For Quick Alerts
ALLOW NOTIFICATIONS  
For Daily Alerts

ವಧುವಿಗೆ ಕೊರೊನಾ, ಆದ್ರೂ ನಡೆಯಿತು ಮದುವೆ, ಇದಕ್ಕೆ ಕಾರಣ ಅದ್ಭುತ ಪ್ಲ್ಯಾನ್

|

ನಮ್ಮ ಸಾಮಾಜಿಕ ಪದ್ಧತಿ, ಆರ್ಥಿಕ ರಂಗ ಇವುಗಳ ಮೇಲೆ ಅಧಿಕ ಪರಿಣಾಮ ಬೀರಿದಂಥ ರೋಗವೆಂದರೆ ಅದು ಕೊರೊನಾ. ಕೊರೊನಾ ಯಾವಾಗ ಈ ಜಗತ್ತಿಗೆ ಬಂತೋ ಅಲ್ಲಿಂದ ಜನರಿಗೆ ಮೊದಲಿನಂತೆ ಓಡಾಲು ಸಾಧ್ಯವಾಗುತ್ತಿಲ್ಲ, ಎಲ್ಲಿಗೇ ಹೋಗಬೇಕಾದರೂ ಮಾಸ್ಕ್, ಸ್ಯಾನಿಟೈಸರ್ ಬೇಕು.

ಪರಿಚಯದವರನ್ನು ಕಂಡು ತಕ್ಷಣ ಕೈ ಕುಲುಕುವುದು, ಅಪ್ಪಿಕೊಳ್ಳುವುದು ಇವೆಲ್ಲಾ ದೂರವೇ ಆಗಿ ಬಿಟ್ಟಿದೆ, ಏನಿದ್ದರೂ ದೂರದಿಂದಲೇ ಒಂದು ನಮಸ್ತೆ, ವಿದೇಶಿಯರು ಕೂಡ ನಮಸ್ತೆ ಎಂಬ ನಮ್ಮ ಸಂಪ್ರದಾಯ ಅನುಸರಿಸುತ್ತಿದ್ದರೆ.

ಇಡೀ ವಿಶ್ವವೇ ಕೊರೊನಾ ದೆಸೆಯಿಂದಾಗಿ ಲಾಕ್‌ಡೌನ್‌ ನೋಡುವಂಥಾಯ್ತು, ಇದೀಗ ಲಾಕ್‌ಡೌನ್‌ ನಿಧಾನಕ್ಕೆ ಸಡಿಲವಾಗಿದೆ, ಹಾಗಂತ ಕೊರೊನಾ ಹೋಗಿದೆ ಎಂದಲ್ಲ, ಈಗಲೂ ಕೊರೊನಾ ಮಹಾಮಾರಿ ಆರ್ಭಟಿಸುತ್ತಲೇ ಇದೆ, ಆದರೆ ಜನರು ಆ ಮಹಾಮಾರಿಗೆ ಹೆದರಿ ಎಷ್ಟೊಂತ ಕೂರುವುದು ನಿಧಾನಕ್ಕೆ ತಮ್ಮ ಕೆಲಸ ಕಾರ್ಯಗಳನ್ನು ಶುರು ಮಾಡಿಕೊಂಡಿದ್ದಾರೆ.

ಅದರಲ್ಲೂ ಮದುವೆ ಕಾರ್ಯಗಳು ಶುರುವಾಗಿದೆ, ಮದುವೆಗೆ ಹೋದವರಿಗೆ, ಮದುಮಗಳಿಗೆ, ಮದುಮಗನಿಗೆ ಕೊರೊನಾ ಪಾಸಿಟಿವ್‌ ಬಂದಾಗ ಮದುವೆಯನ್ನು ಮುಂದೂಡಿದ ಎಷ್ಟೋ ಉದಾಹರಣೆಗಳನ್ನು ನೋಡಿದ್ದೇವೆ, ಆದರೆ ಈಗ ಮದುಮಗ ಅಥವಾ ಮದುಮಗಳಿಗೆ ಕೊರೊನಾ ಪಾಸಿಟಿವ್ ಬಂದರೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲ, ಅದಕ್ಕೆ ಪರ್ಯಾಯ ಮಾರ್ಗವನ್ನು ಕಂಡು ಹಿಡಿದಿದ್ದಾರೆ. ಇಲ್ಲಿ ಕೂಡ ಅಂಥದ್ದೇ ಮದುವೆ ಬಗ್ಗೆ ಹೇಳಿದ್ದೇವೆ ನೋಡಿ:

ಕೊರೊನಾ ಇದ್ದರೂ ಮದುವೆ ಸಂಭ್ರಮಕ್ಕೆ ಧಕ್ಕೆಯಾಗಿಲ್ಲ

ಕೊರೊನಾ ಇದ್ದರೂ ಮದುವೆ ಸಂಭ್ರಮಕ್ಕೆ ಧಕ್ಕೆಯಾಗಿಲ್ಲ

ಮದುವೆ ಎಂದ ಮೇಲೆ ಆ ಜೋಡಿಗೆ ತಮ್ಮ ಆ ವಿಶೇಷ ದಿನದ ಬಗ್ಗೆ ಸಾಕಷ್ಟು ಕಂಡಿರುತ್ತಾರೆ. ಅಲ್ಲದೆ ಮದುವೆಗಾಗಿ ಸಾಕಷ್ಟು ತಯಾರಿ ಕೂಡ ಮಾಡಲಾಗುವುದು, ನೆಂಟರಿಷ್ಟರಿಗೆ ಆಮಂತ್ರಣ ನೀಡಲಾಗುವುದು, ಊಟದ ವ್ಯವಸ್ಥೆ, ಮನೆಗೆ ಅಲಂಕಾರ, ವಧು-ವರನಿಗೆ ಆ ದಿನ ಧರಿಸಲು ಉಡುಪು-ಆಭರಣ ಹೀಗೆ ಸಕಲ ಸಿದ್ಧತೆ ಮಾಡಿರುವಾಗ ಇದ್ದಕ್ಕಿದ್ದಂತೆ ಮದುವೆ ಮುಂದೂಡಲ್ಪಡುವುದು ಎಂದರೆ ಎಲ್ಲರ ಮನಸ್ಸಿಗೆ ಬೇಸರವಾಗುವುದು. ಆದರೆ ಕ್ಯಾಲಿಫೋರ್ನಿಯಾದ ಮದುವೆಯೊಂದರಲ್ಲಿ ವಧುವಿಗೆ ಕೊರೊನಾ ಪಾಸಿಟಿವ್ ಇದ್ದರೂ ಮದುವೆ ನಡೆಯಿತು.

 ಹೊಸ ಐಡಿಯಾದೊಂದಿಗೆ ಮದುವೆಯಾದ ಜೋಡಿ

ಹೊಸ ಐಡಿಯಾದೊಂದಿಗೆ ಮದುವೆಯಾದ ಜೋಡಿ

ಕ್ಯಾಲಿಫೋರ್ನಿಯಾದ ಈ ಜೋಡಿ ಮದುವೆಗೆ ಸಕಲ ಸಿದ್ಧತೆ ಮಾಡಿದ್ದರು. ಆ ವಧುವಿಗೆ ಕೊರೊನಾ ಪಾಸಿಟಿವ್ ಇರುವುದು ಗೊತ್ತಾಯಿತು. ಅಷ್ಟೆಲ್ಲಾ ಸಿದ್ಧತೆ ಮಾಡಿರುವ ಮದುವೆಯನ್ನು ಮುಂದೂಡುವುದು ಇಬ್ಬರಿಗೂ ಇಷ್ಟವಿರಲಿಲ್ಲ, ಅದಕ್ಕಾಗಿ ಅದ್ಭುತವಾದ ಪ್ಲ್ಯಾನ್‌ ಮಾಡಿದರು. ಹಾಗಾಗಿ ಆ ಜೋಡಿಯ ಮದುವೆ ಅದ್ಧೂರಿಯಾಗಿ ನಡೆಯಿತು.

2019ರಲ್ಲಿ ಎಂಗೇಜ್ಮೆಂಟ್ ಮಾಡಿದ್ದ ಜೋಡಿ

2019ರಲ್ಲಿ ಎಂಗೇಜ್ಮೆಂಟ್ ಮಾಡಿದ್ದ ಜೋಡಿ

ಲೌರೆನ್ ಮತ್ತು ಪ್ಯಾಟ್ರಿಕ್ ಡೆಲ್ಗಾಡೋ ಜೋಡಿ 2019ರಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. 2020ರಲ್ಲಿ ಮದುವೆಯಾಗುವ ಪ್ಲ್ಯಾನ್ ಮಾಡಿದ್ದರು. ಅಷ್ಟೊತ್ತಿಗೆ ಕೊರೊನಾ ಸಾಂಕ್ರಾಮಿಕ ರೋಗದ ಹಾವಳಿ ಪ್ರಾರಂಭವಾಯಿತು. ಇದರಿಂದಾಗಿ ಮದುವೆಯನ್ನು ಮುಂದೂಡುತ್ತಲೇ ಬಂದಿದ್ದರು. ಇದೀಗ ಮದುವೆಯಾಗೋಣ ಎಂದು ಎಲ್ಲಾ ಸಿದ್ಧತೆ ಮಾಡಿಕೊಂಡಾಗ ವಧುವಿಗೆ ಕೊರೊನಾ ಪಾಸಿಟಿವ್ ಬಂತು.

 ಸಾಮಾಜಿಕ ಅಂತರ ಕಾಯ್ದುಕೊಂಡು ಮದುವೆಯಾದ ಜೋಡಿ

ಸಾಮಾಜಿಕ ಅಂತರ ಕಾಯ್ದುಕೊಂಡು ಮದುವೆಯಾದ ಜೋಡಿ

ಹುಡುಗಿ ಮನೆಯೊಳಗೇ ಇದ್ದು ವರ ಮನೆಯ ಹೊರಗಡೆ ನಿಂತುಕೊಂಡು ಮದುವೆಯ ಶಾಸ್ತ್ರ (ಉಂಗುರ ಧರಿಸುವುದು)ಮಗಿಸಿದ್ದಾರೆ. ಆಕೆ ಅಲಂಕಾರ ಮಾಡಿ ಕಿಟಕಿ ಬಳಿ ಬಂದು ನಿಂತಿದ್ದಳು. ಈತ ಮನೆಯ ಹೊರಗಡೆ ನಿಂತಿದ್ದ, ಆ ಒಂದು ಉದ್ದದ ಟೇಪ್ (ಬಟ್ಟೆಯ ದಾರ) ಮೂಲಕ ಉಂಗುರು ಬದಲಾಯಿಸಿಕೊಳ್ಳುತ್ತಾರೆ.

ಹೀಗೆ ಜೋಡಿಯ ಮದುವೆ ವಿಭಿನ್ನವಾಗಿ ಆದರೂ ಚೆನ್ನಾಗಿಯೂ ನಡೆಯಿತು. ಈ ಜೋಡಿಯ ಐಡಿಯಾ ಎಲ್ಲರ ಮೆಚ್ಚುಗೆಯನ್ನು ಗಳಿಸಿದೆ.

ವಧು ಅಥವಾ ವರನಿಗೆ ಕೊರೊನಾ ಪಾಸಿಟಿವ್ ಅಂತ ಗೊತ್ತಾದಾಗ ಸುಮ್ಮನೆ ಮದುವೆ ಮುಂದೂಡುವ ಬದಲು ಈ ರೀತಿಯ ಐಡಿಯಾ ಮಾಡುವುದು ಬೆಸ್ಟ್ ಅಲ್ಲವೇ?

IMAGE SOURCE: JESSCASTE PHOTOGRAPHY/ FACEBOOK

English summary

Photos Of Couple’s Unique Wedding After Bride Tests COVID-19 Positive Goes Viral in Social Media

Photos Of Couple’s Unique Wedding After Bride Tests COVID-19 Positive Goes Viral in Social Media, Have a look.
Story first published: Tuesday, December 8, 2020, 16:20 [IST]
X
Desktop Bottom Promotion