For Quick Alerts
ALLOW NOTIFICATIONS  
For Daily Alerts

ದಂಪತಿ ಹೀಗೆ ವರ್ತಿಸಿದರೆ ಆ ಸಂಬಂಧ ಪ್ರಬುದ್ಧವಾಗಿರುತ್ತೆ

|

ಸತಿ-ಪತಿಯರ ನಡುವಿನ ಬಾಂಧವ್ಯ ನಿಜಕ್ಕೂ ಒಂದು ರೋಚಕ ಸಂಗತಿಯೇ ಸರಿ! ಎಲ್ಲೋ ಹುಟ್ಟಿ ಬೆಳೆದ ಗಂಡು, ಇನ್ನೆಲ್ಲೋ ಹುಟ್ಟಿ ಬೆಳೆದ ಹೆಣ್ಣು - ಈ ಇಬ್ಬರೂ ದಾಂಪತ್ಯದ ಬಂಧನದಲ್ಲಿ ಸಿಲುಕಿಕೊಳ್ಳುವುದು ವಿಸ್ಮಯವಲ್ಲದೇ ಮತ್ತೇನು ?!! ಇಬ್ಬರ ಹಿನ್ನೆಲೆಗಳು, ನಂಬಿಕೆಗಳು, ಅಭಿಪ್ರಾಯಗಳು, ಇಷ್ಟಾನಿಷ್ಟಗಳು ಎಲ್ಲವೂ ಬೇರೆ ಬೇರೆ ಆಗಿರುವಾಗ!! ಆ ಬಾಂಧವ್ಯಕ್ಕೆ ಒಳಗಾಗಿರೋ ಸತಿಪತಿಯರು, ಅಂತಹ ಬಾಂಧವ್ಯವನ್ನ ಚಿರಕಾಲ ಗಟ್ಟಿಯಾಗಿ ಇರಿಸಿಕೊಳ್ಳೋದಕ್ಕಾಗಿ ತಮ್ಮ ತಮ್ಮ ಕೊಡುಗೆಗಳೇನು ಅನ್ನೋದನ್ನ ಆಗಾಗ್ಗೆ ಪರಿಶೀಲಿಸಿಕೊಳ್ಳುತ್ತಲೇ ಇರಬೇಕಾಗುತ್ತೆ ಹಾಗೂ ಜೊತೆಗೆ ಅವರಿಬ್ಬರು ಪರಸ್ಪರ ಹಂಚಿಕೊಳ್ಳುವ ಪ್ರೀತಿಗಾಗಿ ತಮ್ಮನ್ನ ತಾವು ಸಮರ್ಪಿಸಿಕೊಳ್ಳೋದಕ್ಕೆ ಮುಂದಾಗಲೇಬೇಕಾಗುತ್ತೆ. ಇಲ್ಲವಾದಲ್ಲಿ ಆ ಬಾಂಧವ್ಯದ ಬೆಸುಗೆಯನ್ನ ಬೆಳಗೋ ಹಾಗೆ ಇಟ್ಟುಕೊಳ್ಳೋದು ದೊಡ್ಡ ಸವಾಲೇ ಆಗಿಬಿಡುತ್ತೆ!!

ಒಂದು ಆರೋಗ್ಯಯುತ ಬಾಂಧವ್ಯಕ್ಕೆ, ಆ ಬಾಂಧವ್ಯದಲ್ಲಿ ಸೇರಿರುವ ಪ್ರತಿಯೊಬ್ಬರೂ ಜವಾಬ್ದಾರರೇ ಆಗಿರುತ್ತಾರೆ. ಈ ವಿಚಾರದಲ್ಲಿ ಆತನು/ಆಕೆಯು ಬಾಂಧವ್ಯದ ಕುರಿತಾಗಿ ಅದೆಷ್ಟು ಪ್ರೌಢರಾಗಿದ್ದಾರೆ ಅನ್ನೋದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತೆ.

ಬಾಂಧವ್ಯದ ಕುರಿತು ಇನ್ನಷ್ಟು ಪ್ರೌಢರಾಗೋದು ಹೇಗೆ ? ಅದಕ್ಕಾಗಿ ನಾವಿಲ್ಲಿ ಐದು ಅಮೂಲ್ಯ ಸಲಹೆಗಳನ್ನ ನಿಮ್ಮ ಮುಂದಿಡುತ್ತಿದ್ದೇವೆ. ಅವುಗಳನ್ನ ನೀವು ನಿಮ್ಮ ದಾಂಪತ್ಯ ಜೀವನದಲ್ಲಿ ಎಷ್ಟರಮಟ್ಟಿಗೆ ಅಳವಡಿಸಿಕೊಂಡಿರುವಿರಿ ಅನ್ನೋದನ್ನ ಖುದ್ದು ನೀವೇ ಪರಿಶೀಲಿಸಿಕೊಳ್ಳಿ:

1. ಕೃತಜ್ಞತೆಯನ್ನ ವ್ಯಕ್ತಪಡಿಸೋಕೆ ಹಿಂಜರಿಯೋದು ಬೇಡ

1. ಕೃತಜ್ಞತೆಯನ್ನ ವ್ಯಕ್ತಪಡಿಸೋಕೆ ಹಿಂಜರಿಯೋದು ಬೇಡ

ನಿಮ್ಮ ಕಾಳಜಿಯ ಕುರಿತಾಗಿ ನಿಮ್ಮ ಸಂಗಾತಿಯು ಮಾಡುವ ಅದೆಷ್ಟೇ ಚಿಕ್ಕ ಕೆಲಸವೇ ಆಗಿರಲೀ, ಅದರ ಕುರಿತು ನೀವೊಂದು ಮೆಚ್ಚಿಗೆಯನ್ನ ಪ್ರಕಟಿಸದರೆ, ನಿಮ್ಮಿಂದ ಅಂತಹ ಒಂದು ಕ್ರಿಯೆ, ನಿಮ್ಮಿಬ್ಬರ ನಡುವಿನ ಪ್ರೀತಿವಿಶ್ವಾಸಗಳನ್ನ ಚಿರಕಾಲ ಜೀವಂತವಾಗಿಡುತ್ತದೆ. ಅದಕ್ಕೆ ಕಾರಣವೇನೆಂದರೆ, ನಿಮ್ಮ ಸಂಗಾತಿಯು ನಿಮ್ಮ ಕುರಿತಾಗಿ ಏನನ್ನು ಮಾಡಿದರೋ ಅದನ್ನ ನೀವು ಅಮೂಲ್ಯವಾದದ್ದೆಂದು ಭಾವಿಸಿರುವಿರಿ ಅನ್ನೋದನ್ನ ಅದು ತೋರಿಸುತ್ತದೆ.

2. ತಪ್ಪುಗಳನ್ನ ಒಪ್ಪಿಕೊಳ್ಳಿರಿ

2. ತಪ್ಪುಗಳನ್ನ ಒಪ್ಪಿಕೊಳ್ಳಿರಿ

ಯಾರೊಬ್ಬರೂ ಪರಿಪೂರ್ಣರಲ್ಲ ಅಂದಮೇಲೆ ತಪ್ಪುಗಳು ಎಲ್ಲರಿಂದಲೂ ಆಗುತ್ತವೆ. ಹಾಗೊಂದು ವೇಳೆ ನಿಮ್ಮಿಂದೇನಾದರೂ ಅಕಸ್ಮಾತಾಗಿ ತಪ್ಪಾಗಿ ಹೋದಲ್ಲಿ, ಅದನ್ನ ಒಪ್ಪಿಕೊಳ್ಳೋ ಮನಸ್ಥಿತಿ ನಿಮ್ಮದಾಗಿರಬೇಕು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅದಕ್ಕಾಗಿ "ಸ್ಸಾರಿ" ಅಂತಾ ಒಂದು ಮಾತನ್ನ ಹೇಳೋದಿದೆಯಲ್ಲ, ಅದು ನಿಮ್ಮ ಪ್ರೌಢತೆಯ ಮಟ್ಟವನ್ನ ತೋರಿಸುತ್ತದೆ. ನೀವೇನು ಮಾಡಬಹುದಿತ್ತು ಅನ್ನೋದನ್ನೆಲ್ಲ ತಿಳಿದುಕೊಳ್ಳೋದಕ್ಕಿಂತಲೂ ನಿಮ್ಮ ನಡುವಿನ ಸಂಬಂಧ ತುಂಬಾನೇ ಮುಖ್ಯ ಅನ್ನೋ ವಿಚಾರ ನಿಮಗೆ ಮನದಟ್ಟಾಗಬೇಕು.

3. ವಿನಯಶೀಲರಾಗಿರುವುದರತ್ತ ಹೆಚ್ಚಿನ ಗಮನವಿರಲಿ

3. ವಿನಯಶೀಲರಾಗಿರುವುದರತ್ತ ಹೆಚ್ಚಿನ ಗಮನವಿರಲಿ

ಒಂದು ಸಂತುಷ್ಟವಾದ ಹಾಗೂ ಆರೋಗ್ಯಕರವಾದ ಸಂಬಂಧವನ್ನ ಅಹಂನಿಂದ ಕಟ್ಟೋದಕ್ಕೆ ಆಗೋಲ್ಲ. ಒಂದು ಯಶಸ್ವೀ ದಾಂಪತ್ಯ ಜೀವನಕ್ಕೆ ವಿನಯಶೀಲ ಗುಣವಿರುವುದು ತುಂಬಾನೇ ಮುಖ್ಯ ಹಾಗೂ ಅದರ ಕೊಡುಗೆ ತುಂಬಾನೇ ಮಹತ್ವದ್ದು. ಈ ವಿನಯಸಂಪನ್ನತೆ ಸತಿ ಅಥವಾ ಪತಿಯ ಪ್ರೌಢತೆಯನ್ನ ತೋರಿಸುತ್ತೆ ಹಾಗೂ ಜೊತೆಗೆ ಸಂಗಾತಿಗಳ ನಡುವೆ ಗೌರವ, ಬೆಂಬಲ, ಹಾಗೂ ಕಾಳಜಿಯನ್ನೂ ಕಾಪಿಡುತ್ತೆ.

4. ನಿಮ್ಮ ಸಂಗಾತಿಯ ಪಾಲಿಗೆ ನೀವೋರ್ವ ಅತ್ಯುತ್ತಮ ಗೆಳೆಯ/ಗೆಳತಿ ಆಗಿರಿ

4. ನಿಮ್ಮ ಸಂಗಾತಿಯ ಪಾಲಿಗೆ ನೀವೋರ್ವ ಅತ್ಯುತ್ತಮ ಗೆಳೆಯ/ಗೆಳತಿ ಆಗಿರಿ

ಜೀವನದುದ್ದಕ್ಕೂ ನಿಮ್ಮ ಜೊತೆಗಾರ/ಜೊತೆಗಾತಿಯಾಗಿ ಬರಬೇಕೆಂದು ಬಯಸಿಬಂದವನು/ಬಯಸಿಬಂದವಳು ನಿಮ್ಮ ಸಂಗಾತಿ. ನಿಮ್ಮ ಭಾವನೆಗಳಿಗೆ ನಿಮ್ಮ ಸಂಗಾತಿಯು ಬೆಲೆ ಕೊಡಬೇಕೆಂದು ನೀವು ಬಯಸುವಿರಾದರೆ, ಮೊದಲು ನೀವು ನಿಮ್ಮ ಸಂಗಾತಿಯ ಮನದ ಮಾತುಗಳಿಗೆ ಕಿವಿಯಾಗಿ ಹಾಗೂ ನಿಮ್ಮದ್ದಕ್ಕಿಂತಲೂ ಮೊದಲು ಆತನ/ಆಕೆಯ ಅವಶ್ಯಕತೆಗಳಿಗೆ ಆದ್ಯತೆ ನೀಡಿ.

5. ನೀವಾಡೋ ಮಾತುಗಳ ಶಕ್ತಿಯ ಬಗ್ಗೆ ಅವಗಣನೆ ಬೇಡ

5. ನೀವಾಡೋ ಮಾತುಗಳ ಶಕ್ತಿಯ ಬಗ್ಗೆ ಅವಗಣನೆ ಬೇಡ

ಮಾತಿಗಿರುವ ಶಕ್ತಿಯೇ ಅಂತಹದು!! ಅದು ನಿಮ್ಮ ಸಂಗಾತಿಯನ್ನ ನಗಿಸಲೂ ಬಲ್ಲದು, ಅಳಿಸಲೂ ಬಲ್ಲದು. ಹಾಗಾಗಿ ನಿಮ್ಮ ಸಂಗಾತಿಯೊಡನೆ ಮಾತನಾಡುವಾಗ ಮಾತಿನ ಮೇಲೆ ನಿಗಾ ಇರಲಿ. ಸಕಾರಾತ್ಮಕವಾದ ಮಾತನ್ನಾಡುವುದು, ಸಂಬಂಧದಲ್ಲಿ ನಿಮ್ಮ ಪ್ರೌಢತೆಯ ಮಟ್ಟವನ್ನ ತೋರಿಸುತ್ತೆ.

English summary

Tips On How to Be More Mature in a Relationship in kannada

Tips on How to Be More Mature in a Relationship in kannada, Read on,
X
Desktop Bottom Promotion