For Quick Alerts
ALLOW NOTIFICATIONS  
For Daily Alerts

ದಾಂಪತ್ಯ ಜೀವನದಲ್ಲಿ ಮಹಿಳೆಯರು ಸೆಕ್ಸ್‌ನಲ್ಲಿ ಇಂಟರೆಸ್ಟ್ ಕಳೆದುಕೊಳ್ಳಲು ಕಾರಣವೇನು?

|

ವೈವಾಹಿಕ ಜೀವನದಲ್ಲಿ ಲೈಂಗಿಕ ಜೀವನ ಕೂಡ ಅತೀ ಮುಖ್ಯವಾಗಿರುವುದು. ನಮ್ಮ ದೇಹಕ್ಕೆ ಆಹಾರ ಹೇಗೆ ಮುಖ್ಯವೋ ಅದೇ ರೀತಿ ಲೈಂಗಿಕತೆಯು ಅತೀ ಅಗತ್ಯ. ಲೈಂಗಿಕ ಜೀವನದಲ್ಲಿ ಸರಿಯಾದ ಹೊಂದಾಣಿಕೆ ಇಲ್ಲದೆ ಇರುವ ಕಾರಣದಿಂದ ದಾಂಪತ್ಯವು ಮುರಿದು ಬಿದ್ದ ಉದಾಹರಣೆಗಳು ಇವೆ. ಹೆಚ್ಚಾಗಿ ಪುರುಷರಿಗಿಂತ ಮಹಿಳೆಯರೇ ದಾಂಪತ್ಯ ಜೀವನದಲ್ಲಿ ಲೈಂಗಿಕ ಕ್ರಿಯೆಯಿಂದ ದೂರ ಹೋಗುತ್ತಾರೆ ಎಂದು ಅಧ್ಯಯನವೊಂದು ಹೇಳಿದೆ.

women lose interest in sex

ಇದು ಯಾಕೆ ಎಂದು ನೀವು ಪ್ರಶ್ನಿಸಬಹುದು ಅಥವಾ ಇದು ನನಗೆ ಈಗಾಗಲೇ ತಿಳಿದಿದೆ ಎಂದು ಹೇಳಬಹುದು. ಇದರ ಬಗ್ಗೆ ಹೆಚ್ಚಿನವರಿಗೆ ತಿಳುವಳಿಕೆ ಇಲ್ಲ ಮತ್ತು ಇದನ್ನು ದೃಢಪಡಿಸಿಕೊಂಡವರ ಸಂಖ್ಯೆಯು ತುಂಬಾ ಕಡಿಮೆ. ಆದರೆ ಕೆಲವರು ಇದನ್ನು ದೃಢಪಡಿಸಿಕೊಂಡಿದ್ದಾರೆ. ಈ ವೇಳೆ ಯಾಕೆ ಎನ್ನುವ ಪ್ರಶ್ನೆಯು ನಮ್ಮನ್ನು ಕಾಡುವುದು. ಆದರೆ ಇಲ್ಲಿ ಒಂದು ವಿಚಾರ ನಿಮಗೆ ಸ್ಪಷ್ಟಪಡಿಸಬೇಕಿದೆ. ಅದೇನೆಂದರೆ ಪುರುಷರಿಗಿಂತ ಮಹಿಳೆಯರು ಸೆಕ್ಸ್ ನಲ್ಲಿ ಕಡಿಮೆ ಆಸಕ್ತಿ ಹೊಂದಿಲ್ಲವೆನ್ನುವುದು ತಪ್ಪು.

ಮಹಿಳೆಯರು ಬಹು ಬೇಗನೇ ಬೋರ್ ಆಗಿ ಬಿಡುತ್ತಾರೆ

ಮಹಿಳೆಯರು ಬಹು ಬೇಗನೇ ಬೋರ್ ಆಗಿ ಬಿಡುತ್ತಾರೆ

ಮಹಿಳೆಯರು ಒಂದು ಮಗುವನ್ನು ಹೆರುವ ತನಕ ಅವರಿಗೆ ಯಾವತ್ತೂ ಸೆಕ್ಸ್ ನಲ್ಲಿ ತೃಪ್ತಿ ಎನ್ನುವುದು ಸಿಗುವುದಿಲ್ಲ. ಆದರೆ ಇದರ ಬಳಿಕ ಅವರು ಯಾವಾಗಲೂ ತಲೆನೋವು ಎನ್ನುವ ನೆಪ ಹೇಳುತ್ತಲಿರುವರು.

ಮಹಿಳೆಯರು ಎಷ್ಟು ಬೇಗನೆ ಬೋರ್ ಆಗುತ್ತಾರೆ ಎನ್ನುವ ಪ್ರಶ್ನೆ ಕೂಡ ಬರುವುದು. ಮಹಿಳೆಯರು ತುಂಬಾ ಬೇಗನೆ ಬೋರ್ ಆಗುವರು. ಅದರಲ್ಲೂ ಕೆಲವು ಮಹಿಳೆಯರು ಮದುವೆಯಾದ ಒಂದೇ ವರ್ಷದಲ್ಲಿ ಬೋರ್ ಆಗುತ್ತಾರೆ ಎಂದು ವರದಿಗಳು ಹೇಳಿವೆ.

Most Read: ನಿಮಗೆ ಜ್ವರ ಅಥವಾ ಶೀತ ಇದ್ದಾಗ ಸಂಗಾತಿ ಜೊತೆ ಸೆಕ್ಸ್ ಮಾಡಬೇಡಿ!

ಇದೆಲ್ಲಾ ಸ್ವಾಭಾವಿಕ

ಇದೆಲ್ಲಾ ಸ್ವಾಭಾವಿಕ

ನಾವು ಸಾಮಾಜಿಕವಾಗಿ ನಡೆದುಕೊಳ್ಳುವ ರೀತಿಯಿಂದ ಹೀಗೆ ಆಗುತ್ತಲಿದೆ. ಯಾಕೆಂದರೆ ನಾವು ಒಂದು ಬಟ್ಟೆಯನ್ನೇ ನಾಲ್ಕು ತಿಂಗಳಿಗಿಂತ ಹೆಚ್ಚು ಧರಿಸಲ್ಲ ಮತ್ತು ಇದು ನಮಗೆ ಆಸಕ್ತಿ ಉಂಟು ಮಾಡುವುದಿಲ್ಲ. ಹೀಗಾಗಿ ಮಹಿಳೆಯರು ಕೂಡ ಸೆಕ್ಸ್ ನಲ್ಲಿ ಆಸಕ್ತಿ ಕಳೆದುಕೊಳ್ಳುವುದು ಸಹಜವೆನ್ನಬಹುದು. ನಾವು ಜೀವನದಲ್ಲಿ ಕೂಡ ಹಾಗೆ ಕೆಲವೊಂದು ಬದಲಾವಣೆ ಮಾಡಿಕೊಂಡು ಅಥವಾ ಸುಧಾರಣೆ ಮಾಡುತ್ತಾ ಹೋಗುತ್ತೇವೆ. ಮಹಿಳೆಯರಿಗೆ ಯಾವತ್ತೂ ಹೊಸದು ತುಂಬಾ ಇಷ್ಟವಾಗುವುದು. ನಿಮ್ಮ ಕೂದಲಿನ ಬಣ್ಣ, ವೃತ್ತಿ ಮತ್ತು ಸಂಗಾತಿ ಕಡೆಗೆ ನೀವು ಕೆಲಸ ಮಾಡುತ್ತಲೇ ಇರಬೇಕು. ಎಲ್ಲವೂ ಆರಾಮವಾಗಿದೆ ಎಂದು ತಿಳಿದರೆ ಅದು ದೊಡ್ಡ ತಪ್ಪಾಗುವುದು. ನಾವು ಬದಲಾಗಬೇಕು ಮತ್ತು ಸುಧಾರಣೆಯಾಗಬೇಕು ಎಂದು ಇದ್ದರೂ ಇನ್ನೊಂದು ಅಂಶ ಕೂಡ ಸೆಕ್ಸ್ ನಲ್ಲಿ ಬೋರ್ ಆಗಲು ಕಾರಣವಾಗಿದೆ.

ಹೆಚ್ಚಿನ ಮಹಿಳೆಯರು ಪರಾಕಾಷ್ಠೆ ತಲುಪುವುದು ತುಂಬಾ ಕಡಿಮೆ!

ಹೆಚ್ಚಿನ ಮಹಿಳೆಯರು ಪರಾಕಾಷ್ಠೆ ತಲುಪುವುದು ತುಂಬಾ ಕಡಿಮೆ!

ಅದೇನೆಂದರೆ ಸೆಕ್ಸ್ ಎನ್ನುವುದು ಮಹಿಳೆಯರಿಗೆ ಇರುವ ವಿಚಾರವಲ್ಲವೆನ್ನುವುದು. ಇದು ಈಗಲೂ ಇದೆ, ಹಿಂದೆಯೂ ಇತ್ತು ಮತ್ತು ನಮ್ಮೊಂದಿಗೆ ಮುಂದೆಯೂ ಇರುವುದು. ಸಂಗಾತಿಗಳೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವಂತಹ ಹೆಚ್ಚಿನ ಮಹಿಳೆಯರು ಪರಾಕಾಷ್ಠೆ ತಲುಪುವುದು ತುಂಬಾ ಕಡಿಮೆ ಮತ್ತು ಕೇವಲ ಒಳನುಗ್ಗುವಿಕೆಯಿಂದ ಅವರಿಗೆ ಪರಾಕಾಷ್ಠೆ ಸಿಗದು. ಇದರಿಂದ ನೀವು ಲೈಂಗಿಕ ಕ್ರಿಯೆ ಮೊದಲಿನ ಆಟವಾಡಿ ಎಂದು ಹಲವಾರು ಅಧ್ಯಯನಗಳು ಹೇಳಿವೆ. ಕೆಲವು ಮಹಿಳೆಯರು ಸುಳ್ಳು ಪರಾಕಾಷ್ಠೆ ಕೂಡ ತೋರಿಸಿಕೊಳ್ಳುವರು ಎಂದು ಅಧ್ಯಯನಗಳು ಹೇಳಿವೆ.

Most Read: ಶ್! ಸೆಕ್ಸ್ ಬಗೆಗಿನ ಈ ಗುಟ್ಟಿನ ವಿಷಯಗಳು ನಿಮಗೆ ತಿಳಿದಿರಲಿಕ್ಕೆ ಇಲ್ಲ!

ಸೆಕ್ಸ್ ನ ಬಗ್ಗೆ ಇರುವ ಸತ್ಯಾಸತ್ಯೆಗಳು

ಸೆಕ್ಸ್ ನ ಬಗ್ಗೆ ಇರುವ ಸತ್ಯಾಸತ್ಯೆಗಳು

ಸೆಕ್ಸ್ ನ ಒಂದು ದೊಡ್ಡ ಮಟ್ಟದ ಸತ್ಯವೆಂದರೆ ನೀವು ಯಾವುದೇ ಹೊಸ ವ್ಯಕ್ತಿಯೊಂದಿಗೆ ಇದನ್ನು ನಡೆಸಿದಾಗ ಅದು ತುಂಬಾ ಆಸಕ್ತಿದಾಯಕವಾಗಿರುವುದು. ಅವರನ್ನು ನಗ್ನಗೊಳಿಸುವುದು, ಅವರ ನಗ್ನ ದೇಹವನ್ನು ಆನಂದಿಸುವುದು, ಅವರಲ್ಲಿ ಅಡಗಿರುವಂತಹ ಕೆಲವೊಂದು ಸೆಕ್ಸ್ ರಹಸ್ಯಗಳನ್ನು ಬಹಿರಂಗಗೊಳಿಸುವುದು ಇತ್ಯಾದಿಗಳು. ಇದು ಮೊದಲ ಸಲ ತುಂಬಾ ಆಸಕ್ತಿ ಕೆರಳಿಸುವುದು.ಅದೇ ರೀತಿ ನೀವು ಹೊಸಬರೊಂದಿಗೆ ಮೊದಲ ಸಲ ಸೆಕ್ಸ್ ನಡೆಸಿದಾಗ ನೀವು ಪರಾಕಾಷ್ಠೆ ತಲುಪದೆ ಇದ್ದರೂ, ಅದು ತುಂಬಾ ನೀರಸವಾಗಿದ್ದರೂ ನಿಮಗೆ ಹೊಸ ವಿಚಾರಗಳ ಬಗ್ಗೆ ಆಸಕ್ತಿ ಮೂಡಿಸುವುದು. ಅವರ ಆಕಾಂಕ್ಷೆಗಳು ಮತ್ತು ಊಹೆಗಳು ನಿಮಗೆ ಬಳಿಕ ತಿಳಿಯುವುದು. ಇದರಿಂದ ನೀವು ಸೆಕ್ಸ್ ನ ತಜ್ಞರಾಗುವಿರಿ.

ಹೊಸತನ ಹೋದ ಬಳಿಕ

ಹೊಸತನ ಹೋದ ಬಳಿಕ

ಆದರೆ ಹೊಸತನ ಹೋದ ಬಳಿಕ ಏನೇ ಮಾಡಿದರೂ ಇಬ್ಬರೂ ಅಲ್ಲಿ ಹೊಸಬರಾಗಿರುವುದಿಲ್ಲ. ವಿವಿಧ ರೀತಿಯ ಸೆಕ್ಸ್ ಭಂಗಿ, ಹಲವಾರು ವಿಧಾನ ಯಾವುದೇ ಪ್ರಯತ್ನ ಮಾಡಿದರೂ ಅದರ ಫಲಿತಾಂಶ ಮಾತ್ರ ಒಂದೇ ಆಗಿರುವುದು. ಇದರಲ್ಲಿ ನಿಮಗೆ ಯಾವುದೇ ಹೊಸತನವು ಕಂಡಬರದೇ ಇರಬಹುದು. ನೀವು ಸೆಕ್ಸ್ ನಲ್ಲಿ ಹೊಸತನ ಬಯಸುವುದೇ ಆದರೆ ಆಗ ಉಳಿದಿರುವುದು ಏನು? ಏನೂ ಉಳಿದಿಲ್ಲ. ನೀವು ಇದರಿಂದ ಬೋರ್ ಆಗಿದ್ದೀರಿ. ನೀವೀಗ ಬೆನ್ನು ಹಾಕಿ ಮಲಗುತ್ತಲಿದ್ದೀರಿ. ಮದುವೆಯಾದ ಹೊಸದರಲ್ಲಿ ನಿಮಗೆ ಸೆಕ್ಸ್ ತುಂಬಾ ಒಳ್ಳೆಯದು ಎಂದು ಅನಿಸುತ್ತಲಿತ್ತು. ಆಗ ನೀವು ಪರಾಕಾಷ್ಠೆ ತಲುಪದೆ ಇದ್ದರೂ ಯಾವುದೇ ರೀತಿಯಲ್ಲೂ ಇದನ್ನು ತೋರಿಸಿಕೊಡುತ್ತಿರಲಿಲ್ಲ. ಆದರೆ ಈಗ ಎಲ್ಲವೂ ನಿಮಗೆ ಹತ್ತಿರವಾಗಿದೆ ಮತ್ತು ಪ್ರತಿಯೊಂದನ್ನೂ ನೀವು ಗಮನಿಸುತ್ತಾ ಇರುತ್ತೀರಿ. ಆದರೆ ಮದುವೆಯ ಮೊದಲ ಕೆಲವು ವಾರಗಳಲ್ಲಿ ನೀವು ಇನ್ನೂ ಹೆಚ್ಚು ಆನಂದಿಸಬೇಕಿತ್ತು ಎಂದು ಆಲೋಚಿಸಲು ಈಗ ತುಂಬಾ ವಿಳಂಬವಾಗಿದೆ ಎಂದು ನಿಮಗೆ ಅನಿಸಬಹುದು.

ಸೆಕ್ಸ್ ನಿಂದ ವಿಮುಕ್ತಿ!

ಸೆಕ್ಸ್ ನಿಂದ ವಿಮುಕ್ತಿ!

ತನ್ನ ಪತ್ನಿ ಅಥವಾ ಗರ್ಲ್ ಫ್ರೆಂಡ್ ಸೆಕ್ಸ್ ನಿಂದ ವಿಮುಖಳಾಗಿದ್ದಾಳೆಂದು ಎಷ್ಟೋ ಮಂದಿ ಪುರುಷರು ತಮ್ಮ ಗೆಳೆಯರಲ್ಲಿ ಚರ್ಚಿಸುವರು. ಇದು ಅವರಿಗೆ ಆಗುತ್ತಿರುವಂತಹ ವೈಯಕ್ತಿಕ ಅವಹೇಳನವೇ ಎಂದು ಅವರು ಇದರ ಬಗ್ಗೆ ಚರ್ಚೆ ಕೂಡ ನಡೆಸಿರುವರು. ಮತ್ತೆ ಪತ್ನಿ ಸೆಕ್ಸ್ ನತ್ತ ಒಲವು ತೋರುವಂತೆ ಮಾಡುವಿರಾ ಎಂದು ಕೇಳುವರು. ಇದೇ ರೀತಿಯ ಪ್ರಶ್ನೆಗಳನ್ನು ನನ್ನಲ್ಲಿ ಹೆಚ್ಚು ಪರಿಚಯವಿಲ್ಲದೆ ಇರುವಂತಹ ವ್ಯಕ್ತಿಗಳು ಬೇರೆ ಬೇರೆ ಸ್ಥಳಗಳಲ್ಲಿ ಕೇಳಿರುವರು. ನನಗೆ ಏನು ಹೇಳಲು ಆಗಲ್ಲ. ಆದರೆ ನಾನು ಹೀಗೆ ಮಾತ್ರ ಹೇಳಬಲ್ಲೆ. ಅದೇನೆಂದರೆ ನೀವು ಅವರ ನಡವಳಿಕೆಗೆ ಸ್ವಲ್ಪ ಹೊಂದಿಕೊಂಡು ಹೋಗಿ. ನಿಮ್ಮ ಸಂಗಾತಿಯು ಸೆಕ್ಸ್ ನಿಂದ ವಿಮುಖರಾಗಿರುವುದು ಅವರು ವಯಸ್ಸಾಗುತ್ತಿರುವ ಕಾರಣದಿಂದಾಗಿ ಎಂದು ನೀವು ಯಾವತ್ತೂ ಭಾವಿಸಬೇಡಿ. ಇದಕ್ಕೆ ನೀವು ಜವಾಬ್ದಾರಿ ತೆಗೆದುಕೊಳ್ಳಿ. ಅವರೊಂದಿಗೆ ಮಾತನಾಡಿ. ಅವರು ಸೆಕ್ಸ್ ನ್ನು ಆನಂದಿಸುತ್ತಿದ್ದಾರೆಯಾ ಎಂದು ಕೇಳಿ. ಅವರು ಕೇವಲ ಹೊಸತನಕ್ಕೆ ಅಥವಾ ನಿಮ್ಮನ್ನು ಸಂತೋಷವಾಗಿಡುವ ಕಾರಣಕ್ಕಾಗಿ ಎಲ್ಲವೂ ಸರಿ ಎಂದು ಹೇಳುತ್ತಿದ್ದಾರೆಯಾ ಎಂದು ಕೇಳಿ. ಮಹಿಳೆಯರಿಗೂ ಕೆಲವೊಂದು ಜವಾಬ್ದಾರಿಗಳು ಇವೆ. ತೃಪ್ತಿ ನೀಡದೆ ಇರುವಂತಹ ಲೈಂಗಿಕ ಕ್ರಿಯೆಯನ್ನು ಸ್ವೀಕರಿಸುವುದು ನಿಮ್ಮ ತಪ್ಪು. ಇದರಿಂದಾಗಿ ನೀವು ದೀರ್ಘಕಾಲದ ತನಕ ಅತೃಪ್ತಿಯಿಂದಲೇ ಬಳಲಬೇಕಾಗಬಹುದು.

English summary

why women lose interest in sex during long-term relationships

When it comes to long term relationships, women go off the idea of having sex with their partners before men do, says the National Survey of Sexual Attitudes and Lifestyle. But you probably already knew that, right? It’s one of those things that everyone has a low-level awareness of - yet no-one had confirmed it until now. But confirm it they have. So the big question is: why? Let's be clear - women aren’t less inherently sexual than men. Women, contrary to what you might have been told, don’t find
X
Desktop Bottom Promotion