For Quick Alerts
ALLOW NOTIFICATIONS  
For Daily Alerts

ಕನ್ಯಾದಾನ ಮಾಡಲಾರೆ ಎಂದ ತಂದೆ.. ಕಾರಣ ತಿಳಿದರೆ ಕರುಳು ಚುರ್ ಎನ್ನದಿರದು..

|

ಕನ್ಯಾದಾನ ಮಾಡುವುದು ಅಥವಾ ತಂದೆ ತನ್ನ ಮಗಳನ್ನು ಧಾರೆ ಎರೆದು ಕೊಡುವುದು ಹಿಂದೂ ವಿವಾಹ ಪದ್ಧತಿಯ ಅತಿ ಪ್ರಮುಖ ಭಾಗವಾಗಿದೆ. ವಿವಾಹ ಎಂಬುದು ಹಿಂದೂಗಳ ಅತಿ ಪವಿತ್ರ ಧಾರ್ಮಿಕ ಆಚರಣೆಯಾಗಿದ್ದು ಇದು ಎರಡು ಮನೆತನಗಳ ಸದಸ್ಯರ ಭಾವನಾತ್ಮಕ ಪ್ರತಿಬಿಂಬವೂ ಆಗಿದೆ. ವಿಜೃಂಭಣೆಯಿಂದ ವಧುವಿನ ಮನೆಗೆ ದಿಬ್ಬಣ (ಬಾರಾತ್) ಆಗಮಿಸುವುದರಿಂದ ಹಿಡಿದು ವಿವಾಹದ ವಿವಿಧ ಕಾರ್ಯಕ್ರಮಗಳಲ್ಲಿ ಸಂಭ್ರಮದಿಂದ ಕುಣಿದು ಕುಪ್ಪಳಿಸುವುದು ಹಿಂದೂ ವಿವಾಹದ ಭಾಗವೇ ಆಗಿವೆ. ಅದರಲ್ಲೂ 'ಕನ್ಯಾದಾನ'ದ ಕ್ಷಣವಂತೂ ವಿವಾಹದಲ್ಲಿ ನೆರೆದ ಎಲ್ಲರ ಕಣ್ಣುಗಳನ್ನೂ ತೇವವಾಗಿಸುವ ಅತಿ ಭಾವುಕ ಕ್ಷಣಗಳಲ್ಲೊಂದಾಗಿದೆ.

ಬೆಂಗಾಲಿ ವಿವಾಹ ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಡೆದ ಕನ್ಯಾದಾನ ಸಂದರ್ಭದ ವಿಡಿಯೋ ಒಂದು ಇಂಟರನೆಟ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಒಂದು ವಿಡಿಯೋದಲ್ಲಿ ಅಂಥದ್ದೇನಿದೆ ಎಂದು ನೋಡಿದರೆ ನಿಜವಾಗಿಯೂ ಎಂಥವರ ಕರುಳು ಸಹ ಚುರ್ ಎನ್ನುತ್ತದೆ. ಕನ್ಯಾದಾನವು ಹಿಂದೂ ವಿವಾಹ ಪದ್ಧತಿಯ ಕಡ್ಡಾಯ ಆಚರಣೆ ಆಗಿದ್ದರೂ ಕೂಡ ಕನ್ಯಾದಾನದ ಸಂದರ್ಭದಲ್ಲಿ ವಧುವಿನ ತಂದೆಯೊಬ್ಬ ಕೈಗೊಂಡ ಪ್ರಗತಿಪರ ನಿಲುವು ಹಾಗೂ ಭಾವನಾತ್ಮಕ ವಿಷಯಗಳಿಂದ ಈ ವಿಡಿಯೋ ಲಕ್ಷಾಂತರ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಕನ್ಯಾದಾನ ಮಾಡಲೊಪ್ಪದ ತಂದೆ !

ಕನ್ಯಾದಾನ ಮಾಡಲೊಪ್ಪದ ತಂದೆ !

ಈ ಬೆಂಗಾಲಿ ಮದುವೆಯಲ್ಲಿನ ಮೊದಲ ವಿಶಿಷ್ಟತೆ ಎಂದರೆ ಆಗಮಿಸಿದ್ದ ಪುರೋಹಿತರೆಲ್ಲರೂ ಮಹಿಳೆಯರಾಗಿದ್ದರು. ಇದು ನಿಜವಾಗಿಯೂ ಸಂಪ್ರದಾಯದಿಂದ ಹೊರಬಂದು ಹೊಸತನದ ನಡೆಯಾಗಿತ್ತು. ಇನ್ನು ಎರಡನೆಯದಾಗಿ ಕನ್ಯಾದಾನದ ಸಮಯದಲ್ಲಿ ವಧುವಿನ ತಂದೆಯನ್ನು ಕರೆದಾಗ ಆತ ಕನ್ಯಾದಾನ ಮಾಡಲು ಖಡಾಖಂಡಿತವಾಗಿ ನಿರಾಕರಿಸಿ ಬಿಟ್ಟರು. ಇದು ಸಹಜವಾಗಿಯೇ ಎಲ್ಲರ ಹುಬ್ಬೇರುವಂತೆ ಮಾಡಿತು.

MOST READ: ದಾನಗಳಲ್ಲೇ ಅತ್ಯಂತ ಶ್ರೇಷ್ಠ ದಾನ ಕನ್ಯಾದಾನದ ಮಹತ್ವವೇನು?

ದಾನ ಮಾಡಲು ಮಗಳು ಆಸ್ತಿಯಲ್ಲ

ದಾನ ಮಾಡಲು ಮಗಳು ಆಸ್ತಿಯಲ್ಲ

ಕನ್ಯಾದಾನಕ್ಕೆ ಒಪ್ಪದ ತಂದೆಯ ನಿಲುವು ಮಹಿಳೆಯರ ಹಕ್ಕುಗಳಿಗೆ ಬಲ ತಂದು ಕೊಟ್ಟಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ದಾನ ಮಾಡಲು ನನ್ನ ಮಗಳು ಆಸ್ತಿ ಅಥವಾ ಹಣವಲ್ಲ. ಹೀಗಾಗಿ ಕನ್ಯಾದಾನ ಮಾಡಲಾರೆ ಎಂದು ವಧುವಿನ ತಂದೆ ಹೇಳಿದ್ದು ಲಕ್ಷಾಂತರ ನೆಟ್ಟಿಗರ ಮನ ಗೆದ್ದಿದೆ. ಅತಿ ಪುರಾತನ ಹಾಗೂ ಪಿತೃ ಪ್ರಧಾನ ಸಂಪ್ರದಾಯವನ್ನು ಪ್ರತಿಬಿಂಬಿಸುವ ಕನ್ಯಾದಾನ ಪದ್ಧತಿಯನ್ನು ಧಿಕ್ಕರಿಸುವ ಮೂಲಕ ಪ್ರಗತಿ ಪರ ಸಂಪ್ರದಾಯಕ್ಕೆ ಮುನ್ನುಡಿ ಬರೆದಿದ್ದು ಈ ಘಟನೆಯ ವೈಶಿಷ್ಟ್ಯವಾಗಿದೆ.

 ಈ ವಿಡಿಯೋ ಮೊದಲು ಕಾಣಿಸಿದ್ದು ಟ್ವಿಟ್ಟರನಲ್ಲಿ

ಈ ವಿಡಿಯೋ ಮೊದಲು ಕಾಣಿಸಿದ್ದು ಟ್ವಿಟ್ಟರನಲ್ಲಿ

ಕನ್ಯಾದಾನ ನಿರಾಕರಣೆಯ ಈ ವಿಡಿಯೋ ಮೊದಲು ಕಾಣಿಸಿಕೊಂಡದ್ದು ಟ್ವಿಟ್ಟರನಲ್ಲಿ. ಅಸ್ಮಿತಾ ಘೋಷ ಎಂಬ ಲೇಖಕಿಯೋರ್ವರು ಇದನ್ನು ಟ್ವಿಟ್ಟರನಲ್ಲಿ ಹಾಕಿದ್ದೇ ತಡ ಕೆಲವೇ ಗಂಟೆಗಳಲ್ಲಿ ಇದು ಇನ್ನಿತರ ಎಲ್ಲ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹರಡತೊಡಗಿತು. ವಿಡಿಯೋದಲ್ಲಿನ ಪ್ರಗತಿ ಪರ ನಿಲುವಿಗೆ ಎಲ್ಲೆಡೆಯಿಂದಲೂ ಮೆಚ್ಚುಗೆಯ ಮಹಾಪೂರವೇ ಹರಿಯಲಾರಂಭಿಸಿತು.

ತಾಯಿಯ ಹೆಸರೇ ಮೊದಲು

ತಾಯಿಯ ಹೆಸರೇ ಮೊದಲು

ಟ್ವಿಟ್ಟರನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದ ಲೇಖಕಿ ಅಸ್ಮಿತಾ ಘೋಷ ಅದಕ್ಕೆ ಹೀಗೆ ಕ್ಯಾಪ್ಷನ್ ನೀಡಿದ್ದರು:

ನಾನೊಂದು ಮದುವೆ ಸಮಾರಂಭದಲ್ಲಿರುವೆ. ಇಲ್ಲಿರುವ ಪುರೋಹಿತರೆಲ್ಲರೂ ಮಹಿಳೆಯರು. ಮದುವೆ ಸಮಾರಂಭದಲ್ಲಿ ವಧು ಇವರ ಮಗಳೆಂದು (ತಾಯಿಯ ಹೆಸರು ಮೊದಲಿಗೆ ಹೇಳಿದ್ದು) ಪರಿಚಯಿಸಿದ್ದು ವಿಶೇಷವಾಗಿತ್ತು. ಇನ್ನು ವಧುವಿನ ತಂದೆ ನನ್ನ ಮಗಳು ದಾನ ಮಾಡಲು ಆಸ್ತಿಯಲ್ಲ ಎಂದು ಹೇಳಿ ಕನ್ಯಾದಾನಕ್ಕೆ ನಿರಾಕರಿಸಿದ್ದು ನಿಜವಾಗಿಯೂ ನನ್ನನ್ನು ಆಶ್ಚರ್ಯಚಕಿತಗೊಳಿಸಿತು.

MOST READ: ದಯವಿಟ್ಟು ನವದಂಪತಿಗಳ ಬಳಿ 'ಮಗು ಯಾವಾಗ' ಎಂದು ಮಾತ್ರ ಕೇಳಬೇಡಿ!!

ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂತು!

ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂತು!

ಇಂಥದ್ದೊಂದು ಘಟನೆ ಭಾರತದಂತಹ ಸಂಪ್ರದಾಯವಾದಿ ದೇಶದಲ್ಲಿ ನಡೆಯಬಹುದಾ ಎಂಬುದು ನೆಟ್ಟಿಗರ ಕುತೂಹಲಕ್ಕೆ ಕಾರಣವಾಯಿತು. ಈ ವಿಡಿಯೋಗೆ ಮೆಚ್ಚುಗೆಯ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದಿತು. ಕೆಲ ಪ್ರತಿಕ್ರಿಯೆಗಳನ್ನು ನೀವೇ ನೋಡಿ:

"ಯಾವ ಗ್ರಹದಲ್ಲಿ ಇಂಥದೊಂದು ಘಟನೆ ನಡೆಯಿತು? ನಿಜವಾಗಿಯೂ ಒಳ್ಳೆಯ ಜನ"

"ಈ ಧೈರ್ಯ ಮೆಚ್ಚಿಕೊಳ್ಳವಂಥದ್ದು. ಇವರ ಸಂತತಿ ಇನ್ನಷ್ಟು ಬೆಳೆಯಲಿ"

"ಇದೊಂದು ಮಹತ್ವದ ಬೆಳವಣಿಗೆ. ನೋಡಿ ಖುಷಿಯಾಯಿತು"

"ಒಳ್ಳೆಯ ನಿಲುವು. ನನ್ನ ಸಹೋದರ ಕೂಡ ಇದೇ ರೀತಿಯ ಪ್ರಗತಿ ಪರ ನಿಲುವಿನವನಾಗಿದ್ದು ಆತ ಕೂಡ ಕನ್ಯಾದಾನ ಮಾಡಲು ಒಪ್ಪಲಿಲ್ಲ. ಹಲವಾರು ಪುರೋಹಿತರೊಂದಿಗೆ ವಾಗ್ವಾದ ಮಾಡಿ ಆತ ಗೆದ್ದಿದ್ದಾನೆ. ಕನ್ಯಾದಾನ ಮಾಡಲೊಪ್ಪದ ಆ ಕುಟುಂಬಕ್ಕೆ ನನ್ನ ಬೆಂಬಲವಿದೆ."

ತಂದೆ-ತಾಯಿಯರ ಋಣ ತೀರಿಸಲಾಗದು

ತಂದೆ-ತಾಯಿಯರ ಋಣ ತೀರಿಸಲಾಗದು

ಇತ್ತೀಚೆಗೆ ತನ್ನ ವಿವಾಹದ ಸಂದರ್ಭದಲ್ಲಿ ತಲೆಯ ಮೇಲಿನಿಂದ ಅಕ್ಕಿ ಕಾಳು ತೂರಲು ನಿರಾಕರಿಸಿದ ಬೆಂಗಾಲಿ ವಧುವೊಬ್ಬಳು ಹೆಸರು ಮಾಡಿದ್ದಳು. ತಂದೆ-ತಾಯಿಯರ ಋಣ ತೀರಿಸುವ ಸಾಂಕೇತಿಕ ಆಚರಣೆಯಾಗಿರುವ ಈ ಪದ್ಧತಿಗೆ ಆಕೆ ಪ್ರತಿರೋಧ ಒಡ್ಡಿದ್ದಳು.

ತಂದೆ-ತಾಯಿಯರ ಋಣವನ್ನು ಜನ್ಮದಲ್ಲೇ ತೀರಿಸಲು ಸಾಧ್ಯವಿಲ್ಲ. ಹೀಗಾಗಿ ಈ ಆಚರಣೆ ನನಗೆ ಒಪ್ಪಿಗೆ ಇಲ್ಲ ಎಂದು ಆಕೆ ಹೇಳಿದ್ದು ಮರೆಯಲು ಸಾಧ್ಯವಿಲ್ಲ. ಬದಲಾವಣೆಯ ಗಾಳಿ ಬೀಸುತ್ತಿದೆ. ಬದಲಾವಣೆ ನಿರಂತರ. ಉತ್ತಮ ಬದಲಾವಣೆಗಳು ನಮ್ಮತ್ತ ಹರಿದು ಬರಲಿ ಎಂದು ಆಶಿಸೋಣ ..ಅಲ್ಲವೆ?

English summary

brides father refuses to do kanyadaan the reason will melt your heart

‘Kanyadaan’ or the ‘giving away of the bride’ is a popular Hindu ritual where the father of the bride ‘gives away’ his daughter. While weddings, in general, are an emotional rollercoaster, right from the grand entry of the Baarat to dancing with joy during the various ceremonies, it is particularly the Kanyadaan ritual that evokes a thousand emotions in everyone present at the wedding.
Story first published: Monday, February 11, 2019, 12:22 [IST]
X
Desktop Bottom Promotion