Latest Updates
-
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್!
ತನ್ನನ್ನು ತಾನೇ ಮದುವೆಯಾಗುತ್ತಿರುವ ಗುಜರಾತಿನ ಹುಡುಗಿ: ಭಾರತದಲ್ಲಿ ಈ ರೀತಿಯ ಮದುವೆ ಇದೇ ಮೊದಲು
ಮದುವೆ ಎಂಬುವುದು ಜೀವನದ ಪ್ರಮುಖವಾದ ಘಟ್ಟ, ನಾನಾ ರೀತಿಯಲ್ಲಿ ಮದುವೆ, ಚಿತ್ರ-ವಿಚಿತ್ರ ಮದುವೆ ಬಗ್ಗೆ ಅನೇಕ ಸುದ್ದಿಗಳನ್ನು ಕೇಳಿರುತ್ತೇವೆ, ಆದರೆ ಇಂಥದ್ದೊಂದು ಮದುವೆ ಭಾರತದಲ್ಲಿ ಇದುವರೆಗೆ ನಡೆದೇ ಇಲ್ಲ, ಅಂಥ ಘಟನೆಗೆ ಗುಜರಾತಿನ ಮಹಿಳೆಯ ಮದುವೆ ಸಾಕ್ಷಿಯಾಗಲಿದೆ. ಹೌದು ಕಣ್ರೀ ಅವಳು ಮದುವೆಯಾಗಲು ಹೊರಟಿರುವುದು ಮತ್ಯಾರನ್ನೂ ಅಲ್ಲ ಅವಳನ್ನೇ!

ಹುಡುಗ-ಹುಡುಗ ಮದುವೆ, ಹುಡುಗಿ-ಹುಡುಗಿ ಮದುವೆ, ಹುಡುಗ-ಮುದುಕಿಯನ್ನು ಮದುವೆಯಾಗಿದ್ದು, ಹಣ್ಣು-ಹಣ್ಣು ಮದುಕ 18ರ ಯುವತಿಯ ಕೈ ಹಿಡಿದಿದ್ದು, ಅಷ್ಟೇ ಅಷ್ಟೇ ಏಕೆ ಮನುಷ್ಯ ಹಾಗೂ ಪ್ರಾಣಿಯ, ಕೆಲವೊಂದು ಡೆಸ್ಟಿನೇಷನ್ ಮದುವೆ ಈ ರೀತಿಯ ಮದುವೆಗಳ ಬಗ್ಗೆ ಕೇಳಿರುತ್ತೀರಿ. ಆದರೆ ಒಬ್ಬ ವ್ಯಕ್ತಿ ಆ ವ್ಯಕ್ತಿಯನ್ನೇ ಮದುವೆಯಾಗಿರುವುದು ಭಾರತದಲ್ಲಿ ಇದೇ ಮೊದಲು... ಸೆಲ್ಫ್ ಲವ್ ಇರಬೇಕು ಅಂತಾರೆ ಆದರೆ ಈ ರೀತಿಯ ಸೆಲ್ಫ್ ಲವ್ ಎಲ್ಲಿಯೂ ನೋಡಿರಲಿಕ್ಕೆ ಸಾಧ್ಯವಿಲ್ಲ.

ಜೂನ್ 11ಕ್ಕೆ ನಡೆಯಲಿದೆ ಮದುವೆ
ಗುಜರಾತಿನ ಕ್ಷಮಾ ಬಿಂದು ಎಂಬ 24 ವರ್ಷದ ಯುವತಿಗೆ ವಿಪರೀತ ಸೆಲ್ಫ್ ಲವ್. ಅವಳು ಅವಳನ್ನು ಎಷ್ಟು ಪ್ರೀತಿಸುತ್ತಿದ್ದಾಳೆ ಎಂದರೆ ಅವಳಿಗೆ ಅವಳನ್ನು ಬಿಟ್ಟು ಬೇರೆ ಯಾರನ್ನೂ ಪ್ರೀತಿಸಲು ಸಾಧ್ಯವಿಲ್ಲ ಎನ್ನುವ ಮಟ್ಟಿಗಿದೆ. ಈ ಕಾರಣಕ್ಕೆ ಜೂನ್ 11ಕ್ಕೆ ಅವಳು ಅವಳನ್ನೇ ಮದುವೆಯಾಗಲಿದ್ದಾಳೆ. ಇದು ಭಾರತದಲ್ಲಿ ನಡೆಯುತ್ತಿರುವ ಮೊದಲ ಸೋಲೋಗಮಿ ಅಥವಾ ಸೋಲೋ ವೆಡ್ಡಿಂಗ್ ಆಗಿದೆ.

ಹಿಂದೂ ಸಂಪ್ರದಾಯದಂತೆ ನಡೆಯಲಿದೆ ಮದುವೆ
ಕ್ಷಮಾ ಅವಳಿಗೆ ಅವಳೇ ತಾಳಿ ಕಟ್ಟಿಕೊಳ್ಳುತ್ತಾಳೆ. ಜೊತೆಗೆ ಮದುವೆಯಲ್ಲಿ ಮಾಡುವ ಎಲ್ಲಾ ಶಾಸ್ತ್ರಗಳು ನೆರವೇರಲಿವೆ. ಗೋತ್ರಿ ದೇವಾಲಯದಲ್ಲಿ ಆಕೆಯ ಮದುವೆ ನಡೆಯಲಿದೆ.

ಮದುವೆ ಬಳಿಕ 2 ವಾರ ಹನಿಮೂನ್ ಪ್ಲ್ಯಾನ್ ಕೂಡ ಇದೆ
ಮದುವೆ ಬಳಿಕ ಸೋಲೋ ಹನಿಮೂನ್ ಹೋದವರು ಇದ್ದಾರೆ, ಆದರೆ ತನ್ನನ್ನು ತಾನೇ ಮದುವೆ ಮಾಡಿಕೊಂಡು ಸೋಲೋ ಹನಿಮೂನ್ ಮಾಡುತ್ತಿರುವುದು ಈಕೆ ಮಾತ್ರ.
"women matter" ಹೈಲೈಟ್ ಮಾಡುವ ಉದ್ದೇಶದಿಂದಾಗಿ ಈ ರೀತಿ ಮಾಡುತ್ತಿರುವುದಾಗಿ ಹೇಳಿದ್ದಾಳೆ.'

ಮದುವೆಯಾಗಬೇಕೆಂದು ಎಂದೂ ಬಯಸಿಯೇ ಇರಲಿಲ್ಲ
ಕ್ಷಮಾ ಮಾಧ್ಯಮದವರ ಜೊತೆ ಮಾತನಾಡುತ್ತಾ "ನಾನು ಮದುವೆಯಾಗಬೇಕೆಂದು ಬಯಸಿಯೇ ಇರಲಿಲ್ಲ, ಆದರೆ ಮದು ಮಗಳು ಆಗಲು ಬಯಸಿದೆ, ಆ ಕಾರಣಕ್ಕೆ ನನ್ನನ್ನೇ ನಾನು ಮದುವೆಯಾಗುತ್ತಿದ್ದೇನೆ. ಭಾರತದಲ್ಲಿ ಈ ರೀತಿಯ ಮದುವೆ ಈ ಹಿಂದೆ ಆಗಿದೆಯೇ ಎಂದು ಸರ್ಚ್ ಮಾಡಿದೆ, ಎಲ್ಲೂ ಆಗಿರಲಿಲ್ಲ, ನಾನೇ ಮೊದಲು ಆಗುತ್ತಿರುವುದು. ಸೆಲ್ಫ್ ಮ್ಯಾರೇಜ್ ಎಂಬುವುದು ಕಮಿಟಿಮೆಂಟ್, ಜೊತೆಗೆ ನನ್ನ ಮೇಲೆ ನನಗಿರುವ ಅಪಾರ ಪ್ರೀತಿ, ನನ್ನನ್ನು ನಾನು ಸ್ವೀಕರಿಸುವ ಮಾರ್ಗ ಕೂಡ, ನಾನು ನನ್ನನ್ನು ತುಂಬಾ ಪ್ರೀತಿಸುತ್ತೇನೆ, ಆ ಕಾರಣಕ್ಕೆ ಆಗುತ್ತಿದ್ದೇನೆ.
ನನ್ನ ಪೋಷಕರು ಓಪನ್ ಮೈಡೆಂಡ್, ಆ ಕಾರಣಕ್ಕೆ ಒಪ್ಪಿದರು" ಎಂದು ಹೇಳಿದ್ದಾರೆ.



Click it and Unblock the Notifications
