For Quick Alerts
ALLOW NOTIFICATIONS  
For Daily Alerts

ಹಿಂಗೆಲ್ಲಾ ನಡ್ಕೊಂಡ್ರೆ ಸಂಸಾರ ಮೂರಾ ಬಟ್ಟೆಯಾಗುವುದು ಗ್ಯಾರಂಟಿ

|

ಸಂಬಂಧಗಳಲ್ಲಿ ಅತ್ಯಂತ ಸುಂದರವಾಗಿರುವಂಥದ್ದು, ದಾಂಪತ್ಯ ಸಂಬಂಧ, ಗಂಡ -ಹೆಂಡತಿ ಸಂಬಂಧ. ಈ ಸಂಬಂಧದ ಮೂಲಕ ನೂರಾರು ಸಂಬಂಧಗಳು ಹುಟ್ಟಿಕೊಳ್ಳುತ್ತವೆ. ಹಲವಾರು ಜನರ ನಡುವೆ ಬಾಂಧವ್ಯ ಬೆಳೆಯುತ್ತದೆ. ಆದರೆ ಈ ಗಂಡ ಹೆಂಡತಿ ಸಂಬಂಧ ಗಾಜಿನಂತೆ, ಅದು ಒಡೆಯದಂತೆ ಜೋಪಾನವಾಗಿ ನೋಡಿಕೊಳ್ಳಬೇಕಾಗುತ್ತದೆ. ಗಾಜು ಒಮ್ಮೆ ಒಡೆದರೆ, ಅದನ್ನು ಬಿರುಕಿಲ್ಲದಂತೆ ಕೂಡಿಸುವುದು ಅಸಾಧ್ಯವಾದುದು ಅಲ್ಲವೇ?!

ಆದರೆ ಎಷ್ಟೋ ಸಂಸಾರದಲ್ಲಿ ಇದ್ದಕ್ಕಿದ್ದಂತೆ ಸಮಸ್ಯೆಗಳು ಉದ್ಭವವಾಗುತ್ತದೆ. ಅಷ್ಟು ವರ್ಷ ಇಷ್ಟಪಡುತ್ತಿದ್ದ ವ್ಯಕ್ತಿ ಬೇಡವಾಗುತ್ತಾರೆ. ಬೇರೆಯದೇ ವ್ಯಕ್ತಿ ಮೇಲೆ ಆಸಕ್ತಿ ಉಂಟಾಗುತ್ತದೆ, ಅದಲ್ಲದಿದ್ದರೆ ಹೊಂದಾಣಿಕೆಯೇ ದೊಡ್ಡ ಸಮಸ್ಯೆಯಾಗಿರುತ್ತದೆ. ಆಗ ಸಂಗಾತಿಯ ಮೇಲೆ ನಿರಾಸಕ್ತಿ ಮೂಡುವುದು. ಸಂಸಾರದಲ್ಲಿ ಸಿಗದ ಖುಷಿ ಹೊರಗಡೆ ಹುಡುಕುತ್ತಾರೆ, ಇವೆಲ್ಲಾ ದಾಂಪತ್ಯ ಜೀವನದಲ್ಲಿ ಮಾಡುವ ಮೋಸ, ದ್ರೋಹಗಳಾಗಿವೆ. ನಾವಿಲ್ಲಿ ದಾಂಪತ್ಯ ಹೇಗೆಲ್ಲಾ ಹಾಳಾಗುತ್ತದೆ ಎಂಬುವುದರ ಬಗ್ಗೆ ಹೇಳಿದ್ದೇವೆ ನೋಡಿ:

1. ದೈಹಿಕ ಆಸೆ ಪೂರೈಸಲು ಬಲವಂತ ಪಡಿಸುವುದು

1. ದೈಹಿಕ ಆಸೆ ಪೂರೈಸಲು ಬಲವಂತ ಪಡಿಸುವುದು

ಮದುವೆಯಾದ ಮೇಲೆ, ಗಂಡ ಹೆಂಡತಿ ಸಂಬಂಧ ಎನ್ನುವುದು ಮಾನಸಿಕ ಹಾಗೂ ದೈಹಿಕ ಎರಡೂ ವಿಷಯಗಳನ್ನೂ ಒಳಗೊಂಡಿರುತ್ತದೆ. ಇಲ್ಲಿ ಒಬ್ಬರನ್ನೊಬ್ಬರು ಸೇರುವುದಕ್ಕೆ ಒಪ್ಪಿಗೆಯೂ ಅಗತ್ಯ. ಬಲವಂತವಾಗಿ ನಿಮ್ಮ ಸಂಗಾತಿಯನ್ನು ಸೇರುವುದಕ್ಕೆ ಪ್ರಯತ್ನಿಸುವುದು ಅಕ್ಷರಶಃ ತಪ್ಪು. ಬದಲಿಗೆ ನೀವು ನಿಮ್ಮ ದೈಹಿಕ ಆಸೆಯನ್ನು ಅವರ ಬಳಿ ಹೇಳಿಕೊಂಡು ನಿಮ್ಮನ್ನು ತೃಪ್ತಿ ಪಡಿಸಲು ಅವರ ಮನವೊಲಿಸಲು ಪ್ಯತ್ನಿಸಬೇಕು.

2. ಅಶ್ಲೀಲ ಚಿತ್ರಗಳನ್ನು ನೋಡುವುದು:

2. ಅಶ್ಲೀಲ ಚಿತ್ರಗಳನ್ನು ನೋಡುವುದು:

ಅಶ್ಲೀಲ ಚಿತ್ರಗಳನ್ನು ನೋಡುವುದು ಸರಿ ಅಥವಾ ತಪ್ಪು ಎಂದು ವಾದಿಸಲು ಸಾಧ್ಯವೇ ಇಲ್ಲ. ಇಂದು ಒಂದು ಅಶ್ಲೀಲ ವ್ಯಸನಕಾರಿಯೂ ಹೌದು. ಸಾಕಷ್ಟು ಗಂಡಂದಿರು ಇಂಥ ಚಿತ್ರಗಳನ್ನು ನೋಡುತ್ತಿರುತ್ತಾರೆ. ಇದು ಅವರ ಹೆಂಡತಿಗೆ ಇಷ್ಟವಾಗದೇ ಇರಬಹುದು. ಅಥವಾ ನೋಡಿದರೆ ನಮಗೆ ತೊಂದರೆ ಇಲ್ಲ ಎಂಬಂತೆಯೂ ನಟಿಸಬಹುದು. ಆದರೆ ವಾಸ್ತವದಲ್ಲಿ ಮಹಿಳೆಗೆ ಅಂಥ ಚಿತ್ರಗಳಲ್ಲಿರುವಂತೆ ಇರಲು ಅಥವಾ ವರ್ತಿಸಲು ಸಾಧ್ಯವಿಲ್ಲ. ಹಾಗಾಗಿ ಇಂಥ ಚಿತ್ರಗಳನ್ನು ನೋಡಿದರೆ ಸಂಗಾತಿ ಬಳಿ ಅವುಗಳನ್ನು ಅಪೇಕ್ಷಿಸಬೇಡಿ, ಇದರಿಂದ ತೊಂದರೆಯುಂಟಾಗುವುದು.

3. ಇತರ ಮಹಿಳೆಯರನ್ನು ನೋಡುವುದು:

3. ಇತರ ಮಹಿಳೆಯರನ್ನು ನೋಡುವುದು:

"ನಾನು ಮೆನುವನ್ನು ನೋಡಬಹುದಷ್ಟೇ ಆರ್ಡರ್ ಮಾಡುವ ಹಾಗಿಲ್ಲ' ಇಂಥ ಕೀಳು ಮಟ್ಟಿಗಿನ ಜೋಕ್‌ ಅನ್ನು ಕೆಲ ಗಂಡಸರ ಬಾಯಲ್ಲಿ ಕೇಳಿರಬಹುದು. ಹಾಸ್ಯವೆಂಬಂತೆ ಇಂಥ ಮಾತುಗಳನ್ನು ಬಳಸಿದರೂ ಬೇರೆ ಮಹಿಳೆಯನ್ನು ನೋಡುವ ಉದ್ದೇಶ ಇದರಲ್ಲಿ ಅಡಗಿರುತ್ತದೆ. ಹಾಗೆ ಮಾಡುತ್ತಾರೆ ಕೂಡ. ಆದರೆ ಇದು ದಾಂಪತ್ಯ ದ್ರೋಹವಲ್ಲದೇ ಮತ್ತೇನು?

 4. ಕೆಟ್ಟ ನಡವಳಿಕೆಯನ್ನು ಸಮರ್ಥಿಸುವುದು:

4. ಕೆಟ್ಟ ನಡವಳಿಕೆಯನ್ನು ಸಮರ್ಥಿಸುವುದು:

ಮ್ಯಾಕ್ ಡೇವಿಸ್ "ದೇವರೆ ನಾನು ಎಲ್ಲಾ ರೀತಿಯಲ್ಲೂ ಪರಿಪೂರ್ಣನಾಗಿದ್ದಾಗ ಮಿನಮ್ರವಾಗಿರುವುದು ಕಷ್ಟ" ಎಂದು ಹಾಡುತ್ತಾರೆ. ಇದು ಸಾರ್ವಕಾಲಿಕ ಸತ್ಯವೇ ಸರಿ. ಏಕೆಂದರೆ ನಾವು ತಪ್ಪು ಮಾಡಿದ್ದೇವೆ ಎಂದು ಒಪ್ಪಿಕೊಳ್ಳುವುದು ಕಷ್ಟ. ಹಾಗೆ ಯಾರು ಒಪ್ಪಿಕೊಳ್ಳುವುದೂ ಇಲ್ಲ. ನಮ್ಮ ಕೆಟ್ಟ ನಡವಳಿಕೆಯನ್ನು ಸಮರ್ಥಿಸಿಕೊಳ್ಳುವುದು ಕೂಡ ದಾಂಪತ್ಯದಲ್ಲಿ ತೊಂದರೆ ಉಂಟಾಗುವುದು.

5. ಇನ್ನೊಬ್ಬ ಮಹಿಳೆಯೊಂದಿಗೆ ವಿಷಯಗಳನ್ನು ಅತಿಯಾಗಿ ಹಂಚಿಕೊಳ್ಳುವುದು:

5. ಇನ್ನೊಬ್ಬ ಮಹಿಳೆಯೊಂದಿಗೆ ವಿಷಯಗಳನ್ನು ಅತಿಯಾಗಿ ಹಂಚಿಕೊಳ್ಳುವುದು:

ಗಂಡು ವಿವಾಹದ ಸಮಯದಲ್ಲಿ ನಂಬಿಕಸ್ತನಾಗಿರುತ್ತೇನೆ ಎಂಬ ಭರವಸೆಯನ್ನು ನೀಡುತ್ತಾನೆ. ಇದು ದೈಹಿಕ ಸಂಬಂಧಕ್ಕಿಂತಲೂ ಮಾನಸಿಕ ಸಂಬಂಧಕ್ಕೆ ಸಂಬಂಧಿಸಿದ್ದು. ಮಹಿಳಾ ಸಹೋದ್ಯೋಗಿಗಳಿರಲಿ, ಸ್ನೇಹಿತೆಯಿರಲಿ, ಹೆಂಡತಿಗಿಂತ ಹೆಚ್ಚಾಗಿ, ಅಥವಾ ಹೆಂಡತಿಯ ವಿಷಯವನ್ನು ಅತಿಯಾಗಿ ಹಂಚಿಕೊಳ್ಳುವುದು ತಪ್ಪು. ತಮ್ಮ ಮಿತಿಯನ್ನು ಈ ಮಿಷಯದಲ್ಲಿ ಯಾವ ಗಂಡಸೂ ಮೀರುವಂತಿಲ್ಲ. ಬೋಧಕ ಬಿಲ್ಲಿ ಗ್ರಹಾಂ ಈ ಪರಿಸ್ಥಿತಿಗೆ ತನ್ನದೇ ಆದ ನಿಯಮವನ್ನು ಹೊಂದಿದ್ದನು. ತನ್ನ ಹೆಂಡತಿಯಿಲ್ಲದೇ ಇತರ ಯಾವುದೇ ಮಹಿಳೆಯ ಜೊತೆ ಒಂಟಿಯಾಗಿ ಇರುವುದನ್ನು ತಪ್ಪಿಸಲು ನಿರ್ಧರಿಸಿದ್ದನು. ಇದು ಒಂದು ಉದಾಹರಣೆಯಷ್ಟೆ. ಆದರೆ ಹೀಗೆ ಬೇರೆ ಮಹಿಳೆಯೊಂದಿಗೆ ಮಿತಿ ಮೀರಿದ ಸ್ನೇಹ ಸಂಗಾತಿಯಲ್ಲಿ ಅಸಮಧಾನ ತರಬಹುದು.

6. ಪರಿಸ್ಥಿತಿ/ಮನಸ್ಥಿತಿ ಉತ್ತಮವಾಗಿಲ್ಲದ ಸಂದರ್ಭಗಳು:

6. ಪರಿಸ್ಥಿತಿ/ಮನಸ್ಥಿತಿ ಉತ್ತಮವಾಗಿಲ್ಲದ ಸಂದರ್ಭಗಳು:

ನಾವೆಲ್ಲರೂ ಅದೊಂದು ಸಂದರ್ಭವನ್ನ ಎದುರಿಸಿಯೇ ಎದುರಿಸುತ್ತೇವೆ. ಅದೇನೆಂದರೆ ನಮ್ಮಮನಸ್ಥಿತಿ ಅಥವಾ ನಮ್ಮ ಪರಿಸ್ಥಿತಿ ನಮಗೆ ಹೊಂದುವ ರೀತಿಯಲ್ಲಿ ಇಲ್ಲದೇ ಇರುವಂಥದ್ದು. ಉದಾಹರಣೆಗೆ ಒಂಟಿತನ, ಸುಸ್ತು, ಸಿಟ್ಟು ಹೀಗೆ ಹಲವಾರು ಸಂದರ್ಭಗಳಲ್ಲಿ ನಾವು ನಮ್ಮ ಉತ್ತಮ ನಿರ್ಧಾರಗಳನ್ನು ಕೂಡ ತೆಗೆದೆಕೊಳ್ಳಲು ಸಾಧ್ಯವಿಲ್ಲ. ಇಂಥ ಸಂದರ್ಭದಲ್ಲಿ ನಾವು ಜಾಗರೂಕತೆ ವಹಿಸದಿದ್ದಲ್ಲಿ ಸಮಸ್ಯೆಗಳು ದುಪ್ಪಟ್ಟಾಗಬಹುದು.

7. ವೈವಾಹಿಕ ಸಮಸ್ಯೆಗಳನ್ನು ಅವಲೋಕಿಸುವುದು:

7. ವೈವಾಹಿಕ ಸಮಸ್ಯೆಗಳನ್ನು ಅವಲೋಕಿಸುವುದು:

ದಾಂಪತ್ಯ ಎಂದ ಮೇಲೆ ಅಲ್ಲಿ ಏರಿಳಿತಗಳು ಸಾಮಾನ್ಯ. ಅದರಲ್ಲೂ ಮದುವೆಯಾದ ಹೊಸದರಲ್ಲಿ ಹೊಂದಾಣಿಕೆ ಕೂಡ ಕಷ್ಟದಾಯಕವಾಗಬಹುದು. ಇಂಥ ಸಂದರ್ಭದಲ್ಲಿ ನಿಮ್ಮ ಮದುವೆಯ ಬದ್ಧತೆಗಳನ್ನು ನೆನಪಿಸಿಕೊಳ್ಳುವುದು ಸೂಕ್ತ. ದಾಂಪತ್ಯದಲ್ಲಿನ ಸಮಸ್ಯೆಗಳನ್ನುಅಲ್ಲಿಯೇ ಪರಿಹರಿಸಿಕೊಳ್ಳುವ ಬದಲು ದಾಂಪತ್ಯದ ಹೊರಗಡೆ ಹುಡುಕಲು ಪ್ರಯತ್ನಿಸಿದರೆ ಅದು ದಾಂಪತ್ಯ ದ್ರೋಹ ಎನಿಸಿಕೊಳ್ಳುತ್ತದೆ.

ಹೀಗೆ ದಾಂಪತ್ಯದಲ್ಲಿ ಬರುವ ಸಮಸ್ಯೆಗಳೆಲ್ಲವನ್ನು ಇಬ್ಬರು ಕುಳಿತು ಮಾತನಾಡಿ ಪರಿಹಾರ ಕಂಡುಕೊಳ್ಳುವುದರ ಮೂಲಕ ದಾಂಪತ್ಯದ ನಿಜವಾದ ಅರ್ಥವನ್ನು ಕಾಯ್ದುಕೊಳ್ಳಬೇಕು. ಇಲ್ಲವಾದಲ್ಲಿ ದಾಂಪತ್ಯ ಎಂಬ ಸಂಬಂಧವೇ ಅರ್ಥಹೀನ ಎನಿಸಿಕೊಳ್ಳುತ್ತದೆ.

English summary

Common Causes of Infidelity in a Marriage

Here we explain what are the causes of infidelity in Marriage, have a look..
Story first published: Wednesday, February 24, 2021, 18:30 [IST]
X