For Quick Alerts
ALLOW NOTIFICATIONS  
For Daily Alerts

ಟಾಕ್ಸಿಕ್‌ ರಿಲೇಷನ್‌ಶಿಪ್‌ನ ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಿದರೆ ನಿಮಗೇ ಅಪಾಯ!

|

ಟಾಕ್ಸಿಕ್ ರಿಲೇಷನ್‌ಶಿಪ್‌ನಲ್ಲಿ ಇದ್ದೀರಾ? ಕೂಡಲೇ ಎಚ್ಚೆತ್ತುಕೊಳ್ಳಿ, ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ. ಡೆಲ್ಲಿಯಲ್ಲಿ ದೇಶವನ್ನೇ ಬೆಚ್ಚಿ ಬೀಳಿಸಿದ ಶ್ರದ್ಧಾವಾಕರ್‌ ಕೂಡ ಟಾಕ್ಸಿಕ್‌ ರಿಲೇಷನ್‌ಶಿಪ್‌ನಿಂದ ಹೊರ ನಡೆದಿದ್ದರೆ ಬಹುಶಃ ಅವರಿಗಿಂದು ಈ ಗತಿ ಬರುತ್ತಿರಲ್ಲವೇನೋ, ಆದ್ದರಿಂದ ನಿಮ್ಮನ್ನು ದೈಹಿಕವಾಗಿ, ಮಾನಸಿಕವಾಗಿ ಹಿಂಸಿಸುವ ಸಂಗಾತಿ ಜೊತೆ ಇದ್ದೀರಾ? ಎಚ್ಚರ, ನಿಮ್ಮ ಪ್ರಾಣ ಅಪಾಯದಲ್ಲಿದೆ.

Toxic Relationship

ಪ್ರೀತಿ ಇದ್ದಲ್ಲಿ ಸಣ್ಣ-ಪುಟ್ಟ ಜಗಳ, ಪೊಸೆಸಿವ್‌ನೆಸ್‌ ಇವೆಲ್ಲಾ ಇರುವುದು ಸಹಜ, ಆದರೆ ಯಾವುದು ಸಹಜವಲ್ಲ ಎಂದು ಅರ್ಥ ಮಾಡಿಕೊಂಡರೆ ಮುಂದಾಗುವ ಅಪಾಯವನ್ನು ತಡೆಗಟ್ಟಬಹುದು. ಆದರೆ ಎಷ್ಟೋ ಟಾಕ್ಸಿಕ್‌ ರಿಲೇಷನ್‌ಶಿಪ್‌ನಲ್ಲಿ ಸಂಗಾತಿ ತಮಗೆ ಹಿಂಸೆ ನೀಡುತ್ತಿದ್ದರೂ ನಾಳೆ ಸರಿ ಹೋಗುತ್ತೆ, ಎಲ್ಲವೂ ಸರಿ ಹೋಗುತ್ತೆ ಎಂದು ನಂಬುವುದು, ಹೀಗೆ ಯೋಚಿಸಿಯೇ ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಾರೆ.

ಈ ಟಾಕ್ಸಿಕ್‌ ರಿಲೇಷನ್‌ಶಿಪ್‌ ಬಗ್ಗೆ ಹೆಚ್ಚು ತಿಳಿಯುವ ಮುನ್ನ ಅದೇನು ಎಂದು ತಿಳಿಯೋಣ:

ಟಾಕ್ಸಿಕ್‌ ರಿಲೇಷನ್‌ಶಿಪ್‌ ಎಂದರೇನು?

ಟಾಕ್ಸಿಕ್‌ ರಿಲೇಷನ್‌ಶಿಪ್‌ ಎಂದರೇನು?

ನಮಗೆ ಒಬ್ಬ ವ್ಯಕ್ತಿಯನ್ನು ನೋಡುವಾಗ ಇಷ್ಟವಾಗುತ್ತೆ, ಅವರನ್ನು ನೋಡುವಾಗ ಏನೋ ಅಫೆಕ್ಷನ್, ಪ್ರೀತಿ ಇಬ್ಬರು ಕೈ ಕೈ ಹಿಡಿದು ಸುತ್ತಾಡಲಾರಂಭಿಸುತ್ತೇವೆ. ಡೇಟಿಂಗ್, ಔಟಿಂಗ್‌ ಅಂತ ಆ ಕ್ಷಣಗಳು ತುಂಬಾನೇ ಮಧುರವಾಗಿರುತ್ತೆ. ಆತ/ ಆಕೆ ನಮ್ಮ ಬಾಳಿನಲ್ಲಿ ಬಂದಿರುವುದಕ್ಕೆ ತುಂಬಾನೇ ಖುಷಿ ಪಡುತ್ತೇವೆ. ನಾವಿಬ್ಬರ ಜೊತೆಯಾಗಿದ್ದರೆ ಬದುಕು ಇನ್ನಷ್ಟು ಸುಂದರವಾಗಿರುತ್ತೆ ಎಂಬ ನಿರೀಕ್ಷೆ ಮದುವೆಯಾಗುತ್ತೇವೆ, ನಿಧಾನಕ್ಕೆ ಆ ವ್ಯಕ್ತಿಯ ಮುಖವಾಡ ಕಳುಚುತ್ತೆ. ಜಗಳ ಬೆಳೆದಾಗ ಹಿಂಸಿಸಲು ತೊಡಗುತ್ತಾರೆ, ನಂತರ ತಪ್ಪಾಯ್ತು ಅಂತ ಕೇಳುತ್ತಾರೆ. ಇವರು ಅಯ್ಯೋ ಪಾಪ ನನ್ನ ಮೇಲೆ ಪ್ರೀತಿ ಇದೆ, ಕೋಪದಿಂದ ಹೊಡೆದಿದ್ದು ಎಂದು ಆ ಘಟನೆ ಮರೆತು ಬಿಡುತ್ತಾರೆ, ಕೆಲವು ದಿನಗಳ ಬಳಿಕ ಅಂಥದ್ದೇ ಘಟನೆ ಮತ್ತೆ-ಮತ್ತೆ ಮರುಕಳಿಸುತ್ತಲೇ ಇರುತ್ತದೆ. ಈ ರೀತಿ ನಿಮ್ಮ ಸಂಬಂಧದಲ್ಲೂ ಆಗುತ್ತಿದೆಯೇ? ನೀವು ಎಚ್ಚೆತ್ತುಕೊಳ್ಳಲೇಬೇಕು, ಏಕೆಂದರೆ ನೀವು ಟಾಕ್ಸಿಕ್‌ ರಿಲೇಷನ್‌ಶಿಪ್‌ನಲ್ಲಿದ್ದೀರ.

ನಿಮ್ಮಿಬ್ಬರದ್ದು ಟಾಕ್ಸಿಕ್‌ ರಿಲೇಷನ್‌ಶಿಪ್‌ ಎಂದು ಸೂಚಿಸುವ ಲಕ್ಷಣಗಳಿವು

ನಿಮ್ಮಿಬ್ಬರದ್ದು ಟಾಕ್ಸಿಕ್‌ ರಿಲೇಷನ್‌ಶಿಪ್‌ ಎಂದು ಸೂಚಿಸುವ ಲಕ್ಷಣಗಳಿವು

ನಿಮ್ಮನ್ನು ತುಂಬಾ ಕಂಟ್ರೋಲ್ ಮಾಡುವುದು

ನಿಮ್ಮ ಸಂಗಾತಿ ನಿಮ್ಮನ್ನು ತುಂಬಾನೇ ಕಂಟ್ರೋಲ್‌ ಮಾಡ್ತಾ ಇದ್ದಾರಾ? ನೀವು ಯಾವ ಬಟ್ಟೆ ಧರಿಸಬೇಕು? ಯಾರ ಜೊತೆ ಮಾತನಾಡಬಾರದು ಎಂದೆಲ್ಲಾ ನಿರ್ಬಂಧ ಹಾಕತ್ತಿದ್ದಾರಾ? ಬೇಗನೆ ಎಚ್ಚೆತ್ತುಕೊಳ್ಳಿ. ನಿಮ್ಮನ್ನು ನಿಯಂತ್ರಿಸುವ ಸಲುವಾಗ ಅವರು ನಿಮಗೆ ದೈಹಿಕ, ಮಾನಸಿಕ ಹಿಂಸೆ ನೀಡಲು ಪ್ರಾರಂಭಿಸುತ್ತಾರೆ.

ನಿಮ್ಮ ಮೇಲೆ ನಂಬಿಕೆ ಇಲ್ಲದಿರುವುದು

ನಿಮ್ಮ ಮೇಲೆ ನಂಬಿಕೆ ಇಲ್ಲದಿರುವುದು

ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ನಂಬಿಕೆ ಇಲ್ಲದಿದ್ದಾಗ ನಿಮ್ಮ ಫೋನ್‌ ಚೆಕ್‌ ಮಾಡುವುದು, ನಿಮ್ಮ ಮೇಲೆ ಸುಮ್ಮನೆ ಸಂಶಯಪಟ್ಟು ಹೊಡೆಯುವುದು ಮಾಡುತ್ತಾರೆ. ನಿಮ್ಮ ಮೇಲೆ ನಂಬಿಕೆ ಇಲ್ಲವಾದರೆ ಏಕೆ ನಂಬಿಕೆ ಇಲ್ಲವೆಂದು ತಿಳಿಯಲು ಪ್ರಯತ್ನಿಸಿ.

ಕೆಲವೊಮ್ಮೆ ನಿಮ್ಮ ನಡವಳಿಕೆ ಅವರ ಸಂಶಯಕ್ಕೆ ಕಾರಣವಾಗಿರಬಹುದು, ಆ ರೀತಿಯೇನೂ ಇಲ್ಲ ಸುಮ್ಮನೆ ನಿಮ್ಮನ್ನು ಸಂಶಯ ಪಡುತ್ತಿದ್ದಾರೆ ಎಂದಾದರೆ ಅವರಿಗೆ ನೀವು ಅವರನ್ನು ಎಷ್ಟು ಪ್ರೀತಿಸುತ್ತಿದ್ದೀರಿ ಎಂಬುವುದನ್ನು ಅರ್ಥ ಮಾಡಿಸಲು ಪ್ರಯತ್ನಿಸಿ.

ಆದರೆ ಏನೇ ಮಾಡಿದರೂ ಆ ವ್ಯಕ್ತಿ ಬದಲಾಗುತ್ತಿಲ್ಲ, ಸಂಶಯ ಪಟ್ಟು ನಿಮಗೆ ದೈಹಿಕ ಹಿಂಸೆ ನೀಡುತ್ತಿದ್ದಾನೆ ಎಂದಾದರೆ ಬೇಗನೆ ಎಚ್ಚೆತ್ತುಕೊಳ್ಳಿ.

 ನಿಂದಿಸುವುದು

ನಿಂದಿಸುವುದು

ಕೆಲವರು ತಮ್ಮ ಸಂಗಾತಿಯನ್ನು ತುಂಬಾ ನಿಂದಿಸುತ್ತಾರೆ, ಬೇರೆಯವರ ಮುಂದೆ ಇವರು ಕೆಟ್ಟವರೆಂಬಂತೆ ಚಿತ್ರಿಸಿ ಒಳ್ಳೆಯವರಂತೆ ನಟಿಸುತ್ತಾರೆ. ಎಷ್ಟೋ ಬಾರಿ ಅವರು ಹೇಳುವ ಮಾತನ್ನೇ ನಂಬಬೇಕು, ಅಷ್ಟು ಚೆನ್ನಾಗಿ ನಟಿಸುತ್ತಾರೆ. ಸಂಬಂಧದಲ್ಲಿ ನಿಂದನೆ.... ನೋ.. ನೋ ಸಹಿಸಿಕೊಳ್ಳಲೇಬೇಡಿ. ಅವರ ಜೊತೆ ಬಾಳುವುದರಲ್ಲಿ ಅರ್ಥವಿದೆಯೇ ಎಂದು ಯೋಚಿಸಿದರೆ ಒಳ್ಳೆಯದು.

 ಹೊಟ್ಟೆಕಿಚ್ಚು

ಹೊಟ್ಟೆಕಿಚ್ಚು

ಪ್ರೀತಿ ಇದ್ದಲ್ಲಿ ಹೊಟ್ಟೆಕಿಚ್ಚು ಇದ್ದೇ ಇರುತ್ತದೆ. ತನ್ನ ಸಂಗಾತಿ ಬೇರೆಯವರ ಬಗ್ಗೆ ಸ್ವಲ್ಪ ತುಸು ಹೆಚ್ಚು ಗಮನ ನೀಡಿದರೆ ಹೊಟ್ಟೆಕಿಚ್ಚು ಬರುವುದು ಸಹಜ, ಅವೆಲ್ಲಾ ಕಾಮನ್‌. ಆದರೆ ಆ ಕಾರಣಕ್ಕೆ ಅವರು ನಿಮ್ಮನ್ನು ನಿಂದಿಸುವುದು, ಹೊಡೆಯುವುದು ಮಾಡುತ್ತಿದ್ದರೆ ಖಂಡಿತ ಅದು ಒಳ್ಳೆಯ ಸಂಬಂಧದ ಲಕ್ಷಣವಲ್ಲ.

English summary

Don't Ignore These Signs Of Toxic Relationship

Toxic Relationship: These signs Says You are In Toxic Relationship, read on..
X
Desktop Bottom Promotion