For Quick Alerts
ALLOW NOTIFICATIONS  
For Daily Alerts

ಬ್ರೇಕಪ್ ಅಥವಾ ವಿಚ್ಛೇದನ: ಈ ಪರಿಸ್ಥಿತಿಯನ್ನು ಎದುರಿಸುವುದು ಹೇಗೆ?

|

ಲವ್‌ ಬ್ರೇಕಪ್‌, ವಿಚ್ಛೇದನ ಇವೆಲ್ಲಾ ನೀಡುವ ನೋವು ಇದೆಯೆಲ್ಲಾ ಅದು ಕೊಲ್ಲದೇ ಕೊಲ್ಲುವಂಥದ್ದು. ಒಂದು ಜೋಡಿ ವಿಚ್ಛೇದನ ಪಡೆದುಕೊಂಡರೆ ಅದರಲ್ಲಿ ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಮೋಸ, ಅನ್ಯಾಯವಾಗಿರುತ್ತದೆ, ಈ ವ್ಯಕ್ತಿ -ಆ ವ್ಯಕ್ತಿಯನ್ನು ಅತಿಯಾಗಿ ನಂಬಿರುತ್ತಾನೆ/ಳೆ, ಆದರೆ ಆ ಪ್ರೀತಿ, ನಂಬಿಕೆಗೆ ಆಘಾತವಾಗುವಂತೆ ಸಂಗಾತಿ ನಡೆದುಕೊಂಡಿರುತ್ತಾನೆ/ಳೆ.

Dealing With Breakups

ಯಾರು ಮೋಸ ಮಾಡಿದರೋ ಅಥವಾ ಬ್ರೇಕಪ್‌ಗೆ ಕಾರಣವಾದರೋ ಅವರಿಗೆ ಈ ಡಿವೋರ್ಸ್ ಅಥವಾ ಲವ್‌ ಬ್ರೇಕಪ್ ದೊಡ್ಡ ವಿಷಯವಾಗುವುದಿಲ್ಲ, ಏಕೆಂದರೆ ಅವರಿಗೆ ಬೇರೆಯೆಡೆಗೆ ಆಕರ್ಷಣೆ ಇರುತ್ತದೆ. ಆದ್ದರಿಂದ ಅವರು ಹೆಚ್ಚು ತಲೆ ಕೆಡಿಸುವುದಿಲ್ಲ, ಆದರೆ ನಾನು ತುಂಬಾ ಪ್ರೀತಿಸಿ, ನಂಬಿದ ವ್ಯಕ್ತಿ ಜೊತೆ ಇನ್ನು ಹೊಂದಿಕೊಂಡು ಹೋಗಲು ಸಾಧ್ಯವಿಲ್ಲ ಎಂದು ಬೇರ್ಪಟ್ಟಿದ್ದರೆ ಅವರಿಗೆ ಆ ನೋವು ಸದಾ ಕಾಡುವುದು.

ಅದರಲ್ಲೂ ಬ್ರೇಕಪ್ ಆದಾಗ ಅಥವಾ ವಿಚ್ಛೇದನ ಆದಾಗ ಮೊದಲಿಗೆ ಈ ಸಮಾಜವನ್ನು ಎದುರಿಸುವುದು ಹೇಗೆ ಎಂಬ ಪ್ರಶ್ನೆ, ಭಯ ಅವರಲ್ಲಿರುತ್ತದೆ. ಆಪ್ತರು, ಸ್ನೇಹಿತರು, ನೆಂಟರಿಷ್ಟರು ಕೇಳುವ ನೂರಾರು ಪ್ರಶ್ನೆಗಳಿಗೆ ಉತ್ತರ ಹೇಳಬೇಕಾಗುತ್ತದೆ, ಜೊತೆಗೆ ಹಳೆಯ ನೆನಪುಗಳು ತುಂಬಾ ಕಹಿಯಾಗಿ ಕಾಡಲಾರಂಭಿಸುತ್ತದೆ.

ಬ್ರೇಕಪ್ ಅಥವಾ ವಿಚ್ಛೇದನದ ಬಳಿಕ

ಬ್ರೇಕಪ್ ಅಥವಾ ವಿಚ್ಛೇದನದ ಬಳಿಕ

ಸಂಗಾತಿಯಿಂದ ಬೇರ್ಪಟ್ಟಾಗ ಅಥವಾ ಪ್ರೀತಿಯಲ್ಲಿ ಸೋತಾಗ ಕೆಲವರು ತುಂಬಾನೇ ಕುಗ್ಗಿ ಹೋಗುತ್ತಾರೆ, ಅದರಿಂದಾಗಿ ಖಿನ್ನತೆಗೆ ಜಾರುತ್ತಾರೆ. ಆದರೆ ಒಂದು ವಿಷಯ ಯೋಚಿಸಿ ನೋಡಿ ನಿಮ್ಮ ಜೊತೆ ಇರಲು ಯೋಗ್ಯತೆ ಇಲ್ಲದ ವ್ಯಕ್ತಿಗಾಗಿ ನೀವ್ಯಾಕೆ ನಿಮ್ಮ ಜೀವನ ಹಾಳು ಮಾಡಬೇಕು? ಅವರು ತಮಗಾಗಿ ಬೇರೆ ದಾರಿ ಕಂಡು ಕೊಂಡಿರುವಾಗ ನಿಮ್ಮ ಜೀವನ ಹಾಳು ಮಾಡುವುದರಲ್ಲಿ ಅರ್ಥವೇನಿದೆ? ಹಳೆಯದೆಲ್ಲಾ ಮರೆತು ನಿಮ್ಮದೇ ಆದ ಸುಂದರವಾದ ಜೀವನ ಕಟ್ಟಿಕೊಳ್ಳಲು ಪ್ರಯತ್ನಿಸಬೇಕು.

ಬ್ರೇಕಪ್ ಅಥವಾ ಡಿವೋರ್ಸ್‌ ಆದಾಗ ಖಿನ್ನತೆಯಿಂದ ಕೂರುವ ಬದಲಿಗೆ ಈ ಟಿಪ್ಸ್ ಅನುಸರಿಸಿದರೆ ಮನಸ್ಸಿನ ಭಾರ ಕಡಿಮೆಯಾಗುವುದು, ಜೊತೆಗೆ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚುವುದು:

 ಟ್ರಾವೆಲ್ ಮಾಡಿ

ಟ್ರಾವೆಲ್ ಮಾಡಿ

ನಿಮಗೆ ಇಷ್ಟವಾದ ಸ್ಥಳಗಳಿಗೆ ಹೋಗಿ ಬನ್ನಿ... ಸೋಲೋ ಹೋಗುವ ಬದಲಿಗೆ ಫ್ರೆಂಡ್ಸ್‌ ಜೊತೆಗೆ ಹೋಗಿ ಬನ್ನಿ, ಅದರಲ್ಲೂ ನಿಮ್ಮ ಮಾಜಿ ಜೊತೆ ಸುತ್ತಾಡುತ್ತಿದ್ದ ಸ್ಥಳಿಗಳಿಗೆ ಮತ್ತೊಮ್ಮೆ ಭೇಟಿ ನೀಡಿ, ಅಲ್ಲಿಗೆ ಹೋದಾಗ ಅವರ ನೆನಪು ಕಾಡಬಹುದು, ಆದರೆ ಮುಳ್ಳನ್ನು ಮುಳ್ಳಿನಿಂದಲೇ ತೆಗಿಯಬೇಕಲ್ಲಾ ಅದೇ ರೀತಿ ಆ ಸ್ಥಳಗಳಿಗೆ ಸ್ನೇಹಿತರ ಜೊತೆಗೆ ಹೋದಾಗ ಅವರ ನಗು, ತಮಾಷೆ, ಹರಟೆಯಲ್ಲಿ ಆ ನೆನಪುಗಳು ಮರುಕಳಿಸುವುದನ್ನು ತಡೆಯಬಹುದು, ಅಲ್ಲದೆ ಮುಂದೆ ಅಲ್ಲಿಗೆ ಹೋಗುವಾಗ ಮಾಜಿ ಬದಲಿಗೆ ನಿಮ್ಮ ಸ್ನೇಹಿತರನ್ನು ನೆನಪಿಸಬಹುದು. ಅಲ್ಲದೆ ಈ ಸಮಯದಲ್ಲಿ ಸ್ನೇಹಿತರ ಜೊತೆಗಿದ್ದರೆ ಮನಸ್ಸಿನ ಭಾರ ಕಡಿಮೆಯಾಗುವುದು.

 ಇಷ್ಟವಾದದ್ದನ್ನು ಮಾಡಿ

ಇಷ್ಟವಾದದ್ದನ್ನು ಮಾಡಿ

ಅಂದ್ರೆ ಮನಸ್ಸಿಗೆ ಖುಷಿ ನೀಡಿ, ನಿಮ್ಮ ವ್ಯಕ್ತಿತ್ವ ಮತ್ತಷ್ಟು ಬೆಳೆಯುವ ಕಾರ್ಯಗಳನ್ನು ಮಾಡಿ. ಅಂದ್ರೆ ಏನಾದರೂ ಹೊಸದು ಕಲಿಯುವುದು ಮಾಡಿ, ನಿಮ್ಮನ್ನು ಸದಾ ಬ್ಯುಸಿಯಾಗಿಡಿ, ಇವೆಲ್ಲಾ ನೋವು ಮರೆಸಲು ತುಂಬಾನೇ ಸಹಕಾರಿಯಾಗುವುದು, ಅಲ್ಲದೆ ನಿಮ್ಮಲ್ಲಿರುವ ಆತ್ಮವಿಶ್ವಾಸ ಹೆಚ್ಚಾಗುತ್ತಾ ಹೋಗುವುದು.

ಮುಂದೆ ಭವಿಷ್ಯವಿದೆ ಎಂದು ಬಲವಾಗಿ ನಂಬಿ

ಮುಂದೆ ಭವಿಷ್ಯವಿದೆ ಎಂದು ಬಲವಾಗಿ ನಂಬಿ

ಇಲ್ಲಿಗೆ ಎಲ್ಲಾ ಮಗೀತು ಎಂದು ಕೂರುವ ಬದಲಿಗೆ ಮುಂದೆ ಭವಿಷ್ಯ ಇದೆ ಎಂದು ಬಲವಾಗಿ ನಂಬಿ. ನಮ್ಮನ್ನು ಬಿಟ್ಟು ಹೋದವರು ಮುಂದೊಂದು ದಿನ ಛೇ.. ಎಂಥ ಬಾಳನ್ನು ನನ್ನ ಕೈಯಾರೆ ಹಾಳು ಮಾಡಿದೆ ಎಂದು ಪಶ್ಚಾತಾಪ ಪಡಬೇಕು, ಆ ರೀತಿ ಬದುಕಿ ತೋರಿಸುವ ಛಲದಿಂದ ಬದುಕಬೇಕು. ಆಗ ಬದುಕಿನಲ್ಲಿ ಎಲ್ಲವೂ ಒಳ್ಳೇಯದೇ ಆಗುವುದು.

ಮುಂದೆ ಭವಿಷ್ಯವಿದೆ ಎಂದು ಬಲವಾಗಿ ನಂಬಿ

ಮುಂದೆ ಭವಿಷ್ಯವಿದೆ ಎಂದು ಬಲವಾಗಿ ನಂಬಿ

ಮಕ್ಕಳಿದ್ದರೆ ಅವರಲ್ಲಿಯೂ ಆತ್ಮವಿಶ್ವಾಸ ತುಂಬಿ

ತಂದೆ-ತಾಯಿ ಬೇರ್ಪಟ್ಟರೆ ಅದು ಮಕ್ಕಳ ಮೇಲೆ ದೊಡ್ಡ ಪರಿಣಾಮ ಬೀರುವುದು. ನಿಮ್ಮ ಮಕ್ಕಳಿಗೆ ಪರಿಸ್ಥಿತಿಯ ಬಗ್ಗೆ ತಿಳಿಸಬೇಕು, ಅವರ ಮುಂದೆ ನೀವು ಕುಗ್ಗಿದರೆ ಅವರೂ ಕುಗ್ಗುತ್ತಾರೆ, ಗಟ್ಟಿಯಾಗಿ ನಿಲ್ಲಿ, ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ.

ಕೊನೆಯದಾಗಿ: ಸಂಗಾತಿಯಿಂದ ಬೇರ್ಪಟ್ಟಾಗ ಖಿನ್ನತೆಯಿಂದ ಕುಗ್ಗುವ ಬದಲಿಗೆ ಆ ಪರಿಸ್ಥಿತಿಯನ್ನು ದಾಟಿ ಬರಲು ಪ್ರಯತ್ನಿಸಿ, ಕತ್ತಲು ಕಳೆದ ಮೇಲೆ ಬೆಳಕು ಬರಲೇಬೇಕು ಅಲ್ವಾ? ಬಂದೇ ಬರುತ್ತದೆ ಕೂಡ... ಆದ್ದರಿಂದ ಆಗಿದ್ದು ಆಗಿ ಹೋಯ್ತು, ಇನ್ನು ಮುಂದೆ ಎಲ್ಲವೂ ಒಳ್ಳೆಯದೇ ಆಗುವುದು ಎಂಬ ಭರವಸೆಯಲ್ಲಿ ಮುನ್ನಡೆಯಿರಿ...

English summary

Tips For Dealing With Breakups and Divorce in Kannada

Tips For Dealing With Breakups and Divorce in Kannada, Read on...
X
Desktop Bottom Promotion