For Quick Alerts
ALLOW NOTIFICATIONS  
For Daily Alerts

ಚಾಣಕ್ಯ ಪ್ರಕಾರ ಪುರುಷ ಇಂಥ ಮಹಿಳೆಯರನ್ನು ಮದುವೆಯಾಗಲೇಬಾರದು?

|

ಚಾಣಕ್ಯ ಒಬ್ಬ ಮಹಾನ್‌ ಜ್ಞಾನಿ,ಶ್ರೇಷ್ಠ ಗುರು, ವಿದ್ವಾಂಸ, ರಾಜಗುರು.ಇವರ ಬುದ್ಧಿ ಮತ್ತೆಗೆ ಇವರೇ ಸಾಟಿ ಆದ್ದರಿಂದ ಇವರನ್ನು ಕೌಟಿಲ್ಯ ಎಂದು ಕೂಡ ಕರೆಯುತ್ತಿದ್ದರು. ಮೌರ್ಯ ಸಾಮ್ರಾಜ್ಯ ಸ್ಥಾಪನೆಯಲ್ಲಿ ಚಾನಕ್ಯನ ಪಾತ್ರ ಮಹತ್ವವಾದದ್ದು. ಅಲೆಕ್ಸಾಂಡರ್‌ ಭಾರತದ ಮೇಲೆ ಆಕ್ರಮಣ ಮಾಡಲು ಬಂದಾಗ ಈತ ತನ್ನ ಬುದ್ಧಿವಂತಿಕೆಯಿಂದ ಅಲೆಕ್ಸಾಂಡರ್‌ ಸೈನ್ಯಕ್ಕೆ ಸೋಲುಣಿಸಿದ್ದ ಎಂದು ಇತಿಹಾಸ ಹೇಳುತ್ತದೆ. ಚಾಣಕ್ಯನ ನಿಜವಾದಹೆಸರು ವಿಷ್ಣು ಗುಪ್ತ.

Chanakya Niti

ಅರ್ಥಶಾಸ್ತ್ರ, ರಾಜ ನೀತಿ ಹಾಗೂ ತತ್ವಜ್ಞಾನಕ್ಕೆ ಇವರ ಕೊಡುಗೆ ಅಪಾರ. ಅಷ್ಟು ಮಾತ್ರವಲ್ಲ ಸುಖಕರವಾದ ಜೀವನಕ್ಕೆ ವ್ಯಕ್ತಿ ಹೇಗಿರಬೇಕು, ಯಾರ ಜೊತೆ ಇರಬೇಕು, ಯಾರ ಸ್ನೇಹ ಮಾಡಬೇಕು, ಯಾರದು ಮಾಡಬಾರದು ಎಂಬುವುದು ಕೂಡ ಹೇಳಿದ್ದಾನೆ. ಚಾಣಕ್ಯನ ಬೋಧನೆ ಅನುಸರಿಸಿದರೆ ಜೀವನದಲ್ಲಿ ಸುಖ, ನೆಮ್ಮದಿ ಕಾಣಬಹುದೆಂದು ಹೇಳುತ್ತಾರೆ. ಚಾಣಕ್ಯ ಮದುವೆ, ವೈವಾಹಿಕ ಜೀವನದ ಬಗ್ಗೆಯೂ ಬೋಧನೆ ಮಾಡಿದ್ದಾನೆ.

ಮದುವೆಗೆ ನಮ್ಮ ಹಿರಿಯರು ತುಂಬಾನೇ ಪ್ರಾಮುಖ್ಯತೆ ಕೊಡುತ್ತಾರೆ. ಸಂಸಾರ ಸುಂದರವಾಗಿರಬೇಕೆಂದರೆ ಹೆಣ್ಣು-ಗಂಡಿನ ಗುಣ ಅವರ ಮನೆತನ ಬಗ್ಗೆ ಎಲ್ಲಾ ತಿಳಿದು ಮಾಡಬೇಕೆಂದು ಹೇಳುತ್ತಾರೆ. ಚಾಣಕ್ಯ ಕೂಡ ವ್ಯಕ್ತಿ ಬದುಕಿನಲ್ಲಿ ನೆಮ್ಮದಿಯಾಗಿರಬೇಕಾದರೆ ಮದುವೆಯಾಗುವಾಗ ಹೆಣ್ಣಿನಲ್ಲಿ ಗಮನಿಸಬೇಕಾದ ಅಂಶಗಳ ಬಗ್ಗೆ ಹೇಳಿದ್ದಾನೆ. ಆ ಕುರಿತು ಚಾಣಕ್ಯ ಏನು ಹೇಳಿದ್ದಾನೆ ಎಂದು ನೋಡೋಣ:

 ಮಹಿಳೆಯ ಬಾಹ್ಯ ಸೌಂದರ್ಯ ನೋಡಿ ಮದುವೆಯಾಗಬಾರದು

ಮಹಿಳೆಯ ಬಾಹ್ಯ ಸೌಂದರ್ಯ ನೋಡಿ ಮದುವೆಯಾಗಬಾರದು

ಮಹಿಳೆಯ ಬಾಹ್ಯ ಸೌಂದರ್ಯ ಮಾತ್ರ ಸುಂದರವಾಗಿದ್ದು ಪ್ರಯೋಜನವಿಲ್ಲ, ಅವಳ ಮನಸ್ಸು ಕೂಡ ಒಳ್ಳೆಯದಿರಬೇಕು. ಬರೀ ಬಾಹ್ಯ ಸೌಂದರ್ಯ ನೋಡಿ, ಆಕೆಯ ಗುಣ ಸರಿಯಿಲ್ಲದಿದ್ದರೆ ಆಕೆಯಿಂದ ಎಂದಿಗೂ ನೆಮ್ಮದಿ ಸಿಗಲು ಸಾಧ್ಯವಿಲ್ಲ ಎಂದು ಚಾಣಕ್ಯ ಬೋಧನೆ ಮಾಡಿದ್ದಾನೆ.

ಹಿರಿಯರು ಕೂಡ ಮದುವೆಯಾಗುವ ಹೆಣ್ಣಿನ ರೂಪ ಮಾತ್ರ ನೋಡಬೇಡ, ಅವಳ ಗುಣವನ್ನು ಕೂಡ ನೋಡು ಎಂದು ಹೇಳುತ್ತಾರೆ. ಚಾಣಕ್ಯನ ಈ ಬೋಧನೆ ನಿಜ ಜೀವನದಲ್ಲಿ ನೂರಕ್ಕೆ ನೂರು ಸತ್ಯವಾಗಿದೆ. ಹೆಣ್ಣಿನಲ್ಲಿ ಒಳ್ಳೆಯ ನಡೆ ಇರಬೇಕು, ಆಗ ಮಾತ್ರ ಆಕೆ ಕುಟುಂಬವನ್ನು ಲಕ್ಷ್ಮಿಯಂತೆ ಮುನ್ನೆಡೆಸುತ್ತಾಳೆ.

 ಆಕೆಯ ಕುಟುಂಬದ ಹಿನ್ನೆಲೆ

ಆಕೆಯ ಕುಟುಂಬದ ಹಿನ್ನೆಲೆ

ಚಾಣಿಕ್ಯ ನೀವು ಮದುವೆಯಾಗುವ ಹೆಣ್ಣಿನ ರೂಪ ಮಾತ್ರ ನೋಡಬೇಡಿ, ಆಕೆಯ ಕುಟುಂಬದ ಹಿನ್ನೆಲೆ ಕೂಡ ತಿಳಿದುಕೊಳ್ಳಿ ಎಂದು ಬೋಧನೆ ಮಾಡಿದ್ದಾನೆ. ಒಳ್ಳೆಯ ಕುಟುಂಬದ ಹಿನ್ನೆಲೆಯಿಂದ ಬಂದವಳು ಕುಟುಂಬವನ್ನು ಚೆನ್ನಾಗಿ ಮುನ್ನೆಡೆಸಿಕೊಂಡು ಹೋಗುತ್ತಾಳೆ. ಅದೇ ಕೆಟ್ಟ ಕುಟುಂಬದಿಂದ ಬಂದಿದ್ದರೆ ಆಕೆಯ ಗುಣ ಕೂಡ ಅದೇ ರೀತಿ ಇರುತ್ತದೆ. ಆಕೆ ಮನೆಗೆ ಬಂದರೆ ನಿಮ್ಮ ಮನೆಯನ್ನೇ ಒಡೆದು ಹಾಕುತ್ತಾಳೆ, ಇದರಿಂದ ನಿಮ್ಮ ನೆಮ್ಮದಿ ಹಾಳಾಗುವುದು.

ರೂಪವಂತೆಯಾದರೂ ಅವಳ ಗುಣ ಹೀಗಿದ್ದರೆ ಮದುವೆಯಾಗಬಾರದು

ರೂಪವಂತೆಯಾದರೂ ಅವಳ ಗುಣ ಹೀಗಿದ್ದರೆ ಮದುವೆಯಾಗಬಾರದು

ತುಂಬಾ ರೂಪವಂತೆ ಅಂತ ಆಕೆಯ ಗುಣ ಸರಿಯಾಗಿ ಇಲ್ಲದಿದ್ದರೆ ಅವಳನ್ನು ಮದುವೆಯಾಗಬಾರದು. ಆಕೆ ತನ್ನ ಧೂರ್ತ ಗುಣ ಸಾಧನೆಗಾಗಿ ಗಂಡನನ್ನು ಪೀಡಿಸುತ್ತಾಳೆ. ಇಂತಹ ಮಹಿಳೆ ಗಂಡನಿಗೆ ಎಂದೂ ಗೌರವ, ನೆಮ್ಮದಿ ಕೊಡುವುದಿಲ್ಲ.

ಸುಳ್ಳುಗಾರ್ತಿ

ಸುಳ್ಳುಗಾರ್ತಿ

ಸುಳ್ಳುಗಾರ್ತಿ ಮಹಿಳೆ ಅದನ್ನೇ ಅಸ್ತ್ರವನ್ನಾಗಿ ಗಂಡನ ವಿರುದ್ಧ ಬಳಸಲು ಹೇಸುವುದಿಲ್ಲ, ಅಂತಹ ಮಹಿಳೆಯನ್ನು ದೂರವಿಡುವುದು ಒಳ್ಳೆಯದು. ಸುಳ್ಳು ಹೇಳುವ ಮಹಿಳೆ ಜೊತೆ ಮದುವೆಯಾಗಬಾರದು ಮಾತ್ರವಲ್ಲ, ಸ್ನೇಹ ಕೂಡ ಮಾಡಬಾರದು ಎಂದು ಚಾಣಕ್ಯ ಹೇಳಿದ್ದಾನೆ.

ವಿಶ್ವಾಸದ್ರೋಹಿ ಮಹಿಳೆ

ವಿಶ್ವಾಸದ್ರೋಹಿ ಮಹಿಳೆ

ಯಾವ ಮಹಿಳೆ ತನ್ನ ಸಾಕಿದ ಅಪ್ಪ-ಅಮ್ಮನಿಗೆ ವಿಶ್ವಾಸ ದ್ರೋಹ ಮಾಡುತ್ತಾಳೋ ಅಂಥವಳನ್ನು ಮದುವೆಯಾಗಬಾರದು ಎಂದು ಚಾಣಕ್ಯ ಹೇಳುತ್ತಾನೆ. ವಿಶ್ವಾಸದ್ರೋಹಿ ಆಗಿರುವ ಮಹಿಳೆ ಮುಂದೆ ಪತಿಗೂ ದ್ರೋಹ ಬಗೆಯಬಹುದು ಎಂದು ಚಾಣಕ್ಯ ಹೇಳಿದ್ದಾನೆ.

ಧರ್ಮನಿಷ್ಠೆ ಇಲ್ಲದ ಮಹಿಳೆ

ಧರ್ಮನಿಷ್ಠೆ ಇಲ್ಲದ ಮಹಿಳೆ

ಚಾಣಕ್ಯ ಪ್ರಕಾರ ಧರ್ಮನಿಷ್ಠೆಯಿಲ್ಲದ ಮಹಿಳೆಯನ್ನು ಮದುವೆಯಾಗಬಾರದು. ಚಾಣಕ್ಯ ಪ್ರಕಾರ ಮಹಿಳೆ ಮಾಡುವ ಕೆಲಸದಲ್ಲಿ ನಿಷ್ಠೆಯನ್ನು ತೋರಬೇಕು. ಹಿರಿಯರನ್ನು ಗೌರವಿಸಬೇಕು ಎಂದು ಹೇಳಿದ್ದಾನೆ.

ಮನೆಯ ಕೆಲಸ ಗೊತ್ತಿಲ್ಲದ ಮಹಿಳೆ ಮದುವೆಯಾಗಬಾರದು

ಮನೆಯ ಕೆಲಸ ಗೊತ್ತಿಲ್ಲದ ಮಹಿಳೆ ಮದುವೆಯಾಗಬಾರದು

ಚಾಣಕ್ಯನ ಈ ಮಾತುಗಳನ್ನು ಕೆಲವರು ವಿರೋಧಿಸುತ್ತಾರೆ. ಆದರೆ ಮಹಿಳೆ ಮನೆ ಕೆಲಸ ಮಾಡಬೇಕೆಂದು ಚಾಣಕ್ಯ ಆ ಕಾಲದಲ್ಲಿ ಹೇಳಿದ್ದಾನೆ. ಆದರೆ ಈಗೀನ ಸಮಾನತೆಯ ದೃಷ್ಟಿಕೋನದಿಂದ ನೋಡುವುದಾದರೂ ಮಹಿಳೆಗೆ ಮನೆಯನ್ನು ನಿಭಾಯಿಸಿಕೊಂಡು ಹೋಗಬೇಕೆಂದರೆ ಮನೆಯಲ್ಲಿ ಎಷ್ಟೇ ಆಳುಗಳು ಇದ್ದರೂ ಅವರಲ್ಲಿ ತನ್ನ ಮನೆಯನ್ನು ಸುಂದರವಾಗಿ ಇಡುವಂತೆ ಮಾಡಿಸಿಕೊಂಡು ಹೋಗುವ ಕೌಶಲ್ಯವಾದರೂ ಇರಬೇಕು. ಆ ದೃಷ್ಟಿಯಿಂದ ಚಾಣಕ್ಯ ಹೇಳಿರಬಹುದು ಅಲ್ಲವೇ?

English summary

According To Chanakya Niti: Do Not Marry These Women

According Chanakya Niti Men should not marry these type of women, read on
X
Desktop Bottom Promotion