For Quick Alerts
ALLOW NOTIFICATIONS  
For Daily Alerts

ಅಟೋಪೈಲೆಟ್‌ ಮ್ಯಾರೇಜ್: ಪತಿ-ಪತ್ನಿ ಅವರವರ ಪಾಡಿಗಿದ್ದರೆ ಸಂಸಾರ ಡೇಂಜರ್‌ನಲ್ಲಿದೆ ಎಂದರ್ಥ!

|

ಮದುವೆಯಾದಾಗ ಅದೇನು ಪ್ರೀತಿ, ಒಂದು ಕ್ಷಣ ಒಬ್ಬರನ್ನೊಬ್ಬರಿಗೆ ಬಿಟ್ಟು ಇರಲಿಕ್ಕೆ ಸಾಧ್ಯವಿಲ್ಲ. ರೊಮ್ಯಾನ್ಸ್‌, ಸರ್‌ಪ್ರೈಸ್‌ ಪ್ರತಿದಿನ ಎಷ್ಟೊಂದು ಸುಂದರ. ಹೀಗೆ ಸ್ವಲ್ಪ ದಿನಗಳು ಕಳೆಯುತ್ತೆ... ವೈವಾಹಿಕ ಜೀವನ ಎಂದ ಮೇಲೆ ಯಾವತ್ತೂ ರೊಮ್ಯಾಂಟಿಕ್‌ ಅಲ್ಲ, ಅಲ್ಲಿ ಹಲವಾರು ಸಮಸ್ಯೆಗಳು ಬರುತ್ತದೆ. ಆಗ ಇಬ್ಬರು ಜೊತೆಯಾಗಿ ನಿಂತು ಆ ಸವಾಲುಗಳನ್ನು ಹೇಗೆ ಎದುರಿಸುತ್ತಾರೆ ಎಂಬುವುದೇ ದಾಂಪತ್ಯ.

Autopilot Marriage

ಆದರೆ ಎಷ್ಟು ದಾಂಪತ್ಯದಲ್ಲಿ ಇದು ಕಂಡು ಬರುವುದಿಲ್ಲ, ಮದುವೆಯಾಗಿ ಕೆಲವು ತಿಂಗಳುಗಳು ಅಥವಾ ವರ್ಷಗಳು ಕಂಡು ಬಂದಾಗ ಅವರವರ ಪಾಡಿಗೆ ಅವರಿರುತ್ತಾರೆ, ಹಾಗಂತ ಅವರೇನು ವಿಚ್ಛೇದನ ಪಡೆದು ಬೇರೆ ಆಗಲ್ಲ, ಇಬ್ಬರು ಜೊತೆಯಲ್ಲಿಯೇ ಇರುತ್ತಾರೆ ಆದರೆ ಜೊತೆಯಾಗಿ ಇರಲ್ಲ ಅಷ್ಟೇ. ಜೊತೆಯಲ್ಲಿಯೇ, ಜೊತೆಯಾಗಿಯೇ ಇರುವುದಕ್ಕೆ ವ್ಯತ್ಯಾಸವಿದೆ, ಅದನನ್ನೇ ಅಟೋಪೈಲೆಟ್‌ ರಿಲೇಷನ್‌ಶಿಪ್‌ ಎಂದು ಕರೆಯಲಾಗುವುದು.

ಈ ಅಟೋಪೈಲೆಟ್‌ ಸಂಬಂಧದ ಲಕ್ಷಣಗಳೇನು ಎಂದು ನೋಡೋಣ ಬನ್ನಿ:

ಸಂಬಂಧ ಅಟೋಪೈಲೆಟ್‌ ಆಗಿದೆಯೇ? ತಿಳಿಯುವುದು ಹೇಗೆ?

ಸಂಬಂಧ ಅಟೋಪೈಲೆಟ್‌ ಆಗಿದೆಯೇ? ತಿಳಿಯುವುದು ಹೇಗೆ?

ಹೊರ ಸಮಾಜಕ್ಕೆ ಅವರಿಬ್ಬರು ವಿವಾಹಿತರು, ಆದರೆ ಅವರಿಬ್ಬರಿಗೆ ಒಬ್ಬರಿಗೊಬ್ಬರು ಅವಶ್ಯಕ ಅಂತ ಅನಿಸುವುದೇ ಇಲ್ಲ. ಅವನ ಪಾಡಿಗೆ ಅವನಿದ್ದರೆ ಇವಳ ಪಾಡಿಗೆ ಇವಳಿರುತ್ತಾಳೆ ಅಂದರೆ ವೈವಾಹಿಕ ಸಂಬಂಧದ ಮಧುರತೆ ಉಳಿಸಲು ಇಬ್ಬರೂ ಪ್ರಯತ್ನಿಸುವುದಿಲ್ಲ.

ಅಟೋಪೈಲೆಟ್‌ ಸಂಬಂಧದ ಲಕ್ಷಣಗಳು

* ಮದುವೆಯೆಂದರೆ ಹುಡುಗಾಡಿಕೆ

ಮದುವೆಯೆಂದರೆ ಹುಡುಗಾಡಿಕೆಯಲ್ಲ ಎಂದು ಹಿರಿಯರು ಬೈಯುತ್ತಿರುತ್ತಾರೆ ಆದರೆ ಕೆಲವರಿಗೆ ಇದೊಂದು ಹುಡುಗಾಡಿಕೆಯೇ ಇಬರು ಸಂಬಂಧದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ಮನೆಯವರ ಒತ್ತಾಯಕ್ಕೋ ಆ ಕ್ಷಣದ ಅಫೆಕ್ಷನ್‌ಗೋ ಮತ್ತೇನೋ ಕಾರಣಕ್ಕೆ ಒಕೆ ಹೇಳಿ ಮದುವೆಯಾಗುತ್ತಾರೆ, ನಂತರ ಒಬ್ಬರಿಗೊಬ್ಬರು ಅಗ್ಯತ ಅನಿಸುವುದೇ ಇಲ್ಲ.

ತಮ್ಮ ಬಗ್ಗೆ ತುಂಬಾ ಬ್ಯುಸಿಯಾಗುತ್ತಾರೆ

ತಮ್ಮ ಬಗ್ಗೆ ತುಂಬಾ ಬ್ಯುಸಿಯಾಗುತ್ತಾರೆ

ಪ್ರತಿಯೊಬ್ಬರಿಗೆ ಅವರದ್ದೇ ಆದ ಆಸೆ, ಗುರಿ ಎಲ್ಲವೂ ಇರುತ್ತದೆ, ಆದರೆ ಮದುವೆಯಾದ ಮೇಲೆ ನಮ್ಮ ಸಂಗಾತಿಯ ಆಸೆ, ಗುರಿಯ ಕಡೆಗೂ ಗಮನ ಹರಿಸುತ್ತೇವೆ, ಆದರೆ ಈ ಅಟೋಪೈಲೆಟ್‌ ಸಂಬಂಧದಲ್ಲಿ ತಮ್ಮ ಅಗ್ಯತಗಳ ಹಿಂದೆ ಬಿದ್ದು ದಾಂಪತ್ಯ ಜೀವನ ಹಾಳು ಮಾಡಿಕೊಳ್ಳುತ್ತಾರೆ.

ದೈಹಿಕ ಆಸಕ್ತಿ ಕುಗ್ಗುವುದು

ಇವರ ಸಂಬಂಧದಲ್ಲಿ ದೈಹಿಕ ಆಸಕ್ತಿ ಕೂಡ ಇರುವುದಿಲ್ಲ, ಯಾವಾಗ ದಾಂಪತ್ಯದಲ್ಲಿ ದೈಹಿಕ ಸಂಬಂಧ ಕಡಿಮೆಯಾಗುತ್ತೋ ದಾಂಪತ್ಯದ ಬುಡ ಅಲ್ಲಾಡುವುದು.

 ಅಟೋಪೈಲೆಟ್‌ ಮದುವೆ ಸರಿಪಡಿಸಬಹುದೇ?

ಅಟೋಪೈಲೆಟ್‌ ಮದುವೆ ಸರಿಪಡಿಸಬಹುದೇ?

ಕಾಲ ಮಿಂಚಿ ಹೋಗುವ ಮುನ್ನ ಎಚ್ಚೆತ್ತುಕೊಂಡರೆ ನಿಮ್ಮ ದಾಂಪತ್ಯ ಮತ್ತೆ ಮಧುರವಾಗಿಸಬಹುದು. ನಿಮಗೆ ನಿಮ್ಮ ಸಂಬಂಧದಲ್ಲೂ ಮೇಲಿನ ಲಕ್ಷಣಗಳು ಕಂಡು ಬರುತ್ತಿದೆ ಎಂದಾದರೆ ದಾಂಪತ್ಯ ಜೀವನ ಗಟ್ಟಿಯಾಗಲು ಹೀಗೆ ಮಾಡಿ.

ಇಬ್ಬರು ಒಂದಾಗಲು ಪ್ರಯತ್ನಿಸಿ

ಇಬ್ಬರು ದೈಹಿಕವಾಗಿ, ಮಾನಸಿಕವಾಗಿ ಒಂದಾಗಲು ಪ್ರಯತ್ನಿಸಿ. ಸಂಗಾತಿಯ ಆಸಕ್ತಿ ಕಡೆಯೂ ಗಮನ ನೀಡಿ, ಸಂಬಂಧದಲ್ಲಿ ಎಲ್ಲಿ ತಪ್ಪುತ್ತಿದೆ ಎಂಬುವುದನ್ನು ಅವಲೋಕಿಸಿ, ಸರಿಪಡಿಸಲೂ ಪ್ರಯತ್ನಿಸಿ.

ಇಬ್ಬರು ಮಾತನಾಡಿ

ಮಾತನಾಡಲು ವಿಷಯವೇ ಇಲ್ಲ ಎಂದು ಕೂತರೆ ಮಾತೇ ಇರಲ್ಲ, ದಿನಾ ಮಾತನಾಡಿ, ಜೊತೆಯಾಗಿ ವಾಕಿಂಗ್‌ ಮಾಡುವುದು, ವ್ಯಾಯಾಮ ಮಾಡುವುದು ಮಾಡಿ, ಕೆಲವೊಂದು ಇಂಟೆರೆಸ್ಟಿಂಗ್‌ ಸಂಗತಿಗಳನ್ನು ಹಂಚಿಕೊಳ್ಳಿ.

ನಿಮ್ಮ ಸಂಗಾತಿಯನ್ನು ಕಂಟ್ರೋಲ್ ಮಾಡಬೇಡಿ

ನಿಮ್ಮ ಸಂಗಾತಿಯನ್ನು ಕಂಟ್ರೋಲ್ ಮಾಡಬೇಡಿ

ಯಾವುದೇ ಕಾರಣಕ್ಕೆ ಸಂಗಾತಿಯನ್ನು ಕಂಟ್ರೋಲ್ ಮಾಡಲು ಹೋಗಬೇಡಿ, ಅವರನ್ನು ಅವರ ಪಾಡಿಗೆ ಬಿಡಿ, ಕಂಟ್ರೋಲ್‌ ಮಾಡಿದರೆ ಅವರಿಗೆ ನಿಮ್ಮಿಂದ ದೂರ ಇರಬೇಕೆನಿಸುವುದು, ಹಾಗೆ ಮಾಡಲು ಹೋಗಬೇಡಿ.

ನಿಮ್ಮ ಸಂಗಾತಿಯಲ್ಲಿರುವ ಒಳ್ಳೆಯ ಗುಣಗಳನ್ನೂ ಗಮನಿಸಿ

ನೀವು ಅವರ ಬಗ್ಗೆ ಗಮನ ನೀಡದೆ ಹೋದರೆ ಅವರು ಏನು ಮಾಡಿದರೂ ತಪ್ಪಾಗಿಯೇ ಕಾಣುವುದು, ಆದರೆ ಅವರನ್ನು ನೀವು ಗಮನಿಸಿದರೆ ಅವರ ಒಳ್ಳೆಯ ಗುಣಗಳೂ ಗಮನಕ್ಕೆ ಬರುತ್ತದೆ.

ಥೆರಪಿಸ್ಟ್ ಭೇಟಿಯಾಗಿ

ನಿಮ್ಮ ಸಮಸ್ಯೆಗೆ ನೀವೇ ಪರಿಹಾರ ಕಂಡು ಹಿಡಿಯಲು ಸಾಧ್ಯವಾಗದಿದ್ದರೆ ಥೆರಪಿಸ್ಟ್ ಭೇಟಿಯಾಗಿ ಅವರು ನಿಮಗೆ ಸಲಹೆ ನೀಡುತ್ತಾರೆ.

English summary

How To Deal An Autopilot Marriage in kannada

Autopilot Marriage: How autopilot affects in relationship, how to correct it read on...
X
Desktop Bottom Promotion