For Quick Alerts
ALLOW NOTIFICATIONS  
For Daily Alerts

ದಯವಿಟ್ಟು ನವದಂಪತಿಗಳ ಬಳಿ 'ಮಗು ಯಾವಾಗ' ಎಂದು ಮಾತ್ರ ಕೇಳಬೇಡಿ!!

|

ವಿವಾಹ ಬಂಧನಕ್ಕೆ ಒಳಪಟ್ಟ ವರ್ಷವೊಂದರಲ್ಲಿಯೇ ದಂಪತಿಗಳು ಮಗುವೊಂದನ್ನು ಪಡೆಯಲೇಬೇಕು ಎಂಬ ಬಯಕೆಯನ್ನು ನಮ್ಮ ಸಮಾಜ ಪ್ರಕಟಿಸುತ್ತದೆ. ವಿವಾಹ ಎಂದರೆ ಭಾರತದ ಮಟ್ಟಿಗೆ ಇಬ್ಬರು ವ್ಯಕ್ತಿಗಳ ನಡುವಣ ಸಂಬಂಧವಲ್ಲ, ಎರಡು ಕುಟುಂಬಗಳ ನಡುವಣ ಸಂಬಂಧವೇ ಆಗಿದೆ. ಅಲ್ಲದೇ ವಿವಾಹ ಎಂದರೆ ವ್ಯಕ್ತಿಯೋರ್ವರ ಆರ್ಥಿಕ ಬಲಾಢ್ಯತೆಯ ಪ್ರದರ್ಶನವೂ ಹೌದು ಎಂದರೆ ತಪ್ಪಾಗಲಾರದು.

ಸಮಾಜದಲ್ಲಿ ಪ್ರಾಪ್ತವಯಸ್ಕ ಯುವಕ ಯುವತಿಯರಿದ್ದರೆ

ಸಮಾಜದಲ್ಲಿ ಪ್ರಾಪ್ತವಯಸ್ಕ ಯುವಕ ಯುವತಿಯರಿದ್ದರೆ

ಸುತ್ತಮುತ್ತಲಿನವರು ಇವರನ್ನು ತಕ್ಷಣವೇ ತಮಗೆ ತೋಚಿದವರೊಂದಿಗೆ ಜೋಡಿಯಾಗಿಸಿ ಬೇಗನೇ ಮದುವೆಯಾಗುವುದು ಒಳ್ಳೆಯದು ಎಂಬ ಅಭಿಪ್ರಾಯವನ್ನು ಬಲವಂತವಾಗಿ ಹೇರುವುದನ್ನು ಎಲ್ಲೆಡೆ ಕಾಣಬಹುದು. ಆದರೆ ಈ ಅಭಿಪ್ರಾಯ ಹೇರುವಿಕೆ ಕೇವಲ ಮದುವೆಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಮದುವೆಯಾದ ವರ್ಷದಲ್ಲಿಯೇ ಮಗುವನ್ನೂ ಪಡೆಯಬೇಕು ಎಂಬುದೂ ಆಗಿದೆ. ಅವಿವಾಹಿತ ಪ್ರಾಪ್ತ ವಯಸ್ಕರು ಎದುರಿಗೆ ಸಿಕ್ಕರೆ ಸಾಕು, ಹಿರಿಯರಿಂದ ಬರುವ ಮೊದಲ ಪ್ರಶ್ನೆ ಎಂದರೆ "ಮಗಾ, ಯಾವಾಗ ಮದುವೆಯಾಗುತ್ತೀಯಾ?" ಎಂಬುದೇ ಆಗಿದೆ.

ಇದಕ್ಕೆ ನಾವೇನೂ ಹೊರತಾಗಿರಲಿಲ್ಲ

ಇದಕ್ಕೆ ನಾವೇನೂ ಹೊರತಾಗಿರಲಿಲ್ಲ

ಸುಮಾರು ಇಪ್ಪತ್ತರ ಹರೆಯದ ಕೊನೆಯ ವರ್ಷಗಳಲ್ಲಿ ಅವಿವಾಹಿತರಾಗಿದ್ದವರಿಗೆ ಈ ಪರಿಯ ಚುಚ್ಚುವಿಕೆ ಅತಿ ಹೆಚ್ಚು. 'ಅವಿವಾಹಿತ ಮುದುಕ' ಎಂಬ ಹಣೆಪಟ್ಟೆ ಬೇರೆ. ಹೀಗೆ ತಿವಿಯುವವರಲ್ಲಿ ಮೊದಲಿಗರು ಎಂದರೆ ನಮ್ಮ ಮಾತಾಪಿತೃರು. ಅವರ ತಿವಿಯುವಿಕೆಯಲ್ಲಿ ಮದುವೆ, ಮದುವೆಯಾದ ವರ್ಷದಲ್ಲಿ ಮಗುವನ್ನು ನೋಡಬೇಕೆಂಬ ಬಯಕೆ ಸ್ಪಷ್ಟವಾಗಿರುತ್ತದೆ. ಇನ್ನೊಂದರ್ಥದಲ್ಲಿ ಮೊಮ್ಮಗುವನ್ನು ನೋಡುವುದಕ್ಕೇ ನಾವು ಮದುವೆಯಾಗಬೇಕು ಎಂಬ ಸ್ವಾರ್ಥದ ಧೋರಣೆ ಎದ್ದು ಕಾಣುತ್ತದೆ.

ಮೂಗು ತೂರಿಸುವ ನೆರೆಹೊರೆಯವರು

ಮೂಗು ತೂರಿಸುವ ನೆರೆಹೊರೆಯವರು

ಓರ್ವ ದಂಪತಿಗಳು ಮದುವೆಯಾದ ಬಳಿಕ ಉದ್ಯೋಗ ನಿಮಿತ್ತ ಬೇರೆ ಊರಿಗೆ ಹೋಗಬೇಕಾಗಿ ಬಂದಿದ್ದನ್ನು ತಮ್ಮ ಪಾಲಿನ ವರದಾನವೆಂದೇ ಪರಿಗಣಿಸುತ್ತಾರೆ. ಆದರೆ ಇವರು ಈ ಮೂಲಕ ತಮ್ಮ ಮಾತಾಪಿತೃರಿಂದ ದೂರವಿರಬಹುದೇನೋ ಸರಿ, ಆದರೆ ಮೂಗು ತೂರಿಸಲು ಅಕ್ಕ ಪಕ್ಕದವರು ಎಲ್ಲಿದ್ದರೂ ಇದ್ದೇ ಇರುತ್ತಾರೆ, ಅಲ್ಲವೇ! ಅದರಲ್ಲೂ ಅಕ್ಕಪಕ್ಕದಲ್ಲಿರುವ ಮನೆಗಳ ಹಿರಿಯ ಮಹಿಳೆಯರಿಗೆ ಈ ನವದಂಪತಿಗಳ ಕುಟುಂಬ ಯೋಜನೆಯ ಬಗ್ಗೆ ಅಲ್ಲಿಲ್ಲದ ಕುತೂಹಲ. ಅದರಲ್ಲೂ ಕೆಲವರಿಗೆ ಈ ಕುತೂಹಲವನ್ನು ಅದುಮಿಟ್ಟುಕೊಳ್ಳಲಾರದೇ ಇವರಲ್ಲಿಯೇ ಬಂದು ನೇರವಾಗಿ ಮಗು ಯಾವಾಗ ಎಂದು ವಿಚಾರಿಸುವಷ್ಟು ದರ್ಪ ತೋರುತ್ತಾರೆ. ಕೆಲವರಂತೂ ನಮ್ಮ ಬಗ್ಗೆ ಇಲ್ಲಸಲ್ಲದ ಕಲ್ಪನೆಗಳನ್ನು ಪ್ರಕಟಿಸುತ್ತಾ 'ಏನು, ಮಕ್ಕಳನ್ನು ನಿಮ್ಮ ತಂದೆ ತಾಯಿಯರ ಹತ್ತಿರ ಬಿಟ್ಟು ಬಂದಿದ್ದೇರೇನು" ಎಂದೇ ವಿಚಾರಿಸುತ್ತಾರೆ.

ಸ್ತ್ರೀರೋಗ ತಜ್ಞರಂತೂ ಇನ್ನೂ ಕಡೆ

ಸ್ತ್ರೀರೋಗ ತಜ್ಞರಂತೂ ಇನ್ನೂ ಕಡೆ

ವೈದ್ಯರಿಗೆ ರೋಗಿಯ ದೇಹಾರೋಗ್ಯದ ಮತ್ತು ಅಗತ್ಯವೆನಿಸುವಷ್ಟು ಮಾತ್ರವೇ ಕೌಟುಂಬಿಕ ವಿವರಗಳು ಸಾಕಾಗುತ್ತವೆ. ಆದರೆ ಕೆಲವು ಮಹಿಳಾ ವೈದ್ಯರಿಗೆ ಈ ಮಹಿಳೆಯ ಸಂಕುಚಿತಗೊಳ್ಳುತ್ತಿರುವ ಗರ್ಭಾಶಯದ ಕುರಿತು ಈಕೆಗಿಂತಲೂ ಹೆಚ್ಚಿನ ಕಾಳಜಿ, ಕುತೂಹಲವಿರುತ್ತದೆ. ಮೂವತ್ತರ ಬಳಿಕ ಗರ್ಭ ಧರಿಸುವುದು ಅರೋಗ್ಯಕ್ಕೆ ಎಷ್ಟು ಭಾರಿಯಾಗುತ್ತದೆ ಎಂದು ನಮಗಿಂತಲೂ ಇವರಿಗೇ ಹೆಚ್ಚು ಗೊತ್ತಿರುತ್ತದೆ, ಹಾಗಾಗಿ ಪ್ರತಿಬಾರಿ ತಪಾಸಣೆಗೆ ಬಂದಾಗ ಇವರೂ ಆದಷ್ಟೂ ಬೇಗನೇ ಮಗುವನ್ನು ಪಡೆಯುವಂತೆ ಒತ್ತಾಯಿಸುತ್ತಾರೆ. ಈ ವೈದ್ಯರ ಪ್ರಕಾರ ಎಷ್ಟು ಬೇಗನೇ ಮಕ್ಕಳನ್ನು ಪಡೆದು ಸಂಸಾರವಂದಿಗರಾಗುತ್ತೀರೋ ಅಷ್ಟೂ ಒಳ್ಳೆಯದು.

Most Read: ಡಯಾಬಿಟೀಸ್ ಇರುವ ಹೆಣ್ಣು ಮಕ್ಕಳು ಸಂಪೂರ್ಣ ಸೆಕ್ಸ್ ಸುಖ ಅನುಭವಿಸಲು ಹೀಗೆ ಮಾಡಿ

ನಮ್ಮ ಮಾತಾಪಿತರ ಪ್ರಕಾರ, ನಮ್ಮ ವಯಸ್ಸೇನೂ ಹಿಮ್ಮುಖ ತಿರುಗುವುದಿಲ್ಲ

ನಮ್ಮ ಮಾತಾಪಿತರ ಪ್ರಕಾರ, ನಮ್ಮ ವಯಸ್ಸೇನೂ ಹಿಮ್ಮುಖ ತಿರುಗುವುದಿಲ್ಲ

ಈ ತಿವಿಯುವಿಕೆ ನಮ್ಮ ಮಾತಾಪಿತೃರಿಂದ ಸತತವಾಗಿ ತಿಂಗಳುಗಳ ಕಾಲ ಮುಂದುವರೆದು ವರ್ಷಗಳಿಗೂ ವಿಸ್ತರಿಸುತ್ತಾ ಹೋದಾಗ ಇದರ ಧಾಟಿ ಕೊಂಚ ಬದಲಾಗುತ್ತದೆ. ಈ ಧಾಟಿ ಈಗ ಮಾನಸಿಕವಾಗಿ ಬ್ಲಾಕ್ ಮೇಲ್ ಮಾಡಿದಂತಿರುತ್ತದೆ. "ನಿನಗೂ ವಯಸ್ಸಾಗುತ್ತಿದೆ, ದಿನಕಳೆದಂತೆ ಚಿಕ್ಕವಳೇನೂ ಆಗುವುದಿಲ್ಲ" ಎಂಬ ಮಾತುಗಳ ಮೂಲಕ ಇದುವರೆಗೆ ನಡೆಯದಿದ್ದ ತಮ್ಮ ಮಾತು ಈಗೇನಾದರೂ ನಡೆಯುತ್ತದೆಯೋ ಎಂದು ಪ್ರಯತ್ನಿಸುತ್ತಾರೆ. ಮಗುವನ್ನು ಹೆರಬೇಕಾದ ವಯಸ್ಸು ಮೀರುತ್ತಾ ಹೋಗುತ್ತಿದೆ ಎಂದು ಸೂಚ್ಯವಾಗಿ ತಿಳಿಸುವ ಇವರು ದಿನಗಳೆದಂತೆ ತಾವು ಅಜ್ಜ ಅಜ್ಜಿಯರಾಗುವ ದಿನವೂ ಮುಂದು ಹೋಗುತ್ತಿದೆ ಎಂಬ ಕಳಕಳಿಯನ್ನು ಭಿನ್ನ ರೂಪದಲ್ಲಿ ಪ್ರಕಟಿಸುತ್ತಲೇ ಇರುತ್ತಾರೆ.

ಆದರೆ, ಕಡೆಗೂ ಇಲ್ಲೊಂದು ಶುಭಸಮಾಚಾರ

ಆದರೆ, ಕಡೆಗೂ ಇಲ್ಲೊಂದು ಶುಭಸಮಾಚಾರ

ನಮ್ಮ ಉದ್ಯೋಗ ಅಥವಾ ವೃತ್ತಿಯಲ್ಲಿ ಯಾವುದೇ ಏಳ್ಗೆ ಕಂಡು ಬಂದರೂ ಇದು ನಮ್ಮ ಸಮಾಜಕ್ಕೆ ಶುಭಸಮಾಚಾರವಾಗುವುದೇ ಇಲ್ಲ. ಆದರೆ ಒಂದು ಬಾರಿ ಈ ದಂಪತಿಗಳಿಗೊಂದು ಮಗುವಾಯ್ತು ಎಂದರೆ ಸಮಾಜವೇ ಸಂತೋಷಗೊಂಡು ವಿಜಯೋತ್ಸವ ಆಚರಿಸುತ್ತದೆ. ಅಂದರೆ ಮಗುವನ್ನು ಪಡೆಯುವುದು ದಂಪತಿಗಳ ನಿರ್ಧಾರವಲ್ಲ, ಸಮಾಜದ ನಿರ್ಧಾರ ಎಂದು ಪರೋಕ್ಷವಾಗಿ ಪ್ರಕಟಿಸಿದಂತಿರುತ್ತದೆ. ಸಮಾಜ ದಂಪತಿಗಳು ಹೀಗೇ ಇರಬೇಕೆಂದು ನಿರೀಕ್ಷಿಸುವಾಗ ಇದಕ್ಕೆ ವಿರುದ್ಧವಾಗಿ ಹೋದವರಿಗೆ ಈ ತಿವಿಯುವಿಕೆ ಅನಿವಾರ್ಯ.

Most Read: ಸಂಗಾತಿ ಮೋಸ ಮಾಡುತ್ತಿರುವ ಬಗ್ಗೆ ತಿಳಿಯಬೇಕೇ? ಸತ್ಯ ತಿಳಿಯಲು ಹೀಗೆ ಮಾಡಿ...

ಆದರೆ, ಜನಗಳೇ, ಈ ತಿವಿಯುವಿಕೆ ನಿಲ್ಲಿಸಿ

ಆದರೆ, ಜನಗಳೇ, ಈ ತಿವಿಯುವಿಕೆ ನಿಲ್ಲಿಸಿ

ಯಾವುದೇ ದಂಪತಿಗೆ ಇದುವರೆಗೆ ಮಕ್ಕಳಾಗದೇ ಇದ್ದರೆ ಇದಕ್ಕೆ ಹಲವಾರು ಕಾರಣಗಳು ಅಥವಾ ನಿರ್ಧಾರಗಳಿರಬಹುದು. ಇದು ಕೇವಲ ಅವರ ಸ್ವಂತ ನಿರ್ಧಾರ ಹಾಗೂ ವಿಚಾರವೇ ಆಗಿದ್ದು ಇದನ್ನು ಪ್ರಶ್ನಿಸುವ ಹಕ್ಕು ನಮಗಾರಿಗೂ ಇಲ್ಲ. ಈ ತೀರ್ಮಾನ, ನಿರ್ಧಾರಗಳನ್ನು ವಿರೋಧಿಸದೇ ಗೌರವಿಸುವುದು ಸಮಾಜದ ಎಲ್ಲರ ಕರ್ತವ್ಯವಾಗಿದೆ. ಸ್ಪಷ್ಟ ಮಾತುಗಳಲ್ಲಿ ಹೇಳಬೇಕೆಂದರೆ, ಯಾರಿಗೂ, ಯಾವುದೇ ದಂಪತಿಯ ನಿಜ ವಿಚಾರಗಳ ನಡುವೆ ಮೂಗು ತೂರಿಸುವ ಅಗತ್ಯವಿಲ್ಲ. ಮಗುವನ್ನು ಪಡೆಯಲು ವಯಸ್ಸಿನ ಮಾನದಂಡವನ್ನೇ ಹೇರುವ ಸಮಾಜ ದಂಪತಿಗಳ ಮಾನಸಿಕ ಸ್ಥಿತಿಯನ್ನು ಅರಿಯುವುದಿಲ್ಲ. ದಂಪತಿಗಳು ತಮಗೆ ಬೇಕೆಂದಾಗ ಮಾತ್ರವೇ ಮಕ್ಕಳನ್ನು ಪಡೆಯುವ ಹಕ್ಕು ಅವರಿಗಿದ್ದು ಈ ನಿರ್ಧಾರವನ್ನು ಸಮಾಜ ಗೌರವಿಸಿದಷ್ಟೂ ಎಲ್ಲರಿಗೂ ಸಂತೋಷವೇ ಸರಿ. ಆದರೆ ಈ ಸರಳ ಮಾತನ್ನು ಜನರು ಬಹಳ ಕಷ್ಟದಲ್ಲಿ ಅರಿಯುತ್ತಾರೆ... ಅಲ್ಲವೇ?

ಮಾನಸಿಕ ಒತ್ತಡದಿಂದ ಏನೂ ಪ್ರಯೋಜನವಿಲ್ಲ

ಮಾನಸಿಕ ಒತ್ತಡದಿಂದ ಏನೂ ಪ್ರಯೋಜನವಿಲ್ಲ

ಒಂದು ವೇಳೆ ನೀವು ಸಹಾ ಮಕ್ಕಳಿಲ್ಲದ ದಂಪತಿಗಳ ನೆರೆಯವರಾಗಿದ್ದು ಅವರ ಹಿತಾಸಕ್ತಿಯನ್ನು ಬಯಸುವವರೇ ಆಗಿದ್ದರೆ, ನೀವು ಅವರಿಗೆ ಮಾಡಬಹುದಾದ ದೊಡ್ಡ ಉಪಕಾರವೆಂದರೆ ಮಕ್ಕಳನ್ನು ಹೊಂದುವ ಬಗ್ಗೆ ಅವರನ್ನು ತಿವಿಯದೇ ಇರುವುದು. ವಾಸ್ತವವಾಗಿ, ಮಹಿಳೆಯೋರ್ವಳಿಗೆ ಮಕ್ಕಳಾಗದೇ ಇರಲಿಕ್ಕೆ ಮಾನಸಿಕ ಒತ್ತಡ ಪ್ರಮುಖ ಕಾರಣ ಎಂದು ವೈದ್ಯಕೀಯವಾಗಿ ಪ್ರಮಾಣಿತವಾಗಿದೆ. ಹಾಗಾಗಿ, ನಿಮಗೆ ಆಪ್ತರಾಗಿರುವ ಯಾವುದೇ ದಂಪತಿಗಳ ಹಿತಾಸಕ್ತಿ ನಿಮಗಿದ್ದರೆ ನೀವು ಮಾಡಬೇಕಾಗಿರುವುದು ಇಷ್ಟೇ, ಮಕ್ಕಳ ಬಗ್ಗೆ ಎಂದೂ ಚಕಾರವೆತ್ತರಿದಿರಿ!

English summary

stop asking married people when they will have children

The Indian society’s obsession with weddings is pretty understandable. If there are people of the marriageable age in the locality, the ever helpful neighbours, friends and family will conspire to get them married, if not with each other, at least with someone who they think will make the perfect match. But their obsession with the couple’s life doesn’t just end with the wedding. No sooner do they get married, they have to face the big question—“Beta, when are you getting married?”
Story first published: Thursday, January 24, 2019, 12:56 [IST]
X
Desktop Bottom Promotion