Just In
Don't Miss
- Sports
ಐಪಿಎಲ್ನಲ್ಲಿ ಕೆಟ್ಟ ದಾಖಲೆ ಬರೆದ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ
- Automobiles
ಎಕ್ಸ್ಯುವಿ700 ಎಸ್ಯುವಿ ಕಾರಿನ ಮತ್ತಷ್ಟು ಹೊಸ ಮಾಹಿತಿ ಹಂಚಿಕೊಂಡ ಮಹೀಂದ್ರಾ
- Finance
ಶಾಲೆಯನ್ನ ಅರ್ಧಕ್ಕೆ ತೊರೆದು, 8,000 ರೂ. ವೇತನ ಪಡೆಯುತ್ತಿದ್ದ ನಿಖಿಲ್ ಕಾಮತ್ ಶತಕೋಟ್ಯಧಿಪತಿ ಆಗಿದ್ದೇಗೆ?
- News
ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪೊಲೀಸರ ಬಿಗಿ ರೂಲ್ಸ್
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಅಜಯ್ ದೇವಗನ್-ಅಮಿತಾಭ್ ಸಿನಿಮಾದ ಚಿತ್ರೀಕರಣಕ್ಕೆ ಕೊರೊನಾ ಅಡ್ಡಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದೈಹಿಕವಾಗಿ ಈ ಲಕ್ಷಣ ಹೊಂದಿದ ಮಹಿಳೆಗೆ ಪುರುಷ ಹೆಚ್ಚು ಆಕರ್ಷಿತನಾಗುತ್ತಾನೆ
ಪುರುಷ ಮಹಿಳೆಯಲ್ಲಿ ಏನನ್ನು ನೋಡಿ ಆಕರ್ಷಿತನಾಗುತ್ತಾನೆ ಎಂದು ಕೇಳಿದರೆ ಬಹುತೇಕ ಎಲ್ಲಾ ಮಹಿಳೆಯರು ಅಂದ ನೋಡಿ ಎಂದು ಹೇಳಬಹುದು. ಪುರುಷರ ಮಹಿಳೆಯ ಅಂದಕ್ಕೆ ಮರುಳಾಗುತ್ತಾನೆ ಎಂಬುವುದು ನಿಜ, ಆದರೆ ಅದುವೇ ನೂರರಷ್ಟು ಸತ್ಯವಲ್ಲ. ಸೌಂದರ್ಯಕ್ಕಿಂತ ಇತರ ಗುಣಗಳಿಗೆ ಹೆಚ್ಚು ಆಕರ್ಷಿತನಾಗುತ್ತಾನೆ. ಅಚ್ಚರಿ ಅನಿಸುತ್ತಿದೆ ಅಲ್ವಾ? ಹೌದು, ಪುರುಷ ಅಂದಕ್ಕಿಂತ ಈ ಗುಣಗಳಿರುವ ಮಹಿಳೆಯತ್ತ ಹೆಚ್ಚು ಆಕರ್ಷಿತನಾಗುತ್ತಾನೆ ಎಂದು ಇಂಗ್ಲೆಂಡ್‌ನ ನ್ಯೂ ಕಾಸ್ಟಲ್ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಅಧ್ಯಯನ ಹೇಳಿದೆ.
ಯಾವ ಬಗೆಯ ಮಹಿಳೆಯತ್ತ ಪುರುಷ ಆಕರ್ಷಿಸುತ್ತಾನೆ ಎಂದು ನೋಡುವುದಾದರೆ:

ದೊಡ್ಡ ಧ್ವನಿಯವರು
ಮೆಲ್ಲನೆ ಮಾತನಾಡುವವರು ಪುರುಷರಿಗೆ ಇಷ್ಟವಾಗುತ್ತದೆ, ಜೋರು ಧ್ವನಿಯವರು ಇಷ್ಟವಾಗುವುದಿಲ್ಲ ಎಂದೇ ಮಹಿಳೆಯರು ಬಯಸುತ್ತಾರೆ. ಆದರೆ ಗುಸು-ಗುಸು ಮಾತನಾಡುವವರಿಗಿಂತ ಗಟ್ಟಿ ಧ್ವನಿಯಲ್ಲಿ ಮಾತಮಾಡಿದರೆ ಅವರಲ್ಲಿ ಬೇರೆಯದೇ ರೀತಿಯ ಎನರ್ಜಿ ಇರುತ್ತದೆ, ಆ ಎನರ್ಜಿ ಪುರುಷನನ್ನು ಆಕರ್ಷಿಸುವುದು.

ನಗು
ಸುಂದರವಾದ ನಗುವಿನ ಮುಖವನ್ನು ಯಾರು ತಾನೇ ಇಷ್ಟಪಡಲ್ಲ ಹೇಳಿ, ವ್ಯಕ್ತಿ ಮುಖ ಗಂಟು ಹಾಕಿಕೊಂಡು ಇದ್ದರೆ ಅಂಥವರನ್ನು ಮಾತನಾಡಿಸಬೇಕೆಂದು ಅನಿಸುವುದಿಲ್ಲ, ಅದೇ ಮುಖದಲ್ಲಿ ನಗುವಿರುವ ವ್ಯಕ್ತಿಯೊಡನೆ ಆತ್ಮೀಯತೆ ಮೂಡುತ್ತದೆ, ಅಲ್ಲದೆ ಇಂಥ ಮಹಿಳೆ ಕಡೆಗೆ ಪುರುಷ ಆಕರ್ಷಿತನಾಗುತ್ತಾನೆ ಎಂದು ಅಧ್ಯಯನ ಹೇಳಿದೆ.

ಕಡಿಮೆ ಮೇಕಪ್
ನಾವು ಮೇಕಪ್ ಮಾಡುವುದೇ ಇನ್ನೊಬ್ಬರು ನಮ್ಮನ್ನು ನೋಡಲಿ ಎಂದು... ಗಾಢ ಮೇಕಪ್ ಮಾಡಿ ನಾವು ಹೋದರೆ ನಮ್ಮ ಅಂದವನ್ನು ಪುರುಷರು ಹೊಗಳಬಹುದು, ಆದರೆ ಇಷ್ಟಪಡುತ್ತಾರಾ ಎಂದು ಕೇಳಿದರೆ ಹೇಳುವುದು ಕಷ್ಟವಾಗುವುದು. ನೀವು ಯಾವುದೇ ಪುರುಷರನ್ನು ಕೇಳಿ ನೋಡಿ ತುಂಬಾ ಮೇಕಪ್ ಮಾಡುವವರಿಗಿಂತ ಮಿನಿಮಮ್ ಮೇಕಪ್ ಮಾಡುವವರೇ ಪುರುಷರಿಗೆ ಇಷ್ಟವಾಗುವುದು.

ದೊಡ್ಡ ಕಂಗಳ ಸುಂದರಿ
ದೊಡ್ಡ ಕಂಗಳನ್ನು ಹೊಂದಿರುವ ಮಹಿಳೆ ತುಂಬಾ ಆಕರ್ಷಿತರಾಗಿ ಕಾಣುತ್ತಾರೆ. ಅಲ್ಲದೆ ದೊಡ್ಡ ಕಣ್ಣುಗಳು ಆರೋಗ್ಯದ ಕೂಡ ಸಂಕೇತ ಎಂದು ಹೇಳಲಾಗುವುದು. ದೊಡ್ಡ ಕಣ್ಣುಗಳನ್ನು ಹೊಂದಿರುವವರಲ್ಲಿ ಈಸ್ಟ್ರೋಜಿನ್ ಉತ್ಪತ್ತಿ ಹೆಚ್ಚಿರುತ್ತದೆ, ಅಧಿಕ ಈಸ್ಟ್ರೋಜಿನ್ ಹೊಂದಿರುವವರು ಕಡಿಮೆ ಈಸ್ಟ್ರೋಜಿನ್ ಹೊಂದಿರುವುದಕ್ಕಿಂತ ಅಧಿಕ ಸಂತಾನೋತ್ಪತ್ತಿ ಸಾಮರ್ಥ್ಯ ಹೊಂದಿರುತ್ತಾರೆ.

ಅಗಲವಾದ ಹಿಂಬದಿಯಲ್ಲ
ಸಾಮಾನ್ಯವಾಗಿ ಅಗಲವಾದ ಹಿಂಬದಿ (butt) ಹೊಂದಿರುವ ಮಹಿಳೆ ಪುರುಷರಿಗೆ ಸೆಕ್ಸಿಯಾಗಿ ಕಾಣುತ್ತಾಳೆ ಎಂದು ಹೇಳುವುದನ್ನು ಕೇಳಿರಬಹುದು, ಆದರೆ 45.5 ಡಿಗ್ರಿ ಕರ್ವ್ ಸೊಂಟ ಹೊಂದಿರುವವರು ಹೆಚ್ಚು ಆಕರ್ಷಕವಾಗಿ ಕಾಣುತ್ತಾರೆ ಎಂದು ಅಧ್ಯಯನ ಹೇಳಿದೆ.

ಸಾಧಾರಣ ರೂಪು
ಪುರುಷನಿಗೆ ಇಷ್ಟವಾಗಲು ನಾವು ತುಂಬಾ ಆಕರ್ಷಕವಾಗಿರಬೇಕು ಎಂದು ಎಷ್ಟೋ ಮಹಿಳೆಯರು ಅಂದುಕೊಂಡಿರುತ್ತಾರೆ. ಆದರೆ
ತುಂಬಾ ಅಂದವಾದ ಮಹಿಳೆಗಿಂತ ಸಾಧಾರಣ ರೂಪಿನ ಮಹಿಳೆಯತ್ತ ಪುರುಷ ಆಕರ್ಷಿತನಾಗುತ್ತಾನೆ.