಯಾದ ಹೊಸತರಲ್ಲಿ ಏನಾದರು ಶಾಪಿಂಗ್ ಮಾಡುವಾಗೂ ನಾನು ಇಷ್ಟು ಕೊಂಡು-ಕೊಂಡರೆ ಅವರೇನು ಅಂದುಕೊಳ್ಳುತ್ತಾರೋ ಎಂಬ ಮುಜುಗರ ಸಾಮಾನ್ಯವಾಗಿ ಹೆಣ್ಮಕ್ಕಳಲ್ಲಿ ಇರುತ್ತದೆ, ಅದರೆ ನಂತರ ದಿನಗಳಲ್ಲಿ ಅವುಗಳು ಸಂಪೂರ್ಣ ಮರೆಯಾಗಿ ನನಗೆ ಇದನ್ನು ಕೊಡಿಸು, ನನಗೆ ಶಾಪಿಂಗ್‌ಗೆ ಹಣಬೇಕು ಎಂದು ಕೇಳುವಷ್ಟು ಆತ್ಮೀಯತೆ ಬೆಳೆದಿರುತ್ತದೆ. ದುಡ್ಡಿನ ವಿಚಾರದಲ್ಲಿ ನಂದು-ನಿಂದು ಅಮತ ಇರುವುದಿಲ್ಲ, ಇಬ್ಬರು ಒಟ್ಟು ಸೇರಿ ತಮ್ಮ ಹಣಕಾಸು ನಿರ್ವಹಣೆ ಹೇಗಿರಬೇಕು ಎಂದು ಯೋಜನೆ ರೂಪಿಸುತ್ತಾರೆ.

ನಿಮ್ಮ ಸಂಗಾತಿಗಾಗಿ ಡ್ರೆಸ್ಸಿಂಗ್‌ ಮಾಡುವುದು ಕಡಿಮೆಯಾಗುವುದು

ನಿಮ್ಮ ಸಂಗಾತಿಗಾಗಿ ಡ್ರೆಸ್ಸಿಂಗ್‌ ಮಾಡುವುದು ಕಡಿಮೆಯಾಗುವುದು

ಹನಿಮೂನ್ ಸಮಯವನ್ನು ನೆನಸಿಕೊಳ್ಳಿ, ಡ್ರೆಸ್ಸಿಂಗ್‌ ಬಗ್ಗೆ ಎಷ್ಟೊಂದು ತಲೆ ಕೆಡಿಸಿಕೊಂಡಿರುತ್ತೀರಿ. ಹನಿಮೂನ್‌ನಲ್ಲಿ ಏನು ಧರಿಸಬೇಕೆಂದು ಮೊದಲೇ ಶಾಪಿಂಗ್ ಮಾಡಿರುತ್ತೀರಿ. ಈ ಡ್ರೆಸ್‌ ಹಾಕಿದರೆ ಚೆನ್ನಾಗಿ ಕಾಣುತ್ತೀನಾ ಅಂತ ನಿಮ್ಮ ಸಂಗಾತಿ ಬಳಿ ಅಭಿಪ್ರಾಯವನ್ನು ಕೇಳಿರುತ್ತೀರಿ, ಆದರೆ ನಂತರ ದಿನಗಳಲ್ಲಿ ಸಂಗಾತಿ ಮೆಚ್ಚುವಂಥ ಡ್ರೆಸ್‌ ಹಾಕಿದರೂ ಪ್ರತಿಯೊಂದು ಡ್ರೆಸ್ಸಿಂಗ್‌ ಅನ್ನು ಸಂಗಾತಿ ಮೆಚ್ಚಿಕೊಳ್ಳಲಿ ಎಂದು ಮಾಡಲ್ಲ, ನೀವು ಆಕರ್ಷಕವಾಗಿ ಕಾಣಬೇಕೆಂದು ಮಾಡುತ್ತೀರಿ, ಹೌದು ತಾನೆ?

English summary

What Couples Do When They Get Past The Honeymoon Stage

After marriage once the honeymoon period over, couple get to know each other so they starts growing comfortable in each other’s company and they end up doing things differently than what they did in their honeymoon period. Here we have talked about how each couple change after honeymoon period.
Story first published: Monday, November 4, 2019, 16:39 [IST]
X
Desktop Bottom Promotion