Just In
Don't Miss
- Sports
ಐಎಸ್ಎಲ್: ಸಮಬಲ ಸಾಧಿಸಿದ ಕೇರಳ ಬ್ಲಾಸ್ಟರ್ಸ್, ಜೆಮ್ಷೆಡ್ಪುರ
- Movies
ಡ್ರಗ್ಸ್ ಪ್ರಕರಣ: ಇಂದ್ರಜಿತ್ ಲಂಕೇಶ್ ಗೆ ಮತ್ತೆ ಬುಲಾವ್ ನೀಡಿದ ಸಿಸಿಬಿ
- News
ಸಂಸದರಿಗೆ 10 ರುಗೆ ಬೋಂಡಾ, 100 ರುಗೆ ಚಿಕನ್ ಬಿರಿಯಾನಿ
- Education
BEL Recruitment 2021: 22 ಸರಂಕ್ಷಣೆ ಅಧಿಕಾರಿ, ಕಿರಿಯ ಮೇಲ್ವಿಚಾರಕರು ಮತ್ತು ಹವಿಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಅನಾವರಣವಾಯ್ತು 2021ರ ಹ್ಯುಂಡೈ ಟ್ಯುಸಾನ್ ಎನ್ ಲೈನ್ ಎಸ್ಯುವಿ
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 27ರ ದರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಸಿ ಅಪ್ಪುಗೆಯ ಚುಂಬನನಲ್ಲಿದೆ ನಾನಾ ಅರ್ಥಗಳು
ಒಂದು ರೊಮ್ಯಾಂಟಿಕ್ ಬಂಧದಲ್ಲಿ ಮನಸ್ಸಿನ ಭಾವನೆಯನ್ನು ಹೃದಯಕ್ಕೆ ತಲುಪಿಸುವ ಸಾಮರ್ಥ್ಯ ಚುಂಬನದಲ್ಲಿದೆ. ಪ್ರತಿಯೊಬ್ಬ ಪ್ರೇಮಿಯೂ ತನ್ನ ಪ್ರೇಮಿ ನೀಡುವ ಮಧುರ ಚುಂಬನಕ್ಕಾಗಿ ತವಕಿಸುತ್ತಾರೆ. ಎರಡು ಭಾವನೆಗಳು, ಎರಡು ದೇಹ ಚುಂಬನದಿಂದಾಗಿ ಒಂದಾಗುತ್ತದೆ. ಸಂಗಾತಿ ನೀಡುವ ಒಂದೊಂದು ಚುಂಬನಕ್ಕೂ ಒಂದೊಂದು ಅರ್ಥವಿರುತ್ತದೆ.
ಚುಂಬನವೆಂದರೆ ಅಲ್ಲಿ ಬರೀ ಕಾಮದ ಭಾವನೆ ಮಾತ್ರ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಚುಂಬನದಲ್ಲಿ ಅವರ ಮೇಲಿಟ್ಟ ನಮ್ಮ ಪ್ರೀತಿ, ಕಾಳಜಿಯನ್ನು ವ್ಯಕ್ತಪಡಿಸಬಹುದು. ದುಃಖದಲ್ಲಿದ್ದಾಗ ಸಂತೈಸುವ ಸಾಮಾರ್ಥ್ಯ ಚುಂಬನಕ್ಕಿದೆ. ಮಧುರವಾದ ಮುತ್ತಿನಿಂದಾಗಿ ಸಂಬಂಧ ಮತ್ತಷ್ಟು ಗಟ್ಟಿಯಾಗುವುದು.
ಸಂಗಾತಿ ಹಣೆಗೆ ಮುತ್ತಿಕ್ಕಿದಾಗ ಒಂಥರಾ ಸುರಕ್ಷತೆ ಭಾವ ಉಂಟಾದರೆ, ತುಟಿಗೆ ಮುತ್ತಿಕ್ಕಿದಾಗ ಲೈಂಗಿಕ ಪ್ರಚೋದನೆ ನೀಡುತ್ತದೆ. ಬಿಸಿ ಬಿಸಿಯಾದ ಚುಂಬನ ದೈಹಿಕ ಭಾವನೆಗಳನ್ನು ಉದ್ರೇಕಿಸಿ ಸಂಗಾತಿ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತದೆ. ಇಲ್ಲಿ ನಾವು ಚುಂಬನದಿಂದ ದೊರೆಯುವ ಪ್ರಯೋಜನಗಳ ಬಗ್ಗೆ ಹೇಳಿದ್ದೇವೆ ನೋಡಿ:

ದೈಹಿಕವಾಗಿ ಹತ್ತಿರವಾಗುವಂತೆ ಮಾಡುತ್ತದೆ
ಲೈಂಗಿಕ ಕ್ರಿಯೆ ಮುನ್ನ ಮುತ್ತು ನೀಡುವುದರಿಂದ ಲೈಂಗಿಕ ಬಯಕೆ ಹೆಚ್ಚಾಗುತ್ತದೆ. ಸಂಗಾತಿ ಜೊತೆ ಸಂಪೂರ್ಣವಾಗಿ ಕ್ರಿಯೆಯಲ್ಲಿ ಬಾಗಿಯಾಗುವಂತೆ ಬಿಸಿ ಬಿಸಿಯಾದ ಮುತ್ತು ಪ್ರೇರೇಪಿಸುತ್ತದೆ. ಇಬ್ಬರು ಅಪ್ಪಿಕೊಂಡು ಮುತ್ತಾಡುವುದರಿಂದ ದೇಹದಲ್ಲಿ ಸಂತೋಷದ ಹಾರ್ಬೋನ್ ಬಿಡುಗಡೆಯಾಗುತ್ತದೆ. ಇಬ್ಬರು ದೈಹಿಕ ಹಾಗೂ ಮಾನಸಿಕವಾಗಿ ಹತ್ತಿರವಾಗುತ್ತಾರೆ. ಲೈಂಗಿಕ ಕ್ರಿಯೆ ಮುನ್ನ ಅಪ್ಪಿಕೊಂಡು ಮುದ್ದಾಡುವುದರಿಂದ ದೇಹವು ಲೈಂಗಿಕ ಕ್ರಿಯೆ ಬಯಸಿದರೆ, ಆ ಕ್ರಿಯೆ ಬಳಿಕ ನೀಡುವ ಬಿಸಿ ಅಪ್ಪುಗೆ ಮುತ್ತು ಲೈಂಗಿಕ ಸಂಗಾತಿಗೆ ಲೈಂಗಿಕ ತೃಪ್ತಿಯನ್ನು ನಿಡುತ್ತದೆ.
ಸಂಸಾರದಲ್ಲಿ ಲೈಂಗಿಕ ಸಂತೃಪ್ತಿ ತುಂಬಾ ಮುಖ್ಯ. ಲೈಂಗಿಕ ತೃಪ್ತಿಯ ಕೀಲಿಕೈ ಚುಂಬನವಾಗಿದೆ.

ಭಾವನಾತ್ಮಕವಾಗಿ ಹತ್ತಿವಾಗಿಸುತ್ತದೆ
ಅಪೀಸ್‌ಗೆ ಹೊರಡುವ ಮುನ್ನ ಸಮಗಾತಿಯ ಕೆನ್ನೆಗೆ ನೀಡುವ ನೀಡುವ ಸಿಹಿ ಮುತ್ತು ಆ ದಿನಪೂರ್ತಿ ನಿಮ್ಮನ್ನು ಹುರುಪಿನಿಂದ ಇರುವಂತೆ ಮಾಡುವುದಲ್ಲಿ, ಸಂಗಾತಿಗೆ ನಿಮ್ಮ ಮೇಲೆ ಅಕ್ಕರೆ, ಪ್ರೀತಿ ಹೆಚ್ಚುವಂತೆ ಮಾಡುತ್ತದೆ. ಈ ರೀತಿಯ ಮುತ್ತಿನ ಮೂಲಕ ನಿಮ್ಮ ಕಾಳಜಿಯನ್ನು ವ್ಯಕ್ತ ಪಡಿಸಬಹುದು, ಅವರಿಗೆ ಕೆಲವು ಸಂದರ್ಭದಲ್ಲಿ ಧೈರ್ಯವನ್ನೂ ತುಂಬಬಹುದು. ಇದರಿಂದ ಇಬ್ಬರ ನಡುವೆ ಮಾನಸಿಕ ಬಂಧ ಮತ್ತಷ್ಟು ಗಟ್ಟಿಯಾಗುವುದು.
ಮೊದಲ ಚುಂಬನವಂತೂ ಪ್ರತಿಯೊಬ್ಬರಿಗೂ ತುಂಬಾ ವಿಶೇಷ ಅನಿಸುವುದು. ಆ ಚುಂಬನ ಮೂಲಕ ಇಬ್ಬರ ಭಾವನಾತ್ಮಕವಾದ ಬಂಧ ಮತ್ತಷ್ಟು ಗಟ್ಟಿಯಾಗುವುದು.

ಮಾನಸಿಕ ಒತ್ತಡ ಕಡಿಮೆಮಾಡುತ್ತದೆ
ದಿನಪೂರ್ತಿ ಬಳಲಿ ಮನೆಗೆ ಬಂದಾಗ ಸಂಗಾತಿ ನಿಮ್ಮನ್ನು ಬಿಗಿದಪ್ಪಿ ಒಂದು ಸಿಹಿಯಾದ ಮುತ್ತು ನೀಡಿದರೆ ನಿಮ್ಮ ಸುಸ್ತೆಲ್ಲಾ ಕ್ಷಣಾರ್ಧದಲ್ಲಿ ಮಾಯವಾಗುವುದು ಅಲ್ವಾ? ಚುಂಬನದಲ್ಲಿ ಆರೋಗ್ಯಕರ ಗುಣವಿದೆ. ನಾವು ಮಾನಸಿಕ ಒತ್ತಡದಿಂದ ಬಳಲಿದಾಗ ಕೊರ್ಟಿಸೋಲ್ ಹಾರ್ಮೋನ್ ಬಿಡುಗಡೆಯಾಗುತ್ತದೆ, ಇದರಿಂದ ತುಂಬಾ ಆಯಾಸದ ಅನುಭವ ಉಂಟಾಗುತ್ತದೆ. ಈ ಹಾರ್ಮೋನ್ ಕಡಿಮೆ ಮಾಡಿ ಹ್ಯಾಪಿ ಹಾರ್ಮೋನ್ ಹೆಚ್ಚಿಸುವ ಗುಣ ಮುತ್ತಿನಲ್ಲಿರುವುದರಿಂದಲೇ ಆಯಾಸ ಕ್ಷಣಾರ್ಧದಲ್ಲಿ ಮಾಯವಾಗುವುದು.

ಮುತ್ತು ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ
ಚುಂಬನದಿಂದಾಗಿ ದೇಹದಲ್ಲಿ ಹ್ಯಾಪಿ ಹಾರ್ಮೋನ್ ಆದ ಡೊಪಾಮೈನ್ ಹಾಗೂ ಆಕ್ಸಿಟೋಸಿನ್ ಹೆಚ್ಚುವುದರಿಂದ ಖುಷಿಯಾಗಿರುವಿರಿ. ಸಂಗಾತಿಯ ಆತ್ಮೀಯ ಭಾವ, ಕಳೆದ ಮಧುರವಾದ ಕ್ಷಣುಗಳು ಮನಸ್ಸಿಗೆ ಖುಷಿ ಹಾಗೂ ತೃಪ್ತಿ ನೀಡುತ್ತದೆ. ಚುಂಬನ ನಿಮ್ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಹಾಗೂ ಸಂಗಾತಿ ಮೇಲಿರುವ ನಿಮ್ಮ ಪ್ರೀತಿಯನ್ನೂ ವ್ಯಕ್ತಪಡಿಸುತ್ತದೆ. ಎರಡು ಜೀವಗಳ ಪ್ರೀತಿಯನ್ನು ವ್ಯಕ್ತ ಪಡಿಸುವ ಮಾರ್ಗವೇ ಚುಂಬನ. ಹೊಸದಾಗಿ ಮದುವೆಯಾದವರಿಗೆ ಸಾಕಷ್ಟು ಅಂಜಿಕೆಗಳಿರುತ್ತದೆ. ಇದನ್ನು ದೂರಮಾಡುವ ಸಾಮರ್ಥ್ಯ ಚುಂಬನದಲ್ಲಿದೆ.

ನಿಮ್ಮ ಸಂಗಾತಿಯ ಭಾವನೆಗಳನ್ನೂ ಅರಿತುಕೊಳ್ಳಬಹುದು
ಚುಂಬನದ ಮೂಲಕ ಸಂಗಾತಿಯ ಭಾವನೆಗಳು ಅರ್ಥವಾಗುತ್ತದೆ. ಚುಂಬಿಸಿದಾಗ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಅವರಿಗೆ ನಿಮ್ಮ ಮೇಲೆ ಇಷ್ಟವಿದೆಯೇ? ಅಥವಾ ಯಾವುದಾದರೂ ಕಾರಣಕ್ಕೆ ಕೋಪಗೊಂಡಿದ್ದಾರಾ? ಎಂಬುವುದು ಅರ್ಥವಾಗುತ್ತದೆ. ಸಂಗಾತಿಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಇದೆಯೇ, ಇಲ್ಲವೇ ಎಂಬುವುದು ಕೂಡ ಚುಂಬನಕ್ಕೆ ಯಾವುದೇ ಪ್ರತಿಕ್ರಿಯೆ ದೊರೆಯದಿದ್ದಾಗ ತಿಳಿಯುತ್ತದೆ. ಆದ್ದರಿಂದ ಮುತ್ತಿನಲ್ಲಿದೆ ಅನೇಕ ಅರ್ಥಗಳು.