For Quick Alerts
ALLOW NOTIFICATIONS  
For Daily Alerts

ಸಂಬಂಧದಲ್ಲಿ ಇನ್‌ಸೆಕ್ಯೂರಿಟಿ ಕಾಡುತ್ತಿದೆಯೇ? ಈ ಫೀಲಿಂಗ್‌ನಿಂದ ಹೊರಬರುವುದು ಹೇಗೆ?

|

ಸಂಗಾತಿಗೆ ಪದೇ ಪದೇ ಕರೆ ಮಾಡಿ ಅವರು ಎಲ್ಲಿದ್ದಾರೆ ಎಂದು ಕೇಳುವುದು, ತಾನು ಆ ರೀತಿ ಮಾಡುವುದು ಅವರಿಗೆ ಇಷ್ಟವಾಗುತ್ತಿಲ್ಲ ಎಂದು ಗೊತ್ತಿದ್ದರೂ ಆ ರೀತಿ ಮಾಡದೇ ಇರಲು ಸಾಧ್ಯವಾಗುತ್ತಿಲ್ಲ. ಚಿಕ್ಕ-ಪುಟ್ಟ ವಿಷಯಕ್ಕೆ ಮನೆಯಲ್ಲಿ ಜಗಳ ಬರುತ್ತಿದೆ, ಅವನಿಗೆ/ಅವಳಿಗೆ ನನ್ನ ಮೇಲಿನ ಪ್ರೀತಿ ಕಡಿಮೆಯಾಗುತ್ತಿದೆ ಎಂದೆಲ್ಲಾ ಅನಿಸುತ್ತಿದೆಯೇ? ಹಾಗಾದರೆ ನಮಗೆ ಸಂಬಂಧದಲ್ಲಿ ಅಸುರಕ್ಷತೆ ಅಂದರೆ ಇನ್‌ಸೆಕ್ಯೂರಿಟಿ ಕಾಡುತ್ತಿದೆ ಎಂದರ್ಥ....

Insecurities In Relationship

ಈ ಇನ್‌ಸೆಕ್ಯೂರಿ ಎಂಬುವುದು ಸುಮ್ಮನೆ ಬರುವುದಲ್ಲ, ಇಬ್ಬರ ಸಂಬಂಧದ ನಡುವೆ ಏನೋ ಕೊರತೆ ಇದ್ದಾಗ ಮಾತ್ರ ಬರುವಂಥದ್ದು. ತಾವು ಬಯಸಿದ ಪ್ರೀತಿ ಸಂಗಾತಿಯಿಂದ ಸಿಗದೇ ಹೋದಾಗ ಆ ಸಂಬಂಧದಲ್ಲಿ ಇನ್‌ಸೆಕ್ಯೂರಿಟಿ ಕಾಡುವುದು.

ಅಸುರಕ್ಷತೆ ಇದೆ ಕಾಡುತ್ತಿದ್ದರೆ ಅದನ್ನು ಹಾಗೇ ಮುಂದುವರಿಸಿಕೊಂಡು ಹೋಗುವುದು ಸರಿಯಲ್ಲ, ಅದನ್ನು ಹೋಗಲಾಡಿಸದಿದ್ದರೆ ನೆಮ್ಮದಿ ಇರಲ್ಲ, ಸಂಬಂಧನೂ ಬಾಳಲ್ಲ.

ಸಂಬಂಧದಲ್ಲಿ ಅಸುರಕ್ಷತೆಯ ಲಕ್ಷಣಗಳಾವುವು, ಆ ಲಕ್ಷಣಗಳು ನಿಮ್ಮನ್ನು ಕಾಡುತ್ತಿದ್ದರೆ ಅದರಿಂದ ಹೊರಬರುವುದು ಹೇಗೆ ಎಂದು ನೋಡೋಣ:

ಸಂಬಂಧದಲ್ಲಿ ಅಸುರಕ್ಷತೆಯ ಲಕ್ಷಣಗಳು

ಸಂಬಂಧದಲ್ಲಿ ಅಸುರಕ್ಷತೆಯ ಲಕ್ಷಣಗಳು

ಹೊಟ್ಟೆಕಿಚ್ಚು

ನಿಮಗೆ ನಿಮ್ಮ ಸಂಗಾತಿ ಅವರ ಫ್ರೆಂಡ್ಸ್‌ ಜೊತೆ ಮಾತನಾಡಿದಾಗ ಅವರ ಅವರ ಜೊತೆ ಹೊರಗಡೆ ಹೋದಾಗ ಹೊಟ್ಟೆಕಿಚ್ಚು ಉಂಟಾಗುತ್ತಾ? ಫ್ರೆಂಡ್ಸ್ ಜೊತೆ ಮಾತನಾಡಬೇಡಿ, ಅವರನ್ನು ಭೇಟಿಯಾಗಬೇಡಿ ಎಂದೆಲ್ಲಾ ನಿರ್ಬಂಧ ಹಾಕುತ್ತೀರಾ? ಹಾಗಾದರೆ ನಿಮಗೆ ಅವರ ಮೇಲೆ ನಂಬಿಕೆ ಇಲ್ಲ, ನಿಮ್ಮ ಸಂಬಂಧದಲ್ಲಿ ಅಸುರಕ್ಷತೆ ಕಾಡುತ್ತಿದೆ ಎಂದರ್ಥ. ಅದೇ ರೀತಿ ಅವರು ನೀವು ನಿಮ್ಮ ಸ್ನೇಹಿತರ ಜೊತೆ ಮಾತನಾಡುವುದಕ್ಕೆ ನಿರ್ಬಂಧ ಹಾಕುತ್ತಿದ್ದಾರೆ ಎಂದಾದರೆ ಅವರಿಗೆ ಸಂಬಂಧದಲ್ಲಿ ಬಯಸಿದ ಸುರಕ್ಷಿತೆ ದೊರೆಯುತ್ತಿಲ್ಲ ಎಂದರ್ಥ.

 ಪ್ರತಿ ವಿಷಯಕ್ಕೆ ವಾದ

ಪ್ರತಿ ವಿಷಯಕ್ಕೆ ವಾದ

ಎಲ್ಲಾ ಗಂಡ-ಹೆಂಡತಿ ಜಗಳ ಆಡುತ್ತಾರೆ, ಆದರೆ ಪ್ರತಿಯೊಂದು ವಿಷಯಕ್ಕೆ ನಿಮ್ಮ ಸಂಗಾತಿ ವಾದ ಮಾಡುತ್ತಿದ್ದಾರೆ ಅಥವಾ ನೀವು ವಾದ ಮಾಡುತ್ತಿದ್ದೀರಿ ಎಂದಾದರೆ ಸಂಗಾತಿ ನನ್ನನ್ನು ಬಿಟ್ಟು ಹೋಗಬಹುದು ಎಂಬ ಭಯ ನಿಮ್ಮಲ್ಲಿದೆ ಎಂದರ್ಥ.

ವಿಚಿತ್ರವಾಗಿ ವರ್ತಿಸಿ ಗಮನ ಸೆಳೆಯುವುದು

ವಿಚಿತ್ರವಾಗಿ ವರ್ತಿಸಿ ಗಮನ ಸೆಳೆಯುವುದು

ನಾನು ಬಿಟ್ಟು ಹೋಗುತ್ತೇನೆ, ನಾನು ದೂರ ಹೋಗತ್ತೇನೆ, ಸಾಯುತ್ತೇನೆ ಎಂದೆಲ್ಲಾ ಪದೇ-ಪದೇ ಹೇಳುವುದು, ಹೈ ಡ್ರಾಮಾ ಕ್ರಿಯೇಟ್‌ ಮಾಡುವುದು ಇವೆಲ್ಲಾ ಸಂಬಂಧದಲ್ಲಿ ಅಸುರಕ್ಷಿತೆ ಕಾಡಿದಾಗ ಉಂಟಾಗುವುದು.

ಮೇಲೆ ಹೇಳಿದಂತೆ ನೀವು ಅಥವಾ ನಿಮ್ಮ ಸಂಗಾತಿ ವರ್ತಿಸುತ್ತಿದ್ದರೆ ನಿಮ್ಮ ಸಂಬಂಧದಲ್ಲಿ ನಿಮಗೆ ಅಥವಾ ಅವರಿಗೆ ಇನ್‌ಸೆಕ್ಯೂರಿಟಿ ಕಾಡುತ್ತಿದೆ ಎಂದರ್ಥ, ಈ ರೀತಿ ಸಮಸ್ಯೆಗಳಿದ್ದಾಗ ನೀವೇನು ಮಾಡಬೇಕು, ಸಂಬಂಧ ಮತ್ತಷ್ಟು ಗಟ್ಟಿಯಾಗಿಸುವುದು ಹೇಗೆ ಎಂದು ನೋಡೋಣ:

ನಿಮ್ಮನ್ನು ನೀವು ಪ್ರೀತಿಸಿ, ಆತ್ಮವಿಶ್ವಾಸ ಹೆಚ್ಚಿಸಿ

ನಿಮ್ಮನ್ನು ನೀವು ಪ್ರೀತಿಸಿ, ಆತ್ಮವಿಶ್ವಾಸ ಹೆಚ್ಚಿಸಿ

ಅವರು ನಮ್ಮನ್ನು ಬಿಟ್ಟು ಹೋಗಬಹುದೇ ಎಂದು ಚಿಂತಿಸುವ ಬದಲಿಗೆ ನಿಮ್ಮನ್ನು ನೀವು ಪ್ರೀತಿಸಲು ಪ್ರಾರಂಭಿಸಿ, ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ. ಇನ್ನು ಆರ್ಥಿಕ ವಿಷಯದಲ್ಲಿ ನೀವು ಅವರನ್ನು ಸಂಪೂರ್ಣ ಅವಲಂಬಿಸಿದ್ದರೆ ನೀವು ದುಡಿಯಲು ಆರಂಭಿಸಿ. ದುಡಿಯಲು ಹೊರಗಡೆಯೇ ಹೋಗಬೇಕಾಗಿಲ್ಲ ನಿಮ್ಮಲ್ಲಿರುವ ಕೌಶಲ್ಯಗಳಿಂದ ಅಥವಾ ಏನಾದರೂ ಹೊಸ ಸ್ಕಿಲ್ ಕಲಿಯುವ ಮೂಲಕ ಅರ್ಥಿಕವಾಗಿ ಸ್ವಾಲಂಬಿಗಳಾಗಿ.

ಇಷ್ಟು ಮಾಡಿದರೆ ನಿಮ್ಮಲ್ಲಿ ತುಂಬಾ ಪಾಸಿಟಿವ್ ಬದಲಾವಣೆ ಕಾಣಲಾರಂಭಿಸುವುದು, ಅವರು ಬಿಟ್ಟು ಹೋದರೆ ಮುಂದೇನು ಎಂಬ ಚಿಂತೆ ದೂರಾಗುವುದು, ನಿಮ್ಮ ಪಾಸಿಟಿವ್ ನಡವಳಿಕೆ ಸಂಸಾರಲ್ಲಿ ನೆಮ್ಮದಿ, ಖುಷಿಯನ್ನು ಮರಳಿ ತರುತ್ತದೆ.

 ಮುಕ್ತವಾಗಿ ಮಾತನಾಡಿ

ಮುಕ್ತವಾಗಿ ಮಾತನಾಡಿ

ಒಂದು ಒಳ್ಳೆಯ ಸಂಸಾರದ ಕೀಲಿಕೈ ಮಾತು. ನಿಮ್ಮ ಮನದಲ್ಲಿ ಏನಿದೆ ಎಂಬುವುದನ್ನು ಸಂಗಾತಿ ಅರ್ಥೈಸಿಕೊಳ್ಳಲಿ ಎಂದು ಯೋಚಿಸುವ ಬದಲಿಗೆ ನಿಮ್ಮ ಮನಸ್ಸಿನಲ್ಲಿ ಏನಿದೆ, ನಿಮ್ಮ ಅನಿಸಿಕೆಗಳೇನು? ನಿಮಗೆ ಏನು? ಏನು ಇಷ್ಟವಾಗಲ್ಲ ಎಲ್ಲವನ್ನು ಮುಕ್ತವಾಗಿ ಮಾತನಾಡಿ. ಇದರಿಂದ ಎಷ್ಟೋ ಸಮಸ್ಯೆಗಳನ್ನು ಬಗೆಹರಿಸಬಹುದು.

 ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಅವಶ್ಯಕತೆಗಳನ್ನು ಪೂರೈಸಲು ಪ್ರಯತ್ನಿಸಬೇಕು

ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಅವಶ್ಯಕತೆಗಳನ್ನು ಪೂರೈಸಲು ಪ್ರಯತ್ನಿಸಬೇಕು

ಗಂಡ ಹೆಂಡತಿಯಿಂದ ಏನು ಬಯಸುತ್ತಿದ್ದಾನೆ ಎಂಬುವುದು ಹೆಂಡತಿಗೆ ತಿಳಿಯಬೇಕು, ಹೆಂಡತಿ ಗಂಡನಿಂದ ಏನು ಬಯಸುತ್ತಿದ್ದಾಳೆ ಎಂಬುವುದು ಗಂಡನಿಗೆ ತಿಳಿದಿರಬೇಕು. ಒಬ್ಬರು ಮತ್ತೊಬ್ಬರಿಗೆ ಒತ್ತಾಸೆಯಾಗಿ ನಿಲ್ಲಬೇಕು. ಹೀಗೆ ಮಾಡುವುದರಿಂದ ನಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿಸಬಹುದು.

ಭಿನ್ನತೆ ಇದ್ದರೆ ಸಂಬಂಧ ಗಟ್ಟಿಯಾಗುವುದು

ಭಿನ್ನತೆ ಇದ್ದರೆ ಸಂಬಂಧ ಗಟ್ಟಿಯಾಗುವುದು

ಸಂಬಂಧದಲ್ಲಿ ಇಬ್ಬರು ಒಂದೇ ರೀತಿ ಇದ್ದರೆ ಕಷ್ಟ. ನನು ಹೇಳಿದ್ದೇ ಆಗಬೇಕು, ನಾನು ಮಾಡುತ್ತಿರುವುದೇ ಸರಿ ಎಂಬಂತಿದ್ದರೆ ಅಥವಾ ಇಬ್ಬರು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಹಿಂದೇಟು ಹಾಕುವವರು ಆಗಿದ್ದರೆ ಅಂತ ಸಂಸಾರದಲ್ಲಿ ಸಮತೋಲನ ಇರುವುದಿಲ್ಲ. ಈ ರೀತಿ ಇದ್ದರೆ ನಿಮ್ಮಲ್ಲಿ ಒಬ್ಬರಾದರೂ ಬದಲಾಗಬೇಕಾಗುತ್ತದೆ.

ತುಂಬಾ ತಲೆ ಕೆಡಿಸಿಕೊಳ್ಳುವುದು ಕಡಿಮೆ ಮಾಡಿ

ತುಂಬಾ ತಲೆ ಕೆಡಿಸಿಕೊಳ್ಳುವುದು ಕಡಿಮೆ ಮಾಡಿ

ಅಯ್ಯೋ ಏನಾಗುತ್ತೆ ಎಂದು ನೆಗೆಟಿವ್ ಚಿಂತೆ ಮಾಡುವುದನ್ನು ಮೊದಲು ತಲೆಯಿಂದ ತೆಗೆದುಹಾಕಿ, ನೀವು ಖುಷಿಯಾಗಿರಲು ಪ್ರಯತ್ನಿಸಿ. ಕೆಲವೊಮ್ಮೆ ಸುಮ್ಮನೆ ಚಿಂತೆ ಮಾಡಿ ಕೆಲವರು ಬದುಕನ್ನು ಹಾಳು ಮಾಡಿಕೊಳ್ಳುತ್ತಾರೆ. ನಡೆಯಬೇಕಾಗಿರುವುದು ನಡೆದೇ ನಡೆಯುತ್ತೆ ನೀವು ಚಿಂತೆ ಮಾಡಿ ಏನೂ ಪ್ರಯೋಜನಿಲ್ಲ, ಆದಷ್ಟು ಪಾಸಿಟಿವ್ ಆಗಿ ಚಿಂತಿಸಿ ಎಲ್ಲವೂ ಒಳ್ಳೆಯದೇ ಆಗುತ್ತೆ. ಮದುರ ಬದುಕಿಗಾಗಿ ಹೇಳಿ ಚಿಯರ್ಸ್.

English summary

How to Overcome Insecurities in a Relationship in kannada

Feeling Insecurities In Relationship? How to overcome that read on...
Story first published: Friday, October 7, 2022, 18:32 [IST]
X
Desktop Bottom Promotion