For Quick Alerts
ALLOW NOTIFICATIONS  
For Daily Alerts

ಪ್ರೀತಿಯ ಜೀವನದಲ್ಲಿ ಒತ್ತಡವೇ? ಹಾಗಾದರೆ ನಿದ್ರೆ ಇದಕ್ಕೆ ಕಾರಣವಾಗಿರಬಹುದು!

|

ಒಳ್ಳೆಯ ಆರೋಗ್ಯಕ್ಕೆ ಉತ್ತಮ ನಿದ್ರೆಯು ಬೇಕೆಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ಇಷ್ಟು ಮಾತ್ರವಲ್ಲದೆ, ದೇಹದ ಚಟುವಟಿಕೆಗೆ, ಮೆದುಳಿನ ಕ್ರಿಯೆಗಳಿಗೆ ಮತ್ತು ನಿದ್ರೆಯು ಒಳ್ಳೆಯ ರೀತಿಯಲ್ಲಿದ್ದರೆ ನೆನಪಿನ ಶಕ್ತಿಯು ಹೆಚ್ಚಾಗುವುದು. ಪ್ರೀತಿಯ ಜೀವನದಲ್ಲಿ ಭಾವನೆಗಳು ಅತಿಯಾಗಿರುತ್ತದೆ. ಸರಿಯಾದ ನಿದ್ರೆ ಬಂದರೆ ಆಗ ಮರುದಿನ ತುಂಬಾ ಉಲ್ಲಾಸದಿಂದ ಏಳಬಹುದು ಮತ್ತು ಆ ದಿನವನ್ನು ಆರಂಭಿಸಬಹುದು. ನಿದ್ರೆಯು ಸರಿಯಾಗಿ ಇಲ್ಲದೆ ಇದ್ದರೆ ಆಗ ಸಂಪೂರ್ನ ದಿನವು ಇದರಿಂದ ಹಾಳಾಗುವುದು.

Stress In Love Life

ನಿದ್ರೆಯ ಅಭಾವವು ಮಂಜುಗಡ್ಡೆಯ ನದಿಗೆ ಬಿದ್ದಂತೆ
ದೇಹವು ಸರಬರಾಜನ್ನು ನಿಲ್ಲಿಸುವುದು ಮತ್ತು ಇದರಿಂದ ದೇಹವು ಬಿಸಿಯಾಗಿ ಇರುವುದು. ಇದು ಆಗ ಉಳಿದುಕೊಳ್ಳುವ ಹಂತಕ್ಕೆ ತಲುಪುವುದು. ನಿದ್ರೆಯು ಸರಿಯಾಗಿ ಬೀಳದೆ ಇರುವಾಗ ದಿನದಲ್ಲಿ ನಿಮ್ಮ ದೇಹಕ್ಕೆ ಆಹಾರಬೇಕಾಗುತ್ತದೆ ಮತ್ತು ಮೂತ್ರ ವಿಸರ್ಜನೆ ಬರಬಹುದು. ಇದರಿಂದ ಬೆರೆಯುವುದು ತಪ್ಪುತ್ತದೆ ಮತ್ತು ಪ್ರೀತಿಪಾತ್ರರ ಜತೆಗೆ ಹೆಚ್ಚು ಮಾತನಾಡಲು ಆಗದು. ಇದರಿಂದಾಗಿ ನಿದ್ರೆಯು ನಾವು ಭಾವಿಸಿರುವುದಕ್ಕಿಂತಲೂ ಹೆಚ್ಚಾಗಿ ಸಂಬಂಧದ ಮೇಲೆ ಪರಿಣಾಮ ಬೀರುವುದು.

ಭಾವನೆಗಳು ಕಸದ ಬುಟ್ಟಿಗೆ ಎಸೆಯಲ್ಪಡುವುದು
ಭಾವನೆಗಳು ಹಿಂದಿಗಿಂತಲೂ ಹೆಚ್ಚು ಆತಂಕಕ್ಕೆ ಕಾರಣವಾಗುವುದೇ? ಅಥವಾ ನಿಮ್ಮ ಸಂಗಾತಿಯು ದಿನವಿಡಿ ಹಾಗೆ ಸುಮ್ಮನಿರಬೇಕು ಎಂದು ಅನಿಸುತ್ತಿದೆಯಾ ಅಥವಾ ರಾತ್ರಿ ಬಳಿಕ ಮಾತನಾಡಲಿ ಎಂದು ಅನಿಸುತ್ತಿದೆಯಾ? ನಿಮಗೆ ನಿದ್ರೆಯ ಅಭಾವವಿದೆ. ಇದರಿಂದಾಗಿ ನೀವು ತುಂಬಾ ಬಳಲಿದ್ದೀರಿ ಮತ್ತು ನಿಮ್ಮ ದೇಹದಲ್ಲಿ ಭಾವನೆಗಳು ತುಂಬಾ ಕಡಿಮೆ ಆಗುತ್ತಾ ಇದೆ. ದೇಹಕ್ಕೆ ಭಾವನೆಗಳನ್ನು ವರ್ಗಾವಣೆ ಮಾಡುವಂತಹ ಮೆದುಳಿನ ಭಾಗವು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇದು ಅತಿಯಾಗಿ ಪ್ರತಿಕ್ರಿಯೆ ನೀಡಬಹುದು ಅಥವಾ ಬೇರೆಯವರ ಭಾವನೆಗಳಿಗೆ ಯಾವುದೇ ಗಮನ ನೀಡದೆ ಇರಬಹುದು. ಇದರಿಂದ ಸಂಬಂಧದಲ್ಲಿ ಇನ್ನಷ್ಟು ಸಮಸ್ಯೆ ಬರಬಹುದು ಮತ್ತು ಸಂಬಂಧವನ್ನು ಕೆಡಿಸಬಹುದು. 2013ರಲ್ಲಿ ನಡೆಸಿರುವಂತಹ ಅಧ್ಯಯನದ ಪ್ರಕಾರ ನಿದ್ರಾಹೀನತೆಯಿಂದಾಗಿ ಖಿನ್ನತೆ ಮತ್ತು ಒತ್ತಡವು ಹೆಚ್ಚಾಗುತ್ತದೆ. ಇದು ಸಂಗಾತಿಗಳ ನಡುವಿನ ಮಾತುಕತೆ ಕಡಿಮೆ ಮಾಡುವುದು. ಒಳ್ಳೆಯ ನಿದ್ರೆ ಬಂದರೆ ಆಗ ಅತಿಯಾಗಿ ಪ್ರತಿಕ್ರಿಯಿಸುವ ಮತ್ತು ಜಗಳದ ಸಮಸ್ಯೆಯು ಇರದು.

ನಿಮಗೆ ರೋಗ ಉಂಟು ಮಾಡಬಹುದು ಅಥವಾ ಬಳಲಿಕೆ ಉಂಟಾಗಬಹುದು
•ನಿದ್ರಾಹೀನತೆಯಿಂದಾಗಿ ಆರೋಗ್ಯದ ಮೇಲೆ ಕೆಲವೊಂದು ಪರಿಣಾಮಗಳು ಬೀರಬಹುದು. ಇದರಿಂದ ಮಧುಮೇಹ, ಹೃದಯದ ಕಾಯಿಲೆ, ಬೊಜ್ಜು ಮತ್ತು ಖಿನ್ನತೆ ಬರಬಹುದು.
•ಇನ್ನು ಕೆಲವೊಂದು ಸಾಮಾನ್ಯ ಸಮಸ್ಯೆಗಳೆಂದರೆ ಶೀತ ಇತ್ಯಾದಿಗಳು.
•ಇವುಗಳಿಂದಾಗಿ ನೀವು ಹೊರಗಡೆ ಹೋಗದೆ ಇರಬಹುದು ಮತ್ತು ಸಂಗಾತಿ ಜತೆಗೆ ತಿರುಗಾಡಲು ಹೋಗಿ ರಾತ್ರಿ ಊಟ ಮಾಡುವ ಯೋಜನೆ ಕೂಡ ಕೈಬಿಡಬಹುದು.

ನಿದ್ರಿಸುವ ವೇಳಾಪಟ್ಟಿಯಲ್ಲಿ ಬದಲಾವಣೆ ಸಮಸ್ಯೆಯಾಗುವುದು
ನೀವು ಸಂಬಂಧದಲ್ಲಿ ಇದ್ದೀರಾ ಮತ್ತು ತಡರಾತ್ರಿ ತನಕ ಕೆಲಸ ಮಾಡುತ್ತಲಿದ್ದೀರಾ? ಇದು ಸಂಬಂಧದಲ್ಲಿನ ಜಗಳಕ್ಕೆ ಕಾರಣವಾಗುವುದು. ನೀವು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಲಿದ್ದರೆ ಮತ್ತು ಸಂಪೂರ್ಣ ವಿಶ್ವ ಮತ್ತು ನಿಮ್ಮ ಪ್ರೀತಿಯ ಸಂಗಾತಿ ದಿನದಲ್ಲಿ ಕೆಲಸ ಮಾಡುತ್ತಿರುತ್ತಾರೆ. ಇದರಿಂದಾಗಿ ನಿಮ್ಮ ನಿದ್ರಿಸುವ ಸಮಯದಲ್ಲಿ ವ್ಯತ್ಯಯ ಆಗಬಹುದು ಮತ್ತು ಇದು ಮುಂದೊಂದು ದಿನ ಸಂಬಂಧದಲ್ಲಿ ವಿಷವಾಗಿ ಕಾಡಬಹುದು. ಇಬ್ಬರ ಮಧ್ಯೆ ಸಂವಹನ ಕೊರತೆ ಆಗಬಹುದು ಮತ್ತು ಜಗಳಗಳು ಹೆಚ್ಚಾಗಬಹುದು.

ನಿದ್ರಿಸುವುದು ಒಂದು ಪ್ರಮುಖ ವಿಚಾರವಾಗಿದೆ. ಆದರೆ ನಿಮ್ಮ ಪ್ರೀತಿಪಾತ್ರರ ಜತೆಗೆ ಮೌಲ್ಯಯುತ ಸಮಯವನ್ನು ಕಳೆಯಲು ಪ್ರಯತ್ನಿಸಿ. ಇದಕ್ಕಾಗಿ ನೀವು ಹೊಂದಾಣಿಕೆ ಮಾಡಿಕೊಳ್ಳಬೇಕು. ನೀವಿಬ್ಬರು ಒಂದೇ ಸಮಯದಲ್ಲಿ ಕೆಲಸ ಮಾಡುತ್ತಲಿದ್ದರೆ ಆಗ ಒಂದೇ ಸಮಯದಲ್ಲಿ ಮಲಗಬಹುದು. ಇದರಿಂದ ಯಾವುದೇ ಹೊಂದಾಣಿಕೆ ಬೇಕಿಲ್ಲ. ಈಗ ನೀವು ಆಯ್ಕೆ ಮಾಡಿಕೊಳ್ಳಬೇಕು. ಒಳ್ಳೆಯ ನಿದ್ರೆಯು ಎಲ್ಲವನ್ನು ಸರಿಯಾಗಿ ಇಡುತ್ತದೆ. ನಿದ್ರಾ ಹೀನತೆಯು ಸಂಬಂಧವನ್ನು ಕೂಡ ಕೆಡಿಸಬಲ್ಲದು ಎಂದು ನಿಮಗೆ ಈಗ ತಿಳಿಯಿತೇ? ಹಾಗಾದರೆ ಸರಿಯಾಗಿ ನಿದ್ರೆ ಮಾಡಿ ಮತ್ತು ಸಂತೋಷದಿಂದ ಸಂಬಂಧದಲ್ಲಿ ಮುಂದುವರಿಯಿರಿ.

English summary

Stress In Love Life? Sleep Could Be The Reason Behind It!

We all know that good sleep is needed for good health. In a well functioning body, the brain is processed to carry our emotions and memories with the help of sleep. And when its about love, this emotion has so much to do with almost everyone's life. When you sleep well, you get up the next morning afresh and start your day with zeal. However, your sleep is disrupted or not complete, your whole day feels like a burden.
X
Desktop Bottom Promotion