For Quick Alerts
ALLOW NOTIFICATIONS  
For Daily Alerts

ಈ ಕಾರಣಗಳಿಗಾಗಿ ವಿವಾಹವಾಗುತ್ತಿದ್ದರೆ, ನೀವು ದೊಡ್ಡ ತಪ್ಪನ್ನು ಮಾಡುತ್ತಿದ್ದೀರಿ..!

|

ವಿವಾಹ ಎನ್ನುವುದು ಸಮಾಜದಲ್ಲಿ ಒಂದು ಸುಂದರವಾದ ಕಲ್ಪನೆ ಹಾಗೂ ವಿಧಿಯನ್ನು ಹೊಂದಿದೆ. ಪ್ರಾಯಕ್ಕೆ ಬಂದ ಪ್ರತಿಯೊಂದು ವ್ಯಕ್ತಿಯು ನೈಸರ್ಗಿಕವಾಗಿ ತನ್ನ ವಿರುದ್ಧ ಲಿಂಗದವರನ್ನು ಬಯಸುತ್ತಾನೆ. ಇಂತಹ ಒಂದು ಬಯಕೆಗಳ ಈಡೇರಿಕೆ ಹಾಗೂ ಸಮಾಜದಲ್ಲಿ ಉತ್ತಮ ವಾತಾವರಣ ಕಾಯ್ದುಕೊಳ್ಳುವ ಉದ್ದೇಶಕ್ಕೆ ವಿವಾಹ ಎನ್ನುವ ಪದ್ಧತಿಯನ್ನು ತರಲಾಯಿತು. ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ಈ ಪದ್ಧತಿ ದಿನದಿಂದ ದಿನಕ್ಕೆ ಕೆಲವು ಬದಲಾವಣೆಯನ್ನು ಕಂಡುಕೊಳ್ಳುತ್ತಿರುವುದನ್ನು ಸಹ ಕಾಣಬಹುದು.

ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ಪರಸ್ಪರ ಅಪರಿಚಿತರಾಗಿರುವ ವ್ಯಕ್ತಿಗಳು ಒಂದಾಗಿ ಸಂಸಾರ ಎನ್ನುವ ತೊಟ್ಟಿಲನ್ನು ತೂಗುವುದು ಎಂದರೆ ಸಾಮಾನ್ಯ ಸಂಗತಿಯಲ್ಲ. ಸಂಸಾರ ಅಥವಾ ಕುಟುಂಬವನ್ನು ಹೊಂದಿದಾಗ ಅಲ್ಲಿ ಸಾಕಷ್ಟು ಹೊಂದಾಣಿಕೆ, ಪ್ರೀತಿ ತೋರುವುದು, ಕಾಳಜಿ, ಜವಾಬ್ದಾರಿ ಎನ್ನುವ ಸಂಗತಿಗಳ ಬಗ್ಗೆ ಹೆಚ್ಚಿನ ಚಿಂತನೆ ನಡೆಸಬೇಕು. ಆಗಲೇ ಆ ಸಂಸಾರದಲ್ಲಿ ಸುಖ-ಸಂತೋಷ ನೆಲೆಸಲು ಸಾಧ್ಯ. ವಿವಾಹ ಎನ್ನುವುದು ಒಂದು ಜೀವ ಇನ್ನೊಂದು ಜೀವಕ್ಕೆ ಆಸರೆಯಾಗಿ, ಜೀವನದ ಉದ್ದಕ್ಕೂ ಅವರ ಕಷ್ಟ-ಸುಖದಲ್ಲಿ ಭಾಗಿಯಾಗುವುದು.

Getting Married For Wrong Reasons Is Lifes Big Mistake

ಪವಿತ್ರವಾದ ವಿವಾಹ ಬಂಧನ ವ್ಯಕ್ತಿಯ ಜೀವನದಲ್ಲಿ ಹೊಸತನವನ್ನು ಮೂಡಿಸುವುದು. ಜೀವನದ ಸತ್ಯ, ಜವಾಬ್ದಾರಿಗಳ ಹೊರೆ ಹಾಗೂ ಉತ್ತಮ ನಡತೆಯನ್ನು ಹೊಂದಲು ಸಾಕಷ್ಟು ಪಾಠವನ್ನು ಕಲಿಸುವುದು. ಜೊತೆಗೆ ತನ್ನನ್ನು ಪ್ರೀತಿಸುವ ಸಂಗಾತಿಯೊಂದಿಗೆ ಸುಖ-ಸಂತೋಷವನ್ನು ಪಡೆದುಕೊಳ್ಳುವುದರ ಮೂಲಕ ಜೀವನದ ತೃಪ್ತಿಯನ್ನು ಅನುಭವಿಸುವ ವಿಧಿ.

ಸಂಗಾತಿಯ ಜೊತೆಗೆ ನಿಲ್ಲುತ್ತೇನೆ ಎನ್ನುವ ಭರವಸೆ ನಿಮ್ಮದಾಗಿರಬೇಕು

ಸಂಗಾತಿಯ ಜೊತೆಗೆ ನಿಲ್ಲುತ್ತೇನೆ ಎನ್ನುವ ಭರವಸೆ ನಿಮ್ಮದಾಗಿರಬೇಕು

ಆದರೆ ಇತ್ತೀಚಿನ ದಿನಗಳಲ್ಲಿ ವಿವಾಹದ ಕಲ್ಪನೆಗಳು ಬದಲಾಗುತ್ತಿವೆ. ವಿವಾಹದ ಪರಿಯು ಬದಲಾವಣೆ ಕಾಣುತ್ತಿದೆ. ಮನೆಯಲ್ಲಿ ಇರುವ ಕೆಲವು ವ್ಯಕ್ತಿಗಳ ಒತ್ತಾಯ ಹಾಗೂ ಅವರ ತೃಪ್ತಿಗಾಗಿ ವಿವಾಹವಾಗುವುದು ಕಾಣಬಹುದು. ವಿವಾಹವನ್ನು ಆಗುವ ಮುನ್ನ ಸಾಕಷ್ಟು ಚಿಂತನೆ ನಡೆಸುವುದು ಅಗತ್ಯ. ಒಮ್ಮೆ ವಿವಾಹ ಆದ ಬಳಿಕ ಎರಡು ಜೀವಗಳು ಹಾಗೂ ಅವರೊಂದಿಗೆ ಬೆಸೆದುಕೊಂಡ ಸಂಬಂಧಿಗಳಿಗೂ ಸಾಕಷ್ಟು ನೋವು ಉಂಟಾಗುವುದು. ನೀವು ವಿವಾಹವಾಗಲು ಬಯಸುತ್ತಿದ್ದೀರಿ ಎಂದಾದಾಗ ಜೀವನದಲ್ಲಿ ಅಥವಾ ಭವಿಷ್ಯದಲ್ಲಿ ಬರುವ ಎಲ್ಲಾ ಸಂಗತಿಗಳಿಗೂ ಸಂಗಾತಿಯ ಜೊತೆಗೆ ನಿಲ್ಲುತ್ತೇನೆ ಎನ್ನುವ ಭರವಸೆ ಇರಬೇಕು. ಇಲ್ಲವಾದರೆ ವಿವಾಹದ ಗೋಜಿಗೆ ಹೋಗಬಾರದು.

ಅದರಲ್ಲೂ ಈ ಮುಂದೆ ಹೇಳುವ ಕಾರಣಗಳಿಗೆ ನೀವೇನಾದರೂ ವಿವಾಹ ಆಗುತ್ತಿದ್ದೀರಿ ಎಂದಾದರೆ ಮೊದಲು ವಿವಾಹದ ಚಿಂತನೆಯನ್ನು ನಿಲ್ಲಿಸಿ. ಅದರಿಂದ ನಿಮಗೆ ಸಂತೋಷ ಅಥವಾ ತೃಪ್ತಿ ದೊರೆಯದು. ಜೊತೆಗೆ ನಿಮ್ಮ ಸಂಗಾತಿಯಾಗಿ ಬರುವವರ ಜೀವನವೂ ಹಾಳಾಗುವುದು. ಹಾಗಾದರೆ ಆ ತಪ್ಪು ಉದ್ದೇಶಗಳು ಯಾವವು? ಎನ್ನುವುದನ್ನು ನೋಡೋಣ ಬನ್ನಿ.

ಒಂಟಿತನದ ಭಯ

ಒಂಟಿತನದ ಭಯ

ನೀವು ಒಂಟಿಯಾಗಿರಲು ಭಯ ಎನ್ನುವ ಕಾರಣಕ್ಕೆ ವಿವಾಹವಾಗಲು ಹೋಗದಿರಿ. ನಿಮ್ಮ ಭಯದ ಭಾವನೆ ನಿಮ್ಮ ಮಾನಸಿಕ ಅಸಮತೋಲನವನ್ನು ಸೂಚಿಸುವುದು. ನಿಮ್ಮನ್ನು ನಂಬಿ ಬಂದವರೊಂದಿಗೆ ನೀವು ಖುಷಿಯಾಗಿರಲು ಸಾಧ್ಯವಿಲ್ಲ. ನಿಮ್ಮಿಂದ ಸಾಕಷ್ಟು ವಿಷಯಗಳು ಗುಪ್ತವಾಗಿ ಉಳಿಯುವುದು, ಅನುಮಾನ ದೃಷ್ಟಿಯಿಂದ ನೋಡುವುದು, ಪದೇ ಪದೇ ಅತಿಯಾದ ಆಯಾಸದ ಭಾವನೆ ತಾಳುವುದು ಇವೆಲ್ಲವೂ ನಿಮ್ಮ ಮಾನಸಿಕ ಒತ್ತಡವನ್ನು ಪ್ರತಿಬಿಂಬಿಸುತ್ತದೆ. ಹಾಗಾಗಿ ನೀವು ಇಂತಹ ಭಾವನೆಯನ್ನು ಹೊಂದಿರುವಾಗ ವಿವಾಹ ಆದರೆ ನಿಮ್ಮ ಜೀವನದ ಜೊತೆಗೆ ಇನ್ನೊಂದು ವ್ಯಕ್ತಿಯ ಜೀವನವು ಹಾಳಾಗುವುದು. ಅಲ್ಲದೆ ಇನ್ನಷ್ಟು ಮಾನಸಿಕ ಒತ್ತಡವನ್ನು ನೀವು ಅನುಭವಿಸುವ ಸಾಧ್ಯತೆಗಳಿವೆ. ಇನ್ನೊಬ್ಬರನ್ನು ಸಂತೋಷವಾಗಿಡಬೇಕು ಎಂದರೆ ಮೊದಲು ನಾವು ಸಂತೋಷವಾಗಿರಬೇಕು. ಹಾಗಾಗಿ ಮೊದಲು ನಿಮ್ಮ ಚಿಂತನೆಯನ್ನು ಬದಲಿಸಿಕೊಂಡು ವಿವಾಹವಾಗಿ.

ಪ್ರತಿಷ್ಠೆಯ ಒತ್ತಡ

ಪ್ರತಿಷ್ಠೆಯ ಒತ್ತಡ

ನಿಮ್ಮ ಸ್ನೇಹಿತರು ವಿವಾಹವಾಗಿದ್ದಾರೆ, ನಿಮ್ಮ ವಯಸ್ಸಿನವರು ಆಗಲೇ ಒಂದೆರಡು ಮಕ್ಕಳನ್ನೂ ಸಹ ಹೊಂದಿದ್ದಾರೆ, ಹಾಗಾಗಿ ನಾನು ಸಹ ಆದಷ್ಟು ಬೇಗ ವಿವಾಹ ಆಗಬೇಕು ಎನ್ನುವ ದೃಷ್ಟಿಯಿಂದ ವಿವಾಹವಾಗದಿರಿ. ಇದರಿಂದ ನಿಮ್ಮ ಆಯ್ಕೆಯಲ್ಲಿ ವ್ಯತ್ಯಾಸ ಉಂಟಾಗಬಹುದು. ಆತುರದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಸರಿಯಾಗಿ ಇರುವುದಿಲ್ಲ. ನೀವು ನಿಮ್ಮ ಪ್ರತಿಷ್ಠೆಗೆ ಸಂಬಂಧಿಸಿದ ಒತ್ತಡವನ್ನು ಅನುಭವಿಸುತ್ತಿದ್ದರೆ ನಿಮ್ಮ ಸ್ನೇಹಿತರಿಂದ ಸ್ವಲ್ಪ ದೂರ ಇರಿ. ಅವರ ಜೀವನವನ್ನು ನೋಡಿ ನಿಮ್ಮ ಜೀವನ ರೂಪಿಸಿಕೊಳ್ಳಲು ಹೋದರೆ ವಿವಾಹದ ಜೀವನ ಸುಖಕರವಾಗಿರಲು ಸಾಧ್ಯವಿಲ್ಲ. ಆ ಕಾರಣಗಳಿಗಾಗಿ ವಿವಾಹವಾಗಲು ಮುಂದಾಗಿದ್ದರೆ ನಿಮ್ಮ ವಿವಾಹದ ಯೋಜನೆಯನ್ನು ಮುಂದೂಡುವುದು ಉತ್ತಮ.

ವಿವಾಹದ ಸಮಯ ಮೀರಿದ್ದರೆ

ವಿವಾಹದ ಸಮಯ ಮೀರಿದ್ದರೆ

ವಿವಾಹ ಎನ್ನುವುದು ಒಂದು ವಯಸ್ಸಿನ ಮಿತಿಯಲ್ಲಿ ಆಗಬೇಕು. ಆಗ ದೇಹದಲ್ಲಿ ಶಕ್ತಿ ಹಾಗೂ ಚೈತನ್ಯವಿರುತ್ತದೆ. ಸಂಗಾತಿಯೊಂದಿಗೆ ಪ್ರೀತಿ-ಸಲ್ಲಾಪಗಳಿಂದ ಖುಷಿಯಾಗಿರಲು ಸಾಧ್ಯ. ಅದೇ ವಿವಾಹದ ಅವಧಿ ಮುಗಿದಿದ್ದರೆ ದೇಹದಲ್ಲಿ ಸಾಕಷ್ಟು ಅನಾನುಕೂಲ ಉಂಟಾಗುವುದು. ಶಕ್ತಿಯು ಕುಗ್ಗಿರುವುದು, ವಿವಾಹದ ಜೀವನದಲ್ಲಿ ಚೈತನ್ಯ ಇರದೆ ಹೋಗಬಹುದು. ಅಂತಹ ಸಮಯದಲ್ಲಿ ಮೂರನೇ ವ್ಯಕ್ತಿಗಳು ನಗುತ್ತಾರೆ ಅಥವಾ ಮಾತನಾಡುತ್ತಾರೆ ಎನ್ನುವ ಉದ್ದೇಶಕ್ಕೆ ವಿವಾಹದ ನಿರ್ಧಾರಕ್ಕೆ ಬರದಿರಿ. ನಿಮ್ಮ ವಯಸ್ಸು ಹಾಗೂ ಮಾನಸಿಕ ಸ್ಥಿತಿಗೆ ಒಗ್ಗುವ ಸಂಗಾತಿಯ ಹುಡುಕಾಟ ನಡೆಸಿ, ನಂತರ ವಿವಾಹವಾಗಿ. ಆಗ ನಿಮ್ಮ ಜೀವನವು ಒಂದಿಷ್ಟು ಸುಖ-ಸಂತೋಷದಿಂದ ಕೂಡಿರುವುದು.

ಆರ್ಥಿಕ ಭದ್ರತೆ ಅಥವಾ ಮಾನಸಿಕ ಸ್ಥಾನಮಾನಕ್ಕೆ

ಆರ್ಥಿಕ ಭದ್ರತೆ ಅಥವಾ ಮಾನಸಿಕ ಸ್ಥಾನಮಾನಕ್ಕೆ

ವಿವಾಹದ ನಂತರ ಪತಿ-ಪತ್ನಿಗಳ ನಡುವೆ ನಾವಿಬ್ಬರೂ ಒಂದೇ ಎನ್ನುವ ಭಾವನೆ ಇರಬೇಕು. ಅಲ್ಲಿ ನೀ ಮೇಲೂ, ನಾಮೇಲೂ ಎನ್ನುವ ಧೋರಣೆ ಬರಬಾರದು. ಕೆಲವರು ತಮ್ಮ ಅಂತಸ್ತು ಹಾಗೂ ಸಾಮಾಜಿಕ ಸ್ಥಾನ ಮಾನವಕ್ಕೆ ಧಕ್ಕೆ ಬರಬಾರದು ಎನ್ನುವ ಉದ್ದೇಶವನ್ನು ಇಟ್ಟುಕೊಂಡು ವಿವಾಹವಾಗುತ್ತಾರೆ. ತಮ್ಮ ಮಾನಸಿಕ ಚಿಂತನೆಗೆ ಹೊಂದುವುದಕ್ಕಿಂತ ಅಂತಸ್ತಿನ ಹೊಂದಾಣಿಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ಸಮಾಜದಲ್ಲಿ ತಮ್ಮ ಗೌರವ ಕಡಿಮೆಯಾಗಬಾರದು ಎನ್ನುವ ರೀತಿಯಲ್ಲಿ ವರ್ತನೆ ತೋರುವರು. ನಿಮ್ಮ ಈ ಒಂದು ಬಗೆಯ ವರ್ತನೆ ಅಥವಾ ಮಾನಸಿಕ ಚಿಂತನೆಗಳಿವೆ ಎಂದಾಗ ವಿವಾಹ ಆಗದೆ ಇರುವುದು ಸೂಕ್ತ. ಇಲ್ಲವಾದರೆ ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳು ಹಾಗೂ ಮಾನಸಿಕ ನೋವನ್ನು ಅನುಭವಿಸಬೇಕಾಗುವುದು.

ಇದೊಂದು ಸಂಪ್ರದಾಯ

ಇದೊಂದು ಸಂಪ್ರದಾಯ

ವಿವಾಹ ಒಂದು ಸಂಪ್ರದಾಯ, ನನಗೇನೂ ವಿವಾಹದ ಅಗತ್ಯವಿಲ್ಲ. ಸಂಪ್ರದಾಯಕ್ಕೋಸ್ಕರ ವಿವಾಹವಾಗುತ್ತಿದ್ದೇನೆ ಎನ್ನುವ ಮನಃಸ್ಥಿತಿ ನಿಮ್ಮದಾಗಿದ್ದರೆ ವಿವಾಹದ ಸುದ್ದಿಗೆ ಹೋಗದಿರಿ. ವಿವಾಹ ಎನ್ನುವುದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ ಸಂಸ್ಕೃತಿ ಆಗಿರಬಹುದು. ಆದರೆ ಆ ಆಚರಣೆ ಅಥವಾ ಪದ್ಧತಿಯ ಹಿಂದೆ ಪವಿತ್ರವಾದ ಸಂಗತಿ ಹಾಗೂ ಉದ್ದೇಶಗಳಿರುತ್ತವೆ. ವಿವಾಹ ಪದ್ಧತಿಯೂ ಸಹ ವ್ಯಕ್ತಿಯ ಜೀವನದಲ್ಲಿ ಒಂದು ತಿರುವನ್ನು ತರುವುದು. ಜೊತೆಗೆ ಜೀವನದ ಅರ್ಥವನ್ನು ತಿಳಿಸಿಕೊಡುತ್ತದೆ. ಹಾಗಾಗಿ ವಿವಾಹಕ್ಕೆ ನಿಮ್ಮ ಮನಸ್ಸು ಸಂಪೂರ್ಣವಾದ ಒಪ್ಪಿಗೆ ನೀಡಿದೆ, ಸಂಗಾತಿಯನ್ನು ನೀವು ಖುಷಿಯಲ್ಲಿ ಇರಿಸಿಕೊಳ್ಳುವಿರಿ ಎನ್ನುವ ಭಾವನೆ ಇದ್ದಾಗ ಮಾತ್ರ ವಿವಾಹವಾಗಿ. ವಿವಾಹ ಎನ್ನುವುದು ಕಡ್ಡಾಯವಲ್ಲ. ನಿಮಗೆ ವಿವಾಹ ಆಗಲು ಇಷ್ಟ ಇರದೆ ಇದ್ದರೆ ಒಂಟಿ ಜೀವನವನ್ನು ಮುಂದುವರಿಸಬಹುದು.

ಯಾವುದೋ ಒಂದು ಸಂಗತಿಯ ಬಗ್ಗೆ ಸಾಬೀತುಪಡಿಸಲು

ಯಾವುದೋ ಒಂದು ಸಂಗತಿಯ ಬಗ್ಗೆ ಸಾಬೀತುಪಡಿಸಲು

ಕೆಲವರು ಎಷ್ಟು ಮೊಂಡುತನ ಮತ್ತು ದಡ್ಡ ತನ ಹೊಂದಿರುತ್ತಾರೆ ಎಂದರೆ ಮನೆಯವರು ಮಾಡಿದ್ದಾರೆ ಎನ್ನುವ ಉದ್ದೇಶಕ್ಕೆ ತಾವೂ ಹಾಗೇ ಮಾಡುತ್ತಾರೆ. ಪೋಷಕರು ವಿವಾಹ ಆಗಲು ಹೇಳಿದ್ದಾರೆ ಎಂದು ವಿವಾಹ ಆಗುವುದು, ತಾವೂ ಸಹ ನಮ್ಮ ಕುಟುಂಬದಲ್ಲಿ ವಿವಾಹ ಎನ್ನುವ ವಿಧಿಗೆ ಒಳಗಾಗಬೇಕು ಎನ್ನುವ ರೀತಿಯ ಅನುಕರಣೆಯನ್ನು ಹೊಂದಿದ್ದರೆ ವಿವಾಹವನ್ನು ಆಗದಿರಿ. ತಂದೆ-ತಾಯಿಯ ನಡುವೆ ಜಗಳ ಸಂಭವಿಸುತ್ತಿತ್ತು ಎಂದು ನೀವು ಜಗಳ ಮಾಡುವುದು, ಅವರು ವಿಚ್ಛೇದನ ಪಡೆದರು ಎಂದು ನೀವೂ ವಿಚ್ಛೇದನ ಪಡೆಯುವಂತಹ ಅನುಕರಣೆಯನ್ನು ಮಾಡದಿರಿ. ಆ ರೀತಿಯ ಮನಃಸ್ಥಿತಿ ನಿಮ್ಮದು ಎಂದಾಗಿದ್ದರೆ ವಿವಾಹ ಆಗದೆ ಇರುವುದು ಒಳಿತು. ಇದರಿಂದ ನಿಮ್ಮ ಹಾಗೂ ನಿಮ್ಮವರು ಸಾಕಷ್ಟು ನೋವು ಹಾಗೂ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳಬೇಕಾಗುವುದು.

English summary

Getting Married For Wrong Reasons Is Lifes Big Mistake

You are already in your 30s. When will you get married?” If you have reached an age that society considers ‘marriageable’, you might have heard these words a hundred times, if not more. Sometimes the pressure to tie the knot is so high that many may end up getting married for all the wrong reasons. Most of these horrible reasons to get married will probably seem obvious and maybe even a little ridiculous.
X
Desktop Bottom Promotion