For Quick Alerts
ALLOW NOTIFICATIONS  
For Daily Alerts

ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?

|

ಮದುವೆಯಾದ ಮೇಲೂ ಎಲ್ಲವನ್ನೂ ಅಮ್ಮನಿಗೆ ಹೇಳುವ, ಎಲ್ಲಾದಕ್ಕೂ ಅಮ್ಮನ ಪರ್ಮಿಷನ್‌ ಕೇಳು ಗಂಡನಿದ್ದರೆ ಕೆಲವೊಮ್ಮೆ ಅದು ನುಂಗಲಾರದ ತುತ್ತಾಗುತ್ತದೆ. ಆಚೆ ಹೇಳಲೂ ಆಗದೇ, ಸುಮ್ಮನಿರಲೂ ಆಗದೆ ಅಸಮಾಧಾನ ಶುರುವಾಗುತ್ತೆ.

warning signs of a mamas boy

ಇದೇ ಮುಂದೆ ದಾಂಪತ್ಯದಲ್ಲಿ ದೊಡ್ಡ ಸಮಸ್ಯೆಯಾಗಿ ಡಿವೋರ್ಸ್‌ಗೂ ಕಾರಣವಾಗಬಹುದು. ಇದು ಆಗಬಾರದೆಂದರೆ, ನಿಮ್ಮ ದಾಂಪತ್ಯ ಸುಖಮಯವಾಗಿ ಮುಂದುವರಿಯಬೇಕೆಂದರೆ ಈ ಟಿಪ್ಸ್ ಮಿಸ್‌ ಮಾಡದೇ ಓದಿ.

ಅಮ್ಮನ ಮಗ ಎಂದು ಸೂಚಿಸುವ ಲಕ್ಷಣಗಳಿದು..

1. ಮಿತಿಯನ್ನು ಹಾಕಿಕೊಳ್ಳಿ

1. ಮಿತಿಯನ್ನು ಹಾಕಿಕೊಳ್ಳಿ

ನಿಮ್ಮ ಪತಿ ಅಮ್ಮನ ಮಗನೆಂದು ಅರ್ಥಮಾಡಿಕೊಂಡ ಮೇಲೆ ನೀವು ಎಲ್ಲಿಯವರೆಗೆ ಅವರ ನಡವಳಿಕೆಗಳನ್ನು ಸಹಿಸಿಕೊಳ್ಳುತ್ತೀರಿ ಎನ್ನುವುದನ್ನು ನಿರ್ಧರಿಸಿಕೊಳ್ಳಿ. ಉದಾಹರಣೆಗೆ ನೀವಿಬ್ಬರೂ ಜೊತೆಯಲ್ಲಿ ಸಮಯ ಕಳೆಯುವಾಗ ಅತ್ತೆ ಬಂದು ಅಡ್ಡಿಸದೇ ಇರುವುದು. ಅತ್ತೆಯೊಂದಿಗೆ ನಿಯಮಿತವಾಗಿ ಕಾಲ್‌ ಮಾಡಿ ಮಾತನಾಡಲು ನಿಮಗೆ ತೊಂದರೆಯಿಲ್ಲ ಎಂದು ನೀವು ಹೇಳಬಹುದು. ಇದರ ಹೊರತಾಗಿ ನಿಮ್ಮದೊಂದಿಗೆ ಚರ್ಚಿಸುವಂತಹ ವಿಷಯಗಳನ್ನು ಅಮ್ಮನೊಂದಿಗೆ ಮಾತ್ರವೇ ಮಾತನಾಡುವುದು ಸರಿ ಹೋಗದಿರಬಹುದು. ಹೆಚ್ಚಿನವರು ಮಾಡುವ ದೊಡ್ಡ ತಪ್ಪೆಂದರೆ ತಮ್ಮ ಹತಾಶೆಯನ್ನು ಕೋಪದೊಂದಿಗೆ ಯೋಚನೆಯನ್ನೇ ಮಾಡದೇ ಪತಿಗೆ ಅಥವಾ ಅತ್ತೆಗೆ ಬಾಯಿಗೆ ಬಂದಿದ್ದು ಹೇಳಿಬಿಡುತ್ತಾರೆ. ಹಾಗೆ ಮಾಡಬೇಡಿ. ನಿಮ್ಮ ಅಗತ್ಯವನ್ನು ಪತಿಯೂ ಅರಿಯುವಂತೆ ನಿಮ್ಮ ವೈಯಕ್ತಿಕ ಗುರುತನ್ನು ಬೆಳೆಸಿಕೊಳ್ಳಿ.

ಮದುವೆಯಾದ ಮೇಲೆ ನೀವು ಪತಿ ಪತಿಯ ಕುಟುಂಬಕ್ಕಾಗಿ ಮಾತ್ರ ಕೆಲಸ ಮಾಡಬೇಕೆಂದಿಲ್ಲ. ನಿಮಗಾಗಿ ನೀವು ಕೆಲಸ ಮಾಡಿ, ಹವ್ಯಾಸವನ್ನು ಕಂಡುಕೊಳ್ಳಿ, ಹೊಸ ಆಸಕ್ತಿಗಳನ್ನು ಅನ್ವೇಷಿಸಿ ಮತ್ತು ನಿಮ್ಮ ಗಂಡನ ಹೊರಗಿನ ಸ್ನೇಹಿತರು ಮತ್ತು ಕುಟುಂಬದೊಂದಿಗೆ ನಿಮ್ಮ ಸಂಬಂಧವನ್ನು ಅಭಿವೃದ್ಧಿಪಡಿಸಿ. ನೀವು ಸ್ವತಂತ್ರರು ಎಂಬುದನ್ನು ಅವರು ಗುರುತಿಸಬೇಕು.

ಅಸಮಾಧಾನವನ್ನು ತಪ್ಪಿಸಿ

ಅಸಮಾಧಾನವನ್ನು ತಪ್ಪಿಸಿ

ಪತಿ ಪ್ರತಿಬಾರಿಯೂ ತನ್ನ ತಾಯಿಗೇ ಆದ್ಯತೆಯನ್ನು ನೋಡಿದರೆ ಯಾರಿಗಾದರೂ ಅಸಮಾಧಾನ ಉಂಟಾಗೋದು ಸಹಜ. ಆದರೆ ಶಾಂತವಾಗಿರಿ. ನಿಮ್ಮ ಗಂಡನ ಮುಂದೆ ಅವರ ತಾಯಿಯ ಬಗ್ಗೆ ಅಸಮಾಧಾನ ತೋರುವುದು ಅವರನ್ನು ಕೆರಳಿಸಬಹುದು. ನಕಾರಾತ್ಮಕವಾಗಿ ಅವರ ಬಗ್ಗೆ ಮಾತನಾಡಬೇಡಿ, ಇದು ಅವರಿಗೆ ನೋವುಂಟು ಮಾಡಬಹುದು. ಇದರ ಬದಲಾಗಿ ನೀವು ಕೋಪಗೊಳ್ಳದೇ ದೃಢವಾಗಿರಿ. ನಿಮ್ಮ ಅತ್ತೆಯೊಂದಿಗೆ ಪ್ರತೀ ಬಾರಿ ನೀವೂ ಹೊರಗೆ ಹೋಗಬೇಕು ಎನ್ನುವ ನಿಯಮವಿದ್ದರೆ ಈ ಬಾರಿ ನಿಮಗೆ ಅದರ ಬಗ್ಗೆ ಆಸಕ್ತಿ ಇಲ್ಲವೆಂದು ತಾಳ್ಮೆಯಿಂದಲೇ ತಿಳಿಸಿ, ನಿಮಗಾಗಿ ಸಮಯ ಬೇಕು ಎಂದು ನಿಮ್ಮ ಮಿತಿಗಳಿಗೆ ನೀವು ಬದ್ಧವಾಗಿರಿ. ಅದೂ ತಪ್ಪೆಂದು ಅವರೀರ್ವರೂ ಹೇಳಿದರೆ ನಿಮ್ಮ ಸ್ವಂತ ಅಗತ್ಯಗಳೂ ನಿಮಗೆ ಮುಖ್ಯವಾದದ್ದು ಎಂದು ಹೇಳಬಹುದು. ದಿನಕಳೆದಂತೆ ಅವರಿಗೂ ಇದು ಅರ್ಥವಾಗಬಹುದು.

ಪತಿಯನ್ನೇ ಗುರಾಣಿಯಾಗಿ ಬಳಸಿ

ಪತಿಯನ್ನೇ ಗುರಾಣಿಯಾಗಿ ಬಳಸಿ ಎಂದಮಾತ್ರಕ್ಕೆ ಯುದ್ಧ ಮಾಡಬೇಕೆಂದಲ್ಲ. ಅವರ ಕುಟುಂಬವೂ ನಿಮ್ಮ ಕುಟುಂಬವೇ. ಮಕ್ಕಳಾದ ಮೇಲೆ ನಿಮ್ಮ ಕುಟುಂಬಕ್ಕೂ ಆದ್ಯತೆಯನ್ನು ನೀಡಬೇಕಾಗುತ್ತದೆ. ನಿಮ್ಮಿಬ್ಬರ ವೈಯಕ್ತಿಕ ಸಮಸ್ಯೆಗಳನ್ನೂ ತಾಯಿಯೊಂದಿಗೆ ಚರ್ಚಿಸುವ ಪತಿ ನಿಮ್ಮವರಾಗಿದ್ದರೆ " ನೀವು ನಿಮ್ಮ ತಾಯಿಯೊಂದಿಗೆ ನಮ್ಮ ವೈಯಕ್ತಿಕ ವಿಚಾರಗಳನ್ನು ನನ್ನ ಭಾವನೆಗಳನ್ನು ಹೇಳುವುದು ನನಗೂ ನೋವುಂಟು ಮಾಡುತ್ತದೆ'' ಎಂದು ಹೇಳಬಹುದು. ನಿಮ್ಮ ಭಾವನೆಗಳು ಬೇರೆಯವರೊಂದಿಗೆ ಚರ್ಚಿಸುವ ವಿಚಾರವಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳಬಹುದು.

ಸ್ವಂತಃ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಪತಿಯನ್ನು ಬೆಂಬಲಿಸಿ

ಸ್ವಂತಃ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಪತಿಯನ್ನು ಬೆಂಬಲಿಸಿ

ಎಲ್ಲಾದಕ್ಕೂ ಅಮ್ಮನನ್ನೇ ಕೇಳಿ ನಿರ್ಧಾರ ತೆಗೆದುಕೊಳ್ಳುವ ಪತಿ ನಿಮ್ಮವರಾಗಿದ್ದರೆ ಅವರ ಸ್ವಂತ ಕೆಲಸಗಳನ್ನು ಅವರೇ ಮಾಡಲು ಪ್ರೋತ್ಸಾಹಿಸಿ. ಅವರಿಗೇ ಬಟ್ಟೆಗಳನ್ನು ಖರೀದಿಸುವುದಾಗಲಿ, ಸ್ವಂತ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಥವಾ ಸಣ್ಣಪುಟ್ಟ ಕೆಲಸಗಳಾದ ಐರನಿಂಗ್‌ ಮಾಡುವುದನ್ನೂ ಅವರೇ ಮಾಡುವಂತೆ ಪ್ರೋತ್ಸಾಹಿಸಿ. ಎಲ್ಲದಕ್ಕೂ ಅಮ್ಮನನ್ನೇ ಡಿಪೆಂಡ್‌ ಆಗುತ್ತೀ, ಅಮ್ಮನ ಬಾಲ ಎಂದು ಹೀಯಾಳಿಸುವ ಬದಲು ಅವರು ಒಬ್ಬರೇ ಕೆಲಸ ಮಾಡಲು ಹೊರಟರೇ ಪ್ರೋತ್ಸಾಹಿಸಿ, ಅಮ್ಮನಿಲ್ಲದೆಯೂ ನೀವು ಸೂಕ್ತ ನಿರ್ಧಾರ ತೆಗೆದುಕೊಳ್ಳಬಹುದು ಎನ್ನುವುದನ್ನು ಪ್ರಶಂಸಿಸಿ.

5. ನಿಮ್ಮ ಹಣಕಾಸಿನ ವ್ಯವಹಾರಗಳನ್ನು ಅತ್ತೆ ವಹಿಸದಂತೆ ನೋಡಿ

ನಿಮ್ಮ ಖರ್ಚು ವೆಚ್ಚಗಳನ್ನೂ ಅತ್ತೆಯೇ ನಿಭಾಯಿಸದಂತೆ, ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ನೋಡಿಕೊಳ್ಳಿ. ನಿಮ್ಮ ಖರ್ಚುಗಳ ಬಗ್ಗೆ ಅವರು ಮಧ್ಯಸ್ಥಿಕೆ ವಹಿಸುವುದು, ಮಿತಿಯನ್ನು ಹೇರುವುದು ಸಮಸ್ಯೆಯನ್ನು ಹೆಚ್ಚಿಸಬಹುದು. ನೀವು ಆರ್ಥಿಕವಾಗಿ ಪತ್ನಿಯನ್ನು ಹೇಗೆ ಬೆಂಬಲಿಸಬೇಕು, ದಂಪತಿಗಳಾಗಿ ನಿಮ್ಮ ಅಗತ್ಯತೆಗಳು ಏನೇನಿರುತ್ತದೆ ಎನ್ನುವುದನ್ನು ಪತಿಗೆ ವಿವರಿಸಿ. ಆರ್ಥಿಕವಾಗಿ ಖರ್ಚುವೆಚ್ಚಗಳನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ನೀವು ಕಲಿಯಲೇಬೇಕಾಗುತ್ತದೆ. ಸಂತೋಷದ ಜೀವನವನ್ನು ಅನುಭವಿಸಬೇಕೆಂದರೆ ಆರ್ಥಿಕ ಸ್ವಾತಂತ್ರ್ಯವೂ ಮುಖ್ಯ ಎನ್ನುವುದನ್ನು ನೆನಪಿಡಿ.

6. ಪತಿಯು ಅತ್ತೆಯನ್ನು ಎದುರಿಸಲಿ

ನಿಮ್ಮ ಮತ್ತು ನಿಮ್ಮ ಅತ್ತೆಯ ಮಧ್ಯೆ ಸಮಸ್ಯೆಗಳಾದಾಗ ನಿಮ್ಮ ಪತಿಗೆ ನೀವು ಕಾರಣಗಳನ್ನು ವಿವರವಾಗಿ ಅರ್ಥಮಾಡಿಸಿ. ಆ ಸಂದರ್ಭದಲ್ಲಿ ನಿಮ್ಮ ಪತಿಯು ನಿಮ್ಮ ಪರವಾಗಿಯೇ ಇದ್ದಾರೆ ನಿಮ್ಮ ಅತ್ತೆಗೆ ಅಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಅತ್ತೆಯ ತಪ್ಪನ್ನೂ ಅರ್ಥಮಾಡಿಸಲು ಪತಿಗೆ ಅವಕಾಶ ಮಾಡಿಕೊಡಿ.

 ನೀವು ಎಷ್ಟು ಹಂಚಿಕೊಳ್ಳುತ್ತೀರಿ ಎಂದು ಜಾಗರೂಕರಾಗಿರಿ

ನೀವು ಎಷ್ಟು ಹಂಚಿಕೊಳ್ಳುತ್ತೀರಿ ಎಂದು ಜಾಗರೂಕರಾಗಿರಿ

ನಿಮ್ಮ ಮನಸ್ತಾಪಗಳು ಅಥವಾ ಸಮಸ್ಯೆಗಳು ನಿಮ್ಮ ಹಾಗೂ ಪತಿಯ ಮಧ್ಯೆ ಮಾತ್ರ ಇರಲಿ. ಅವರು ತಾಯಿಯನ್ನು ಎಷ್ಟು ಇಷ್ಟಪಡುತ್ತಾರೆ ಎನ್ನುವುದನ್ನು ಹೊರತುಪಡಿಸಿಯೂ ನಿಮಗೆ ನಿಮ್ಮ ಪತಿಯೇ ಮೊದಲ ಆದ್ಯತೆ. ನಿಮ್ಮ ಪತಿಯ ಬಗ್ಗೆ ಅಸಮಾಧಾನವನ್ನು ಅವರ ತಾಯಿಯಲ್ಲಿ ಹೇಳಿಕೊಳ್ಳಬೇಡಿ. ಇದು ನಿಮ್ಮ ವ್ಯಕ್ತಿತ್ವವನ್ನೇ ಹಾಳು ಮಾಡಬಹುದು. ತನ್ನ ಮಗನ ಬಗ್ಗೆ ಇಲ್ಲಸಲ್ಲದ್ದು ಹೇಳುತ್ತಿದ್ದಾಳೆ ಎಂದು ನಿಮ್ಮ ಅತ್ತೆ ಕೋಪಗೊಳ್ಳಬಹುದು. ಇದು ಗಂಡ ಹೆಂಡತಿಯ ಸಂಬಂಧದಲ್ಲಿ ಬಿರುಕು ಮೂಡಿಸಲು ಕಾರಣವಾಗಬಹುದು.

8. ಎಲ್ಲದಕ್ಕೂ ಅತ್ತೆಯ ಅಪ್ಪಣೆ ಕೇಳುವುದನ್ನು ಬಿಡಿ

ಮದುವೆಗೆ ಮುಂಚೆ ನಿಮ್ಮ ನಿರ್ಧಾರಗಳನ್ನು ಅಪ್ಪ ಅಮ್ಮ ತೆಗೆದುಕೊಳ್ಳುತ್ತಿದ್ದರು ಎನ್ನುವುದಾದರೂ, ಮದುವೆಯಾದ ನಂತರ ಅತ್ತೆಯೇ ಎಲ್ಲವನ್ನೂ ನಿರ್ಧರಿಸಬೇಕೆಂದಿಲ್ಲ. ನೀವು ಮತ್ತು ನಿಮ್ಮ ಪತಿ ನಿಮ್ಮ ಕುಟುಂಬಕ್ಕಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಿ. ನಿಮ್ಮ ಜೀವನದಲ್ಲಿ ಪ್ರತಿಯೊಂದು ಸಂಬಂಧವೂ ಸವಾಲುಗಳನ್ನು ಹೊಂದಿರುತ್ತದೆ. ಆ ಸಂಬಂಧವು ಉತ್ತಮವಾಗಿ ಮುಂದುವರಿಯಬೇಕೆಂದು ಪರಸ್ಪರ ಮಾತುಕತೆ ಹಾಗೂ ಸ್ವತಂತ್ರ ನಿರ್ಧಾರಗಳನ್ನೂ ಒಳಗೊಂಡಿರುತ್ತದೆ. ಹಾಗಾಗಿ ನಿಮ್ಮ ಅತ್ತೆ ಹಾಗೂ ಇತರರೊಂದಿಗೆ ಮುಕ್ತವಾಗಿರಿ ಮತ್ತು ಪ್ರಾಮಾಣಿಕವಾಗಿರಿ.

9. ನಿಮ್ಮ ಅತ್ತೆಯೊಂದಿಗೆ ಹೇಗೆ ವ್ಯವಹರಿಸಬೇಕು ಎನ್ನುವುದನ್ನು ತಿಳಿದುಕೊಳ್ಳಿ

9. ನಿಮ್ಮ ಅತ್ತೆಯೊಂದಿಗೆ ಹೇಗೆ ವ್ಯವಹರಿಸಬೇಕು ಎನ್ನುವುದನ್ನು ತಿಳಿದುಕೊಳ್ಳಿ

ಅತ್ತೆ ಮತ್ತು ಸೊಸೆಯ ಮಧ್ಯೆ ಸಮಸ್ಯೆಗಳು ಬರುವುದು ಸಾಮಾನ್ಯ. ಅವರು ನಿಮಗಿಂತ ಹಿರಿಯರೂ ಆಗಿರುವುದರಿಂದ ಅಸೂಯೆ ತಪ್ಪಿಸಲು ಹಾಗೂ ನಿಮ್ಮ ಅನುಕೂಲಕ್ಕೆ ತಕ್ಕಂತೆ ಅವರನ್ನು ಬಳಸಿಕೊಳ್ಳಲು ಅತ್ತೆಯೊಂದಿಗೆ ಸೌಹಾರ್ದಯುತವಾಗಿ ಮತ್ತು ಗೌರವಯುತವಾಗಿರುವುದು ಉತ್ತಮ. ಈ ಮೂಲಕ ನಿಮ್ಮ ಮಿತಿಗಳನ್ನೂ ಅವರಿಗೆ ಅರ್ಥಮಾಡಿಸಬಹುದು. ಅವರನ್ನು ಬದಲಾಯಿಸುವುದು ಎಂದಿಗೂ ಸಾಧ್ಯವಿಲ್ಲ. ಹಾಗಂತ ಅವರು ಹೇಳಿದ್ದನ್ನೇ ಮಾಡುವುದು, ಅವರು ಹೇಳಿದ್ದನ್ನೆಲ್ಲಾ ಸಹಿಸಿಕೊಂಡಿರಬೇಕು ಎಂದಲ್ಲ. ಅವರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳಿ. ಪತಿ ಒಪ್ಪಿದರೆ ಬೇರೆ ಮನೆ ಮಾಡಿ. ನಿಮ್ಮ ಪತಿ ಅವರೊಂದಿಗೆ ಹೇಗಿದ್ದರೋ ಹಾಗೇ ಇರಲಿ.

ಇಷ್ಟೆಲ್ಲಾ ಪ್ರಯತ್ನಿಸಿದರೂ ಕೂಡಾ ಯಾವುದೂ ಪ್ರಯೋಜನವಾಗದಿದ್ದಲ್ಲಿ ನೀವು ದಾಂಪತ್ಯ ಜೀವನದಲ್ಲಿ ಏನನ್ನು ನಿರೀಕ್ಷಿಸುತ್ತೀರಿ ಎನ್ನುವುದನ್ನು ನಿಮ್ಮ ಪತಿಯೊಂದಿಗೆ ಮುಕ್ತವಾಗಿ ಹೇಳಿ. ಪತಿಯೂ ತಮ್ಮ ಹೊಸ ದಾಂಪತ್ಯ ಜೀವನ ಹಾಗೂ ತಮ್ಮ ತಂದೆ ತಾಯಿಯ ಸಂಬಂಧದ ನಡುವೆ ಒಂದು ಗಡಿಯನ್ನು ರೂಪಿಸಬೇಕು. ಪತಿಯೂ ಇಬ್ಬರ ಸಂತೋಷಕ್ಕೂ ಆದ್ಯತೆ ನೀಡಿದಲ್ಲಿ ಬೇಜಾರುಮಾಡಿಕೊಳ್ಳಬೇಡಿ. ಆರೋಗ್ಯಕರ ಸಮತೋಲನವು ಎಲ್ಲ ಸಂಬಂಧವನ್ನೂ ಉತ್ತಮಗೊಳಿಸಬಹುದು.

English summary

How do you deal with a husband who is a mamma's boy in Kannada

If your husband is mamma's boy how to deal the situation, here are tips,
Story first published: Thursday, January 26, 2023, 20:16 [IST]
X
Desktop Bottom Promotion