For Quick Alerts
ALLOW NOTIFICATIONS  
For Daily Alerts

ಗೌರವ ಗಳಿಸಲು ಹಾಗೂ ಉಳಿಸಿಕೊಳ್ಳಲು ಈ ಗುಣಗಳಿದ್ದರೆ ಸಾಕು

|

ಸಮಾಜದಲ್ಲಿ ಒಮ್ಮೆ ಉತ್ತಮ ಹೆಸರು, ಸಾಧನೆ ಮಾಡಿದರೆ ಅದನ್ನು ಉಳಿಸಿಕೊಳ್ಳುವುದು ಸಹ ಒಂದು ಸಾಧನೆಯೇ. ಕೆಲವರಿಗೆ ಇದು ಕರಗತವಾಗಿ ಬಂದಿದ್ದರೆ ಇನ್ನೂ ಹಲವರು ಇತರರನ್ನು ನೋಡಿ ಈ ಲಕ್ಷಣಗಳನ್ನು ಅಳವಡಿಸಿಕೊಳ್ಳುತ್ತಾರೆ. ಸಾಧಕರು ಸಾಧನೆಯಿಂದ ಸಾಧಕರಾಗುವುದಲ್ಲದೆ ಅವರ ಗುಣಗಳು ಇವರ ಸಾಧನೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ.

ನೀವು ಸಹ ಇಂಥಾ ಸಾಧಕರ ಸಾಲಿಗೆ ಸೇರಬೇಕಾದರೆ ಹಾಗೂ ಸಮಾಜದಲ್ಲಿ ಉತ್ತಮ ಮನುಷ್ಯ ಎಂದು ಕರೆಯಬೇಕಾದರೆ ನಿಮ್ಮಲ್ಲಿ ಕೆಲವು ಗುಣಗಳು ಇರಲೇಬೇಕು. ಅಧ್ಯಯನದ ಪ್ರಕಾರ ಸಮಾಜದಲ್ಲಿ ಗೌರವಿಸಲ್ಪಡುವ ಮತ್ತು ಸುತ್ತಲೂ ಜನರನ್ನು ಆಕರ್ಷಿಸುವ ಸೆಳವು ಹೊಂದಿರುವ ವ್ಯಕ್ತಿತ್ವ ಬಹುತೇಕ ಹೀಗೆ ಇರುತ್ತದೆ ಎಂದು ಹೇಳಿದೆ. ಯಾವೆಲ್ಲಾ ನಿಯಮಗಳನ್ನು ಹೊಂದಿದ್ದರೆ ಹಾಗೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನೀವು ಸಹ ಉತ್ತಮಗುಣವುಳ್ಳ ಸಾಧಕರಾಗಬಹುದು.

ಒಳ್ಳೆಯ ಕೇಳುಗರು

ಒಳ್ಳೆಯ ಕೇಳುಗರು

ಯಾವ ವ್ಯಕ್ತಿ ಹೆಚ್ಚು ಕೇಳಿಸಿಕೊಂಡು ಕಡಿಮೆ ಮಾತನಾಡುತ್ತಾರೋ ಅವರು ಹೆಚ್ಚು ಗೌರವವನ್ನು ಪಡೆಯುತ್ತಾರೆ ಅಷ್ಟೇ ಅಲ್ಲದೇ ಸಾಧಕರಾಗುವ ಲಕ್ಷಣವಿದು ಎನ್ನಲಾಗುತ್ತದೆ. ನೀವು ಇದನ್ನು ಪಾಲಿಸುವುದುರಿಂದ ಅದೆಷ್ಟೋ ಅನಾಹುತಗಳು, ತಪ್ಪು ತಿಳುವಳಿಕೆಗಳಿಗೆ ಕಡಿವಾಣ ಹಾಕಬಹುದು. ಅದಕ್ಕೇ ಅತೀ ವಿನಯ, ಸಾಧಕ ಅಥವಾ ಬುದ್ಧಿವಂತರನ್ನು ಮಿತಭಾಷಿ ಎನ್ನುತ್ತಾರೆ.

 ಶಾಂತ ಸ್ವಭಾವ

ಶಾಂತ ಸ್ವಭಾವ

ಉತ್ತಮ ವ್ಯಕ್ತಿತ್ವ ಹಾಗೂ ಆದರ್ಶಯುತ ಜನರು ಕೋಪಗೊಂಡಾಗ ಅದನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ. ಅವರು ಯಾವಾಗಲೂ ತಮ್ಮನ್ನು ಶಾಂತವಾಗಿ ತೋರಿಸಿಕೊಳ್ಳುತ್ತಾರೆ ಮತ್ತು ಯಾವುದೇ ಪರಿಸ್ಥಿತಿ ಇದ್ದರೂ ಭಾವನೆಗಳನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನು ಹೊಂದಿದ್ದಾರೆ. ಅವರು ತಮ್ಮ ಧ್ವನಿಯ ಏರಿಳಿತ, ಮುಖದ ಅಭಿವ್ಯಕ್ತಿಗಳು ಮತ್ತು ಒಟ್ಟಾರೆ ದೇಹ ಭಾಷೆಯನ್ನು ನಿಯಂತ್ರಿಸುತ್ತಾರೆ, ಇದರಿಂದ ಅವರು ನಿಮ್ಮ ಮೇಲೆ ಎಷ್ಟು ಸಿಟ್ಟು ಹಾಗೂ ಪ್ರೀತಿಯನ್ನು ಹೊಂದಿದ್ದಾರೆ ಎಂಬುದು ಯಾರೂ ಪತ್ತೆ ಹಚ್ಚಲು ಸಾಧ್ಯವಿಲ್ಲ.

ತಪ್ಪುಗಳನ್ನು ಒಪ್ಪಿಕೊಳ್ಳುವುದು

ತಪ್ಪುಗಳನ್ನು ಒಪ್ಪಿಕೊಳ್ಳುವುದು

ಅತಿಯಾದ ಅಹಂಕಾರವನ್ನು ಹೊಂದಿರುವ ವ್ಯಕ್ತಿಗಳು ಇದ್ದಾರೆ, ಅವರು ತಪ್ಪು ಎಂದು ತಿಳಿದಿದ್ದರೂ ಅದನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಅಂತಹ ಜನರು ಗೌರವವನ್ನು ಬಹಳ ಬೇಗ ಕಳೆದುಕೊಳ್ಳುತ್ತಾರೆ. ನೀವು ನಿಮ್ಮನ್ನು ಸೇರಿ ಇತರರು ಸಹ ನಿಮ್ಮನ್ನು ಗೌರವಿಸಬೇಕು ಎಂದು ಬಯಸಿದರೆ, ನೀವು ತಪ್ಪು ಮಾಡಿದ ಕ್ಷಣವನ್ನು ಮೊದಲು ನೀವೆ ಒಪ್ಪಿಕೊಳ್ಳಬೇಕು ಮತ್ತು ಅದನ್ನು ಸರಿಪಡಿಸಲು ಅದಕ್ಕೆ ಸೂಕ್ತ ಪರಿಹಾರಗಳನ್ನು ಹುಡುಕಲು ನೀವೆ ಮುಂದಾಗಬೇಕು.

 ಸಹಾಯಕವಾಗಿರಿ

ಸಹಾಯಕವಾಗಿರಿ

ಇತರರು ನಿಮ್ಮನ್ನು ಗೌರವಿಸಬೇಕಾದರೆ, ನೀವು ಸಹ ಅವರಿಗೆ ಸಹಾಯವಾಗುವಂತೆ ವರ್ತಿಸಬೇಕು. ಇದಕ್ಕಾಗಿ ನೀವು ನಿಮ್ಮದೇ ಆದದ ದಾರಿಯಿಂದ ಹೊರಬಂದು ಸಹಾಯ ಹಸ್ತ ಚಾಚಬೇಕು. ಇದರಲ್ಲಿ ಯಾವುದೇ ಫಲಾಪೇಕ್ಷೆ ಇರಬಾರದು, ನೀವು ಮಾಡುತ್ತರುವ ಸಹಾಯದ ಬಗ್ಗೆ ಯಾರಿಗೂ ಹೇಳಿಕೊಳ್ಳಬೇಡಿ, ಅದನ್ನು ಘೋಷಿಸಬೇಡಿ. ನಿಮಗೇ ಅರಿವಿಲ್ಲದೆ ನಿಮ್ಮದೇ ಆದ ದೊಡ್ಡ ಅಭಿಮಾನಿ ಬಳಗ ಹೊಂದಿರುತ್ತೀರಿ.

ಕಷ್ಟಕರ ಕೆಲಸ ಇಷ್ಟಪಟ್ಟು ಮಾಡಿ

ಕಷ್ಟಕರ ಕೆಲಸ ಇಷ್ಟಪಟ್ಟು ಮಾಡಿ

ನಿಮ್ಮ ಕೆಲಸದಲ್ಲಿ ನೀವು ಅತ್ಯುತ್ತಮವಾಗಿದ್ದರೆ, ನೀವು ಯಾವಾಗಲೂ ಗೌರವಿಸಲ್ಪಡುತ್ತೀರಿ. ನೀವು ಕೆಲಸವನ್ನು ಕಷ್ಟ ಎಂದು ಓಡಿಹೋದರೆ, ಜನರು ಯಾವಾಗಲೂ ನಿಮ್ಮನ್ನು ಶಪಿಸುತ್ತಾರೆ. ನೀವು ಕಷ್ಟಪಟ್ಟು ಕೆಲಸ ಮಾಡಬೇಕು ಮತ್ತು ಮೊದಲು ನಿಮ್ಮನ್ನು ನೀವು ಗೌರವಿಸಬೇಕು.

ಸದಾ ತ್ಮವಿಶ್ವಾಸದಿಂದಿರಿ

ನಿಮ್ಮನ್ನು ಎಂದಿಗೂ ಕೀಳಾಗಿ ಕಾಣಬೇಡಿ. ಗೌರವಾನ್ವಿತ ಜನರು ಯಾವಾಗಲೂ ತಮ್ಮ ಸುತ್ತಲೂ ಆತ್ಮವಿಶ್ವಾಸದ ಸೆಳವನ್ನು ಹೊಂದಿರುತ್ತಾರೆ. ಅವರು ತಪ್ಪು ಮಾಡಿದರೂ, ಅವರು ಅದನ್ನು ಅರಿತು ತಿದ್ದಿಕೊಂಡು ಅದರ ಮೇಲೆ ಕೆಲಸ ಮಾಡುತ್ತಾರೆ. ಅದಕ್ಕಾಗಿ ಅವರು ಕ್ಷಮೆಯಾಚಿಸುವುದಿಲ್ಲ. ತಪ್ಪು ಮಾಡುವುದು ಮನುಷ್ಯರೇ ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ. ಅದಕ್ಕಾಗಿ ನೀವು ಸಹ ತಪ್ಪು ಮಾಡಿದಾಕ್ಷಣ ಕೀಳರಿಮ ಬೇಡ, ಅದನ್ನು ತಿದ್ದಿಕೊಂಡು ಮುಂದಿನ ಭವಿಷ್ಯದ ಬಗ್ಗೆ ಯೋಚಿಸಿ.

English summary

List of Qualities of Highly Respected People in Kannada

Here we are discussing about List of Qualities of Highly Respected People in Kannada. Read more
Story first published: Wednesday, October 13, 2021, 23:44 [IST]
X
Desktop Bottom Promotion