For Quick Alerts
ALLOW NOTIFICATIONS  
For Daily Alerts

20ರ ಹರೆಯದಲ್ಲೇ ವಿವಾಹವಾಗುವುದರ ಲಾಭ ಎಷ್ಟೆಲ್ಲಾ ಇದೆ ಗೊತ್ತಾ?

|

ನಿಮ್ಮ ಮಗಳಿಗೆ ಕಾಲೇಜು ಮುಗಿತಲ್ವಾ? ಮದುವೆ ಯಾವಾಗ? ನಿಮ್ಮ ಹುಡುಗನಿಗೆ ಒಳ್ಳೆಯ ಜಾಬ್ ಆಯ್ತಂತೆ. ಯಾವಾಗ ಮದುವೆ? ಹೀಗೆ ನೂರಾರು ಪ್ರಶ್ನೆಗಳು ನಿಮ್ಮ 20 ರ ಹರೆಯದಲ್ಲಿ ನಿಮ್ಮ ಕಿವಿಗೆ ಬಿದ್ದಿರಬಹುದಲ್ಲವೇ! ಇದರಿಂದ ನೀವು ಸಾಕಷ್ಟು ಬಾರಿ ಸಿಟ್ಟನ್ನು ಕೂಡ ಮಾಡಿಕೊಂಡಿರಬಹುದು. ಜೊತೆಗೆ ಬೇಕಾದಷ್ಟು ಸಲ ಪ್ರಶ್ನಿಸಿದವರನ್ನು ಬೈದಿದ್ದೂ ಇರಬಹುದು.

 Here Are Some Advantages Of Getting Married In Your Early 20’s

ನೀವು ನಿಮ್ಮ 20 ರ ಹರೆಯದಲ್ಲಿದ್ದರೆ, ನಿಮ್ಮ ಸಂಬಂಧಿಕರು ನಿಮ್ಮನ್ನು ಮದುವೆಯಾಗುವಂತೆ ಪೀಡಿಸುತ್ತಲೇ ಇರುತ್ತಾರೆ. ನೀವು ಇದನ್ನು ಅನುಭವಿಸಿದ್ದೀರಿ ಎಂದು ಭಾವಿಸುತ್ತೇವೆ! ಒಂದುವೇಳೆ ನೀವು ನಾನು ಮದುವೆಗೆ ಈಗಲೇ ತಯಾರಾಗಿಲ್ಲವೆಂದು ಎಷ್ಟು ಬಾರಿ ಹೇಳಿದರೂ ಅವರು ನಿಮ್ಮ ಮಾತನ್ನು ಗಮನಿಸುವುದೇ ಇಲ್ಲ! 20 ವರ್ಷ ವಯಸ್ಸಿನಲ್ಲಿ ಮದುವೆಯಾದರೆ ಇರುವ ಲಾಭಗಳ ಒಂದು ದೊಡ್ಡ ಪಟ್ಟಿಯೇ ಅವರ ಬಳಿಯಲ್ಲಿರುತ್ತದೆ.

ನಿಮಗೆ ಈಗಲೇ ಮದುವೆ ಎಂದರೆ ಕೆಲವೊಮ್ಮೆ ಕಿರಿಕಿರಿ ಅನುಭವಿಸಬಹುದು ಎಂದು ನಾವು ಅರ್ಥಮಾಡಿಕೊಂಡಿದ್ದೇವೆ ಆದರೆ ನಿಮಗೆ ಗೊತ್ತಾ, 20 ರ ದಶಕದ ಆರಂಭದಲ್ಲಿ ಮದುವೆಯಾಗುವುದರಿಂದ ಕೆಲವು ಪ್ರಯೋಜನಗಳಿವೆ ಎಂದು? ಹೌದು, ನೀವು ಅದನ್ನು ವಿಲಕ್ಷಣವಾಗಿ ಕಾಣಬಹುದು ಆದರೆ ಅದು ನಿಜ. ನೀವು ಇನ್ನೂ ನಮ್ಮನ್ನು ನಂಬದಿದ್ದರೆ, ಇಲ್ಲಿ ಕೆಳಗೆ ತಿಳಿಸಲಾದ ಪ್ರಯೋಜನಗಳನ್ನು ಓದಿ.

1. ಮದುವೆಯಾಗಲು ಸೂಕ್ತ ಸಮಯ ಎಂಬುದು ತಪ್ಪು ಕಲ್ಪನೆ

1. ಮದುವೆಯಾಗಲು ಸೂಕ್ತ ಸಮಯ ಎಂಬುದು ತಪ್ಪು ಕಲ್ಪನೆ

ಮದುವೆಯಾಗಲು ಸೂಕ್ತ ಸಮಯ ಅಥವಾ ವಯಸ್ಸು ಇದೆ ಎಂದು ನೀವು ಭಾವಿಸಿದರೆ, ಅದು ನಿಮ್ಮ ತಪ್ಪು ಕಲ್ಪನೆ. ಮದುವೆ ಎಂಬ ನಿರ್ಧಾರ ನೀವು ನಿಮ್ಮ ೫೦ರ ವಯಸ್ಸಿನಲ್ಲೂ ಸರಿಯಾದ ಉತ್ತರವನ್ನು ಕಂಡುಕೊಳ್ಳಲಾಗದ ವಿಷಯ. ನೀವು ನಿಮ್ಮ ಎಲ್ಲಾ ಸಾಧನೆಗಳನ್ನು ಮಾಡಿದ ನಂತರವೂ ಮತ್ತು ನಿಮ್ಮ ಕನಸುಗಳೆಲ್ಲವನ್ನು ಈಡೇರಿಸಿಕೊಂಡ ಮೇಲೂ ನೀವು ಮದುವೆಯಾಗಲು ಸಿದ್ಧರಾಗದೇ ಇರಬಹುದು. ಆದ್ದರಿಂದ ಒಂದು ವೇಳೆ ನೀವು ಪರಿಪೂರ್ಣ ಸಮಯಕ್ಕಾಗಿ ಕಾಯುತ್ತಿದ್ದರೆ, ನಿಮ್ಮ ಮನಸ್ಸನ್ನು ತಯಾರಿಮಾಡುವುದರಲ್ಲೇ ಸಮಯ ಕಳೆದರೆ ನಿಮಗೆ ಅಂತಹ ಸಮಯ ಎಂದಿಗೂ ಒದಗಿಬರುವುದಿಲ್ಲ.

2. ನೀವು ಜವಾಬ್ದಾರಿಯನ್ನು ಮೊದಲೇ ತೆಗೆದುಕೊಳ್ಳಬಹುದು

2. ನೀವು ಜವಾಬ್ದಾರಿಯನ್ನು ಮೊದಲೇ ತೆಗೆದುಕೊಳ್ಳಬಹುದು

ನೀವು ಮದುವೆಯಾದ ಕ್ಷಣ, ನೀವು ಹಲವಾರು ಜವಾಬ್ದಾರಿಗಳನ್ನು ಪಡೆಯುತ್ತೀರಿ ಎಂಬುದು ನಿಜ. ನಿಮಗೆ ಆ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಇಷ್ಟವಿದೆಯೋ ಇಲ್ಲವೇ ಎಂಬುದು ವಿಷಯವೇ ಅಲ್ಲ. ಕೆಲವೊಂದು ಸಂದರ್ಭದಲ್ಲಿ ನೀವು ಆ ಜವಾಬ್ದಾರಿಗಳನ್ನು ನಿರ್ಲಕ್ಷಿಸಲು ಸಾಧ್ಯವೇ ಇಲ್ಲ. ಹಾಗಾಗಿ ನೀವು ನಿಮ್ಮ ೨೦ರ ಹರೆಯದಲ್ಲಿ ಮದುವೆಯಾದರೆ ಜವಾಬ್ದಾರಿಗಳನ್ನು ತುಸು ಬೇಗ ತೆಗೆದುಕೊಳ್ಳಬಹುದು ಮತ್ತು ಅದಕ್ಕೆ ಕ್ರಮೇಣ ಹೊಂದಿಕೊಳ್ಳಬಹುದು. ನಿಮ್ಮ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ಪೂರೈಸುವಾಗ ನೀವು ಉತ್ತಮ ಮನುಷ್ಯನಾಗಿ ಹೊಂದಿಕೊಳ್ಳಲು ಮತ್ತು ವಿಕಸನಗೊಳ್ಳಲು ಕಲಿಯುವಿರಿ!

3. ಕುಟುಂಬದವರು ಮಕ್ಕಳನ್ನು ಹೊಂದಲು ನಿಮ್ಮ ಮೇಲೆ ಒತ್ತಡ ಹೇರುವುದಿಲ್ಲ

3. ಕುಟುಂಬದವರು ಮಕ್ಕಳನ್ನು ಹೊಂದಲು ನಿಮ್ಮ ಮೇಲೆ ಒತ್ತಡ ಹೇರುವುದಿಲ್ಲ

ಸಾಮಾನ್ಯವಾಗಿ ಮದುವೆಯಾದ ತಕ್ಷಣವೇ, ಅವರ ಕುಟುಂಬದವರು, ಸ್ನೇಹಿತರು ಮತ್ತು ಸಂಬಂಧಿಕರು ಆದಷ್ಟು ಬೇಗ ಮಕ್ಕಳನ್ನು ಮಾಡಿಕೊಳ್ಳುವಂತೆ ಉಪದೇಶ ಮಾಡಲು ಪ್ರಾರಂಭಿಸುತ್ತಾರೆ. ಅದರಲ್ಲೂ ನೀವು 20ನೇ ವರ್ಷ ವಯಸ್ಸಿನ ನಂತರ ಅಥವಾ 30 ವರ್ಷ ವಯಸ್ಸಿನಲ್ಲಿ ಮದುವೆಯಾದರೆ ಕೂಡಲೇ ಮಗುವನ್ನು ಪಡೆಯಲೇಬೇಕು ಎಂದು ಎಲ್ಲರೂ ಪೀಡಿಸಲು ಶುರುಮಾಡುತ್ತಾರೆ. ಯಾಕೆಂದರೆ ತುಂಬಾ ನಿಧಾನವಾಗಿ ಮಕ್ಕಳನ್ನು ಪಡೆಯಲು ಪ್ರಯತ್ನಿಸಿದರೆ ಗರ್ಭಾವಸ್ಥೆಯಲ್ಲಿ ಸಾಕಷ್ಟು ಸಮಸ್ಯೆಗಳಾಗಬಹುದೆಂದು ಅವರು ಭಾವಿಸುತ್ತಾರೆ. ಆದರೆ ನೀವು ನಿಮ್ಮ 20ರ ವಯಸ್ಸಿನಲ್ಲಿ ಮದುವೆಯಾದರೆ ಕನಿಷ್ಠ ಮುಂದಿನ ಎರಡು ವರ್ಷ ಮಗುವನ್ನು ಪಡೆಯುವಂತೆ ಯಾರು ನಿಮ್ಮನ್ನು ಒತ್ತಾಯ ಮಾಡುವುದಿಲ್ಲ.

4. ನೀವು ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳಲು ಕಲಿಯುವಿರಿ

4. ನೀವು ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳಲು ಕಲಿಯುವಿರಿ

ಒಬ್ಬರಿಗೊಬ್ಬರು ಹೊಂದಾಣಿಕೆ ಮಾಡಿಕೊಳ್ಳಲು ತೀವ್ರ ತೊಂದರೆಗಳನ್ನು ಎದುರಿಸುತ್ತಿರುವ ಅನೇಕ ಜೋಡಿಗಳಿವೆ. ಅದರಲ್ಲೂ ವಿಶೇಷವಾಗಿ ಅವರು ತಡವಾಗಿ ಮದುವೆಯಾಗಿದ್ದರೆ ಅವರ ನಡುವೆ ಸಮಸ್ಯೆಗಳು ಉಂಟಾಗಬಹುದು. ಯಾಕೆಂದರೆ ಅವರು ಇಷ್ಟು ವರ್ಷ ಅವರದ್ದೇ ಆದ ರೀತಿಯಲ್ಲಿ ಬದುಕಿರುತ್ತಾರೆ ಹಾಗಾಗಿ ಮದುವೆಯಾದ ನಂತರ ಬದಲಾಗಲು ಅವರು ಇಷ್ಟಪಡುವುದಿಲ್ಲ. ಆದರೆ ೨೦ರ ಆಸುಪಾಸಿನಲ್ಲಿ ಮದುವೆಯಾದರೆ ಇಂಥ ಸಮಸ್ಯೆಗಳು ಉಂಟಾಗುವುದಿಲ್ಲ. ಇಲ್ಲಿ ಇಬ್ಬರೂ ಪರಸ್ವರ ಜೊತೆಯಲ್ಲಿಯೇ ಬೆಳವಣಿಗೆ ಹೊಂದಲು ಕಲಿಯುತ್ತಾರೆ. ಇಲ್ಲಿ ಇಬ್ಬರೂ ಒಂದೇ ರೀತಿಯ ಅಭಿಪ್ರಾಯ ಮತ್ತು ದೃಷ್ಟಿಕೋನ ಇಟ್ಟುಕೊಳ್ಳುವುದನ್ನು ನೀವು ಕಾಣಬಹುದು. ಅನಗತ್ಯವಾಗಿ ವಾದ ಮಾಡುವುದರ ಬದಲಿಗೆ ಒಬ್ಬರಿಗೊಬ್ಬರು ಸರಿಹೊಂದುವಂತೆ ಬದುಕಲು ಇಷ್ಟಪಡುತ್ತಾರೆ.

5. ಕುಟುಂಬದವರಿಂದ ನಿರಂತರ ಬೆಂಬಲ ಇರುತ್ತದೆ

5. ಕುಟುಂಬದವರಿಂದ ನಿರಂತರ ಬೆಂಬಲ ಇರುತ್ತದೆ

ಕಷ್ಟಕರ ಸಂದರ್ಭಗಳಲ್ಲಿ ನಿಮ್ಮ ಕುಟುಂಬದವರು ಖಂಡಿತವಾಗಿಯೂ ನಿಮ್ಮ ಬೆನ್ನ ಹಿಂದೆ ಇರುತ್ತಾರೆ. ನೀವು ಮತ್ತು ನಿಮ್ಮ ಸಂಗಾತಿಯು ಅಪಾರ ಬೆಂಬಲ ಮತ್ತು ಕಾಳಜಿಯನ್ನು ಅವರಿಂದ ಪಡೆಯುತ್ತೀರಿ. ಹಾಗೆಂದ ಮಾತ್ರಕ್ಕೆ ತಡವಾಗಿ ಮದುವೆಯಾಗಿರುವವರಿಗೆ ಬೆಂಬಲ ಸಿಗುವುದಿಲ್ಲ ಎಂದು ಅರ್ಥವಲ್ಲ. ಆದರೆ ನೀವು ೨೦ ಹರೆಯದಲ್ಲಿ ಮದುವೆಯಾದರೆ ನೀವು ಮತ್ತು ನಿಮ್ಮ ಸಂಗಾತಿ ಉತ್ತಮವಾಗಿ ಸಂಸಾರ ನಡೆಸುತ್ತಿದ್ದೀರೆ ಎಂದು ಗಮನಿಸುವಲ್ಲಿ ಹಾಗೂ ಕಾಳಜಿವಹಿಸುವಲ್ಲಿ ನಿಮ್ಮ ಕುಟುಂಬದವರು ನಿರಂತರವಾಗಿ ಪ್ರಯತ್ನಿಸುತ್ತಾರೆ. ಅಲ್ಲದೇ ನೀವು ಮದುವೆ ಜೀವನದ ಜೊತೆಗೆ ನಿಮ್ಮ ವೃತ್ತಿ ಜೀವನವನ್ನೂ ಕೂಡ ನಡೆಸಲು ಅವರು ನಿಮಗೆ ಸಹಾಯ ಮಾಡುತ್ತಾರೆ.

6. ನೀವು ಒಟ್ಟಿಗೆ ಬೆಳೆಯಬಹುದು

6. ನೀವು ಒಟ್ಟಿಗೆ ಬೆಳೆಯಬಹುದು

ನಿಮ್ಮ 20 ರ ಹರೆಯದ ಆರಂಭದಲ್ಲಿ ಮದುವೆಯಾಗುವುದರಿಂದ ಇರುವ ಪ್ರಯೋಜನಗಳಲ್ಲಿ ಬಹುಶಃ ಇದು ಒಂದು ಉತ್ತಮ ವಿಷಯವಾಗಿದೆ. ನೀವು ಪರಸ್ಪರ ಒಬ್ಬರು ಇನ್ನೊಬ್ಬರ ವರ್ತನೆಗಳು, ಅಭ್ಯಾಸಗಳು, ಇಷ್ಟಗಳು ಮತ್ತು ಇಷ್ಟವಿಲ್ಲದ್ದು ಈ ಎಲ್ಲವನ್ನು ಕಲಿಯುತ್ತೀರಿ. ನೀವು ಪರಸ್ಪರರ ನ್ಯೂನ್ಯತೆಗಳನ್ನು ಸ್ವೀಕರಿಸಿಯೂ ಸಂತೋಷವಾಗಿರುವುದನ್ನು ಕಲಿಯುತ್ತೀರಿ. ನಿಮ್ಮ ಕನಸುಗಳನ್ನು ಈಡೇರಿಸಲು ಮತ್ತು ನಿಮ್ಮ ಮಹತ್ವಾಕಾಂಕ್ಷೆಗಳನ್ನು ಒಟ್ಟಿಗೆ ಅನುಸರಿಸಲು ನಿಮಗೆ ಸಾಧ್ಯವಾಗುತ್ತದೆ. ನಿಮ್ಮ ವೃತ್ತಿಜೀವನದ ಗುರಿಗಳನ್ನು ಬೆಳೆಸಲು ಮತ್ತು ಸಾಧಿಸಲು ನೀವು ಪರಸ್ಪರ ಸಹಾಯ ಮಾಡಬಹುದು.

7. ನೀವು ಯೋಚಿಸುವುದಕ್ಕಿಂತ ಹೆಚ್ಚಿನ ಮೋಜು ಇಲ್ಲಿದೆ

7. ನೀವು ಯೋಚಿಸುವುದಕ್ಕಿಂತ ಹೆಚ್ಚಿನ ಮೋಜು ಇಲ್ಲಿದೆ

ಬೇಗನೆ ಮದುವೆಯಾಗುವುದರಿಂದ ನಿಮ್ಮ ಜೀವನದಿಂದ ಎಲ್ಲಾ ವಿನೋದಗಳು, ಸಂತೋಷಗಳೂ ದೂರವಾಗುತ್ತವೆ ಎಂದು ನೀವು ಭಾವಿಸಿದರೆ ಅದು ಖಂಡಿತ ತಪ್ಪಾಗಬಹುದು. ನೀವಿಬ್ಬರೂ ಇನ್ನೂ ಯುವಕರಾಗಿರುವುದರಿಂದ ಮತ್ತು ನಿಮ್ಮ 20 ರ ಹರೆಯದ ಆರಂಭದಲ್ಲಿ ಮದುವೆಯಾಗುವುದು ಹೆಚ್ಚು ಮೋಜನ್ನು ನೀಡುತ್ತದೆ. ನೀವಿಬ್ಬರೂ ಹಲವಾರು ಪ್ರವಾಸಗಳು ಮತ್ತು ಸಾಹಸಗಳನ್ನು ಮಾಡಬಹುದು. ನಿಮ್ಮ ಸುತ್ತಲಿನ ಹೆಚ್ಚು ಹೆಚ್ಚು ಹೊಸ ವಿಷಯಗಳನ್ನು ನೀವು ಅನ್ವೇಷಿಸಬಹುದು. ನಿಮ್ಮ ದೈಹಿಕ ಅನ್ಯೋನ್ಯತೆಯನ್ನು ನೀವು ಉತ್ತಮ ರೀತಿಯಲ್ಲಿ ಆನಂದಿಸಬಹುದು.

20ರ ಹರೆಯದಲ್ಲಿ ಮದುವೆಯಾಗುವುದರ ಈ ಎಲ್ಲ ಪ್ರಯೋಜನಗಳ ಬಗ್ಗೆ ಗಮನವಿಟ್ಟುಕೊಂಡು ನಿಮ್ಮ ಮದುವೆಯ ಬಗ್ಗೆ ಯೋಚಿಸಿ. ಆಲ್ ದಿ ಬೆಸ್ಟ್!

English summary

Advantages Of Getting Married In Your Early 20’s

Here we are discussing about Here Are Some Advantages Of Getting Married In Your Early 20’s. We understand that you may feel annoyed at times but do you know, there are some benefits of getting married in the early 20s?. Read more.
X
Desktop Bottom Promotion