For Quick Alerts
ALLOW NOTIFICATIONS  
For Daily Alerts

ಇಂಥವರ ಜೊತೆ ಬಾಳುವುದು ಸ್ವಲ್ಪ ಕಷ್ಟನೇ...

|

ಬಾಳ ಸಂಗಾತಿ ಹೇಗಿರಬೇಕು ಎಂಬ ಕಲ್ಪನೆ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಆದರೆ ನಾವು ಬಯಸಿದ ಹಾಗೆಯೇ ಜೀವನ ಇರಬೇಕೆಂದೂ ಇಲ್ವಲ್ವಾ? ಕೆಲವೊಮ್ಮೆ ಸ್ವಲ್ಪ ಭಿನ್ನ ಸ್ವಭಾವದರು ನಮಗೆ ಸಂಗಾತಿಯಾಗಿ ಸಿಗುತ್ತಾರೆ.

Red Flags In A Relationship That You Must Never Ignore

ನಮ್ಮ ಜೀವನ ಸಂಗಾತಿ ಜೊತೆ ಖುಷಿಯಾಗಿರಬೇಕೆಂದರೆ ಅಲ್ಲಿ ಪ್ರೀತಿ, ರೊಮ್ಯಾನ್ಸ್‌ ಅಷ್ಟೇ ಸಾಲದು ಹೊಂದಾಣಿಕೆ ಕೂಡ. ಇಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಹೋದರೆ ಮಾತ್ರ ಜೀವನ ಚೆನ್ನಾಗಿರುತ್ತದೆ, ಇಲ್ಲದಿದ್ದರೆ ಸದಾ ಜಗಳ, ಮುನಿಸು, ನೋವು ಇವುಗಳೇ ಇರುತ್ತದೆ.

ಇನ್ನು ಕೆಲವರು ಇರುತ್ತಾರೆ, ಅವರ ಜೊತೆ ಹೊಂದಿಕೊಂಡು ಹೋಗಲು ಪ್ರಯತ್ನಿಸುತ್ತೇವೆ, ಆದರೆ ಅದು ತುಂಬಾ ಕಷ್ಟವಾಗಿರುತ್ತದೆ. ಏಕೆಂದರೆ ಅವರ ಸ್ವಭಾವನೇ ಹಾಗೇ... ಅವರು ತಮ್ಮ ಸಂಗಾತಿ ಮನಸ್ಸು ಅರಿಯಲು ಪ್ರಯತ್ನಿಸುವುದಿಲ್ಲ, ಸದಾ ತಮ್ಮ ಬಗ್ಗೆ ಯೋಚಿಸುವ ಸ್ವಾರ್ಥಿಗಳಾಗಿರುತ್ತಾರೆ. ಸಂಗಾತಿ ಭಾವನೆಗಳಿಗೆ ಬೆಲೆನೇ ಕೊಡಲ್ಲ. ಅಂಥವರ ಜೊತೆ ಬಾಳ್ವೆ ಮಾಡಬಹುದು, ಆದರೆ ಖುಷಿಯಾಗಿ ಬಾಳ್ವೆ ಮಾಡಲು ಸಾಧ್ಯನೇ ಇಲ್ಲ.

ಇಲ್ಲಿ ಯಾವ ಸ್ವಭಾವದ ವ್ಯಕ್ತಿಗಳ ಜೊತೆ ಬಾಳ್ವೆ ಮಾಡುವುದು ಕಷ್ಟ ಎಂಬುವುದನ್ನು ಹೇಳಿದ್ದೇವೆ, ಇಂಥ ವ್ಯಕ್ತಿಗಳನ್ನು ನೋಡಿದರೆ ನಿಮಗೂ ಕೂಡ ಇವರ ಸಹವಾಸವೇ ಸಾಕು ಅನಿಸುತ್ತೆ ಅಲ್ವಾ?

1.ಸ್ವ ಹೊಗಳಿಕೆ

1.ಸ್ವ ಹೊಗಳಿಕೆ

ನಾವು ಏನಾದರೂ ಸಾಧನೆ ಮಾಡಿದರೆ ಅದರ ಬಗ್ಗೆ ಸ್ವಲ್ಪ ಕೊಚ್ಚಿಕೊಳ್ಳುವುದು ಸಹಜವೇ... ಆದರೆ ಕೆಲವು ವ್ಯಕ್ತಿಗಳಿರುತ್ತಾರೆ ಸದಾ ತಮ್ಮ ಬಗ್ಗೆಯೇ ಹೊಗಳುತ್ತಾರೆ. ಅವರಿಗಿಂತ ನೀವೇನಾದರೂ ಸ್ವಲ್ಪ ಅಧಿಕ ಸಾಧನೆ ಮಾಡಿದರೆ ಅದು ಅವರಿಗೆ ಸಹಿಸಲು ಸಾಧ್ಯವಾಗುವುದಿಲ್ಲ. ಅವನು/ಅವಳು ತಮ್ಮನ್ನು ತಾವೇ ಹೊಗಳುತ್ತಾ ಅವರು ನಿಮ್ಮ ಜೀವನ ಸಂಗಾತಿಯಾಗಿ ಸಿಕ್ಕಿದ್ದು ನಿಮ್ಮ ಅದೃಷ್ಟ, ಅವರು ಎಲ್ಲದರಲ್ಲೂ ಪರ್ಫೆಕ್ಟ್ ಎಂದೆಲ್ಲಾ ಹೇಳುತ್ತಾರೆ. ಅಲ್ಲದೆ ಅವರ ತಪ್ಪುಗಳನ್ನು ಎಂದಿಗೂ ಒಪ್ಪಿಕೊಳ್ಳುವುದೇ ಇಲ್ಲ.

2. ಮೂಡ್‌ ಸ್ವಿಂಗ್

2. ಮೂಡ್‌ ಸ್ವಿಂಗ್

ಅಬ್ಬಾ! ಇಂಥವರ ಜೊತೆ ಜೀವಿಸುವುದೇ ಭಯಾನಕ. ಒಂದು ಗಳಿಗೆ ಖುಷಿಯಲ್ಲಿ ಇರುತ್ತಾರೆ, ಮರುಕ್ಷಣ ಕಾರಣವೇ ಇಲ್ಲದೆ ಕೋಪಗೊಳ್ಳುತ್ತಾರೆ. ಇನ್ನು ಅವರಿಂದಾಗಿ ನಿಮ್ಮ ಖುಷಿಯೂ ಹಾಳಾಗುತ್ತದೆ. ಅವರನ್ನು ಅರ್ಥ ಮಾಡಿಕೊಳ್ಳುವುದು ಹೇಗೆ ಎಂಬುವುದೇ ನಿಮಗೆ ದೊಡ್ಡ ಪ್ರಶ್ನೆಯಾಗಿರುತ್ತದೆ. ಏನು ಮಾಡಿದರೂ ತಪ್ಪು, ಮಾಡದಿದ್ದರೂ ತಪ್ಪ. ಇಂಥವರ ಜೊತೆ ಬಾಳ್ವೆ ನಡೆಸುವುದು ಸ್ವಲ್ಪ ಕಷ್ಟನೇ ಅಲ್ವಾ?

3.ಹೊಂದಾಣಿಕೆಯ ಸ್ವಭಾವೇ ಇಲ್ಲ

3.ಹೊಂದಾಣಿಕೆಯ ಸ್ವಭಾವೇ ಇಲ್ಲ

ದಾಂಪತ್ಯ ಜೀವನ ನಡೆಯುವುದೇ ಹೊಂದಾಣಿಕೆಯ ಮೇಲೆ, ಅದುವೇ ಇಲ್ಲ ಅಂದ್ರೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ಬಿಟ್ಟುಕೊಟ್ಟು ಜೀವನ ಮಾಡಿದರೆ ಮಾತ್ರ ಸಂಸಾರ ಸುಂದರವಾಗಿರುತ್ತದೆ. ಆದರೆ ಕೆಲವರು ಯಾವುದೇ ಕಾರಣಕ್ಕೆ ತಮ್ಮ ಹಠ ಬಿಡುವುದಿಲ್ಲ, ಚಿಕ್ಕ ವಿಷಯವನ್ನೂ ದೊಡ್ಡದು ಮಾಡುತ್ತಾರೆ, ನಿಮ್ಮಲ್ಲಿರುವ ನೆಗೆಟಿವ್‌ ಅಂಶಗಳೇ ಅವರಿಗೆ ಕಾಣಿಸುತ್ತದೆ, ಪಾಸಿಟಿವ್ ಕಾಣಿಸುವುದೇ ಇಲ್ಲ, ಹೀಗಿದ್ದರೆ ಅಂಥವರ ಜೊತೆ ಖುಷಿಯಾಗಿರಲು ಸಾಧ್ಯನೇ ಇಲ್ಲ.

4. ನಿಮ್ಮ ಪ್ರೇಮಿ ಅವರ ಸ್ನೇಹಿತರು, ಮನೆಯವರಿಗೆ ನಿಮ್ಮನ್ನು ಪರಿಚಯಿಸದೇ ಇದ್ದರೆ

4. ನಿಮ್ಮ ಪ್ರೇಮಿ ಅವರ ಸ್ನೇಹಿತರು, ಮನೆಯವರಿಗೆ ನಿಮ್ಮನ್ನು ಪರಿಚಯಿಸದೇ ಇದ್ದರೆ

ಕೆಲವರು ಸೀಕ್ರೆಟ್‌ ಆಗಿ ಲವ್‌ ಮಾಡುತ್ತಾರೆ, ಆದರೆ ಅವನ/ಅವಳ ಆಪ್ತ ಸ್ನೇಹಿತರಿಗಾದರೂ ಅದು ಗೊತ್ತಿರುತ್ತದೆ ಹಾಗೂ ಅವರನ್ನು ನಿಮಗೆ ಪರಿಚಯಿಸುತ್ತಾರೆ. ಆದರೆ ನಿಮ್ಮ ಸಂಬಂಧ ಯಾರಿಗೂ ಗೊತ್ತಾಗದಂತೆ ರಹಸ್ಯವಾಗಿಡಲು ಅವರು ಬಯಸುತ್ತಿದ್ದರೆ ನೀವು ಅಲರ್ಟ್‌ ಆಗುವುದು ಒಳ್ಳೆಯದು. ಮುಂದೆ ಅವರು ನಿಮಗೆ ಮೋಸ ಮಾಡುವ ಉದ್ದೇಶದಿಂದ ನಿಮ್ಮಿಬ್ಬರ ಸಂಬಂಧ ಯಾರಿಗೂ ತಿಳಿಸಲು ಇಚ್ಚಿಸುವುದಿಲ್ಲ. ನೀವು ಯಾರನ್ನೇ ಪ್ರೀತಿಸುವ ಮುನ್ನ ಅವರ ಬಗ್ಗೆ, ಅವರ ಮನೆಯವರ ಬಗ್ಗೆ ಸ್ವಲ್ಪ ತಿಳಿದಿರುವುದು ಸೇಫ್‌.

5. ವೈಯಕ್ತಿಕ ಸ್ವಾತಂತ್ರ್ಯ ನೀಡುವುದೇ ಇಲ್ಲ

5. ವೈಯಕ್ತಿಕ ಸ್ವಾತಂತ್ರ್ಯ ನೀಡುವುದೇ ಇಲ್ಲ

ಪ್ರತಿಯೊಬ್ಬರೂ ವೈಯಕ್ತಿಕ ಸ್ವಾತಂತ್ರ್ಯ ಬಯಸೇ ಬಯಸುತ್ತಾರೆ. ಸಂಗಾತಿ ಬಳಿ ಏನನ್ನೂ ಮುಚ್ಚಿಡಬಾರದು, ಆದರೆ ನಮ್ಮ ಸ್ನೇಹಿತರ ಜೊತೆ ಕಳೆಯುವುದು, ಅವರಿಗೆ ಕರೆ ಮಾಡುವುದು ಹೀಗೆ ನಮ್ಮದೇ ವೈಯಕ್ತಿ ವಿಷಯಗಳು ಇದ್ದೇ ಇರುತ್ತದೆ. ಅದಕ್ಕೆ ಅಡ್ಡ ಪಡಿಸುವ, ಸಂಶಯ ಪಡುವ, ಸ್ನೇಹಿತರ ಜೊತೆ ಬೆರೆಯಲು ಬಿಡದ ವ್ಯಕ್ತಿ ಜೊತೆ ಬಾಳಲು ಯಾರಿಗೂ ಇಷ್ಟ ಆಗಲ್ಲ.

6. ನಿಮ್ಮ ಸಂಗಾತಿ ಸದಾ ಹೀಯಾಳಿಸುತ್ತಿದ್ದರೆ

6. ನಿಮ್ಮ ಸಂಗಾತಿ ಸದಾ ಹೀಯಾಳಿಸುತ್ತಿದ್ದರೆ

ಯಾರೇ ಆಗಲಿ ನಮ್ಮನ್ನು ಹೀಯಾಳಿಸದರೆ ಅದು ನಮ್ಮ ಆತ್ಮವಿಶ್ವಾಸ ಕಡಿಮೆ ಮಾಡುತ್ತದೆ, ಅದೇ ನಮ್ಮ ಜೊತೆಯಲ್ಲಿರುವ ಸಂಗಾತಿ ನಮ್ಮನ್ನು ಸದಾ ಹೀಯಾಳಿಸುತ್ತಿದ್ದರೆ ನಮ್ಮ ಆತ್ಮವಿಶ್ವಾಸ ಕುಗ್ಗಿ ಹೋಗುವುದರಲ್ಲಿ ಯಾವುದೇ ಡೌಟ್ ಇಲ್ಲ. ಪ್ರತಿಯೊಂದು ವಿಷಯಕ್ಕೆ ಹೀಯಾಳಿಸುತ್ತಿದ್ದರೆ ಅದು ನಮ್ಮ ಸಾಧನೆ, ಪ್ರಗತಿಗೆ ಮಾರಕ. ಸಂಗಾತಿ ಹೀಯಾಳಿಸುತ್ತಿದ್ದರೆ ಅವರಿಗೆ ನೀವು ಮಾಡುತ್ತಿರುವುದು ತಪ್ಪು ಎಂದು ನೇರವಾಗಿ ಹೇಳಿ.

7. ತುಂಬಾ ಒರಟುತನ

7. ತುಂಬಾ ಒರಟುತನ

ಒರಟುತನ ಅದು ಕೆಲವರ ಸ್ವಭಾವ . ಆದರೆ ಪ್ರತಿಯೊಂದು ವಿಷಯದಲ್ಲೂ ಒರಟುತನ ತೋರಿಸಿದರೆ ಅಂಥವರ ಜೊತೆ ಬಾಳುವುದು ಸ್ವಲ್ಪ ಕಷ್ಟ. ಮೊದ ಮೊದಲಿಗೆ ಅವರ ಸ್ವಭಾವ ಹಶಗೇ ಅನಿಸಿದರೂ ಬರ್ತಾ ಬರ್ತಾ ನಿಮ್ಮ ಸಹನೆಯೂ ಮುರಿಯುವುದು. ನಿಮ್ಮನ್ನು ಕಟುವಾಗಿ ಟೀಕಿಸುವುದು, ಒರಟುತನದಿಂದ ವರ್ತಿಸುವುದು ಮಾಡುತ್ತಲೇ ಅವರ ಮೇಲೆ ನಿಮಗೆ ಜಿಗುಪ್ಸೆ ಉಂಟಾಗುವುದು.

8. ನಿರ್ಲಕ್ಷ್ಯ

8. ನಿರ್ಲಕ್ಷ್ಯ

ಸದಾ ನಿಮ್ಮ ಬಗ್ಗೆ ನಿರ್ಲಕ್ಷ್ಯ ತೋರುವ ವ್ಯಕ್ತಿ ಜೊತೆ ಬಾಳುವುದು ಕಷ್ಟವೇ. ನೀವೇ ಏನೇ ಹೇಳಿ, ಎಷ್ಟೇ ಪ್ರೀತಿ ತೋರಿಸಿದರೂ ಆ ವ್ಯಕ್ತಿ ನಿಮ್ಮ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದರು, ನಿಮಗೆ ಗೌರವ ಕೊಡದಿದ್ದರೆ ಅಂಥ ವ್ಯಕ್ತಿ ಸಂಬಂಧ ಮುಂದುವರೆಸಬೇಕೇ? ಎಂದು ಚಿಂತಿಸುವುದು ಒಳ್ಳೆಯದು.

ಏಕೆಂದರೆ ಇಂಥ ಗುಣದವರಿಂದ ಎಂದಿಗೂ ನಿಮಗೆ ಖುಷಿ ಸಿಗಲ್ಲ. ಇರುವುದು ಒಂದು ಜೀವನ ಅದನ್ನು ಖುಷಿ-ಖುಷಿಯಾಗಿ ಕಳೆಯಬೇಕು ಅಲ್ವಾ?

English summary

Red Flags In A Relationship That You Must Never Ignore

These red flags when ignored for a long time can harm your relationship in a bad way. Therefore, it is better to acknowledge those red flags and save yourself from any sort of relationship issues.
Story first published: Wednesday, May 27, 2020, 16:35 [IST]
X
Desktop Bottom Promotion