For Quick Alerts
ALLOW NOTIFICATIONS  
For Daily Alerts

ಸಂಗಾತಿಯ ಅನೈತಿಕ ಸಂಬಂಧ ತಿಳಿದಾಗ ಏನು ಮಾಡಬಹುದು?

|

ನನಗೆ ಯಾವತ್ತೂ ಮೋಸ ಮಾಡಲ್ಲ ಎಂದು ನಮ್ಮದೆಲ್ಲವನ್ನೂ ಅವರೊಂದಿಗೆ ಹಂಚಿಕೊಂಡಿರುವಾಗ ಆ ಸಂಗಾತಿಯೇ ಮೋಸ ಮಾಡಿದರೆ? ಆ ಊಹಿಸಲೂ ಕೂಡ ಭಯಾನಕ ಅನಿಸುವುದು, ಆದರೆ ದುರಾದೃಷ್ಟವೆಂದರೆ ಎಷ್ಟೋ ಜನರ ಬದುಕಿನಲ್ಲಿ ಇದು ನಡೆಯುತ್ತಿರುತ್ತದೆ. ಅವರು ನಮಗೆ ಮೋಸ ಮಾಡಲು ಕಾರಣ ಏನೇ ಇರಹುದು, ಆದರೆ ಅವರಿಂದ ನಮಗೆ ಮೋಸ ಆಗಿದೆ, ನಾವು ಅಷ್ಟು ನಂಬಿದ ವ್ಯಕ್ತಿ, ಬೇರೆ ಯಾವುದೋ ವ್ಯಕ್ತಿಯ ಆಕರ್ಷಣೆ, ಮೋಸಕ್ಕೆ ಸಿಲುಕಿದ್ದಾನೆ/ಳೆ ಎಂದು ಗೊತ್ತಾದಾಗ ಸಾವು ಈ ಕ್ಷಣವೇ ಬರಬಾರದಾ ಎಂದನಿಸದೆ ಇರಲ್ಲ.

ಸಂಸಾರದಲ್ಲಿ ಸುಂಟರಗಾಳಿ

ಸಂಸಾರದಲ್ಲಿ ಸುಂಟರಗಾಳಿ

ಏಕೆಂದರೆ ನಮ್ಮೆಲ್ಲಾ ಬದುಕು ಅವರಿಗಾಗಿ ಸವಿಸಿರುತ್ತೇವೆ, ನಮ್ಮ ಆಸೆ-ಆಕಾಂಕ್ಷೆಯೆಲ್ಲಾ ಬದಿಗಿಟ್ಟು ಅವರ ಇಷ್ಟ-ಕಷ್ಟಗಳಿಗೆ ಸ್ಪಂದಿಸಿರುತ್ತೇವೆ, ಅವರ ಜೊತೆಗೆ ಜೀವಿಸುತ್ತಿರುವುದು ಮಾತ್ರ, ಅವರ ಜೊತೆಗೆ ಭವಿಷ್ಯದ ಕನಸುಗಳನ್ನು ಕಟ್ಟಿರುತ್ತೇವೆ, ಹಾಗಿರುವಾಗ ಯಾವುದೋ ವ್ಯಕ್ತಿ ನಮ್ಮವನು/ ನಮ್ಮವಳನ್ನು ಕಸಿದುಕೊಂಡಾಗ ನಾನು ಏನು ಕಮ್ಮಿ ಮಾಡಿದ್ದೇನೆ ಎಂದಿ ಹೀಗೆ ಮಾಡಿದೆ ಎಂದು ಚೀರಿ-ಚೀರಿ ಕೂಗಬೇಕೆನಿಸುವುದು, ನಮ್ಮ ಮೇಲಿಯೇ ನಮಗೆ ಬೇಸರ, ಅಸಹ್ಯ ಎಲ್ಲವೂ ಮೂಡುವುದು... ಛೀ... ಇಂಥ ವ್ಯಕ್ತಿ ಜೊತೆ ನಾನು ಜೀವಿಸಿರುವುದಾ ಎಂದು ಅನಿಸುವುದು.

ನಮ್ಮ ಸಂಗಾತಿಯ ಅನೈತಿಕ ಸಂಬಂಧದ ಬಗ್ಗೆ ತಿಳಿದಾಗ ಯಾರಿಗಾದರೂ ಅದನ್ನು ಸಹಿಸಲು ಸಾಧ್ಯವಾಗಲ್ಲ ಆ ಸಂಸಾರದಲ್ಲಿ ಸುಂಟರಗಾಳಿ ಏಳುವುದು, ಆ ಸುಂಟರಗಾಳಿಗೆ ಸಿಲುಕಿ ಆ ಸುಂದರ ಸಂಸಾರ ಕಣ್ಮರೆಯಾಗುವುದು. ಎಷ್ಟೋ ಅನೈತಿಕ ಸಂಬಂಧಗಳು 40-45ರ ಮೇಲೆ ಹುಟ್ಟಿಕೊಳ್ಳುತ್ತದೆ, ಹೀಗಾದಾಗ ಅಲ್ಲಿ ನಷ್ಟವಾಗುವುದು ಆ ವ್ಯಕ್ತಿಯ ಸಂಗಾತಿಗೆ ಮಾತ್ರವಲ್ಲ, ಮಕ್ಕಳಿಗೂ ಕೂಡ. ಆಗ ಆ ವ್ಯಕ್ತಿ ಜೊತೆ ಇರಲೂ ಆಗದೆ, ಬಿಟ್ಟು ನಡೆಯಲೂ ಆಗದೆ ತುಂಬಾ ಒದ್ದಾಡುವಂತವರೂ ಇದ್ದಾರೆ.

ಸಂಗಾತಿಯಿಂದ ಮೋಸವಾಯ್ತು ಎಂದು ತಮ್ಮ ಬದುಕಿನಲ್ಲಿ ಆತ್ಮಹತ್ಯೆಯಂಥ ತಪ್ಪು ನಿರ್ಧಾರ ತೆಗೆದುಕೊಂಡ ಕೆಲವರ ಸುದ್ದಿಗಳನ್ನು ಓದುತ್ತೇವೆ, ಸಂಗಾತಿ ನಮಗೆ ಮೋಸ ಮಾಡುತ್ತಿದ್ದಾನೆ/ಳೆ ಎಂದು ಗೊತ್ತಾಗ ಕೆಲವೊಮ್ಮೆ ಮನಸ್ಸು ಮಾಡಿದರೆ ನಮ್ಮವರನ್ನು ನಮಗೇ ಮರಳಿ ಪಡೆಯಬಹುದು, ಆದರೆ ಎಷ್ಟೋ ಕುಟುಂಬಗಳಲ್ಲಿ ಗೊತ್ತಾದಾಗ ಕೂಗಿ, ರಂಪಾಟ ಮಾಡಿ ಮತ್ತಷ್ಟು ಅಂತರ ಕಾಯ್ದುಕೊಂಡು ನಿಮ್ಮಿಬ್ಬರ ಬಾಳಿನಲ್ಲಿ ನುಗ್ಗಿದ ವ್ಯಕ್ತಿಗೆ ಮತ್ತಷ್ಟು ದಾರಿ ಮಾಡಿಕೊಡುತ್ತೇವೆ, ಹಾಗಾದರೆ ಇಂಥ ವಿಷಯ ಗೊತ್ತಾದಾಗ ಏನು ಮಾಡಿದರೆ ಸಂಬಂಧ ಉಳಿಸಿಕೊಳ್ಳಬಹುದು ಎಂದು ನೋಡೋಣ:

ಅನೈತಿಕ ಸಂಬಂಧ ಗೊತ್ತಾದರೆ ಪ್ರತಿಕ್ರಿಯಿಸಲು ಹೋಗಬೇಡಿ

ಅನೈತಿಕ ಸಂಬಂಧ ಗೊತ್ತಾದರೆ ಪ್ರತಿಕ್ರಿಯಿಸಲು ಹೋಗಬೇಡಿ

ಹೇಳುವುದು ಸುಲಭ, ಆದರೆ ಅದು ಎಷ್ಟು ಕಷ್ಟ ಎಂಬುವುದು ನಮಗೂ ಗೊತ್ತು. ಆದರೆ ನಿಮಗೆ ವಿಷಯ ಗೊತ್ತಾಗುವವರೆಗೂ ಅವರಿಗೆ ತುಂಬಾ ಅಳುಕು ಇರುತ್ತದೆ, ನಿಮ್ಮಿಂದ ವಿಷಯ ಬಚ್ಚಿಡಲು ಪ್ರಯತ್ನಿಸುತ್ತಾರೆ. ಅವರ ಈ ಅಳುಕನ್ನೇ ನೀವು ಪ್ಲಸ್‌ ಪಾಯಿಂಟ್‌ ಆಗಿ ಬದಲಾಯಿಸಿ. ಅವರ ಮೇಲೆ ತುಂಬಾ ಪ್ರೀತಿ ತೋರಿಸಿ, ಅವರಿಗೆ ಇಷ್ಟವಾಗುವಂತೆ ನಡೆದುಕೊಳ್ಳಿ, ಅವರನ್ನು ನಿಮ್ಮತ್ತ ಸೆಳೆಯಲೂ ಎಲ್ಲಾ ಪ್ರಯತ್ನ ಮಾಡಿ. ಆದಷ್ಟೂ ಸಮಯ ಅವರ ಇರಲು ಪ್ರಯತ್ನಿಸಿ, ಅವರು ನಿಮ್ಮಿಂದ ಬಯಸಿದ ಸುಖ ಸಿಗದೆ ಬೇರೆ ಕಡೆ ಮುಖ ಮಾಡಿದ್ದರೆ ಖಂಡಿತ ನಿಮ್ಮ ಬಳಿ ಬರುತ್ತಾರೆ,ಮತ್ತೆ ಸುಂದರವಾದ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸಿ, ಮಕ್ಕಳ ಬಗ್ಗೆ ಮಾತನಾಡಿ, ಅವರ ಭವಿಷ್ಯದ ಬಗ್ಗೆ ಮಾತನಾಡಿ, ಆಗ ಅವರಿಗೆ ತಾನು ಮಾಡುತ್ತಿರುವ ತಪ್ಪೇನು ಅರಿವಾಗುವುದು. ಆದರೆ ಅವರಿಗೆ ನಿಮಗೆ ವಿಷಯ ಗೊತ್ತಿತ್ತು ಎಂದು ತಿಳಿಸಲು ಹೋಗಬೇಡಿ.

ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದರೆ

ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದರೆ

ಒಂದು ವೇಳೆ ರೆಡ್‌ ಹ್ಯಾಂಡ್‌ ಆಗಿ ನಿಮ್ಮ ಬಳಿ ಸಿಕ್ಕಿ ಬಿದ್ರೆ ಕಿರುಚಾಡಿ ರಂಪಾಟ ಮಾಡಬೇಕು ಅನಿಸುತ್ತದೆ, ಆದರೆ ಆ ಸಂಬಂಧದಲ್ಲಿ ಮುಂದುವರೆಯುವ ಇಚ್ಛೆ ನಿಮಗಿದ್ದರೆ ಆ ರೀತಿ ಮಾಡಲು ಹೋಗಬೇಡಿ, ನಿಮ್ಮ ಸಂಗಾತಿಯನ್ನು ಪ್ರತ್ಯೇಕವಾಗಿ ಕರೆದು ಏಕೆ ಹೀಗೆ ನಡೆದುಕೊಳ್ಳುತ್ತಿದ್ದೀರಾ? ಎಂದು ಕೇಳಿ ಅವರಲ್ಲಿ'ಪಶ್ಚಾತಾಪ ಕಂಡು ಬಂದರೆ ಅವರಿಗೂ ತಾವು ಮಾಡುತ್ತಿರುವ ಕಾರ್ಯದ ಬಗ್ಗೆ ಪಶ್ಚಾತಾಪವಿದೆ ಎಂದರ್ಥ, ಅದೇ ಆ ವ್ಯಕ್ತಿಗೆ ಹೊಸದಾಗಿ ಸಂಬಂಧ ಬೆಳೆದ ಆಕರ್ಷಣೆ ಅಧಿಕವಿದ್ದಾಗ ನಿಮ್ಮನ್ನು ದೂಷಿಸಬಹುದು, ನೀವೇ ಸರಿಯಿಲ್ಲ, ತಾನು ಸರಿ ಎಂಬಂತೆ ವಾದಿಸಬಹುದು. ನಿಮ್ಮ ಸಂಗಾತಿ ಆ ರೀತಿ ವರ್ತಿಸಿದರೆ ನನ್ನ ಬದುಕಿನಲ್ಲಿ ನಿಜವಾಗಲೂ ಈ ವ್ಯಕ್ತಿಯ ಅವಶ್ಯಕತೆ ಇದೆಯೇ ಎಂದು ನೀವು ಚಿಂತಿಸುವುದು ಒಳ್ಳೆಯದು.

ಅವರು ಮಾಡಿರುವ ತಪ್ಪಿಗೆ ನಿಮಗೇಕೆ ಶಿಕ್ಷೆ?

ಅವರು ಮಾಡಿರುವ ತಪ್ಪಿಗೆ ನಿಮಗೇಕೆ ಶಿಕ್ಷೆ?

ಸಂಗಾತಿಗೆ ಅನೈತಿಕ ಸಂಬಂಧವಿದೆ ಎಂದು ತಿಳಿದಾಗ ಆತ್ಮಹತ್ಯೆಯ ಆಲೋಚನೆ ಮಾಡುವುದು ಎಷ್ಟು ಸರಿ? ಅವರು ಅವರ ಬದುಕನ್ನು ಖುಷಿಯಾಗಿ ಕಳೆಯುತ್ತಿರುವಾಗ ಅಂಥ ವ್ಯಕ್ತಿಗಾಗಿ ನಿಮ್ಮ ಅಮೂಲ್ಯ ಪ್ರಾಣ ಕಳೆದುಕೊಳ್ಳಬೇಕೆ? ಮತ್ತೊಂದು ಸಂಬಂಧ ಹುಡುಕಿಕೊಂಡು ಹೋದವರು ಯಾರೂ ನೆಮ್ಮದಿಯಾಗಿರಲ್ಲ, ಕ್ಷಣಿಕ ಸುಖಕ್ಕೆ ಹೋಗುತ್ತಾರೆ, ನಂತರ ಜೀವನ ಪೂರ್ತಿ ತಾವು ಮಾಡಿರುವ ತಪ್ಪಿನ ಫಲ ಉಣ್ಣುತ್ತಾರೆ, ಏನೂ ತಪ್ಪೇ ಮಾಡದ ನೀವ್ಯಾಕೆ ಬೇಸರಪಡುತ್ತೀರಿ, ಆ ವ್ಯಕ್ತಿಗೆ ನಿಮ್ಮ ಜೊತೆ ಬದುಕುವ ಯೋಗ್ಯತೆ ಇಲ್ಲ ಭಾವಿಸಿ ಹೊರನಡೆಯಿರಿ ಹೀಗೆ ಹೊರ ನಡೆಯುವ ಮುನ್ನ ಮುಂದೆಂದೂ ಆ ವ್ಯಕ್ತಿಗೆ ನಿಮ್ಮ ಬದುಕಿನಲ್ಲಿ ಸ್ಥಾನವಿಲ್ಲವೆಂದು ಖಚಿತ ಪಡಿಸಿ ಮುಂದೆ ನಡೆಯಿರಿ. ಪ್ರತಿಯೊಂದು ಬದುಕಿಗೂ ಒಂದು ಅರ್ಥ ಇರುತ್ತದೆ, ನಿಮ್ಮ ಬದುಕಿನ ಗುರಿಯೇನು ಕಂಡುಕೊಳ್ಳಿ, ತುಂಬಾ ಚೆನ್ನಾಗಿ ಜೀವಿಸಿ... ಹೇಗೆ ಜೀವಿಸಬೇಕೆಂದರೆ ನಿಮ್ಮನ್ನು ಬೇಡ ಎಂದು ಬಿಟ್ಟು ಹೋದ ವ್ಯಕ್ತಿ ನಿಮ್ಮನ್ನು ನೋಡಿದ ಮೇಲೆ ಛೇ... ನನ್ನಿಂದ ಎಂಥ ತಪ್ಪಾಯ್ತು ಎಂದು ಮನಸ್ಸಿನಲ್ಲಿ ಪ್ರತಿಕ್ಷಣ ಪಶ್ಚಾತಾಪ ಅನುಭವಿಸಬೇಕು, ಅಷ್ಟು ಚೆನ್ನಾಗಿ ಬದುಕಿ ತೋರಿಸಿ.

ಅನೈತಿಕ ಸಂಬಂಧ: ಅನೈತಿಕ ಸಂಬಂಧ ಹಲವಾರು ಕಾರಣಗಳಿಂದ ಉಂಟಾಗುತ್ತದೆ, ಪ್ರಮುಖವಾಗಿ ಸಂಗಾಯಿಯಿಂದ ಲೈಂಗಿಕ ತೃಪ್ತಿ ಸಿಗದೇ ಹೋದಾಗ ಬೇರೆಯವರ ಆಕರ್ಷಣೆಗೆ ಬೀಳುತ್ತಾರೆ. ಸಂಗಾತಿ ತನ್ನತ್ತ ಗಮನ ನೀಡದೇ ಹೋದಾಗ ಬೇರೆ ಯಾರೋ ಸ್ವಲ್ಪ ಪ್ರೀತಿ ತೋರಿಸಿದರೂ ಕರಗಿ ಹೋಗುತ್ತಾರೆ. ಆದ್ದರಿಂದ ಮದುವೆಯಾದ ಮೇಲೆ ನಮ್ಮ ಸಂಬಂಧ ಗಟ್ಟಿಯಾಗಿಸಲೂ ನಮ್ಮ ಪ್ರಯತ್ನ ಕೂಡ ಕೂಡ ಮುಖ್ಯವಾಗಿರುತ್ತದೆ.

English summary

How To Deal With A Cheater in Kannada

Infidelity: How To Deal With A Cheater, Read on.....
Story first published: Thursday, December 8, 2022, 16:26 [IST]
X
Desktop Bottom Promotion