For Quick Alerts
ALLOW NOTIFICATIONS  
For Daily Alerts

ಅರೇಂಜ್ಡ್ ಮ್ಯಾರೇಜ್ ಆಗುವುದಾದರೆ ಗಮನದಲ್ಲಿಡಬೇಕಾದ ಸಂಗತಿಗಳಿವು

|

ಮದುವೆ ಅಂತ ಬಂದಾಗ ನಮ್ಮ ಭಾರತದಲ್ಲಿ ಲವ್‌ ಮ್ಯಾರೇಜ್‌ಗಿಂತ ಅರೇಂಜ್‌ ಮ್ಯಾರೇಜ್‌ ಆಗುವವರ ಸಂಖ್ಯೆಯೇ ಅಧಿಕ. ನಮ್ಮ ಜೀವನ ಸಂಗಾತಿಯನ್ನು ನಮ್ಮ ಹಿರಿಯರು ನೋಡಿ ನಿಶ್ಚಯಿಸುತ್ತಾರೆ, ಹೀಗೆ ಮಾಡುವ ಮದುವೆಯಲ್ಲಿ ಅನೇಕ ವಿಚಾರಗಳನ್ನು ನೋಡಲಾಗುತ್ತದೆ.

Things To Keep In Mind Before Going For An Arranged Marriage in kannada

ಹುಡುಗ-ಹುಡುಗಿಯ ಜಾತಕ, ಇನ್ನು ಮನೆತನ, ಕುಟುಂಬದ ಹಿನ್ನಲೆ ಇವೆಲ್ಲಾ ಅರೇಂಜ್‌ ಮ್ಯಾರೇಜ್‌ನಲ್ಲಿ ನೋಡುವ ಪ್ರಮುಖ ಅಂಶಗಳಾಗಿರುತ್ತದೆ. ಇನ್ನು ಕೆಲವು ಮದುವೆಯಲ್ಲಿ ಹುಡುಗ-ಹುಡಗಿಯ ಒಪ್ಪಿಗೆಗಿಂತ ಕುಟುಂಬದ ಪ್ರತಿಷ್ಠೆ ದೊಡ್ಡದಾಗಿರುತ್ತದೆ. ಇಂಥ ಮದುವೆಯಲ್ಲಿ ಅವರ ಒಪ್ಪಿಗೆ ಇಲ್ಲದಿದ್ದರೂ ಮನೆಯವರ ಒತ್ತಾಯಕ್ಕೆ ಮದುವೆ ನಡೆಯುತ್ತದೆ, ಆದರೆ ಮುಂದೆ ಅವರ ಜೀವನ ಚೆನ್ನಾಗಿರಲೂ ಇರಲೂ ಬಹುದು ಅಥವಾ ಇರದಿರಲೂ ಬಹುದು. ಆದ್ದರಿಂದ ಅರೇಂಜ್‌ ಮ್ಯಾರೇಜ್‌ ಆಗುವುದಾದರೆ ಕೆಲವೊಂದು ವಿಷಯಗಳನ್ನು ಅರಿತುಕೊಳ್ಳುವುದು ಒಳ್ಳೆಯದು. ಅರೇಂಜ್‌ ಮ್ಯಾರೇಜ್ ಆಗುವುದಾದರೆ ಏನು ಮಾಡಿದರೆ ಒಳ್ಳೆಯದು ಎಂಬುವುದರ ಬಗ್ಗೆ ಹೇಳಿದ್ದೇವೆ ನೋಡಿ:
ಮಾತುಕತೆ

ಮಾತುಕತೆ

ನಿಮ್ಮ ಜೊತೆಗಾರರನ್ನು ಮನೆಯವರೇ ಹುಡುಕುವುದರಿಂದ ನಿಮ್ಮ ಮದುವೆಯ ನಿರ್ಧಾರವನ್ನು ಅವರೇ ತೆಗೆದುಕೊಳ್ಳುತ್ತಾರೆ. ಆದರೆ ನೀವಿಬ್ಬರು ಮಾತನಾಡಿ ಪರಸ್ಪರ ಒಪ್ಪಿಗೆ ಇದೆಯೇ ಎಂದು ತಿಳಿದುಕೊಳ್ಳುವುದು ಒಳ್ಳೆಯದು, ಇಲ್ಲದಿದ್ದರೆ ಮುಂದೆ ಸಮಸ್ಯೆ ಬರಬಹುದು. ಅವರು ಬೇರೆಯವರ ಒತ್ತಾಯಕ್ಕೆ ನಿಮ್ಮನ್ನು ಮದುವೆಯಾಗುತ್ತಿದ್ದಾರಾ ಅಥವಾ ಮನಸಾರೆ ಮೆಚ್ಚಿ ಮದುವೆಯಾಗುತ್ತಿದ್ದಾರಾ ಎಂದು ತಿಳಿದುಕೊಳ್ಳಿ. ಸೂಕ್ಷ್ಮವಾಗಿ ಗಮನಿಸಿದರೆ ಅವರ ಮಾತು ಹಾಗೂ ವರ್ತನೆಯಿಂದಲೇ ತಿಳಿಯುವುದು. ಸ್ವಲ್ಪವೂ ಡೌಟ್‌ ಬಂದ್ರೆ ಆ ಸಂಬಂಧ ಮುಂದುವರೆಸದಿರುವುದೇ ಜಾಣತನ.

ಕೆಲವೊಂದು ವಿಷಯ ಮೊದಲೇ ಹೇಳುವುದು ಒಳ್ಳೆಯದು

ಕೆಲವೊಂದು ವಿಷಯ ಮೊದಲೇ ಹೇಳುವುದು ಒಳ್ಳೆಯದು

ಎಲ್ಲವೂ ನೀವು ಎಣಿಸದಂತೆ ಇರಬೇಕೆಂದೇನು ಇಲ್ಲ. ಅರೇಂಜ್‌ ಮ್ಯಾರೇಜ್‌ನಲ್ಲಿ ಮದುವೆಗೆ ಮೊದಲು ನೀವು ಅವರನ್ನು ಅರಿತುಕೊಂಡಿರುವುದೇ ಸ್ವಲ್ಪವಾಗಿರುತ್ತದೆ. ಹಾಗಾಗಿ ಮುಂದೆ ಎಲ್ಲವೂ ಸರಿಯಿರುತ್ತದೆ ಎಂದು ಭಾವಿಸುವುದು ತಪ್ಪು. ಉದಾಹರಣೆ ನಿಮ್ಮ ಲೈಫ್‌ಸ್ಟೈಲ್ ಭಿನ್ನವಿರುತ್ತೆ ಅದಕ್ಕೆ ಅವರು ಹೊಂದಿಕೊಳ್ಳುತ್ತಾರಾ ಕೇಳಿ, ಇನ್ನು ಹೆಣ್ಮಕ್ಕಳಾದರೆ ಕೆಲವರಿಗೆ ಮದುವೆಯಾದ ಮೇಲೂ ವರ್ಕ್‌ ಮಾಡ್ಬೇಕು ಅಂತ ಆಸೆ ಇದ್ದು ಮದುವೆಯಾದ ಮೇಲೆ ಅವರು ಬೇಡ ಅಂದ್ರೆ ಸಮಸ್ಯೆ ಶುರುವಾಗುವುದು. ಇನ್ನು ಡ್ರೆಸ್ಸಿಂಗ್‌ ಕೂಡ ಅಷ್ಟೇ... ನೀವು ಮಾಡರ್ನ್‌ ಆಗಿದ್ದು ಅವರಿಗೆ ಅದು ಇಷ್ಟವಿಲ್ಲದಿದ್ದರೆ ಕಷ್ಟ. ಆದ ಕಾರಣ ಏನೇ ವಿಷಯ ಇರಲಿ ಮೊದಲಿಗೆ ಮಾತನಾಡುವುದು ಒಳ್ಳೆಯದು. ಇದರಿಂದ ಮುಂದಿನ ಬದುಕಿನಲ್ಲಿ ತೊಂದರೆಯಾಗಲ್ಲ.

 ಆರ್ಥಿಕ ಸ್ಥಿತಿ

ಆರ್ಥಿಕ ಸ್ಥಿತಿ

ಅರೇಂಜ್‌ ಮ್ಯಾರೇಜ್ ಅಂತ ಬಂದಾಗ ಆರ್ಥಿಕ ಸ್ಥಿತಿಗೂ ಮಹತ್ವ ನೀಡಲಾಗಿರುತ್ತದೆ. ಅದರಲ್ಲೂ ಹೆಣ್ಣು ಹೆತ್ತವರು ನಮ್ಮ ಮಗಳು ಆರ್ಥಿಕವಾಗಿ ಚೆನ್ನಾಗಿರುವ ಮನೆಗೆ ಹೋಗಬೇಕೆಂದು ಬಯಸುವುದು ಸಹಜ. ಆದರೆ ಅರೇಂಜ್‌ ಮ್ಯಾರೇಜ್ ಅಂತ ಬಂದಾಗ ಮನೆಕಡೆ ನೋಡಿ ಕೊಡುತ್ತಾರೆ, ಆದರೆ ಹುಡುಗನ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಹೋಗುವುದಿಲ್ಲ. ಆ ಆಸ್ತಿ ಆ ತನ ಅಪ್ಪ ಅಥವಾ ಅಣ್ಣ ಮಾಡಿದ್ದಾಗಿದ್ದರೆ, ಈತ ಏನೂ ಮಾಡದೆ ತಿರುಗುತ್ತಿದ್ದರೆ ಏನೂ ವಿಚಾರಿಸದೆ ಕೊಟ್ಟರೆ ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಅರೇಂಜ್‌ ಮ್ಯಾರೇಜ್‌ನಲ್ಲಿ ಅವನ ಮನೆಯ ಆಸ್ತಿ ನೋಡುವುದಕ್ಕಿಂತ ಆತ ದುಡಿದು ತಿನ್ನುವ ಸಾಮರ್ಥ್ಯ ಹೊಂದಿರುವವನೇ ಎಂದು ತಿಳಿಯಬೇಕು. ವರದಕ್ಷಿಣೆ ಕೇಳುವವರನ್ನು ದೂರವಿಡುವುದೇ ಕ್ಷೇಮ.

ಒಬ್ಬರನ್ನೊಬ್ಬರು ಅರಿತುಕೊಳ್ಳಬೇಕು

ಒಬ್ಬರನ್ನೊಬ್ಬರು ಅರಿತುಕೊಳ್ಳಬೇಕು

ಇಬ್ಬರು ಮದುವೆಗೆ ಒಪ್ಪಿಗೆ ಸೂಚಿಸಿದ ಮೇಲೆ ಒಬ್ಬರನ್ನೊಬ್ಬರು ಅರಿತುಕೊಳ್ಳಲು ಪ್ರಯತ್ನಿಸಬೇಕು. ಹಿಂದೆ ತಮ್ಮ ಜೀವನದಲ್ಲಿ ಏನದರೂ ಘಟನೆ ನಡೆದಿದ್ದರೆ ಅದನ್ನೂ ಶೇರ್‌ ಮಾಡುವುದು ಒಳ್ಳೆಯದು. ಇನ್ನು ಆರೋಗ್ಯ ಸಮಸ್ಯೆಯಿದ್ದರೆ ಅದನ್ನೂ ಹೇಳಿಕೊಳ್ಳಿ. ಯಾವ ವಿಷಯದಲ್ಲೂ ಮುಚ್ಚುಮರೆ ಬೇಡ.

ಕುಟುಂಬವನ್ನು ಅರಿತುಕೊಳ್ಳಬೇಕು

ಕುಟುಂಬವನ್ನು ಅರಿತುಕೊಳ್ಳಬೇಕು

ಇನ್ನು ಅವರನ್ನು ಎಷ್ಟು ಅರ್ಥ ಮಾಡಿಕೊಳ್ಳಲು ಯತ್ನಿಸುತ್ತೀರೋ ಅವರ ಕುಟುಂಬವನ್ನು ಕೂಡ ಅರಿಯಲು ಪ್ರಯತ್ನಿಸಬೇಕು. ನೀವು ಒಂದು ಕುಟುಂಬದಲ್ಲಿ ಹೋಗಿ ಬಾಳುವುದರಿಂದ ಅವರ ಜೊತೆಯೂ ಬಾಂಧವ್ಯ ಬೆಳೆಸಬೇಕು. ಇನ್ನು ಗಂಡು ಕೂಡ ಅಷ್ಟೇ ತನ್ನ ಹೆಣ್ಣಿನ ಮನೆಯವರನ್ನು ಗೌರವದಿಂದ ಕಾಣಬೇಕು, ಆಗ ಅವಳಿಗೂ ಖುಷಿಯಾಗುತ್ತದೆ.

ಇವಷ್ಟೂ ಅಂಶ ಗಮನಿಸಿದರೆ ನಿಮ್ಮದು ಅರೇಂಜ್ ಮ್ಯಾರೇಜ್‌ನಲ್ಲಿ ಯಾವುದೇ ದೊಡ್ಡ ಸಮಸ್ಯೆ ಇರಲ್ಲ. ಜೀವನ ಖುಷಿ-ಖುಷಿಯಾಗಿ ಮುಂದೆ ಸಾಗುತ್ತದೆ.

English summary

Things To Keep In Mind Before Going For An Arranged Marriage in kannada

Things to keep in mind before going for an arranged marriage,Read on...
Story first published: Friday, March 19, 2021, 13:16 [IST]
X
Desktop Bottom Promotion