For Quick Alerts
ALLOW NOTIFICATIONS  
For Daily Alerts

ಜನ್ಮ ದಿನಾಂಕ ಆಧರಿಸಿ ವಿವಾಹ ಹೊಂದಾಣಿಕೆ ಹೇಗೆ?

|

ಇಬ್ಬರು ವ್ಯಕ್ತಿಗಳನ್ನು ಜೀವನಪರ್ಯಂತದ ಬಂಧನಕ್ಕೆ ಒಳಪಡಿಸುವ ವಿವಾಹವು ಅತ್ಯಂತ ಪವಿತ್ರ ಬಂಧನವಾಗಿದೆ. ಇಬ್ಬರು ಸಂಗಾತಿಗಳು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನದ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಹೊಂದಾಣಿಕೆಯಿಂದ ಸಂಸಾರ ನಡೆಸಬೇಕಾಗುತ್ತದೆ. ಅದಕ್ಕಾಗಿಯೇ ವಿವಾಹದ ಸಂದರ್ಭದಲ್ಲಿ ಇಬ್ಬರೂ ಸಂಗಾತಿಗಳ ಜಾತಕ ನೋಡಿ ಇಬ್ಬರೂ ಒಂದಾಗಿ ಸುಖವಾಗಿರಬಲ್ಲರೆ ಎಂಬುದನ್ನು ನೋಡಲಾಗುತ್ತದೆ. ಹೀಗೆ ವಿವಾಹ ನಿರ್ಧರಿಸುವ ಸಂದರ್ಭದಲ್ಲಿ ಗಂಡು ಹಾಗೂ ಹೆಣ್ಣಿನ ಜನ್ಮ ದಿನಾಂಕ ಬಹು ಮುಖ್ಯ ಪಾತ್ರ ವಹಿಸುತ್ತದೆ.

ಓರ್ವ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಜನ್ಮ ದಿನಾಂಕವು ಬಹಳಷ್ಟು ಮಾಹಿತಿಗಳನ್ನು ಬಹಿರಂಗ ಪಡಿಸುತ್ತದೆ. ವ್ಯಕ್ತಿಯ ವ್ಯಕ್ತಿತ್ವ, ನಡವಳಿಕೆ, ಹೊಂದಾಣಿಕೆಯ ಗುಣ ಹಾಗೂ ಸಂಗಾತಿಯೊಂದಿಗೆ ಕೂಡಿ ಬಾಳುವ ಸಹನೆ ಹೀಗೆ ಜನ್ಮ ದಿನಾಂಕ ಆಧರಿಸಿ ಹಲವಾರು ವಿಷಯಗಳನ್ನು ತಿಳಿದುಕೊಳ್ಳಬಹುದು. ಗಂಡು ಹೆಣ್ಣಿನ ವಿವಾಹ ನಿರ್ಧರಿಸುವಾಗ ಇಬ್ಬರ ಜನ್ಮ ದಿನಾಂಕಗಳನ್ನು ಪರಿಶೀಲಿಸಿ ಅವು ಹೊಂದಾಣಿಕೆಯಾಗುತ್ತವೆಯಾ ಎಂಬುದನ್ನು ತಿಳಿಯುವುದು ಸೂಕ್ತ.

ಸಂಖ್ಯಾಶಾಸ್ತ್ರ ಹಾಗೂ ವಿವಾಹ ಹೊಂದಾಣಿಕೆ

ಸಂಖ್ಯಾಶಾಸ್ತ್ರ ಹಾಗೂ ವಿವಾಹ ಹೊಂದಾಣಿಕೆ

ನ್ಯೂಮರಾಲಜಿ ಅಥವಾ ಸಂಖ್ಯಾಶಾಸ್ತ್ರವು ಅಂಕಿಗಳ ಲೆಕ್ಕಾಚಾರದ ಶಾಸ್ತ್ರವಾಗಿದೆ. ಈ ಶಾಸ್ತ್ರದ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕದ ಸಂಖ್ಯಾ ಮೌಲ್ಯ ಹಾಗೂ ಆತನ ಹೆಸರಿನ ಅಕ್ಷರಗಳ ಸಂಖ್ಯಾ ಮೌಲ್ಯವು ಆತನ ವ್ಯಕ್ತಿತ್ವದ ಮೇಲೆ ಬಹಳಷ್ಟು ಪ್ರಭಾವ ಬೀರುತ್ತದೆ ಎನ್ನಲಾಗಿದೆ. ಯಾವುದೇ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಎಲ್ಲ ಮಾಹಿತಿಯನ್ನು ನೀಡಬಲ್ಲ ನ್ಯೂಮರಾಲಜಿಯು ವಿವಾಹವನ್ನು ನಿರ್ಧರಿಸುವ ಸಮಯದಲ್ಲಿಯೂ ಬಹಳಷ್ಟು ಪ್ರಯೋಜನಕಾರಿಯಾಗಿದೆ.

ಅದೃಷ್ಟ ಸಂಖ್ಯೆ ಹಾಗೂ ವಿವಾಹ ಹೊಂದಾಣಿಕೆ

ಅದೃಷ್ಟ ಸಂಖ್ಯೆ ಹಾಗೂ ವಿವಾಹ ಹೊಂದಾಣಿಕೆ

ವಿವಾಹದ ಹೊಂದಾಣಿಕೆಯನ್ನು ನಡೆಸುವ ಮುನ್ನ ವ್ಯಕ್ತಿಯ ಅದೃಷ್ಟ ಸಂಖ್ಯೆಯನ್ನು ಕಂಡು ಹಿಡಿಯಬೇಕು. ಜನ್ಮ ದಿನಾಂಕದಲ್ಲಿರುವ ಎಲ್ಲ ಅಂಕಿಗಳನ್ನು ಕೂಡಿಸುವ ಮೂಲಕ ಅದೃಷ್ಟ ಸಂಖ್ಯೆಯನ್ನು ತಿಳಿಯವಹುದಾಗಿದೆ. ಉದಾಹರಣೆಗೆ ಓರ್ವ ವ್ಯಕ್ತಿಯ ಜನ್ಮ ದಿನಾಂಕ 12-12-1990 ಆಗಿದೆ ಎಂದಿಟ್ಟುಕೊಳ್ಳೋಣ. ಆತನ ಅದೃಷ್ಟ ಸಂಖ್ಯೆ ಅಥವಾ ಡೆಸ್ಟಿನಿ ನಂಬರ್ 1+2+1+2+1+9+9+0=25 ಆಗುತ್ತದೆ. ಈಗ ಇವೆರಡೂ ಅಂಕಿಗಳನ್ನು ಕೂಡಿಸಿ ಸಿಂಗಲ್ ಡಿಜಿಟ್ ಮಾಡಬೇಕು. ಆಗ ನಮಗೆ ಸಿಗುವ ಸಂಖ್ಯೆ 7 ಆಗುತ್ತದೆ. ಇದು ವ್ಯಕ್ತಿಯ ಅದೃಷ್ಟ ಸಂಖ್ಯೆ ಆಗಿದೆ. ಇದೇ ಮಾದರಿಯಲ್ಲಿ ಮತ್ತೊಬ್ಬ ಸಂಗಾತಿಯ ಅದೃಷ್ಟ ಸಂಖ್ಯೆಯನ್ನು ಕಂಡುಹಿಡಿಯಬೇಕು. ವಿವಾಹದ ಹೊಂದಾಣಿಕೆ ಸಂದರ್ಭದಲ್ಲಿ ಪರಸ್ಪರ ಹೊಂದಿಕೆಯಾಗುವ ಅದೃಷ್ಟ ಸಂಖ್ಯೆಯ ಸಂಗಾತಿಗಳನ್ನು ಆರಿಸುವುದು ಸೂಕ್ತ.

Most Read: ದಯವಿಟ್ಟು ನವದಂಪತಿಗಳ ಬಳಿ 'ಮಗು ಯಾವಾಗ' ಎಂದು ಮಾತ್ರ ಕೇಳಬೇಡಿ!!

ಜನ್ಮ ದಿನಾಂಕ ಆಧರಿಸಿ ವಿವಾಹ ನಿರ್ಧರಿಸಲು ಈ ಪಟ್ಟಿ ಬಳಸಿ

ಜನ್ಮ ದಿನಾಂಕ ಆಧರಿಸಿ ವಿವಾಹ ನಿರ್ಧರಿಸಲು ಈ ಪಟ್ಟಿ ಬಳಸಿ

ಯಾವ ಅದೃಷ್ಟ ಸಂಖ್ಯೆಗಳು ಪರಸ್ಪರ ಹೊಂದಾಣಿಕೆಯಾಗುತ್ತವೆ ಹಾಗೂ ಯಾವ ಸಂಖ್ಯೆಗಳು ವಿರುದ್ಧವಾಗಿವೆ ಎಂಬುದನ್ನು ತಿಳಿಯಲು ಕೆಳಗಿನ ಪಟ್ಟಿ ನೋಡಿ. ಇದನ್ನು ಆಧರಿಸಿ ಸೂಕ್ತ ವೈವಾಹಿಕ ಸಂಗಾತಿಗಳನ್ನು ಆರಿಸಬಹುದು.

ಅದೃಷ್ಟ ಸಂಖ್ಯೆ

1 (1,10,19,28 ರಂದು ಜನಿಸಿದವರು ಅಥವಾ ಅದೃಷ್ಟ ಸಂಖ್ಯೆ 1 ಇರುವವರು)

2 (2,11,20,29 ರಂದು ಜನಿಸಿದವರು ಅಥವಾ ಅದೃಷ್ಟ ಸಂಖ್ಯೆ 2 ಇರುವವರು)

3 (3,12,21,30 ರಂದು ಜನಿಸಿದವರು ಅಥವಾ ಅದೃಷ್ಟ ಸಂಖ್ಯೆ 3 ಇರುವವರು)

4 (4,13,22 ರಂದು ಜನಿಸಿದವರು ಅಥವಾ ಅದೃಷ್ಟ ಸಂಖ್ಯೆ 4 ಇರುವವರು)

5 (5,14,23 ರಂದು ಜನಿಸಿದವರು ಅಥವಾ ಅದೃಷ್ಟ ಸಂಖ್ಯೆ 5 ಇರುವವರು)

6 (6,15,24 ರಂದು ಜನಿಸಿದವರು ಅಥವಾ ಅದೃಷ್ಟ ಸಂಖ್ಯೆ 6 ಇರುವವರು)

7 (7,16,25 ರಂದು ಜನಿಸಿದವರು ಅಥವಾ ಅದೃಷ್ಟ ಸಂಖ್ಯೆ 7 ಇರುವವರು)

8 (8,17,26 ರಂದು ಜನಿಸಿದವರು ಅಥವಾ ಅದೃಷ್ಟ ಸಂಖ್ಯೆ 8 ಇರುವವರು)

9 (9,18,27 ರಂದು ಜನಿಸಿದವರು ಅಥವಾ ಅದೃಷ್ಟ ಸಂಖ್ಯೆ 9 ಇರುವವರು)

ಉತ್ತಮ ಹೊಂದಾಣಿಕೆ

ಉತ್ತಮ ಹೊಂದಾಣಿಕೆ

4,8

7,3,6

3,9,2

1,4,8

9,3

1,4,9

2,4

4,1

3,6

ಸಾಧಾರಣ ಹೊಂದಾಣಿಕೆ

ಸಾಧಾರಣ ಹೊಂದಾಣಿಕೆ

2,3,5,6

4,8,5

1,5,7,8

ಯಾವುದೂ ಇಲ್ಲ

ಯಾವುದೂ ಇಲ್ಲ

1,5,6,8

6,5

1,3,4,7

6,4,5,8

9,4,5

Most Read: ಸಂಗಾತಿ ಮೋಸ ಮಾಡುತ್ತಿರುವ ಬಗ್ಗೆ ತಿಳಿಯಬೇಕೇ? ಸತ್ಯ ತಿಳಿಯಲು ಹೀಗೆ ಮಾಡಿ...

ಕೆಟ್ಟ ಹೊಂದಾಣಿಕೆ

ಕೆಟ್ಟ ಹೊಂದಾಣಿಕೆ

1,7,9

1,2,6

4,6

2,3,5,6,7,9

2,4,7

7,8,2,3

1,8,5

2,7,9

1,2,7,8

English summary

How Marriage Matching By Date of Birth

Marriage brings two people together on a lifelong bond. It is very important to choose the right marriage partner since the happiness and success of marriage will ultimately depend on the soul mate. Date of birth has so much information packed about every individual. It can showcase the character, behavior traits, compatibility and the extent of cooperation that can be expected from the given life partner. So, you can take useful and the most dependable suggestions from the date of birth of a person to ascertain the compatibility between two individuals joining in marriage.
X
Desktop Bottom Promotion