For Quick Alerts
ALLOW NOTIFICATIONS  
For Daily Alerts

ಸಂಬಂಧದಲ್ಲಿ ಸೆಕ್ಸ್ ಏಕೆ ಮುಖ್ಯ ಎನ್ನುವುದಕ್ಕೆ ಕಾರಣಗಳು

|

ಸಂಬಂಧದಲ್ಲಿ ಸೆಕ್ಸ್ ತುಂಬಾ ಮುಖ್ಯವೇ? ಎಂದು ಕೇಳಿದರೆ ಎಲ್ಲರದ್ದೂ ಒಂದೇ ಬಗೆಯ ಅಭಿಪ್ರಾಯವಾಗಿರುವುದಿಲ್ಲ. ಒಬ್ಬೊಬ್ಬರು ಒಂದೊಂದು ಉತ್ತರ ನೀಡಬಹುದು. ಕೆಲವರು ನಮ್ಮ ಸಂಬಂಧದಲ್ಲಿ ಸೆಕ್ಸ್‌ಗಿಂತ ಭಾವನೆಗೆ ಹೆಚ್ಚು ಮಹತ್ವ ಕೊಡುತ್ತೇವೆ ಎಂದು ಹೇಳಿದರೆ, ಇನ್ನು ಕೆಲವರು ನಮ್ಮ ಸಂಬಂಧದಲ್ಲಿ ಪ್ರೀತಿ, ಮಾಧುರ್ಯ ಹೆಚ್ಚಲು ಲೈಂಗಿಕ ತೃಪ್ತಿಯೇ ಕಾರಣವೆಂದು ಹೇಳುತ್ತಾರೆ.

Why Sex Important In Relationship

ಒಟ್ಟಿನಲ್ಲಿ ಸೆಕ್ಸ್‌ ಗೆ ನಿಮ್ಮ ಬದುಕಿನಲ್ಲಿ ಎಷ್ಟು ಪ್ರಾಮುಖ್ಯತೆ ಇದೆ ಎನ್ನುವುದು ನಿಮ್ಮ ಸಂಬಂಧ ಹೇಗಿದೆ, ನಿಮ್ಮ ನಂಬಿಕೆ, ನಿಮ್ಮ ದೈಹಿಕ ಆಸೆ ಇವುಗಳನ್ನು ಅವಲಂಬಿಸಿದೆ.

ನಮಗೆ ಸೆಕ್ಸ್‌ ಅಷ್ಟೊಂದು ಮುಖ್ಯವಲ್ಲ ಎನ್ನುವುದಾದರೆ...

ನಮಗೆ ಸೆಕ್ಸ್‌ ಅಷ್ಟೊಂದು ಮುಖ್ಯವಲ್ಲ ಎನ್ನುವುದಾದರೆ...

ಎಷ್ಟೋ ಜೋಡಿಗಳು ಸೆಕ್ಸ್ ಬದುಕಿಗೆ ಅಷ್ಟೊಂದು ಪ್ರಾಮುಖ್ಯತೆ ನೀಡಲ್ಲ, ಆದರೆ ಅವರ ಬದುಕು ಖುಷಿಯಾಗಿರುತ್ತದೆ, ರೊಮ್ಯಾಂಟಿಕ್ ಆಗಿರುತ್ತದೆ, ಅವರ ನಡುವೆ ಯಾವುದೇ ಸಮಸ್ಯೆ ಇರಲ್ಲ (ಯಾವಾಗಾದರೂ ಒಮ್ಮೆ ಸೆಕ್ಸ್‌ನಲ್ಲಿ ತೊಡಗಿಕೊಳ್ಳುತ್ತಾರೆ).

ಅನೇಕ ಕಾರಣಗಳಿಂದ ಜನರು ಸೆಕ್ಸ್‌ನಲ್ಲಿ ತೊಡಗಿಕೊಳ್ಳಲು ನಿರಾಸಕ್ತಿ ತೋರಿಸುತ್ತಾರೆ.

* ಲೈಂಗಿಕ ಉದ್ರೇಕ ಉಂಟಾಗದೇ ಇರುವುದು

* ಕೆಲವೊಂದು ಆರೋಗ್ಯ ಸಮಸ್ಯೆ

* ಸೆಕ್ಸ್‌ನಲ್ಲಿ ತೊಡಗಿಕೊಳ್ಳುವ ಮುನ್ನ ತುಂಬಾ ಸಮಯದವರೆಗೆ ಡೇಟಿಂಗ್‌ನಲ್ಲಿ ಇರಲು ಬಯಸುವುದು

* ಮದುವೆಗೆ ಮೊದಲು ಸೆಕ್ಸ್ ಸಲ್ಲದು ಎಂಬ ನಂಬಿಕೆ ಇರುವವರು

ಆದ್ದರಿಂದ ಸೆಕ್ಸ್ ಇಲ್ಲದೇ ಇದ್ದರೆ ಅವರಿಬ್ಬರ ನಡುವೆ ಪ್ರೇಮಕ್ಕೆ, ಪ್ರೀತಿಗೆ ಕೊರತೆ ಉಂಟಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ಹಾಗಂತ ರೊಮ್ಯಾಂಟಿಕ್ ಲೈಫ್‌ಗೆ ಸೆಕ್ಸ್ ಬೇಕಾಗಿಲ್ಲವೇ?

ಹಾಗಂತ ರೊಮ್ಯಾಂಟಿಕ್ ಲೈಫ್‌ಗೆ ಸೆಕ್ಸ್ ಬೇಕಾಗಿಲ್ಲವೇ?

ಹಾಗೆ ಹೇಳಲು ಕೂಡ ಸಾಧ್ಯವಿಲ್ಲ, ಏಕೆಂದರೆ ಎಲ್ಲಾ ರೊಮ್ಯಾಂಟಿಕ್ ಬದುಕಿಗೆ ಸೆಕ್ಸ್ ಬಹುಮುಖ್ಯವಾಗಿರುತ್ತದೆ, ಗಂಡ-ಹೆಂಡತಿ ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿಸಲು ಸೆಕ್ಸ್ ಅತ್ಯಗ್ಯತ. ಸೆಕ್ಸ್ ಇಲ್ಲದ ಮದುವೆ ಜೀವನವನ್ನು ಯಾರು ಊಹಿಸಿಕೊಳ್ಳಲು ಕೂಡ ಇಷ್ಟ ಪಡುವುದಿಲ್ಲ. ಪ್ರೀತಿಯಲ್ಲಿ ಸೆಕ್ಸ್ ಬೇಡ ಎನ್ನುವ ಜೋಡಿ ಮದುವೆಯ ಬಳಿಕ ಹಾಗೇ ಹೇಳಲು ಸಾಧ್ಯವಿಲ್ಲ. ಸೆಕ್ಸ್ ಎನ್ನುವುದು ಕೇವಲ ದೈಹಿಕ ಆಸೆಯಲ್ಲ, ಬದಲಿಗೆ ಅದು ಇಬ್ಬರ ನಡುವೆ ಭಾವನೆ ಬೆಸುಗೆಯನ್ನು ಕೂಡ ಮಾಡುತ್ತದೆ.

ಸೆಕ್ಸ್ ಏಕೆ ಮುಖ್ಯ ಎಂದು ನೋಡುವುದಾದರೆ

ಸೆಕ್ಸ್ ಏಕೆ ಮುಖ್ಯ ಎಂದು ನೋಡುವುದಾದರೆ

* ಇದು ಹೆಣ್ಣು-ಗಂಡಿನ ನಡುವೆ ಬಾಂಧವ್ಯ ಬೆಸೆಯುತ್ತದೆ

* ಸಂಗಾತಿಯೆಡೆಗೆ ನಿಮ್ಮ ಪ್ರೀತಿ ಹಾಗೂ ಸೆಳೆತ ಎಷ್ಟಿದೆ ಎಂದು ನಿರ್ಧರಿಸುವುದೇ ಸೆಕ್ಸ್. ಎಷ್ಟೋ ದಾಂಪತ್ಯದಲ್ಲಿ ಮೋಸ, ಕಲಹ ನಡೆಯುವುದೇ ಲೈಂಗಿಕ ಅತೃಪ್ತಿ ಇದ್ದಾಗ ಎಂಬ ಅಂಶವನ್ನು ತಳ್ಳಿ ಹಾಕುವಂತೆಯೇ ಇಲ್ಲ.

* ಸಂಬಂಧದಲ್ಲಿ ಭದ್ರತೆ ಭಾವನೆಯನ್ನು ಮೂಡಿಸುತ್ತದೆ

* ಇದು ಮನಸ್ಸು ಹಾಗೂ ದೇಹಕ್ಕೆ ಉಲ್ಲಾಸವನ್ನು ನೀಡುತ್ತದೆ

* ಅಲ್ಲದೆ ಮಗುವನ್ನು ಪಡೆಯಬೇಕೆಂದರೆ ಸೆಕ್ಸ್ ಅತ್ಯವಶ್ಯಕ.

 ದಂಪತಿ ಸೆಕ್ಸ್‌ನಲ್ಲಿ ಸಕ್ರಿಯೆವಾಗಿದ್ದರೆ ದೊರೆಯುವ ಪ್ರಯೋಜಗಳು

ದಂಪತಿ ಸೆಕ್ಸ್‌ನಲ್ಲಿ ಸಕ್ರಿಯೆವಾಗಿದ್ದರೆ ದೊರೆಯುವ ಪ್ರಯೋಜಗಳು

* ಮನಸ್ಸಿಗೆ ಖುಷಿ ಸಿಗುವುದು

ಲೈಂಗಿಕ ಕ್ರಿಯೆ ನಡೆಸಿದಾಗ ದೇಹದಲ್ಲಿ ಹಲವು ಬಗೆಯ ಹಾರ್ಮೋನ್‌ಗಳು ಉತ್ಪತ್ತಿಯಾಗುತ್ತದೆ

* ಇದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ

* ನಿಮ್ಮ ದೇಹವನ್ನು ನೀವು ಹೆಚ್ಚಾಗಿ ಪ್ರೀತಿಸುವಂತೆ ಮಾಡುತ್ತದೆ (ಸಂಗಾತಿಗಾಗಿ ನಿಮ್ಮ ಅಂದ ಚೆಂದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವಿರಿ).

* ನಿಮ್ಮ ಸಂಗಾತಿಯ ಆರೈಕೆ ಮಾಡುವಿರಿ

* ಇದು ಮಾನಸಿಕ ಒತ್ತಡವನ್ನು ಹೊರ ಹಾಕುತ್ತದೆ,.

 ದೈಹಿಕವಾಗಿ ದೊರೆಯುವ ಪ್ರಯೋಜನಗಳು

ದೈಹಿಕವಾಗಿ ದೊರೆಯುವ ಪ್ರಯೋಜನಗಳು

* 2004ರಲ್ಲಿ ನಡೆಸಿದ ಅಧ್ಯಯನ ಪ್ರಕಾರ ಆರೋಗ್ಯಕರ ಸೆಕ್ಸ್ ಜೀವನ ಹೊಂದುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು.

* 2013ರಲ್ಲಿ ನಡೆಸಿದ ಅಧ್ಯಯನ ಪ್ರಕಾರ ಇದರಿಂದ ದೇಹಕ್ಕೆ ವ್ಯಾಯಾಮ ಉಂಟಾಗುವುದು.

* 2010ರ ಅಧ್ಯಯನ ವರದಿ ಪ್ರಕಾರ ಆರೋಗ್ಯಕರ ಲೈಂಗಿಕ ಜೀವನದಿಂದ ಹೃದಯದ ಸ್ವಾಸ್ಥ್ಯ ಹೆಚ್ಚುವುದು ಎಂದು ತಿಳಿದು ಬಂದಿದೆ.

* ಬಿಡದೆ ಕಾಡುತ್ತಿರುವ ತಲೆನೋವು ನಿವಾರಣೆ ಮಾಡುತ್ತದೆ ಎಂದು 2013ರ ಅಧ್ಯಯನ ವರದಿ ಹೇಳಿದೆ.

 ಸಾಮರಸ್ಯ ಜೀವನಕ್ಕೆ ಸೆಕ್ಸ್ ಒಂದೇ ಮುಖ್ಯವಲ್ಲ

ಸಾಮರಸ್ಯ ಜೀವನಕ್ಕೆ ಸೆಕ್ಸ್ ಒಂದೇ ಮುಖ್ಯವಲ್ಲ

ಬರೀ ಸೆಕ್ಸ್ ಮಾತ್ರ ಮಹತ್ವ ನೀಡಿದರೆ ಆ ಸಂಬಂಧದಲ್ಲಿಯೂ ಖುಷಿ ಇರುವುದಿಲ್ಲ. ಅಂಥ ಸಂಬಂಧದಲ್ಲಿ ಸೆಕ್ಸ್ ಎಂಬುವುದು ಎಂದು ಕ್ರಿಯೆಯಾಗುತ್ತದೆ ಅಷ್ಟೆ. ದೈಹಿಕ ಸಂಪರ್ಕವಲ್ಲದೆ ಮಸಾಜ್, ಕಿಸ್, ತಬ್ಬಿಕೊಳ್ಳುವುದು, ಕೈ ಕೈ ಹಿಡಿಯುವುದು ಇವೆಲ್ಲಾ ಕೂಡ ದಂಪತಿ ಅಥವಾ ಪ್ರೇಮಿ ನಡುವೆ ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ. ಇವೆಲ್ಲವೂ ಬದುಕಿನಲ್ಲಿದ್ದರೆ ಆ ಸಂಸಾರ ಹೆಚ್ಚು ಖುಷಿಯಾಗಿರುತ್ತದೆ.

ದಾಂಪತ್ಯ ಜೀವನದಲ್ಲಿ ಪ್ರೀತಿ ಇರಬೇಕು, ಮಮತೆ ಇರಬೇಕು, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಹೋಗುವ ಗುಣವಿರಬೇಕು, ಜೊತೆಗೆ ಲೈಂಗಿಕ ತೃಪ್ತಿ ಇರಬೇಕು. ವಯಸ್ಸಾಗುತ್ತಿದ್ದಂತೆ ಲೈಂಗಿಕ ಆಸಕ್ತಿ ಕಡಿಮೆಯಾಗಬಹುದು, ಆದರೆ ಪ್ರೀತಿಯ ನುಡಿ, ಆರೈಕೆ ಇವೆಲ್ಲಾ ಸಂಬಂಧವನ್ನು ಗಟ್ಟಿಯಾಗಿಸುತ್ತಾ ಹೋಗುತ್ತದೆ. ಸೆಕ್ಸ್ ಎನ್ನುವುದು ಬರೀ ದೇಹಕ್ಕೆ ಮಾತ್ರ ಸಂಬಂಧಿಸಿದ ವಿಷಯವಲ್ಲ, ಎರಡು ಮನಸ್ಸುಗಳನ್ನು ಬೆಸೆಯುವ ಕ್ರಿಯೆಯಾಗಿದೆ.

English summary

Reasons Why Sex Is Important in a Relationship in Kannada

Here are reasons why sex is important in a relationship read on.....
X
Desktop Bottom Promotion