For Quick Alerts
ALLOW NOTIFICATIONS  
For Daily Alerts

ಅನೈತಿಕ ಸಂಬಂಧ ಹೊಂದಲು 3 ಪ್ರಮುಖ ಕಾರಣಗಳಿವು

|

ಸಂಗೀತಾಗೆ ರಮೇಶ್‌ ಜೊತೆ ಮದುವೆಯಾಗಿ 10 ವರ್ಷಗಳು ಕಳೆದಿದ್ದೆವು (ಇಲ್ಲಿ ಹೆಸರುಗಳು ಕಾಲ್ಪನಿಕ). ಎರಡು ಮುದ್ದಾದ ಮಕ್ಕಳು, ಸುಖಿ ಸಂಸಾರ ಎನ್ನಲು ಯಾವುದೇ ಅಡ್ಡಿಯಿಲ್ಲ. ರಮೇಶ್‌ ಕೂಡ ಸಂಗೀತಾಗೆ, ಮಕ್ಕಳಿಗೆ ಯಾವುದೇ ಕೊರತೆ ಉಂಟಾಗದಂತೆ ನೋಡಿಕೊಳ್ಳುವುದು. ಮದುವೆಯಾಗಿ 5 ವರ್ಷಗಳಲ್ಲಿ ರಮೇಶ್‌ಗೆ ಬೇರೆ ಊರಿಗೆ ವರ್ಗಾವಣೆಯಾಗುತ್ತೆ. ಎರಡು ಪುಟ್ಟ ಮಕ್ಕಳನ್ನು ಕಟ್ಟಿಕೊಂಡು ಹೋಗುವುದು ಬೇಡ, ನಾನು ಕ್ವಾಟರ್ಸ್‌ನಲ್ಲಿ ಇರುತ್ತಾನೆ. ವಾರಕ್ಕೊಮ್ಮೆ ಮನೆಗೆ ಬರಬಹುದು. ನೀನು ಮನೆಯಲ್ಲಿಯೇ ಇರು, ಇಲ್ಲಾದರೆ ಮಕ್ಕಳಿಗೆ ಆಡಲು ಸೌಕರ್ಯ ಇದೆ, ಅವರನ್ನು ನೋಡಿಕೊಳ್ಳಲು ಅಜ್ಜ-ಅಜ್ಜಿಯೂ ಇದ್ದಾರೆ ಅಂತಾನೆ. ಸಂಗೀತಾಗೂ ಅದು ಸರಿ ಅನಿಸಿತ್ತು.

The 3 Main Reasons Why People Have Illegal Relationship

ಗಂಡ ಪ್ರತಿವಾರ ಬರ್ತಾ ಇದ್ದ, ಮಕ್ಕಳ ಮತ್ತು ಅವಳ ಬೇಕು ಬೇಡಗಳೆನ್ನೆಲ್ಲಾ ನೋಡಿಕೊಳ್ಳುತ್ತಿದ್ದ. ಆದರೆ ಇತ್ತೀಚೆಗೆ ಸಂಗೀತಾಳಿಗೆ ರಮೇಶ್‌ ವರ್ತನೆಯಲ್ಲಿ ಸ್ವಲ್ಪ ಬದಲಾವಣೆ ಕಾಣಿಸಿತ್ತು. ಪ್ರತಿವಾರ ಮನೆಗೆ ಬರ್ತಾ ಇದ್ದ, ಆದರೆ ಹೆಚ್ಚು ಸಮಯ ಮೊಬೈಲ್‌ ನೋಡುತ್ತಾ ಕಳೆಯುತ್ತಿದ್ದ. ಮಧ್ಯದಲ್ಲಿ ಯಾವುದೋ ಕರೆ ಬಂದರೆ ದೂರ ಹೋಗಿ ಮಾತನಾಡಿ ಬರ್ತಾ ಇದ್ದ. ಸಂಗೀತಾಳ ಮನಸ್ಸಿನಲ್ಲಿ ಮೆಲ್ಲನೆ ಸಂಶಯ ಸುಳಿ ಗಾಳಿ ಎದ್ದಿತು. ಒಂದು ಕಡೆ ಮನಸ್ಸಿಗೆ ಛೇ... ಇರಕ್ಕಿಲ್ಲ ಎಂದು ಸಮಧಾನ ಮಾಡಲು ಯತ್ನಿಸಿದರೂ, ಇಲ್ಲಾ ಏನೋ ತಪ್ಪಾಗಿದೆ ಎಂದು ಮನಸ್ಸು ಹೇಳ್ತಾ ಇತ್ತು.

ಆತನ ಮೊಬೈಲ್‌ ಚೆಕ್‌ ಮಾಡೋಣ ಅಂದ್ರೆ ಅದು ಲಾಕ್‌ ಇತ್ತು, ಮೊದಲೆಲ್ಲಾ ಪಾಸ್‌ವರ್ಡ್‌ ಇವಳಿಗೂ ಗೊತ್ತಿರುತ್ತಿತ್ತು. ಒಮ್ಮೆ ಇವಳು ಪಾಸ್‌ವರ್ಡ್‌ ಕೇಳಿದಾಗ ನಿನಗೆ ನನ್ನ ಮೊಬೈಲ್‌ನಲ್ಲೇನು ಕೆಲಸ ಎಂದು ರೇಗಿದ್ದ. ರಮೇಶ್‌ ಕೆಲಸ ಮಾಡುವ ಆಫೀಸ್‌ನಲ್ಲಿ ಸಂಗೀತಾರ ಪರಿಚಿತರೂ ಇದ್ದರು. ಅವರಿಗೆ ಕರೆ ಮಾಡಿ ಕೇಳಿದಾಗ ಮೊದಲಿಗೆ ಅವರು ಹೇಳಲು ಹಿಂಜರಿದರೂ ನಂತರ ರಮೇಶ್‌ಗೆ ಆಫೀಸ್‌ನಲ್ಲಿ ಸಹೋದ್ಯೋಗಿಯೊಂದಿಗೆ ಅನೈತಿಕ ಸಂಬಂಧ ಇರುವ ವಿಷಯ ಹೇಳಿದರು. ಇದನ್ನು ಕೇಳುತ್ತಿದ್ದಂತೆ ಸಂಗೀತಾಳಿಗೆ ದಿಕ್ಕೇ ತೋಚಲಿಲ್ಲ. ನಾನೇನು ಕಡಿಮೆ ಮಾಡಿದ್ದೇನೆ ಎಂದು ಗಂಡ ಹೀಗೆ ಮಾಡಿದ, ಅವನನ್ನು ಚೆನ್ನಾಗಿ ನೋಡಿಕೊಂಡಿದ್ದೇನೆ, ಅವನ ಬೇಕು, ಬೇಡಗಳನ್ನು ಪೂರೈಸಿದ್ದೇನೆ, ಎರಡೂ ಮಕ್ಕಳಾದರೂ ನನ್ನ ಸೌಂದರ್ಯವೇನು ಕುಗ್ಗಲಿಲ್ಲ, ಏಕೆ ಹೀಗೆ ಮಾಡಿದ ಎಂದು ಯೋಚಿಸುತ್ತಿದ್ದಂತೆ ಅವಳಿಗೆ ಕಾರಣವೇ ತಿಳಿಯಲಿಲ್ಲ.

ಅವನ ಬಳಿ ಅತ್ತೂ ಕರೆದು ಕೇಳಿದಾಗ ತನಗೆ ಅನೈತಿಕ ಸಂಬಂಧ ಇರುವುದು ಒಪ್ಪಿಕೊಂಡು, ತಪ್ಪಾಯಿತು, ಇನ್ನು ಮುಂದೆ ಹಾಗೆ ನಡೆದುಕೊಳ್ಳಲಿಲ್ಲ, ನನಗೆ ನೀನು, ಮಕ್ಕಳು ಮುಖ್ಯ, ನನ್ನನ್ನು ತಪ್ಪನ್ನು ಕ್ಷಮಿಸು ಎಂದು ಅಂಗಲಾಚಿದ.

ಅನೈತಿಕ ಸಂಬಂಧ ಪ್ರೀತಿಗಾಗಿ ಹುಟ್ಟಲ್ಲ

ಅನೈತಿಕ ಸಂಬಂಧ ಪ್ರೀತಿಗಾಗಿ ಹುಟ್ಟಲ್ಲ

ಈ ರೀತಿಯ ಎಷ್ಟೋ ಕತೆಗಳು ನಮ್ಮ ಸುತ್ತ ಮುತ್ತ ನಡೆಯುತ್ತಲೇ ಇರುತ್ತದೆ. ಒಂದು ಸುಂದರವಾದ ಸಂಸಾರವಿದ್ದರೂ ವ್ಯಕ್ತಿ ಏಕೆ ಅನೈತಿಕ ಸಂಬಂಧಕ್ಕೆ ಬೀಳುತ್ತಾನೆ/ಳೆ. ಅನೈತಿಕ ಸಂಬಂಧ ವ್ಯಕ್ತಿಯ ಮೇಲೆ ಪ್ರೀತಿಯುಂಟಾಗಿ ಹುಟ್ಟುತ್ತದೆಯೇ ಎಂದು ನೋಡಿದರೆ ಅಲ್ಲವೇ ಅಲ್ಲ ಅಂತಾರೆ ರಿಲೇಷನ್‌ಶಿಪ್‌ ಎಕ್ಸ್‌ಪರ್ಟ್‌. ಅನೈತಿಕ ಸಂಬಂಧ ಬೆಳೆಯಲು ಈ ಮೂರು ಪ್ರಮುಖ ಕಾರಣಗಳು ಅಂತಾರೆ ರಿಲೇಷನ್‌ಶಿಪ್‌ ಎಕ್ಸ್‌ಪರ್ಟ್‌.

1. ಅನೈತಿಕ ಸಂಬಂಧ ಬೆಲೆಯುವಾಗ ಮೊದಲಿಗೆ ವ್ಯಕ್ತಿಗಳು ಪ್ರೀತಿಯಲ್ಲಿ ಬೀಳುವುದಿಲ್ಲ

1. ಅನೈತಿಕ ಸಂಬಂಧ ಬೆಲೆಯುವಾಗ ಮೊದಲಿಗೆ ವ್ಯಕ್ತಿಗಳು ಪ್ರೀತಿಯಲ್ಲಿ ಬೀಳುವುದಿಲ್ಲ

ಪ್ರೀತಿ-ಪ್ರೇಮ ಅನೇಕ ಫ್ಯಾಂಟಿಸಿ ಕತೆ ಕಟ್ಟಬಹುದು. ಆದರೆ ಅನೈತಿಕ ಸಂಬಂಧ ಹುಟ್ಟಿಕೊಳ್ಳುವಾಗ ವ್ಯಕ್ತಿಗಳಲ್ಲಿ ಪ್ರೀತಿ ಇರುವುದಿಲ್ಲ. ಬದಲಿಗೆ ಅದೇನೋ ಆಕರ್ಷಣೆ ಇರುತ್ತದೆ. ಇನ್ನೊಂದು ಅರ್ಥದಲ್ಲಿ ಹೇಳುವುದಾರೆ ಅವರು ಆ ವ್ಯಕ್ತಿಯ ಬಗ್ಗೆ ತನ್ನದೇ ಆದ ಪರಿಕಲ್ಪನೆ ಹೊಂದಿರುತ್ತಾನೆ/ಳೆ. ಆ ವ್ಯಕ್ತಿಯಿಂದ ತಮ್ಮ ಅವಶ್ಯಕತೆ ಈಡೇರಿಸಿಕೊಳ್ಳುವ ಸಲುವಾಗಿ ಅನೈತಿಕ ಸಂಬಂಧ ಬೆಳೆಸಿಕೊಳ್ಳುತ್ತಾರೆ.

2. ಅವರ ಬಾಹ್ಯ ಅವಶ್ಯಕತೆಗಳಿಗಾಗಿ ಅನೈತಿಕ ಸಂಬಂಧ ಬೆಳೆಯುವುದು

2. ಅವರ ಬಾಹ್ಯ ಅವಶ್ಯಕತೆಗಳಿಗಾಗಿ ಅನೈತಿಕ ಸಂಬಂಧ ಬೆಳೆಯುವುದು

ನೀನು ನೋಡಲು ಸುಂದರವಾಗಿದ್ದೀಯ, ನಿನ್ನ ಮೈಯಿಂದ ಹೊರಸೂಸುವ ಆ ಸುಗಂಧ ಪರಿಮಳವೇನು ಇಂಥ ಮಾತುಗಳನ್ನು ಕೇಳಲು ಬಯಸುತ್ತಾರೆ. ನಮಗೆ ಒಬ್ಬ ವ್ಯಕ್ತಿ ತುಂಬಾ ಮಹತ್ವ ನೀಡುತ್ತಿದ್ದಾರೆ ಎನ್ನುವ ಪರಿಕಲ್ಪನೆಯೇ ಅವರಿಗೆ ಖುಷಿ ನೀಡುತ್ತದೆ. ಅಲ್ಲದೆ ಪ್ರತಿಯೊಂದು ಅನೈತಿಕ ಸಂಬಂಧಗಳು ಹುಟ್ಟಿಕೊಳ್ಳುವುದು ತಮ್ಮ ಬಾಹ್ಯ ಅವಶ್ಯಕತೆ ಪೂರೈಸಿಕೊಳ್ಳಲು. ಅವರು ಪ್ರೀತಿಗೆ ಬೀಳುವುದಲ್ಲ, ಬದಲಿಗೆ ಬದುಕಿನಲ್ಲಿ ಹೊಸದಾದ ಪರಿಕಲ್ಪನೆ ರೂಪಿಸಿಕೊಂಡು ಅದರಲ್ಲಿ ಖುಷಿ ಕಾಣಲು ಬಯಸುತ್ತಾರೆ. ಇಲ್ಲಿ ಅವರ ಅವಶ್ಯಕತೆ ಈಡೇರಿಸಿಕೊಳ್ಳುವುದೇ ಪ್ರಮುಖವಾಗಿರುತ್ತದೆ. ಕೆಲವರಿಗೆ ಹಣ, ಇನ್ನು ಕೆಲವರಿಗೆ ಪ್ರಭಾವ, ಮತ್ತೆ ಕೆಲವರಿಗೆ ದೈಹಿಕ ಸುಖ ಹೀಗೆ ತಮ್ಮ ಅವಶ್ಯಕತೆಗಾಗಿ ಅನೈತಿಕ ಸಂಬಂಧ ಬೆಳೆಸಿಕೊಳ್ಳುತ್ತಾರೆ.

3.ಭಾವನೆಗಳ ತೃಪ್ತಿಗಾಗಿ

3.ಭಾವನೆಗಳ ತೃಪ್ತಿಗಾಗಿ

ಹೊಸ ರೊಮ್ಯಾನ್ಸ್ ಶುರುವಾದಾಗ ಆ ವ್ಯಕ್ತಿಯನ್ನು ಇಷ್ಟಪಡುವುದಕ್ಕಿಂತ ಅದರಿಂದ ಉಂಟಾಗುವ ಭಾವನೆಗಳನ್ನು ಇಷ್ಟಪಡುತ್ತಾರೆ. ಅಂದರೆ ಆ ವ್ಯಕ್ತಿ ಜೊತೆ ಇರುವಾಗ ಅವರ ದೇಹದಲ್ಲಿ ಮೂರು ಹಾರ್ಮೋನ್ಸ್ ಬಿಡುಗಡೆಯಾಗುತ್ತವೆ. ಮೊದಲಿಗೆ ಡೊಪಾಮೈನ್ ಇದು ಕೊಕೈನ್‌ ಹಾಗೂ ನಿಕೋಟಿನ್ ಅನ್ನು ಉತ್ತೇಜಿಸುತ್ತದೆ. ಇನ್ನು ನೋರೆಪೈನೆಫ್ರೈನ್ ಹಾಗೂ ಸೆರೋಟಿನ್‌ ಬಿಡುಗಡೆಯಾಗುತ್ತದೆ. ಇದರಿಂದಾಗಿ ಆ ವ್ಯಕ್ತಿಗೆ ಖುಷಿಯಾಗುತ್ತದೆ. ಈ ಖುಷಿಗಾಗಿ ಅನೈತಿಕ ಸಂಬಂಧ ಬಯಸುತ್ತಾರೆ.

ಮಾನಸಿಕ ನೆಮ್ಮದಿ ಹಾಳು ಮಾಡುವ ಅನೈತಿಕ ಸಂಬಂಧ

ಮಾನಸಿಕ ನೆಮ್ಮದಿ ಹಾಳು ಮಾಡುವ ಅನೈತಿಕ ಸಂಬಂಧ

ಯಾವ ವ್ಯಕ್ತಿಯೂ ಅನೈತಿಕ ಸಂಬಂಧದಲ್ಲಿ ಖುಷಿ ಅನುಭವಿಸಲು ಸಾಧ್ಯವಿಲ್ಲ. ಮೊದಲಿಗೆ ಇಬ್ಬರು ಕದ್ದುಮುಚ್ಚಿ ಭೇಟಿಯಾಗುವುದು ಒಂಥರಾ ಖುಷಿ ಅನಿಸಿದರೂ ಮನಸ್ಸಿನಲ್ಲಿ ಒಂದು ಆತಂಕವಿದ್ದೇ ಇರುತ್ತದೆ. ಎಲ್ಲಿ ನಮ್ಮ ಕಳ್ಳಾಟ ಗೊತ್ತಾಗುತ್ತದೆ ಎಂಬ ಆತಂಕ ಪ್ರತಿಕ್ಷಣವೂ ಅವರನ್ನು ಕಾಡುತ್ತದೆ. ಇವರುಗಳಿಗೆ ಪ್ರೇಮಿಗಳಾಗಲು ಸಾಧ್ಯವಾಗುವುದಿಲ್ಲ. ಬದಲಿಗೆ ಮೊದಲೇ ಹೇಳಿದಂತೆ ತಮ್ಮ ಅವಶ್ಯಕತೆ ಪೂರೈಸಲು ಅಷ್ಟೇ ಅನೈತಿಕ ಸಂಬಂಧ ಬೆಳೆಸಿಕೊಳ್ಳುತ್ತಾರೆ. ಇಲ್ಲಿ ವ್ಯಕ್ತಿಗಿಂತ ಅವರಲ್ಲಿ ಇವರು ಬಯಸಿದ ವಸ್ತುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ.

ಅನೈತಿಕ ಸಂಬಂಧದಿಂದ ಮಾನಸಿಕ ನೆಮ್ಮದಿ ಹಾಳಾಗುವುದು. ಮೊದಲಿಗೆ ಭೇಟಿ ಖುಷಿ ತಂದರೂ ನಂತರ ಆ ಸಂಬಂಧದಲ್ಲಿ ಇರಲೂ ಆಗದೆ, ಹೊರ ಬರಲು ಆಗದೆ ಒದ್ದಾಡಬೇಕು. ಈ ಕಡೆ ಸಂಸಾರದ ನೆಮ್ಮದಿಯೂ ಹಾಳಾಗಿರುತ್ತದೆ.

ಆದ್ದರಿಂದ ಅನೈತಿಕ ಸಂಬಂಧದ ಆಕರ್ಷಣೆಗೆ ಒಳಗಾಗುವ ಮುನ್ನವೇ ಎಚ್ಚೆತ್ತುಕೊಳ್ಳುವುದು ಒಳ್ಳೆಯದು, ಅಗ್ಯತ ಬಿದ್ದರೆ ರಿಲೇಷನ್‌ಶಿಪ್‌ ಎಕ್ಸ್‌ಪರ್ಟ್‌ ಭೇಟಿಯಾಗಿ ಸಲಹೆ ಪಡೆಯಿರಿ.

English summary

The 3 Main Reasons Why People Have Illegal Relationship

Why people have illegal relationship, relationship expert will give these 3 main reasons why people have affairs.
X
Desktop Bottom Promotion