For Quick Alerts
ALLOW NOTIFICATIONS  
For Daily Alerts

ಈ 5 ವಿಷಯಗಳಿಗೆ ನಡೆಯುವ ಜಗಳ ದಂಪತಿಯ ಭಾಂಧವ್ಯವನ್ನು ಗಟ್ಟಿಗೊಳಿಸುವುದು

|

ಎಷ್ಟೇ ಪ್ರೀತಿಸಿ, ಅರ್ಥಮಾಡಿಕೊಂಡು ಮದುವೆಯಾಗಿದ್ದರೂ, ಅದರಲ್ಲಿ ಒಂದಿಷ್ಟು ಜಗಳ, ಜಗಳಗಳಿರುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ದಂಪತಿಗಳ ನಡುವಿನ ಜಗಳಗಳು ಆರೋಗ್ಯಕರವಾಗಿದ್ದರೂ, ಸಣ್ಣ ಸಮಸ್ಯೆಗಳನ್ನು ಪರಿಹರಿಸಲು ಜನರು ಜಗಳವಾಡಲು ಪ್ರಾರಂಭಿಸಿದಾಗ ಸಂಬಂಧದಲ್ಲಿ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಆದರೆ ಕೆಲವೊಂದು ವಿಷಯಗಳಿಗೆ ನಡೆದ ಜಗಳವು ನಿಮ್ಮನ್ನು ದೂರ ಮಾಡುವ ಬದಲು ಹತ್ತಿರ ತರುವ ಕೆಲಸ ಮಾಡುತ್ತದೆ. ಅಂತಹ ವಿಷಯಗಳು ಯಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಹಾಸಿಗೆಯ ಮೇಲೆ ಒದ್ದೆಯಾದ ಟವೆಲ್ ಹಾಕುವುದು:

ಹಾಸಿಗೆಯ ಮೇಲೆ ಒದ್ದೆಯಾದ ಟವೆಲ್ ಹಾಕುವುದು:

ದಂಪತಿಗಳ ನಡುವಿನ ಸಾಮಾನ್ಯ ಜಗಳದ ಮೂಲವನ್ನು ಹುಡುಕಿದರೆ, ಅವುಗಳು ಇಂತಹ ವಿಷಯಗಳಾಗಿವೆ. ಒದ್ದೆಯಾದ ಟವೆಲ್ ದಂಪತಿಗಳ ನಡುವಿನ ಜಗಳಕ್ಕೆ ಕಾರಣವಾಗಿರುತ್ತದೆ. ಇದು ಕೇಳಲು ತಮಾಷೆಯಾಗಿದ್ದರೂ, ಇಬ್ಬರ ನಡುವೆ ಭಾಂಧವ್ಯ ಮೂಡಿಸುವುದು. ಇಲ್ಲಿ ಯಾರು ಈ ರೀತಿ ಮಾಡಿದ್ರು ಪರವಾಗಿಲ್ಲ, ಆದರೆ ಮದುವೆಯಾದ ಆರಂಭದ ದಿನಗಳಲ್ಲಿ ಗಂಡ ಹೆಂಡತಿ ಜಗಳಕ್ಕೆ ಕಾರಣ ಇಷ್ಟು ಮಧುರವಾಗಿರಬಹುದು ಎಂಬುದು ಕುತೂಹಲ ಮೂಡಿಸಿದೆ.

ಅಮ್ಮನ ಕೈ ರುಚಿ ಕುರಿತು ಜಗಳ:

ಅಮ್ಮನ ಕೈ ರುಚಿ ಕುರಿತು ಜಗಳ:

ಭಾರತದಲ್ಲಿ, ಅತ್ತೆ ಮತ್ತು ಗಂಡನ ನಡುವೆ, ಹೆಂಡತಿ ಯಾವಾಗಲೂ ತನ್ನನ್ನು ಸರಿಹೊಂದಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಾಳೆ. ಆದರೆ, ಯಾವುದೋ ಒಂದು ಕಡೆ ಇಂತಹ ವಿಷಯಗಳು ಜಗಳಗಳಿಗೆ ಕಾರಣವಾಗುತ್ತವೆ. ಸಾಮಾನ್ಯವಾಗಿ ಗಂಡ, ತನ್ನ ಅಮ್ಮನ ಕೈ ರುಚಿಯೇ ಉತ್ತಮ ಎಂದು ಹೊಗಳುತ್ತಾನೆ. ಆದರೆ ಅದನ್ನು ಹೋಲಿಸಲು ಪ್ರಾರಂಭಿಸಿದಾಗ ಜಗಳವು ಪ್ರಾರಂಭವಾಗುತ್ತದೆ. ಯಾರು ಅತ್ಯುತ್ತಮವಾದ ಆಹಾರವನ್ನು ತಯಾರಿಸುತ್ತಾರೆ ಎಂಬುದು ಯಾವಾಗಲೂ ಜಗಳಗಳಿಗೆ ಕಾರಣವಾಗುತ್ತದೆ, ಇದು ಬಹಳಷ್ಟು ವಿನೋದವನ್ನು ನೀಡುತ್ತದೆ.

ಸ್ನೇಹಿತರೊಂದಿಗೆ ದಿನ ಕಳೆಯುವುದು:

ಸ್ನೇಹಿತರೊಂದಿಗೆ ದಿನ ಕಳೆಯುವುದು:

ತಮ್ಮ ಹೆಂಡತಿಯೊಂದಿಗೆ ಸಮಯ ಕಳೆಯುವುದಕ್ಕಿಂತ ಹೆಚ್ಚಾಗಿ ಸ್ನೇಹಿತರೊಂದಿಗೆ ಸುತ್ತಾಡಲು ಇಷ್ಟಪಡುವ ಅನೇಕ ಪುರುಷರು ಇದ್ದಾರೆ. ನೀವೂ ಹೀಗಿದ್ದರೆ ಮೊದಲೇ ಹುಷಾರಾಗಿರಿ, ಇಲ್ಲದಿದ್ದರೆ ನಿಮ್ಮ ಮನೆಯಲ್ಲಿ ಈ ವಿಷಯದ ಬಗ್ಗೆ ಗಲಾಟೆ ನಡೆಯುವುದು ಖಚಿತ. ನವ ದಂಪತಿಗಳ ನಡುವಿನ ಜಗಳದಲ್ಲಿ ಇದು ಸಾಮಾನ್ಯ ಸಮಸ್ಯೆಯಾಗಿದೆ. ಆದರೆ, ಮರುದಿನ ಪತಿ ತನ್ನ ಸ್ನೇಹಿತರ ಜೊತೆಗೆ ಬಂದು ತನ್ನ ಹೆಂಡತಿಗೆ ಸ್ವಲ್ಪ ಆಶ್ಚರ್ಯವನ್ನು ನೀಡಿದಾಗ ಇದರಲ್ಲಿ ಆಗಾಗ್ಗೆ ರಾಜಿ ಇರುತ್ತದೆ.

ನಿನಗೆ ನನ್ನ ಹೆತ್ತವರು ಇಷ್ಟವಿಲ್ಲವೇ?:

ನಿನಗೆ ನನ್ನ ಹೆತ್ತವರು ಇಷ್ಟವಿಲ್ಲವೇ?:

ಇದು ದಂಪತಿಗಳ ನಡುವಿನ ಜಗಳದ ಪ್ರಮುಖ ಮತ್ತು ಹಳೆಯ ಕಾರಣವಾಗಿದೆ. ಭಾರತದಲ್ಲಿ ಮದುವೆಯು ಕೇವಲ ಇಬ್ಬರನ್ನು ಒಟ್ಟಿಗೆ ಬಂಧಿಸುವುದಲ್ಲದೇ, ಅವರ ಕುಟುಂಬವನ್ನು ಹತ್ತಿರ ತರುತ್ತದೆ. ಆದ್ದರಿಂದ ವಿವಾಹಿತರು ತಮ್ಮ ಅತ್ತೆಯನ್ನು ತಮ್ಮ ಹೆತ್ತವರಂತೆ ನೋಡಿಕೊಳ್ಳಬೇಕೆಂದು ಬಯಸುತ್ತಾರೆ. ಆದರೆ ಎಲ್ಲರೂ ಹಾಗೆ ಮಾಡುವುದು ಅಸಾಧ್ಯ, ಆರಂಭದಲ್ಲಿ ಇದು ತುಂಬಾ ಕಷ್ಟಕರವಾಗಿರುತ್ತದೆ. ಇದರಿಂದಾಗಿ ದಂಪತಿಗಳ ನಡುವೆ ಅತ್ತೆಯನ್ನು ಇಷ್ಟಪಡುವ ಅಥವಾ ಇಷ್ಟಪಡದಿರುವ ಬಗ್ಗೆ ವಾದ ಹುಟ್ಟಿಕೊಳ್ಳುತ್ತವೆ.

ಬ್ರಹ್ಮಚಾರಿಯಂತೆ ಬದುಕುವುದನ್ನು ನಿಲ್ಲಿಸಿ:

ಬ್ರಹ್ಮಚಾರಿಯಂತೆ ಬದುಕುವುದನ್ನು ನಿಲ್ಲಿಸಿ:

ಮದುವೆಯ ನಂತರ, ಹೆಚ್ಚಿನ ಮಹಿಳೆಯರು ತಮ್ಮ ಹೆಂಡತಿಯಾಗಿ ತಮ್ಮ ಹೊಸ ಪಾತ್ರಕ್ಕೆ ಬೇಗ ಹೊಂದಿಕೊಳ್ಳಲು ಪ್ರಯತ್ನಿಸಿದರೆ, ಹುಡುಗರು ತಮ್ಮ ವೈವಾಹಿಕ ಜೀವನಕ್ಕೆ ಹೊಂದಿಕೊಳ್ಳಲು ಸಮಯವನ್ನು ತೆಗೆದುಕೊಳ್ಳುತ್ತಾರೆ. ಎಷ್ಟೋ ಸಲ ಈ ಹುಡುಗರು ಮದುವೆಯಾದ ಮೇಲೂ ಹುಡುಗಿಯರ ಜೊತೆ ಪಾರ್ಟಿ, ಫ್ಲರ್ಟಿಂಗ್ ನಲ್ಲಿ ಬ್ಯುಸಿಯಾಗಿರುತ್ತಾರೆ. ಸಂಗಾತಿಯ ಈ ರೀತಿಯ ವರ್ತನೆ ನೋಡಿ ಪತ್ನಿಯರು ಈಗ ಬ್ಯಾಚುಲರ್ ಲೈಫ್ ನಿಂದ ಹೊರಬನ್ನಿ ಎಂದು ಹೇಳಬೇಕಾಗತ್ತದೆ. ಈ ಕಾರಣದಿಂದಾಗಿ, ಅವರ ನಡುವೆ ಜಗಳಗಳು ನಡೆಯುತ್ತವೆ. ಆದರೂ ಸಮಯದೊಂದಿಗೆ ಎಲ್ಲವೂ ಟ್ರ್ಯಾಕ್ಗೆ ಮರಳುತ್ತದೆ.

English summary

Funny Things Which made a Fight Between the Couple and Bring them Closer in Kannada

Here we talking about Funny things which made a fight between the couple and bring them closer in kannada, read on
Story first published: Wednesday, March 30, 2022, 13:38 [IST]
X
Desktop Bottom Promotion